ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ರೆನಾಲ್ಟ್ ಇಂಡಿಯಾ, ಇನ್ನೂ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ರೆನಾಲ್ಟ್ ಟ್ರೈಬರ್ ಎಂ‍‍ಪಿ‍‍ವಿಯ ಬುಕ್ಕಿಂಗ್ ಅನ್ನು ಅಧಿಕೃತವಾಗಿ ಆರಂಭಿಸಿದೆ. ಹೊಸ ಸಬ್ 4 ಮೀಟರ್ ಕಾಂಪ್ಯಾಕ್ಟ್ ಎಂ‍‍ಪಿ‍‍ವಿಯನ್ನು ಭಾರತದಲ್ಲಿ ಇದೇ ವರ್ಷದ ಜೂನ್ ತಿಂಗಳಿನಲ್ಲಿ ಅನಾವರಣಗೊಳಿಸಲಾಗಿತ್ತು.

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ಹೊಸ ಎಂಪಿವಿ ಇದೇ ತಿಂಗಳ 28ರಂದು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ರೆನಾಲ್ಟ್ ಟ್ರೈಬರ್ ಎಂಪಿವಿಯನ್ನು ಆನ್‌ಲೈನ್ ಅಥವಾ ದೇಶದಾದ್ಯಂತವಿರುವ ಕಂಪನಿಯ ಯಾವುದೇ ಡೀಲರ್‍‍ರವರಲ್ಲಿ ರೂ.11,000 ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದೆ.

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ರೆನಾಲ್ಟ್ ಟ್ರೈಬರ್ ಎಂಪಿವಿಯು, ಎಂಟ್ರಿ ಲೆವೆಲ್‍‍ನ ಕ್ವಿಡ್ ಹ್ಯಾಚ್‌ಬ್ಯಾಕ್‌ನಲ್ಲಿರುವ ಸಿಎಂಎಫ್ ಎ ಪ್ಲಾಟ್‌ಫಾರಂನ ಭಾಗವಾಗಿದೆ. ಆದರೆ ಈ ಎಂ‍‍ಪಿವಿಯಲ್ಲಿ ಹೊಸ ವಿನ್ಯಾಸ, ಫೀಚರ್‍ ಹಾಗೂ ಸುರಕ್ಷಾ ಸಾಧನಗಳನ್ನು ಅಳವಡಿಸಲಾಗಿದೆ.

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ಹೊಸ ಟ್ರೈಬರ್ ಎಂಪಿವಿಯಲ್ಲಿ 1.0 ಲೀಟರಿನ ಮೂರು ಸಿಲಿಂಡರ್ ಪೆಟ್ರೋಲ್ ಎಂಜಿನ್‌ ಅಳವಡಿಸಲಾಗಿದೆ. ಈ ಎಂಜಿನ್ 70 ಬಿಹೆಚ್‌ಪಿ ಪವರ್ ಹಾಗೂ 96 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 5 ಸ್ಪೀಡಿನ ಮ್ಯಾನುವಲ್ ಅಥವಾ ಎಎಂಟಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ಗಳನ್ನು ಆಯ್ಕೆಯಾಗಿ ನೀಡಲಾಗುವುದು.

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ಡಿಸೈನ್‍ನ ಬಗ್ಗೆ ಹೇಳುವುದಾದರೆ, ರೆನಾಲ್ಟ್ ಟ್ರೈಬರ್ ಸಂಪೂರ್ಣವಾಗಿ ಹೊಸ ಸ್ಟೈಲಿಂಗ್‌ ಹೊಂದಿದೆ. ಆದರೆ ಫ್ರೆಂಚ್ ಕಾರು ತಯಾರಕ ಕಂಪನಿಯ ಜನಪ್ರಿಯ ಡಿಸೈನ್ ಲ್ಯಾಂಗ್ವೇಜ್ ಅನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ಇವುಗಳಲ್ಲಿ ದೊಡ್ಡ ಗಾತ್ರದ ಫ್ರಂಟ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್‌, ಎಲ್‌ಇಡಿ ಡಿಆರ್‌ಎಲ್‌ಗಳು, ರೌಂಡೆಡ್ ವ್ರಾಪ್ ಟೇಲ್ ಲೈಟ್‌ ಹಾಗೂ ಇನ್ನಿತರ ಸ್ಟೈಲಿಂಗ್ ಅಂಶಗಳು ಸೇರಿವೆ. ರೆನಾಲ್ಟ್ ಟ್ರೈಬರ್‍‍ನ ಒಳಭಾಗದಲ್ಲಿ, 8.0 ಇಂಚಿನಷ್ಟು ದೊಡ್ಡ ಗಾತ್ರದ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂನ ಜೊತೆಗೆ ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುವುದು.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ಇವುಗಳ ಜೊತೆಗೆ ಫುಲ್ ಡಿಜಿಟಲ್ ಎಲ್ಇಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, 2ನೇ ಹಾಗೂ 3ನೇ ಸಾಲುಗಳಲ್ಲಿ ಎಸಿ ವೆಂಟ್ಸ್ ಹಾಗೂ ಇನ್ನಿತರ ಫೀಚರ್‍‍ಗಳಿರಲಿವೆ. ಇವುಗಳೊಂದಿಗೆ ಸುರಕ್ಷತಾ ಸಾಧನಗಳನ್ನು ಹೊಂದಿದೆ.

MOST READ: ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ರೆನಾಲ್ಟ್ ಟ್ರೈಬರ್ ಎಂಪಿವಿ ಸಬ್ 4 ಮೀಟರ್ ವಾಹನವಾದರೂ ಏಳು ಸೀಟುಗಳನ್ನು ಹೊಂದಿರಲಿದೆ. ಈ ಎಂಪಿವಿಯಲ್ಲಿರುವ ಮೂರನೇ ಸಾಲನ್ನು ಸುಲಭವಾಗಿ ಬೇರ್ಪಡಿಸಬಹುದಾಗಿದೆ. ಯಾವುದೇ ರೀತಿಯ ಪ್ರಯಾಣಕ್ಕೆ ಹೆಚ್ಚಿನ ಸ್ಥಳ ಬೇಕಾದಲ್ಲಿ ಟ್ರೈಬರ್‌ನಲ್ಲಿರುವ ಸೀಟುಗಳನ್ನು 100ಕ್ಕೂ ಹೆಚ್ಚು ರೀತಿಯಲ್ಲಿ ಕಾನ್ಫಿಗರ್ ಮಾಡಬಹುದಾಗಿದೆ.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ರೆನಾಲ್ಟ್ ಟ್ರೈಬರ್ ಎಂಪಿವಿಯ ಬುಕ್ಕಿಂಗ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ಆರಂಭಿಸಲಾಗಿದೆ. ಈ ಕಾಂಪ್ಯಾಕ್ಟ್ ಎಂಪಿವಿಯನ್ನು ಇದೇ ತಿಂಗಳ 28ರಂದು ಬಿಡುಗಡೆಗೊಳಿಸಲಾಗುವುದು. ಈ ಎಂಪಿವಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.5 ಲಕ್ಷಗಳ ವ್ಯಾಪ್ತಿಯಲ್ಲಿರುವ ಸಾಧ್ಯತೆಗಳಿವೆ.

ಶುರುವಾಯ್ತು ರೆನಾಲ್ಟ್ ಟ್ರೈಬರ್ ಬುಕ್ಕಿಂಗ್

ಎಂಪಿವಿಯ ಬಿಡುಗಡೆಯ ಸಮಯದಲ್ಲಿ ವಾಹನದ ಸರಿಯಾದ ಬೆಲೆಯನ್ನು ಘೋಷಿಸಲಾಗುವುದು. ಬಿಡುಗಡೆಯಾದ ನಂತರ ರೆನಾಲ್ಟ್ ಟ್ರೈಬರ್ ಎಂಪಿವಿ, ದೇಶಿಯ ಮಾರುಕಟ್ಟೆಯ ಎಂಪಿವಿ ಸೆಗ್‍‍ಮೆಂಟಿನಲ್ಲಿ ಡಾಟ್ಸನ್ ಗೋ ಪ್ಲಸ್ ಹಾಗೂ ಮಾರುತಿ ಸುಜುಕಿಯ ಎರ್ಟಿಗಾ ವಾಹನಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Renault Triber Bookings Officially Begin In India Ahead Of August 28th Launch - Read in kannada
Story first published: Saturday, August 17, 2019, 12:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X