ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಸೆಲೆಬ್ರಿಟಿಗಳು ಹೊಂದಿರುವ ಕಾರುಗಳ ವಿಷಯಕ್ಕೆ ಬಂದರೆ, ಸೆಲೆಬ್ರಿಟಿಗಳ ಬಳಿ ಹಲವು ಐಷಾರಾಮಿ ಕಾರುಗಳನ್ನು ಕಾಣಬಹುದು. ಬಾಲಿವುಡ್ ನಟ, ನಟಿಯರಿಗೆ ಹಾಗೂ ಕ್ರಿಕೆಟ್ ಆಟಗಾರರಿಗೆ ಹಣಕ್ಕೆ ಕೊರತೆಯಿಲ್ಲ. ಅವರಲ್ಲಿ ಬಹುತೇಕರು ಕಾರುಗಳ ಬಗ್ಗೆ ವಿಪರೀತ ವ್ಯಾಮೋಹ ಹೊಂದಿದವರಾಗಿದ್ದಾರೆ.

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಹಳೆಯ ಮಾದರಿಯ ಟೊಯೊಟಾ ಫಾರ್ಚೂನರ್ ಕಾರ್ ಅನ್ನು ಹಲವು ಸೆಲೆಬ್ರಿಟಿಗಳು ಹೊಂದಿದ್ದಾರೆ. ಸಾಲಿಡ್ ಗುಣಮಟ್ಟದ ನಿರ್ಮಾಣ, ಹೆಚ್ಚಿನ ಸ್ಪೇಸ್ ಹಾಗೂ ಅರಾಮದಾಯಕವಾದ ಇಂಟಿರಿಯರ್‍‍ಗಳು ಫಾರ್ಚೂನರ್ ಎಸ್‍‍ಯುವಿಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿ ಸೆಲೆಬ್ರಿಟಿಗಳ ನೆಚ್ಚಿನ ಕಾರುಗಳಲ್ಲಿ ಒಂದಾಗಿಸಿದೆ. ಟೊಯೊಟಾ ಫಾರ್ಚೂನರ್ ಎಸ್‍‍ಯು‍‍ವಿಯನ್ನು ಹೊಂದಿರುವ 5 ಸೆಲೆಬ್ರಿಟಿಗಳ ಬಗ್ಗೆ ನೋಡೋಣ.

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ, ಈ ಹಿಂದೆ ಟೊಯೊಟಾದ ಹ್ಯಾಚ್‌ಬ್ಯಾಕ್ ಮಾದರಿಯಾದ, ಎಟಿಯೋಸ್ ಲಿವಾ ಕಾರಿಗೆ ರಾಯಭಾರಿಯಾಗಿದ್ದರು. ಜಪಾನ್ ಮೂಲದ ಟೊಯೊಟಾ ಕಂಪನಿಯು ವಿರಾಟ್ ಕೊಹ್ಲಿರವರಿಗೆ ಫಾರ್ಚೂನರ್ 4x4 ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿತ್ತು. ಈ ಎಸ್‍‍ಯು‍‍ವಿಯನ್ನು ವಿರಾಟ್ ಕೊಹ್ಲಿರವರು ಇನ್ನೂ ಹೊಂದಿದ್ದಾರೆ.

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಟೊಯೊಟಾ ಕಂಪನಿಯಿಂದ ಉಡುಗೊರೆಯಾಗಿ ಪಡೆದ ಫಾರ್ಚೂನರ್ ಕಾರಿನಿಂದ ವಿರಾಟ್ ಕೊಹ್ಲಿರವರು ತಮ್ಮ ಪತ್ನಿ ಅನುಷ್ಕಾ ಶರ್ಮಾರವರ ಜೊತೆ ಹೊರಬರುತ್ತಿರುವುದನ್ನು ಕಾಣಬಹುದು. ವಿರಾಟ್ ಕೊಹ್ಲಿರವರು ಆಡಿ ಆರ್ 8, ಆಡಿ ಎಸ್ 5, ರೇಂಜ್ ರೋವರ್ ವೋಗ್, ಆಡಿ ಕ್ಯೂ 7, ಆಡಿ ಎ8 ಎಲ್ ಸೇರಿದಂತೆ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಅಮೀರ್ ಖಾನ್

ಅಮೀರ್ ಖಾನ್, ಭಾರತದ ಜನಪ್ರಿಯ ನಟರಲ್ಲಿ ಒಬ್ಬರು. ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಯಲ್ಪಡುವ ಅಮೀರ್ ಖಾನ್, ಬೆಂಟ್ಲೆ ಕಾಂಟಿನೆಂಟಲ್ ಜಿಟಿ ಹಾಗೂ ಮರ್ಸಿಡಿಸ್ ಬೆಂಜ್ ಎಸ್ ಗಾರ್ಡ್ ಸೇರಿದಂತೆ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಸಾಮಾನ್ಯ ಕಾರುಗಳ ವಿಷಯಕ್ಕೆ ಬಂದರೆ, ಟೊಯೊಟಾ ಫಾರ್ಚೂನರ್ ಹಾಗೂ ಮಹೀಂದ್ರಾ ಎಕ್ಸ್‌ಯುವಿ 500 ಸೇರಿದಂತೆ ಹಲವು ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿ ಇರುವ ಹೊಸ ತಲೆಮಾರಿನ ಫಾರ್ಚೂನರ್ ಕಾರಿನ ಜೊತೆಗೆ ಹೆಚ್ಚು ಕಾಣಿಸಿಕೊಂಡಿಲ್ಲವಾದರೂ ಇಷ್ಟ ಪಟ್ಟಾಗ ಬಳಸುತ್ತಾರೆ.

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಬಿಪಾಶಾ ಬಸು

ಬಿಪಾಶಾ ಬಸು ಅವರು ಹೆಚ್ಚು ಕಾರುಗಳನ್ನು ಹೊಂದಿರುವ ನಟಿಯರಲ್ಲಿ ಒಬ್ಬರಾಗಿದ್ದಾರೆ. ಆದರೂ ಅವರು ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯಲ್ಲಿ ಆಗಾಗ ಓಡಾಡುವುದನ್ನು ಕಾಣಬಹುದು. ಅವರು ಬಿಳಿ ಬಣ್ಣದಲ್ಲಿರುವ ಹಿಂದಿನ ತಲೆಮಾರಿನ ಫಾರ್ಚೂನರ್‌ ಕಾರ್ ಅನ್ನು ಹೊಂದಿದ್ದಾರೆ.

MOST READ: ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಸಾಮಾನ್ಯ ಕಾರುಗಳನ್ನು ಪರಿಗಣಿಸುವಾಗ ಬಹಳಷ್ಟು ಬಾಲಿವುಡ್ ತಾರೆಯರು ಟೊಯೊಟಾ ಫಾರ್ಚೂನರ್ ಅಥವಾ ಇನ್ನೋವಾ ಕಾರುಗಳನ್ನು ಇಷ್ಟ ಪಡುತ್ತಾರೆ. ಬಿಪಾಶಾ ತಮ್ಮ ಪತಿ ಕರಣ್ ಗ್ರೋವರ್ ಅವರೊಂದಿಗೆ ಹಲವಾರು ಬಾರಿ ತಮ್ಮ ಬಿಳಿ ಫಾರ್ಚೂನರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಬಳಿಯಿರುವ ಫಾರ್ಚೂನರ್ 3.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದ್ದು, ಫುಲ್ ಟೈಮ್ 4 ಡಬ್ಲ್ಯೂಡಿ ಸಿಸ್ಟಂ ಹೊಂದಿದೆ.

MOST READ: ಮೋಟಾರ್‍‍ಸ್ಪೋರ್ಟ್ಸ್ ಪ್ರಶಸ್ತಿ ಗೆದ್ದ ಬೆಂಗಳೂರು ಹುಡುಗಿ

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಯುವರಾಜ್ ಸಿಂಗ್

ಓಡಾಟಕ್ಕಾಗಿ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸಾಮಾನ್ಯ ಕಾರುಗಳನ್ನು ಮಾತ್ರ ಹೊಂದಿಲ್ಲ. ಅವರು ಲ್ಯಾಂಬೊರ್ಗಿನಿ ಮುರ್ಸಿಲಾಗೊ, ಬಿಎಂಡಬ್ಲ್ಯು ಎಂ5, ಬಿಎಂಡಬ್ಲ್ಯು ಎಕ್ಸ್ 6ಎಂ ಹಾಗೂ ಬೆಂಟ್ಲಿ ಕಾಂಟಿನೆಂಟಲ್ ಫ್ಲೈಯಿಂಗ್ ಸ್ಪರ್ ಸೇರಿದಂತೆ ಹಲವಾರು ಹೈ ಎಂಡ್ ಕಾರುಗಳನ್ನು ಹೊಂದಿದ್ದಾರೆ. ಈ ದುಬಾರಿ ಬೆಲೆಯ ಕಾರುಗಳ ಜೊತೆಗೆ ಯುವರಾಜ್ ಸಿಂಗ್ ಟೊಯೊಟಾ ಫಾರ್ಚೂನರ್ ಅನ್ನು ಸಹ ಹೊಂದಿದ್ದಾರೆ. ಆದರೆ ಈ ಕಾರಿನ ಜೊತೆಗೆ ಅವರು ಹೆಚ್ಚಾಗಿ ಕಾಣಿಸಿಕೊಂಡಿಲ್ಲ.

MOST READ: ರಾಯಲ್ ಎನ್‍‍ಫೀಲ್ಡ್ ಸೈಲೆನ್ಸರ್‍‍ಗಳನ್ನು ಕಿತ್ತುಹಾಕಿದ ಪೊಲೀಸರು

ಫಾರ್ಚುನರ್ ಹೊಂದಿರುವ ಭಾರತದ ಸೆಲೆಬ್ರಿಟಿಗಳಿವರು..!

ಜಾಕಿ ಶ್ರಾಫ್

ಟೊಯೊಟಾ ಫಾರ್ಚೂನರ್‌ ಕಾರ್ ಹೊಂದಿರುವ ಮತ್ತೊಬ್ಬ ಬಾಲಿವುಡ್ ತಾರೆ ಜಾಕಿ ಶ್ರಾಫ್. ಜಾಕಿ ಶ್ರಾಫ್ ಓಡಾಟಕ್ಕಾಗಿ ಟೊಯೊಟಾ ಇನ್ನೋವಾ ಕಾರ್ ಅನ್ನು ಹೆಚ್ಚಾಗಿ ಬಳಸುತ್ತಾರೆ. ಜಾಕಿ ಶ್ರಾಫ್ ಹೊಂದಿರುವ ಫಾರ್ಚೂನರ್ ಹಳೆಯ ತಲೆಮಾರಿನ ಕಾರ್ ಆಗಿದ್ದು, ಡಾರ್ಕ್ ಗ್ರೇ ಬಣ್ಣವನ್ನು ಹೊಂದಿದೆ. ಜಾಕಿರವರು ಈ ಕಾರಿನಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದಾರೆ. ನೋಟ ಹಾಗೂ ಒರಟಾದ ಬಾಡಿಯಿಂದಾಗಿ ಫಾರ್ಚೂನರ್ ದೇಶಿಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿದೆ. ಈ ಸೆಗ್‍‍‍ಮೆಂಟಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.

More from DriveSpark

Article Published On: Wednesday, August 14, 2019, 15:19 [IST]
English summary
Indian celebrities who own a Toyota Fortuner - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+