ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಟೊಯೊಟಾ ಸಂಸ್ಥೆಯ ಜನಪ್ರಿಯ ಕಾರು ಮಾದರಿಗಳಾದ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಸದ್ಯ ಕಾರು ಪ್ರಿಯರ ಹಾಟ್ ಫೆವರಿಟ್‌ಗಳಾಗಿದ್ದು, 2019ರ ಆವೃತ್ತಿಗಳು ಕೂಡಾ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶಿಸಿವೆ.

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ತರದೆ ಕೇವಲ ಇನ್ಪೋಟೈನ್‌ಮೆಂಟ್ ಮತ್ತು ಕಾರುಗಳ ಒಳಾಂಗಣ ವಿನ್ಯಾಸದಲ್ಲಿ ಮಾತ್ರವೇ ಬದಲಾವಣೆ ತಂದಿರುವ ಟೊಯೊಟಾ ಸಂಸ್ಥೆಯು ಪ್ರೀಮಿಯಂ ಫೀಚರ್ಸ್‌ಗಳ ಮೂಲಕ ಕಾರಿನ ಒಳಭಾಗಕ್ಕೆ ಮತ್ತಷ್ಟು ಹೊಸತನ ನೀಡಿದೆ.

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಫಾರ್ಚೂನರ್ ಕಾರು ಮಾದರಿಯು ಸದ್ಯಕ್ಕೆ 4ಡಬ್ಲ್ಯುಡಿ ಮತ್ತು 2ಡಬ್ಲ್ಯೂಡಿ ವೆರಿಯೆಂಟ್‌ಗಳಲ್ಲಿ ಮಾರಾಟವಾಗುತ್ತಿದ್ದು, ಎರಡು ಮಾದರಿಯಲ್ಲೂ ಸುಧಾರಿತ ವಿನ್ಯಾಸದ ಆಸನಗಳು, ಹೀಟ್ ರಿಜೆಕ್ಷನ್ ಗ್ಲಾಸ್, ಸುಧಾರಿತ ಮಾದರಿಯ ಸ್ಪಿಕರ್ಸ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಹಾಗೆಯೇ ಇನೋವಾ ಕ್ರಿಸ್ಟಾ ಕೂಡಾ ಸುಧಾರಿತ ವಿನ್ಯಾಸದ ಆಸನಗಳು, ಹೀಟ್ ರಿಜೆಕ್ಷನ್ ಗ್ಲಾಸ್, ಯುಎಸ್‌ಬಿ ಚಾರ್ಜಿಂಗ್ ಪಾಯಿಂಟ್ ಮತ್ತು ಸುಧಾರಿತ ಮಾದರಿಯ ಸ್ಪಿಕರ್ಸ್ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಜೆಡ್‌ಎಕ್ಸ್ ಎಂಟಿ ಮತ್ತು ಜೆಡ್ಎಕ್ಸ್ ಎಟಿ ಮಾದರಿಗಳಲ್ಲಿ ನ್ಯೂ ಐವೆರಿ ಶೆಡಿಂಗ್ ನೀಡಲಾಗಿದೆ.

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಹೀಗಾಗಿ ಹೊಸ ಸೌಲಭ್ಯ ಪ್ರೇರಿತ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳ ಬೆಲೆಗಳು ತುಸು ದುಬಾರಿ ಎನ್ನಿಸಬಹುದು ಎಂದುಕೊಂಡಿದ್ದ ಗ್ರಾಹಕರಿಗೆ ಟೊಯೊಟಾ ಸಂಸ್ಥೆಯು ಸಿಹಿಸುದ್ದಿ ನೀಡಿದ್ದು, ಯಾವುದೇ ದರ ಏರಿಕೆ ಮಾಡದೆಯೇ ಹೊಸ ಪ್ರೀಮಿಯಂ ಫೀಚರ್ಸ್‌ಗಳನ್ನು ನೀಡಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆಗಳಂತೆ ಇನೋವಾ ಕ್ರಿಸ್ಟಾ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.14.93 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 22.43 ಲಕ್ಷ ದರ ಪಡೆದಿದೆ.

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಇದರಲ್ಲಿ ಫಾರ್ಚೂನರ್ ಮಾದರಿಯು ಕೂಡಾ ಈ ಹಿಂದಿನಂತೆಯೇ ಆರಂಭಿಕವಾಗಿ ಎಕ್ಸ್‌ಶೋರೂಂ ಪ್ರಕಾರ ರೂ.27.83 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 33.60 ಲಕ್ಷ ಬೆಲೆ ಹೊಂದಿದ್ದು, ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಮಾರಾಟವು ಟೊಯೊಟಾ ಸಂಸ್ಥೆಗೆ ಭಾರೀ ಪ್ರಮಾಣದ ಲಾಭ ತಂದುಕೊಟ್ಟಿವೆ.

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಇನ್ನು ಟೊಯೊಟಾ ಸಂಸ್ಥೆಯು ಕ್ಯಾಬ್ ಆಪರೇಟರ್ಸ್‌ಗಳಿಗಾಗಿ ಕಳೆದ ತಿಂಗಳು ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಹೊಸದೊಂದು ವೆರಿಯೆಂಟ್ ಬಿಡುಗಡೆ ಮಾಡಿದ್ದು, ಟೂರಿಸ್ಟ್ ವಿಭಾಗದಲ್ಲಿನ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಜಿ ಪ್ಲಸ್ ಎನ್ನುವ ಹೊಸ ಆವೃತ್ತಿಯನ್ನು ಹೊರತರಲಾಗಿದೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಜಿ ಪ್ಲಸ್ ಆವೃತ್ತಿಯು 7 ಆಸನವುಳ್ಳ ಮಾದರಿಗೆ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.15.57 ಲಕ್ಷ ಹಾಗು ಎಂಟು ಆಸನವುಳ್ಳ ಮಾದರಿಗೆ ರೂ. 15.62 ಲಕ್ಷ ಬೆಲೆ ಹೊಂದಿದ್ದು, ಇಷ್ಟು ದಿನ ಎಂಟ್ರಿ ಲೆವೆಲ್ ಆಗಿ ಮಾರಾಟಗೊಳ್ಳುತ್ತಿದ್ದ ಜಿಎಕ್ಸ್‌ಗಿಂತ ಕೆಳ ಮಾದರಿಯಲ್ಲಿ ಸ್ಥಾನ ಪಡೆದುಕೊಂಡಿರಲಿದೆ.

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಎಂಜಿನ್ ಸಾಮರ್ಥ್ಯ

ಟೊಯೊಟಾ ಇನೋವಾ ಕ್ರಿಸ್ಟಾ ಜಿ ಪ್ಲಸ್ ಮಾದರಿಯು 2.4-ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 150 ಬಿಹೆಚ್‍ಪಿ ಮತ್ತು 343ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

MOST READ: ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಮತ್ತಷ್ಟು ಸ್ಮಾರ್ಟ್ ಆಗಿ ಬಂದ 2019ರ ಟೊಯೊಟಾ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್

ಇದರೊಂದಿಗೆ 2018ರ ಡಿಸೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಮರಾಜೊ ಮತ್ತು ಎರ್ಟಿಗಾ ಕಾರುಗಳನ್ನು ಹಿಂದಿಕ್ಕಿ ಒಂದೇ ತಿಂಗಳಿನಲ್ಲಿ ಬರೊಬ್ಬರಿ 11,200 ಯೂನಿಟ್ ಕಾರುಗಳ ಬುಕ್ಕಿಂಗ್ ಪಡೆದುಕೊಂಡಿದ್ದ ಇನೋವಾ ಕ್ರಿಸ್ಟಾ ಕಾರು ಇದೀಗ ಮತ್ತಷ್ಟು ಪ್ರೀಮಿಯಂ ಸೌಲಭ್ಯಗಳಿಂದಾಗಿ ಮಾರಾಟದಲ್ಲಿ ಮತ್ತೆ ಹೊಸ ಸಂಚಲನ ಸೃಷ್ಠಿಸಲಿದೆ.

Article Published On: Monday, April 8, 2019, 14:59 [IST]
English summary
2019 Toyota Innova & Fortuner Launched In India. Read in Kannada.
Read more on ಟೊಯೊಟಾ toyota
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+