ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ರೆನಾಲ್ಟ್ ಸಂಸ್ಥೆಯು ಮಾರುತಿ ಸುಜುಕಿ ಎರ್ಟಿಗಾ ಹಾಗು ಮಹೀಂದ್ರಾ ಮರಾಜೊ ಎಂಪಿವಿ ಕಾರುಗಳಿಗೆ ಪೈಪೋಟಿ ನೀಡಲು ತಮ್ಮ ಟ್ರೈಬರ್ ಎಂಪಿವಿ ಕಾರನ್ನು ಇದೇ ಜೂನ್ 19ರಂದು ಅನಾವರಣಗೊಳಿಸಲಿದೆ. ಈ ಕುರಿತಾಗಿ ಸಂಸ್ಥೆಯು ತಮ್ಮ ರೆನಾಲ್ಟ್ ಟ್ರೈಬರ್ ಎಂಪಿವಿ ಕಾರಿನ ಕುರಿತಾದ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದ್ದು, ಬಿಡುಗಡೆಗೊಳ್ಳಲಿರುವ ಟ್ರೈಬರ್ ಕಾರು ಹೇಗಿರಲಿದೆ ಎಂದು ತೋರಿಸಿದೆ.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ರೆನಾಲ್ಟ್ ಇಂಡಿಯಾ 4 ಸಬ್ ಮೀಟರ್ ಆಕಾರವನ್ನು ಹೊಂದಿರಲಿದ್ದು, ಕ್ವಿಡ್ ಕಾರಿನ ಸಿಎಂಎಫ್-ಎ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಾಗಿದೆ. ನೋಡಲು ಈ ಕಾರು ಎಂಪಿವಿಯಂತೆ ಇಲ್ಲವಾದರೂ ದೂರದಿಂದ ನೋಡಿದ್ದಲ್ಲಿ ಇದು ಎಸ್‍ಯುವಿ ಕಾರಿನಂತೆ ವಿನ್ಯಾಸ ಮಾಡಲಾಗಿದೆ. ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಟ್ರೈಬರ್ ಕಾರಿನಲ್ಲಿ, ಮೂರು ಆಸನಗಳ ಸಾಲನ್ನು ಹೊತ್ತು ಬರಲಿದ್ದು, ಕಾರು ಬಿಡುಗಡೆಯಾದ ನಂತರ ಯಾವ ಮಟ್ಟಕ್ಕೆ ಜನಪ್ರೀಯತೆಯನ್ನು ಪಡೆಯಲಿದೆ ಎಂದು ಕಾಯ್ದು ನೋಡಬೇಕಿದೆ.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ಮಧ್ಯಮ ಗಾತ್ರದ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ರೆನಾಲ್ಟ್ ಸಂಸ್ಥೆಯು ಲೊಡ್ಜಿ ಎಂಪಿವಿ ಕಾರುಗಳ ಮಾರಾಟದಲ್ಲಿ ತುಸು ಹಿನ್ನೆಡೆ ಅನುಭವಿಸಿದೆ ಅಂದ್ರೆ ತಪ್ಪಾಗುವುದಿಲ್ಲ. ಇದೇ ಕಾರಣಕ್ಕಾಗಿ ಕಾರು ಮಾರಾಟದಲ್ಲಿ ಭಾರೀ ಬದಲಾವಣೆಗೆ ನಿರ್ಧರಿಸಿರುವ ರೆನಾಲ್ಟ್ ಈ ಬಾರಿ ಹೊಸ ಯೋಜನೆಗೆ ಕೈಹಾಕಿದೆ. ಹೊಸ ಕಾರು ಉತ್ಪನ್ನದೊಂದಿಗೆ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿರುವ ರೆನಾಲ್ಟ್ ಸಂಸ್ಥೆಯು ವಿನೂತನ ಶೈಲಿಯ 7 ಸೀಟರ್ ಮಾದರಿಯ ಮಿನಿ ಎಂಪಿವಿ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡುತ್ತಿದೆ.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ರೆನಾಲ್ಟ್ ಹೊಸ ಮಿನಿ ಎಂಪಿವಿ ಟ್ರೈಬರ್ ಕಾರು ಕ್ವಿಡ್‌ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿ ಸಿದ್ದಗೊಂಡಿದ್ದು, ಕ್ವಿಡ್ ಕಾರಿಗಿಂತಲೂ ತುಸು ದೊಡ್ಡದಾಗಿರಲಿದೆ. ಹಾಗೆಯೇ ಲೊಡ್ಜಿ ಕಾರಿಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ನೀರಿಕ್ಷೆಯಲ್ಲಿದೆ.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ಈಗಾಗಲೇ ದೇಶದ ಪ್ರಮುಖ ಕಡೆಗಳಲ್ಲಿ ರೆನಾಲ್ಟ್ ಹೊಸ ಎಂಪಿವಿ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ರೆನಾಲ್ಟ್ ಸಂಸ್ಥೆಯ ಸಿಎಂಎಫ್ ಎ ಪ್ಲಸ್ ಕಾರು ಉತ್ಪಾದನಾ ಪ್ಯಾರ್ಟ್‌ಫಾರ್ಮ್ ಅಡಿಯಲ್ಲಿ ಈ ಹೊಸ ಕಾರನ್ನು ಅಭಿವೃದ್ಧಿ ಮಾಡಲಾಗಿದೆಯೆಂತೆ. ಹೀಗಾಗಿ ಕಾರಿನ ವಿನ್ಯಾಸವು ಎಂಪಿವಿ ಕಾರು ಖರೀದಿದಾರರ ಗಮನಸೆಳೆಯಲಿದ್ದು, ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ಜೊತೆಗೆ ಎಂಪಿವಿ ಮಾದರಿಗಳಲ್ಲೇ ಸಣ್ಣ ಗಾತ್ರದ ಕಾರು ಆವೃತ್ತಿಯಾಗಿರುವ ರೆನಾಲ್ಟ್ ಹೊಸ ಕಾರು ಬೆಲೆ ಮತ್ತು ಎಂಜಿನ್ ಗಾತ್ರದಲ್ಲೂ ತುಸು ಬದಲಾವಣೆಯೊಂದಿಗೆ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಲೊಡ್ಜಿ ಕಾರುಗಳ ಮಾರಾಟದಲ್ಲಿ ಆದ ಹಿನ್ನಡೆಯನ್ನು ಈ ಕಾರಿನ ಮೂಲಕ ಗ್ರಾಹಕರ ಬೇಡಿಕೆಯನ್ನು ಕಾಯ್ದುಕೊಳ್ಳಲು ಇದು ನೆರವಾಗಲಿದೆ.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, 7 ಸೀಟರ್ ಸೌಲಭ್ಯವನ್ನು ಹೊಂದಿರುವ ರೆನಾಲ್ಟ್ ಹೊಸ ಎಂಪಿವಿ ಕಾರು ಗುಣಮಟ್ಟದ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್‌ಇಡಿ ಡಿಆರ್‌ಎಸ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ಪುಶ್ ಬಟನ್ ಸ್ಟಾರ್ಟ್ ಸೌಲಭ್ಯಗಳು ಇದರಲ್ಲಿವೆ.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ಎಂಜಿನ್ ಸಾಮರ್ಥ್ಯ

ಹೊಸ ಟೈಬ್ರರ್ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಒದಗಿಸುವ ಸಾಧ್ಯತೆಗಳಿದ್ದು, ಇದು ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆ ಕಾಯ್ದುಕೊಳ್ಳವು ನೆರವಾಗಲಿದೆ ಎನ್ನಬಹುದು.

ಜೂನ್ 19ರಂದು ಅನಾವರಣಗೊಳ್ಳಲಿರುವ ಹೊಸ ರೆನಾಲ್ಟ್ ಟ್ರೈಬರ್

ಕಾರಿನ ಬೆಲೆಗಳು(ಅಂದಾಜು)

ಕಾರಿನ ಗುಣಮಟ್ಟ ಮತ್ತು ಎಂಜಿನ್ ಸಾಮರ್ಥ್ಯವನ್ನು ನೋಡಿದಾಗ ಹೊಸ ಕಾರಿನ ಬೆಲೆಯು ರೂ. 7 ಲಕ್ಷದಿಂದ ರೂ. 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಕಾರು ಜೂನ್ 19ರಂದು ಅನಾವರಣಗೊಂಡ ನಂತರ ಜುಲೈ ಆರಂಭದಲ್ಲಿ ಖರೀದಿಗೆ ಲಭ್ಯವಾಗುವ ಬಗ್ಗೆ ರೆನಾಲ್ಟ್ ಇಂಡಿಯಾ ಸಿಇಒ ಎಂ. ವೆಂಕಟರಾಮ್ ಸುಳಿವು ನೀಡಿದ್ದಾರೆ.

More from DriveSpark

Article Published On: Monday, June 17, 2019, 13:45 [IST]
English summary
Renault Triber MPV Globally Reveal On June 19. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+