ಎಂಪಿವಿ ಕಾರುಗಳಲ್ಲೇ ವಿಶೇಷ ಸೌಲಭ್ಯವನ್ನು ಹೊತ್ತುಬರಲಿದೆ ರೆನಾಲ್ಟ್ ಟ್ರೈಬರ್
ರೆನಾಲ್ಟ್ ಇಂಡಿಯಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ತನ್ನ ಹೊಚ್ಚ ಹೊಸ ಮಿನಿ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರು ಮಾದರಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಆರ್‍ಬಿಸಿ ಕೋಡ್ ಆಧಾರದ ಮೇಲೆ ಎಂಜಿನ್ ಕಾರ್ಯಕ್ಷಮತೆ ಕುರಿತು ಟೆಸ್ಟಿಂಗ್ ನಡೆಸುತ್ತಿರುವ ಹೊಸ ಕಾರು ಟ್ರೈಬರ್ ಹೆಸರಿನೊಂದಿಗೆ ಬಿಡುಗಡೆಯಾಗುವುದು ಪಕ್ಕಾ ಆಗಿದೆ.

ಮಧ್ಯಮ ಗಾತ್ರದ ಹಲವು ಕಾರು ಮಾದರಿಗಳನ್ನು ಬಿಡುಗಡೆಗೊಳಿಸಿ ಯಶಸ್ವಿಯಾಗಿರುವ ರೆನಾಲ್ಟ್ ಸಂಸ್ಥೆಯು ಲೊಡ್ಜಿ ಎಂಪಿವಿ ಕಾರುಗಳ ಮಾರಾಟದಲ್ಲಿ ತುಸು ಹಿನ್ನೆಡೆ ಅನುಭವಿಸಿದೆ ಅಂದ್ರೆ ತಪ್ಪಾಗುವುದಿಲ್ಲ. ಇದೇ ಕಾರಣಕ್ಕಾಗಿ ಕಾರು ಮಾರಾಟದಲ್ಲಿ ಭಾರೀ ಬದಲಾವಣೆಗೆ ನಿರ್ಧರಿಸಿರುವ ರೆನಾಲ್ಟ್ ಈ ಬಾರಿ ಹೊಸ ಯೋಜನೆಗೆ ಕೈಹಾಕಿದೆ. ಹೊಸ ಕಾರು ಉತ್ಪನ್ನದೊಂದಿಗೆ ಮತ್ತೊಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿರುವ ರೆನಾಲ್ಟ್ ಸಂಸ್ಥೆಯು ವಿನೂತನ ಶೈಲಿಯ 7 ಸೀಟರ್ ಮಾದರಿಯ ಮಿನಿ ಎಂಪಿವಿ ಕಾರು ಮಾದರಿಯೊಂದನ್ನು ಬಿಡುಗಡೆ ಮಾಡುವ ಇರಾದೆಯಲ್ಲಿದೆ.

ರೆನಾಲ್ಟ್ ಇಂಡಿಯಾ ಸಂಸ್ಥೆಯು ಭಾರತದಲ್ಲಿ ತನ್ನ ಹೊಸ ಎಂಪಿವಿ ಟ್ರೈಬರ್ ಕಾರನ್ನು ಸದ್ಯಕ್ಕೆ ಆರ್‌ಬಿಸಿ ಎನ್ನುವ ಕೋಡ್ ನೆಮ್ ಆಧಾರ ಮೇಲೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳ ಬಗೆಗೆ ಕೆಲವು ಮಹತ್ವದ ಮಾಹಿತಿಗಳನ್ನು ಬಹಿರಂಗವಾಗುತ್ತಿವೆ.

ರೆನಾಲ್ಟ್ ಹೊಸ ಮಿನಿ ಎಂಪಿವಿ ಟ್ರೈಬರ್ ಕಾರು ಕ್ವಿಡ್ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿ ಸಿದ್ದಗೊಂಡಿದ್ದು, ಕ್ವಿಡ್ ಕಾರಿಗಿಂತಲೂ ತುಸು ದೊಡ್ಡದಾಗಿರಲಿದೆ. ಹಾಗೆಯೇ ಲೊಡ್ಜಿ ಕಾರಿಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ನೀರಿಕ್ಷೆಯಲ್ಲಿದೆ.

ಈಗಾಗಲೇ ತಮಿಳುನಾಡಿನ ಪ್ರಮುಖ ಕಡೆಗಳಲ್ಲಿ ರೆನಾಲ್ಟ್ ಹೊಸ ಎಂಪಿವಿ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದ್ದು, ರೆನಾಲ್ಟ್ ಸಂಸ್ಥೆಯ ಸಿಎಂಎಫ್ ಎ ಪ್ಲಸ್ ಕಾರು ಉತ್ಪಾದನಾ ಪ್ಯಾರ್ಟ್‌ಫಾರ್ಮ್ ಅಡಿಯಲ್ಲಿ ಈ ಹೊಸ ಕಾರನ್ನು ಅಭಿವೃದ್ಧಿ ಮಾಡಲಾಗಿದೆಯೆಂತೆ. ಹೀಗಾಗಿ ಕಾರಿನ ವಿನ್ಯಾಸವು ಎಂಪಿವಿ ಕಾರು ಖರೀದಿದಾರರ ಗಮನಸೆಳೆಯಲಿದ್ದು, ಮಾರುತಿ ಸುಜುಕಿ ಎರ್ಟಿಗಾ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ.

ಜೊತೆಗೆ ಎಂಪಿವಿ ಮಾದರಿಗಳಲ್ಲೇ ಸಣ್ಣ ಗಾತ್ರದ ಕಾರು ಆವೃತ್ತಿಯಾಗಿರುವ ರೆನಾಲ್ಟ್ ಹೊಸ ಕಾರು ಬೆಲೆ ಮತ್ತು ಎಂಜಿನ್ ಗಾತ್ರದಲ್ಲೂ ತುಸು ಬದಲಾವಣೆಯೊಂದಿಗೆ ಗ್ರಾಹಕರನ್ನು ಸೆಳೆಯುವ ವಿಶ್ವಾಸದಲ್ಲಿದ್ದು, ಲೊಡ್ಜಿ ಕಾರುಗಳ ಮಾರಾಟದಲ್ಲಿ ಆದ ಹಿನ್ನಡೆಯನ್ನು ಈ ಕಾರಿನ ಮೂಲಕ ಗ್ರಾಹಕರ ಬೇಡಿಕೆಯನ್ನು ಕಾಯ್ದುಕೊಳ್ಳಲು ಇದು ನೆರವಾಗಲಿದೆ.

ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, 7 ಸೀಟರ್ ಸೌಲಭ್ಯವನ್ನು ಹೊಂದಿರುವ ರೆನಾಲ್ಟ್ ಹೊಸ ಎಂಪಿವಿ ಕಾರು ಗುಣಮಟ್ಟದ ತಾಂತ್ರಿಕ ಅಂಶಗಳನ್ನು ಪಡೆದುಕೊಂಡಿದ್ದು, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ರಿಯರ್ ಪಾರ್ಕಿಂಗ್ ಸೆನ್ಸಾರ್, ಎಲ್‌ಇಡಿ ಡಿಆರ್‌ಎಸ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಮತ್ತು ಪುಶ್ ಬಟನ್ ಸ್ಟಾರ್ಟ್ ಸೌಲಭ್ಯಗಳು ಇದರಲ್ಲಿವೆ.
MOST READ: ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಹಾಗೆಯೇ ಹೊಸ ಕಾರಿನಲ್ಲಿ ಇದೇ ಮೊದಲ ಬಾರಿಗೆ ಎಂಪಿವಿ ವಿಭಾಗದಲ್ಲಿ ಹೊಸ ವೈಶಿಷ್ಟ್ಯತೆಯುಳ್ಳ ಕೆಲವು ಸೌಲಭ್ಯ ನೀಡಲಾಗಿದ್ದು, ಕಾರು ಪ್ರಯಾಣದ ವೇಳೆ ಹೆಚ್ಚುವರಿ ಲಗೇಜ್ ಇದ್ದಲ್ಲಿ ಕಾರಿನ ಬೂಟ್ ಸ್ಪೆಸ್ ಹೆಚ್ಚಿಸಲು ಮೂರನೇ ಸಾಲಿನ ಆಸನವನ್ನು ತೆಗೆದುಹಾಕಬಹುದಾದ ಸೌಲಭ್ಯ ಇದರಲ್ಲಿದೆ.

ಎಂಜಿನ್ ಸಾಮರ್ಥ್ಯ
ಹೊಸ ಕಾರುಗಳಲ್ಲಿ 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಒದಗಿಸುವ ಸಾಧ್ಯತೆಗಳಿದ್ದು, ಇದು ಪರ್ಫಾಮೆನ್ಸ್ ಜೊತೆಗೆ ಉತ್ತಮ ಇಂಧನ ದಕ್ಷತೆ ಕಾಯ್ದುಕೊಳ್ಳಲು ನೆರವಾಗಲಿದೆ ಎನ್ನಬಹುದು.
MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಕಾರಿನ ಬೆಲೆಗಳು(ಅಂದಾಜು)
ಕಾರಿನ ಗುಣಮಟ್ಟ ಮತ್ತು ಎಂಜಿನ್ ಸಾಮರ್ಥ್ಯವನ್ನು ನೋಡಿದಾಗ ಹೊಸ ಕಾರಿನ ಬೆಲೆಯು ರೂ. 7 ಲಕ್ಷದಿಂದ ರೂ. 9.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಹೊಸ ಕಾರುಗಳು 2019ರ ಜುಲೈ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ಬಗ್ಗೆ ರೆನಾಲ್ಟ್ ಇಂಡಿಯಾ ಸಿಇಒ ಎಂ. ವೆಂಕಟರಾಮ್ ಅವರೇ ಈ ಹಿಂದೆ ಎಕನಾಮಿಕ್ ಟೈಮ್ಸ್ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಕೆಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದರು.


Click it and Unblock the Notifications