ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಯಾವುದೇ ಹೊಸ ತಂತ್ರಜ್ಞಾನಗಳನ್ನು ಕಂಡು ಹಿಡಿಯಲು, ಸ್ಟಾರ್ಟ್ ಅಪ್ ಕಂಪನಿಗಳೇ ಬೇಕಾಗಿಲ್ಲ. ಭಾರತದ ಮೂಲೆ ಮೂಲೆಯಲ್ಲೂ ಹೊಸತನವನ್ನು, ಕ್ರಿಯಾಶೀಲತೆಯನ್ನು ಹೊಂದಿರುವ ವ್ಯಕ್ತಿಗಳಿದ್ದಾರೆ. ಅಂತಹ ವ್ಯಕ್ತಿಗಳಲ್ಲಿ ಜಾರ್ಖಂಡ್ ರಾಜ್ಯದ ಹಜಾರಿಬಾಗ್ ಬಳಿಯಿರುವ ಬಿಷ್ಣುಗಢದ ಉಂಚಾ ಗಾನಾ ಹಳ್ಳಿಯ 33 ವರ್ಷದ ಮಹೇಶ್ ಕರ್ಮಾಲಿ ಒಬ್ಬರು.

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಇವರು ಜೀವನವೇ ಎಲ್ಲಾ ಅನ್ವೇಷಣೆಗಳ ತಾಯಿ ಎಂಬಂತೆ ಹೊಸ ತಂತ್ರಜ್ಞಾನ ಕಂಡು ಹಿಡಿದಿದ್ದಾರೆ. ಕರ್ಮಾಲಿರವರು ತಮ್ಮ 12 ಎಕರೆ ಕಟ್ಟಾ ಕೃಷಿ ಭೂಮಿಯನ್ನು ಉಳುಮೆ ಮಾಡಲು ಕಡಿಮೆ ಬೆಲೆಯ ಟ್ರ್ಯಾಕ್ಟರ್ ಅನ್ನು ತಯಾರಿಸಿದ್ದಾರೆ. ಈ ಟ್ರಾಕ್ಟರ್ ಅನ್ನು ತನ್ನ ಸ್ನೇಹಿತನ ಗ್ಯಾರೇಜ್‌ನಿಂದ ರೂ.4,251 ಕೊಟ್ಟು ಖರೀದಿಸಿದ ಹಳೆಯ ಬಜಾಜ್ ಚೇತಕ್ ಸ್ಕೂಟರ್‌ನ ಸ್ಕ್ರ್ಯಾಪ್‌ನಿಂದ ತಯಾರಿಸಿದ್ದಾರೆ. ಪ್ರಾಥಮಿಕ ಶಾಲೆಯನ್ನು ಅರ್ಧಕ್ಕೆ ಬಿಟ್ಟ ಕರ್ಮಾಲಿರವರು ಈ ಹೊಸ ಯಂತ್ರಕ್ಕೆ ಪವರ್ ಟಿಲ್ಲರ್ ಎಂದು ಹೆಸರಿಟ್ಟಿದ್ದಾರೆ.

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಇಟಿ ಆಟೋದ ಜೊತೆ ಮಾತನಾಡಿರುವ ಕರ್ಮಾಲಿರವರು, ನಾನು ಸುಮಾರು ಏಳು ವರ್ಷಗಳ ಕಾಲ ಬಜಾಜ್ ಶೋ ರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದೆ. ಈ ಟ್ರಾಕ್ಟರ್ ಅನ್ನು ಅಭಿವೃದ್ಧಿಪಡಿಸಲು ಆ ಅನುಭವವು ನನಗೆ ಸಾಕಷ್ಟು ಸಹಾಯ ಮಾಡಿತು.

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಈ ಹೊಸ ಯಂತ್ರವನ್ನು ವಿನ್ಯಾಸಗೊಳಿಸಲು ನನಗೆ ಮೂರು ದಿನಗಳು ಬೇಕಾಯಿತು ಎಂದು ಹೇಳಿದ್ದಾರೆ. ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೊದಲು ಕರ್ಮಾಲಿರವರು ಮಹಾರಾಷ್ಟ್ರದ ಪುಣೆಯಲ್ಲಿರುವ ಬಜಾಜ್ ಆಟೋ ಶೋರೂಂನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು.

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಮನೆಯ ಆರ್ಥಿಕ ಸಮಸ್ಯೆಗಳ ಕಾರಣದಿಂದಾಗಿ, ಅವರು ಆ ಕೆಲಸವನ್ನು ಬಿಟ್ಟು, ಅವರ ಕುಟುಂಬಕ್ಕೆ ಸಹಾಯ ಮಾಡುವ ಸಲುವಾಗಿ ಜಮೀನಿನಲ್ಲಿ ಕೆಲಸ ಮಾಡಲು ನಿರ್ಧರಿಸಿದರು. ಟ್ರ್ಯಾಕ್ಟರ್‌ನ ಪರ್ಫಾಮೆನ್ಸ್ ಬಗ್ಗೆ ಕರ್ಮಾಲಿರವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

2.5 ಲೀಟರ್ ಪೆಟ್ರೋಲ್‍‍ನಿಂದ 8,640 ಚದರ ಅಡಿ ಉಳುಮೆ ಮಾಡುವ ಸ್ಕೂಟರ್ ಅನ್ನು ಟ್ರಾಕ್ಟರ್ ಆಗಿ ಬದಲಾಯಿಸಲು ರೂ.12,000 ಖರ್ಚು ಮಾಡಿರುವುದಾಗಿ ತಿಳಿಸಿದರು. ಇದು ಸಾಂಪ್ರದಾಯಿಕ ಟ್ರಾಕ್ಟರ್‌ಗಿಂತ ಕಡಿಮೆ ಬೆಲೆ ಹೊಂದಿದ್ದು, ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಈ ಟ್ರಾಕ್ಟರ್‍‍ನಲ್ಲಿ ಉಳುಮೆ ಮಾಡುವಾಗ ಯಂತ್ರದ ಜೊತೆಗೆ ನಡೆಯಬೇಕು. ಆದರೆ ಮುಂದಿನ ವರ್ಷದ ವೇಳೆಗೆ ಪವರ್ ಟಿಲ್ಲರ್‌ನ ಹೆಚ್ಚು ದೊಡ್ಡದಾದ ಹಾಗೂ ಶಕ್ತಿಯುತವಾದ ಆವೃತ್ತಿಯನ್ನು ತರಲು ಕರ್ಮಾಲಿರವರು ಯೋಜಿಸುತ್ತಿದ್ದಾರೆ. ಆ ಟ್ರಾಕ್ಟರ್‍‍ನ ಮೇಲೆ ಕುಳಿತುಕೊಂಡು ಉಳುಮೆ ಮಾಡಬಹುದಾಗಿದೆ.

MOST READ: ಆರ್ಟಿಕಲ್ 370 ರದ್ದಾದ ಬೆನ್ನಲ್ಲೆ ಜಮ್ಮು ಕಾಶ್ಮೀರದಲ್ಲಿ ಶುರುವಾಗಿದೆ ಹೊಸ ಕೈಗಾರಿಕಾ ಕ್ರಾಂತಿ

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಟ್ರಾಕ್ಟರುಗಳಂತೆಯೇ ಈ ಯಂತ್ರದ ಮೇಲೆ ಸವಾರಿ ಮಾಡಲು ಸಾಧ್ಯವಾಗುತ್ತದೆ. ಮಾರ್ಪಡಿಸಿದ ಮಾದರಿಯು ಹೆಚ್ಚಿನ ಪ್ರಮಾಣದ ಉಳುಮೆ ಮಾಡುವುದಿಲ್ಲ. ಆದರೆ ಬೆಳೆಗಳನ್ನು ಕೊಯ್ಲು ಮಾಡಲು, ಕಳೆಗಳನ್ನು ಕತ್ತರಿಸಲು ಹಾಗೂ ಕಳೆಗಳನ್ನು ನಿಗ್ರಹಿಸಲು ಈ ಯಂತ್ರವನ್ನು ಬಳಸಲಾಗುತ್ತದೆ ಎಂದು ಕರ್ಮಾಲಿರವರು ವಿವರಿಸುತ್ತಾರೆ.

MOST READ: ಅಬ್ಬಾ..ಒಂದೇ ಆಟೋದಲ್ಲಿ ಪ್ರಯಾಣಿಸಿದ 24 ಜನ..!

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಮುಂದಿನ ದಿನಗಳಲ್ಲಿ ಕರ್ಮಾಲಿರವರು ತನ್ನ ಸಹವರ್ತಿ ರೈತರಿಗಾಗಿ ಕಡಿಮೆ ಬೆಲೆಯ ಕೃಷಿ ಯಂತ್ರೋಪಕರಣಗಳನ್ನು ತಯಾರಿಸಲು ಎಂಜಿನಿಯರಿಂಗ್ ವರ್ಕ್‍‍ಶಾಪ್ ತೆರೆಯ ಬೇಕೆಂದಿದ್ದಾರೆ. ನಾನು ನನ್ನ ಜಮೀನನ್ನು ಉಳುಮೆ ಮಾಡಲು ಪ್ರಾರಂಭಿಸಿದಾಗಿನಿಂದಲೂ ಅಕ್ಕ ಪಕ್ಕದ ರೈತರು ನನ್ನ ಪವರ್ ಟಿಲ್ಲರ್‌ ಅನ್ನು ಪಡೆಯುತ್ತಿದ್ದಾರೆ.

MOST READ: ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ..!

ಸ್ಕೂಟರ್ ಬಿಡಿಭಾಗಗಳಿಂದಲೇ ಅಗ್ಗದ ಬೆಲೆಯ ಟ್ರಾಕ್ಟರ್ ನಿರ್ಮಾಣ ಮಾಡಿದ ರೈತ

ಇಂತಹ ಯಂತ್ರಗಳನ್ನು ಬೃಹತ್ ಪ್ರಮಾಣದಲ್ಲಿ ನಿರ್ಮಿಸಲು ನನಗೆ ಡ್ರಿಲ್ಲಿಂಗ್, ಕಟ್ಟಿಂಗ್ ಹಾಗೂ ವೆಲ್ಡಿಂಗ್ ಉಪಕರಣಗಳು ಬೇಕಾಗುತ್ತವೆ. ಇದಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಬಂಡವಾಳದ ಅಗತ್ಯವಿದೆ. ಸದ್ಯಕ್ಕೆ ನಾನು ಆರ್ಥಿಕ ನೆರವನ್ನು ಬಯಸುತ್ತಿದ್ದೇನೆ. ಅದರಿಂದಾಗಿ ಈ ವಾಹನಗಳನ್ನು ತಯಾರಿಸುವ ವರ್ಕ್‍‍ಶಾಪ್ ಆರಂಭಿಸಲು ನನಗೆ ಅನುಕೂಲವಾಗಲಿದೆ ಎಂದು ಹೇಳಿದರು.

Source: ET Auto

More from DriveSpark

Article Published On: Tuesday, August 13, 2019, 16:50 [IST]
English summary
Jharkhand farmer creates a low-cost tractor from scooter scrap - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+