ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ದೇಶಾದ್ಯಂತ ಪ್ರತಿವರ್ಷ ಲಕ್ಷಾಂತರ ಹೊಸ ವಾಹನಗಳು ರಸ್ತೆಗಿಳಿಯುತ್ತಿದ್ದು, ರಸ್ತೆ ಅಪಘಾತಗಳ ಸಂಖ್ಯೆ ಕೂಡಾ ಹೆಚ್ಚಳವಾಗುತ್ತಲೇ ಇವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹಿಟ್ ಆ್ಯಂಡ್ ರನ್ ಪ್ರಕರಣಗಳಿಂದಾಗಿ ಸಾವಿರಾರು ಜನ ಅಮಾಯಕರು ಪ್ರಾಣಕಳೆದುಕೊಳ್ಳುತ್ತಿದ್ದು, ಮೃತರ ಕುಟಂಬಗಳಿಗೆ ಪರಿಹಾರ ಹೆಚ್ಚಿಸುವ ಸಂಬಂಧ ಸುಪ್ರೀಂಕೋರ್ಟ್ ಸಲಹೆ ಮೇರೆಗೆ ಕೇಂದ್ರ ಸರ್ಕಾರವು ಹೊಸ ನೀತಿಯೊಂದು ಜಾರಿಗೆ ತಂದಿದೆ.

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಕೇಂದ್ರ ಸರ್ಕಾರವು ಕಳೆದ ವರ್ಷವಷ್ಟೇ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವನ್ನು ರೂ.50 ಸಾವಿರದಿಂದ ರೂ.5 ಲಕ್ಷಕ್ಕೆ ಮತ್ತು ಗಾಯಾಳುಗಳಿಗೆ ರೂ.25 ಸಾವಿರದಿಂದ ರೂ.2 ಲಕ್ಷದ ತನಕ ಪರಿಹಾರ ನೀಡುವ ಹೊಸ ಯೋಜನೆಯನ್ನು ಜಾರಿಗೆ ತಂದಿತ್ತು. ಇದೀಗ ಇದೇ ಯೋಜನೆಯ ಭಾಗವಾಗಿ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದರ ಕುಟುಂಬಗಳ ಪರಿಹಾರಕ್ಕಾಗಿ ಪ್ರತ್ಯೇಕ ನಿಧಿಯೊಂದನ್ನು ಆರಂಭಿಸಿದ್ದು, ಹೊಸ ಕಾರು ಖರೀದಿದಾರರಿಂದಲೇ ನಿಧಿ ಸಂಗ್ರಹಿಸಲು ಮುಂದಾಗಿದೆ.

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಹೀಗಾಗಿ ಹೊಸ ಕಾರು ಖರೀದಿದಾರರು ಇನ್ಮುಂದೆ ರೂ.500 ಹೆಚ್ಚುವರಿಯಾಗಿ ಹಿಟ್ ಆ್ಯಂಡ್ ರನ್ ಮೃತರ ಕುಟಂಬಗಳ ಪರಿಹಾರ ನಿಧಿಗೆ ನೀಡಬೇಕಿದ್ದು, ಸಾರಿಗೆ ಇಲಾಖೆಯು ಸುಪ್ರೀಂಕೋರ್ಟ್ ಸೂಚನೆ ಅನ್ವಯ ಹೊಸ ನಿಯಮವನ್ನು ಶೀಘ್ರದಲ್ಲೇ ಜಾರಿಗೆ ತರುತ್ತಿದೆ.

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಸದ್ಯ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದ ಕುಟುಂಬಗಳಿಗೆ ಪರಿಹಾರವಾಗಿ ರೂ.25 ಸಾವಿರ ನೀಡಲಾಗುತ್ತಿದ್ದು, ಇದನ್ನು ಹೆಚ್ಚಳ ಮಾಡುವಂತೆ ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ಎಸ್.ರಾಜಶೇಖರನ್ ಎನ್ನುವರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಇದನ್ನು ಗಂಭೀರವಾಗಿ ಆಲಿಸಿದ್ದ ಸುಪ್ರೀಂಕೋರ್ಟ್ ಇದಕ್ಕಾಗಿ ಕಮಿಟಿಯೊಂದನ್ನು ರಚನೆ ಮಾಡಿ ಪರಿಹಾರ ಹೆಚ್ಚಿಸಲು ಸಲಹೆ ನೀಡುವಂತೆ ಸೂಚನೆ ನೀಡಿತ್ತು. ಸುಪ್ರೀಂ ಸೂಚನೆಯೆಂತೆ ಪರಿಹಾರ ಹೆಚ್ಚಳಕ್ಕಾಗಿ ಹೊಸ ಕಾರು ಖರೀದಿದಾರರಿಂದಲೇ ಒಂದು ಸಣ್ಣ ಮೊತ್ತದ ನಿಧಿ ಸಂಗ್ರಹಿಸಿದ್ದಲ್ಲಿ ಹಿಟ್ ಅಂಡ್ ರನ್ ಮೃತರ ಕುಟುಂಬಗಳಿಗೆ ಕನಿಷ್ಠ ರೂ.2 ಲಕ್ಷ ಪರಿಹಾರ ನೀಡಬಹುದಾಗಿದೆ ಎಂದಿದೆ.

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಇಲ್ಲಿ ಗಮಿಸಬೇಕಾದ ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಎರಡು ವಾಹನಗಳ ಮಧ್ಯೆ ಸಂಭವಿಸುವ ಅಪಘಾತಗಳಲ್ಲಿ ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ವಾಹನ ವಿಮೆ ಮೂಲಕ ಸುಲಭವಾಗಿ ಪರಿಹಾರ ಸಿಗುತ್ತದೆ. ಆದ್ರೆ ಹಿಟ್ ಆ್ಯಂಡ್ ರನ್ ಪ್ರಕರಣಗಳಲ್ಲಿ ಈ ರೀತಿ ಪರಿಹಾರ ಸಿಗುವುದು ಕಷ್ಟ.

MOST READ: ವಾಹನಗಳ ಕಳ್ಳತನಕ್ಕೆ ಬ್ರೇಕ್ ಹಾಕಲು ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ..!

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಯಾಕೆಂದ್ರೆ, ಹೆಸರಿನಲ್ಲೇ ಇರುವಂತೆ ಹಿಟ್ ಮಾಡಿ ಓಡಿ ಹೋಗುವ ವಾಹನ ಮಾಲೀಕರಿಂದಾಗಿ ಮೃತರಿಗೆ ಪರಿಹಾರ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಇಂತರಿಗೆ ಕನಿಷ್ಠ ಮಟ್ಟದ ಪರಿಹಾರ ನೀಡುವ ಉದ್ದೇಶದಿಂದ ಇಂತದೊಂದು ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಇನ್ನು ಅಪಘಾತದಲ್ಲಿ ಸಾವನ್ನಪ್ಪಿದ ಮತ್ತು ಗಂಭೀರವಾಗಿ ಗಾಯಗೊಂಡ ಸಂತ್ರಸ್ತರಿಗೆ ಇದುವರೆಗೆ ಒದಗಿಸಲಾಗುತ್ತಿದ್ದ ಪರಿಹಾರದ ಮೊತ್ತವನ್ನು ಹತ್ತು ಪಟ್ಟು ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರವು, ಪರಿಹಾರದ ಮೊತ್ತವನ್ನು ಪಡೆಯುವಲ್ಲಿ ಇದುವರೆಗೆ ಇದ್ದ ಕೆಲವು ನಿಯಮಗಳನ್ನು ಸಡಿಲಿಸಿದೆ.

MOST READ: ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಹೊಸ ಕಾರು ಖರೀದಿದಾರರು ಇನ್ಮುಂದೆ ಇದಕ್ಕಾಗಿ ಹೆಚ್ಚುವರಿ ಹಣ ನೀಡಬೇಕೆಂತೆ...!

ಕಳೆದ ವರ್ಷ ಅಕ್ಟೋಬರ್‌ನಿಂದಲೇ ಯೋಜನೆ ಜಾರಿಗೆ ಬಂದಿದ್ದು, ಕೇಂದ್ರ ಸರ್ಕಾರ ಹೊಸ ನಿಯಮದಂತೆ ಅಪಘಾತದಲ್ಲಿ ಮೃತಪಟ್ಟ ಪ್ರತಿಯೊಬ್ಬರು ರೂ. 5 ಲಕ್ಷ ಪರಿಹಾರಕ್ಕೆ ಅರ್ಹರಾಗಿದ್ದು, ಕೆಲವು ಅಪಘಾತ ಪ್ರಕರಣಗಳಲ್ಲಿ ಸಂತ್ರಸ್ತರ ಕುಟುಂಬಗಳು ಇನ್ನು ಹೆಚ್ಚಿನ ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ಹಾಗೆಯೇ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳು ಕೂಡಾ ಹೆಚ್ಚಿನ ಮೊತ್ತದ ಪರಿಹಾರ ಪಡೆದುಕೊಳ್ಳಬಹುದು.

Source: Times of India

More from DriveSpark

Article Published On: Friday, April 5, 2019, 17:36 [IST]
English summary
New car buyers could be charged Rs. 500 as a one-time contribution towards the proposed hit & run compensation fund. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+