ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹವು ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಜನರ ಆಸ್ತಿ ಹಾಗೂ ಜೀವಕ್ಕೆ ದೊಡ್ಡ ವಿಪತ್ತನ್ನು ತಂದೊಡ್ಡಿದೆ. ಸದ್ಯಕ್ಕೆ ದಕ್ಷಿಣ ಭಾರತದ ಬಹುತೇಕ ಭಾಗಗಳು ಪ್ರವಾಹಕ್ಕೆ ಸಿಲುಕಿವೆ.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಜನರನ್ನು ರಕ್ಷಿಸಲು ಹಾಗೂ ಅವಶ್ಯಕತೆ ಇರುವ ಜನರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲು ತುರ್ತು ಸೇವೆಗಳು ಹಗಲು ಇರುಳೆನ್ನದೇ ಕಾರ್ಯ ನಿರ್ವಹಿಸುತ್ತಿವೆ. ಆದರೆ ಕೆಲವು ಭಾಗಗಳಲ್ಲಿ ರಸ್ತೆಗಳು ಮುಳುಗಿರುವುದರಿಂದ ರಕ್ಷಣಾ ಕಾರ್ಯವು ಅಷ್ಟು ಸುಲಭವಾಗಿಲ್ಲ. ಆ ರಸ್ತೆಗಳಲ್ಲಿ ಮನುಷ್ಯರು ಸಹ ನಡೆದುಕೊಂಡು ಹೋಗುವುದು ಅಸಾಧ್ಯವಾಗಿದೆ. ಪ್ರವಾಹದ ನೀರಿನಲ್ಲಿ ನಡೆದುಕೊಂಡು ಹೋಗುತ್ತಿರುವ 12 ವರ್ಷದ ಬಾಲಕನ ವೀಡಿಯೊವೊಂದು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಈ ಬಾಲಕನನ್ನು ಸ್ವಾತಂತ್ರ್ಯ ದಿನಾಚರಣೆಯಂದು ರಾಜ್ಯ ಸರ್ಕಾರವು ಸನ್ಮಾನಿಸಿದೆ. ವೆಂಕಟೇಶ್ ಎಂಬಾತನೇ 12 ವರ್ಷದ ಈ ಬಾಲಕ. ನೀರಿನಿಂದ ಆವೃತ್ತವಾಗಿರುವ ಸೇತುವೆಯನ್ನು ದಾಟಲು ಪರದಾಡುತ್ತಿದ್ದ ಆಂಬ್ಯುಲೆನ್ಸ್‌ಗೆ ದಡ ತಲುಪಲು ಸಹಾಯ ಮಾಡಿದ ವೆಂಕಟೇಶ್ ರಾತ್ರೋರಾತ್ರಿ ಹೀರೋ ಆಗಿದ್ದಾನೆ.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ತನ್ನ ಸಮಯಪ್ರಜ್ಣೆಯಿಂದಾಗಿ ಆಂಬ್ಯುಲೆನ್ಸ್ ನಲ್ಲಿದ್ದವರ ಪ್ರಾಣ ಕಾಪಾಡಿದ್ದಾನೆ. ಈ ಘಟನೆಯು ಆಗಸ್ಟ್ 10 ರಂದು ರಾಯ್‌ಚೂರಿನ ದೇವದುರ್ಗದ ಹಿರೇರಾಯನಕುಂಪಿ ಗ್ರಾಮದಲ್ಲಿರುವ ಸೇತುವೆಯ ಬಳಿ ನಡೆದಿದೆ. ಪ್ರವಾಹದಿಂದಾಗಿ ಸೇತುವೆಯ ಮೇಲೆಲ್ಲಾ ನೀರು ನಿಂತಿದೆ.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಆಂಬ್ಯುಲೆನ್ಸ್ ಚಾಲಕ ಮುಂದಿರುವ ದಾರಿ ಕಾಣದೇ, ಮುಂದೆ ಚಲಿಸದೇ ಹಾಗೆಯೇ ನಿಂತು ಬಿಟ್ಟಿದ್ದಾನೆ. ವರದಿಗಳ ಪ್ರಕಾರ, ಈ ಆಂಬ್ಯುಲೆನ್ಸ್ ಅನಾರೋಗ್ಯದಿಂದ ಬಳಲುತ್ತಿದ್ದ ಮಕ್ಕಳು ಹಾಗೂ ಸತ್ತ ಮಹಿಳೆಯ ಶವವನ್ನು ಹೊತ್ತುಕೊಂಡು ಸೇತುವೆಯನ್ನು ದಾಟಲು ಪ್ರಯತ್ನಿಸುತ್ತಿತ್ತು ಎನ್ನಲಾಗಿದೆ.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಅಲ್ಲಿಯೇ ಆಟವಾಡುತ್ತಿದ್ದ ಹುಡುಗರನ್ನು ಸೇತುವೆ ದಾಟಬಹುದೇ ಎಂದು ಆಂಬುಲೆನ್ಸ್ ಚಾಲಕ ಕೇಳಿದ್ದಾನೆ. ಯಾವ ಹುಡುಗರು ಮುಂದೆ ಬಂದಿಲ್ಲ. ಆಗ ವೆಂಕಟೇಶ್ ತನ್ನ ಸಮಯಪ್ರಜ್ಣೆಯಿಂದ ನೀರು ನಿಂತಿರುವ ಸೇತುವೆಯ ಮೇಲೆ ನಡೆದು ಕೊಂಡು ಹೋಗಿದ್ದಾನೆ.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಅವನು ನಡೆದುಕೊಂಡು ಮುಂದೆ ಹೋದಂತೆಲ್ಲಾ ಆಂಬುಲೆನ್ಸ್‌ ಚಾಲಕನು ಆತನನ್ನು ಹಿಂಬಾಲಿಸಿದ್ದಾನೆ. ಇಡೀ ಘಟನೆಯನ್ನು ರೆಕಾರ್ಡ್ ಮಾಡಲಾಗಿದ್ದು, ಈ ವೀಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.

MOST READ: ಡೀಸೆಲ್ ಕಾರುಗಳನ್ನು ಖರೀದಿಸುವುದಾದರೆ ಈಗಲೇ ಖರೀದಿಸಿ..!

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ವೆಂಕಟೇಶ್ ಸ್ಥಳೀಯ ಸರ್ಕಾರಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಹಿರಿಯ ಐಎಎಸ್ ಅಧಿಕಾರಿ, ಕ್ಯಾಪ್ಟನ್ ಮಣಿವಣ್ಣನ್‍‍ರವರು ಈ ವರ್ಷದ ಶೌರ್ಯ ಪ್ರಶಸ್ತಿಗೆ ವೆಂಕಟೇಶನ ಹೆಸರನ್ನು ಶಿಫಾರಸ್ಸು ಮಾಡುವಂತೆ ಮಕ್ಕಳ ಕಲ್ಯಾಣ ಇಲಾಖೆಗೆ ಸೂಚಿಸಿದ್ದಾರೆ.

MOST READ: ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ವೆಂಕಟೇಶನ ಸಾಹಸಕ್ಕಾಗಿ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಆತನನ್ನು ಸನ್ಮಾನಿಸಿದ್ದಾರೆ. ಪ್ರವಾಹದಿಂದಾಗಿ ಹಲವು ರಸ್ತೆಗಳು ಹಾಳಾಗಿವೆ. ಜಲಾವೃತ್ತವಾಗಿರುವ ರಸ್ತೆಗಳಲ್ಲಿ ಚಾಲನೆ ಮಾಡುವ ಪ್ರತಿಯೊಬ್ಬರು ಜಾಗರೂಕರಾಗಿರಬೇಕು.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಈ ಮೊದಲು, ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿ ಹೆಚ್ಚಿನ ಮಟ್ಟದ ನೀರಿನಿಂದಾಗಿ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿತ್ತು. ಮಳೆಯಿಂದಾಗಿ ಆ ವಾಹನದ ವಿದ್ಯುತ್ ಕೈಕೊಟ್ಟ ಕಾರಣ ವಾಹನದ ಡೋರ್‍‍ಗಳು ತೆರೆಯಲು ಸಾಧ್ಯವಾಗದೇ, ವಾಹನದಲ್ಲಿದ್ದ ಇಬ್ಬರು ಪ್ರಯಾಣಿಕರು ಹೊರಬರಲು ಸಾಧ್ಯವಾಗದೇ ವಾಹನದೊಳಗೆ ಮೃತಪಟ್ಟಿದ್ದರು.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಮಳೆಯ ಅಬ್ಬರ ಜೋರಾಗಿರುವ ಸಮಯದಲ್ಲಿ ದೊಡ್ಡ ಗಾತ್ರದ ಗುಂಡಿಗಳು ಉಂಟಾಗುತ್ತವೆ. ನೀರು ತುಂಬಿ ಕೊಳ್ಳುವುದರಿಂದ ಗುಂಡಿಗಳು ಕಾಣದೇ ಹೋಗುತ್ತವೆ. ಅಂತಹ ರಸ್ತೆಗಳಲ್ಲಿ ವಾಹನ ಚಲಾಯಿಸುವುದರಿಂದ ವಾಹನಕ್ಕೆ ಅಪಾರ ಪ್ರಮಾಣದ ಹಾನಿಯುಂಟಾಗುತ್ತದೆ.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ನೀರಿನ ಪ್ರವಾಹದಿಂದಾಗಿ ಕೆಲವೊಮ್ಮೆ ರಸ್ತೆಗಳಲ್ಲಿರುವ ಮ್ಯಾನ್‌ಹೋಲ್ ಕವರ್‌ಗಳು ಹೊರಬರುತ್ತವೆ. ಅವುಗಳ ಮೂಲಕ ಹಾದುಹೋಗುವ ವಾಹನಗಳಿಗೆ ಅಪಾಯವಾಗುವುದು ಖಚಿತ. ನೀರು ತುಂಬಿರುವ ರಸ್ತೆಗಳಲ್ಲಿ ವಾಹನಗಳು ಸಿಲುಕಿ ಕೊಳ್ಳುತ್ತವೆ.

ಆಂಬ್ಯುಲೆನ್ಸ್ ಗೆ ದಾರಿ ತೋರಿಸಿ ಶೌರ್ಯ ಪ್ರಶಸ್ತಿ ಪಡೆದ 12 ವರ್ಷದ ಬಾಲಕ

ಇದು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ವಾಹನಗಳು ಪ್ರವಾಹಕ್ಕೆ ಸಿಲುಕಿ ರಸ್ತೆಯಲ್ಲಿ ನಿಂತರೆ, ವಾಹನವನ್ನು ಸ್ಟಾರ್ಟ್ ಮಾಡಲು ಪ್ರಯತ್ನ ಪಡಬೇಡಿ, ಇದರಿಂದಾಗಿ ಎಂಜಿನ್ ಶಾಶ್ವತವಾಗಿ ಹಾನಿಗೊಳಗಾಗುವ ಸಾಧ್ಯತೆಗಳಿವೆ.

Most Read Articles

Kannada
English summary
12 year old boy guides ambulance on flooded bridge; Awarded by Govt - Read in kannada
Story first published: Friday, August 16, 2019, 18:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more