ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಹೆಚ್ಚುತ್ತಿರುವ ಮಾಲಿನ್ಯ ತಡೆ ಉದ್ದೇಶದಿಂದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆ ಮತ್ತು ಬಳಕೆಗಾಗಿ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸಾರ್ವಜನಿಕ ಸಾರಿಗೆ ವಲಯದಲ್ಲೂ ಮಹತ್ವದ ಬದಲಾವಣೆ ತರಲಾಗುತ್ತಿದೆ. ಆದ್ರೆ ಆಟೋ ಉತ್ಪಾದನಾ ಸಂಸ್ಥೆಗಳ ವಿಳಂಬ ಧೋರಣೆಯಿಂದಾಗಿ ಭವಿಷ್ಯ ಯೋಜನೆಗೆ ಹಿನ್ನಡೆಯಾಗುವಂತಾಗಿದೆ.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ದೇಶಾದ್ಯಂತ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳ ಉತ್ಪಾದನೆ ಮತ್ತು ಮಾರಾಟವನ್ನು ಉತ್ತೇಜಿಸುವ ಸಂಬಂಧ ಕೇಂದ್ರ ಸರ್ಕಾರವು ಹಲವಾರುವ ಜನಪರ ಯೋಜನೆಗಳನ್ನು ಜಾರಿಗೊಳಿಸಿದ್ದು, ಸಾರ್ವಜನಿಕ ಸಾರಿಗೆ ವಲಯದಲ್ಲೂ ಸುಧಾರಣೆ ತರುವ ಸಂಬಂಧ ಎಲೆಕ್ಟ್ರಿಕ್ ಬಸ್‌ಗಳ ಬಳಕೆಗಾಗಿ ನೂರಾರು ಕೋಟಿ ಹಣ ಬಿಡುಗಡೆ ಮಾಡಿದೆ. ಹೀಗಿದ್ದರೂ ಎಲೆಕ್ಟ್ರಿಕ್ ವಾಹನಗಳನ್ನು ಸರಿಯಾದ ಸಮಯಕ್ಕೆ ಉತ್ಪಾದನೆ ಮಾಡಿ ಬೇಡಿಕೆ ಪೂರೈಸಲು ವಿಫಲವಾಗುತ್ತಿರುವ ಆಟೋ ಉತ್ಪಾದನಾ ಸಂಸ್ಥೆಗಳ ವಿಳಂಬದಿಂದಾಗಿ ಮಹತ್ವ ಯೋಜನೆಗೆ ಕನಸಾಗಿಯೇ ಉಳಿಯುವಂತಾಗಿದೆ.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

2017ರಲ್ಲಿ ಕೇಂದ್ರ ಸರ್ಕಾರವು ವಿವಿಧ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಖರೀದಿಗಾಗಿ ರೂ. 440 ಕೋಟಿ ಹಣ ಬಿಡುಗಡೆ ಮಾಡಿದ್ದು, ಹೊಸ ಯೋಜನೆಯ ಬಹುತೇಕ ಟೆಂಡರ್ ಅನ್ನು ಟಾಟಾ ಮೋಟಾರ್ಸ್ ಮತ್ತು ಅಶೋಕ್ ಲೇಲ್ಯಾಂಡ್ ಸಂಸ್ಥೆಗಳು ತಮ್ಮದಾಗಿಸಿಕೊಂಡಿದ್ದವು.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಅದರಲ್ಲೂ ಟಾಟಾ ಮೋಟಾರ್ಸ್ ಸಂಸ್ಥೆಯು ವಿವಿಧ ರಾಜ್ಯಗಳಿಗೆ ಸುಮಾರು 100ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‌ಗಳನ್ನು ಉತ್ಪಾದನೆ ಮಾಡಿ ಪೂರೈಕೆ ಮಾಡುವ ಟೆಂಡರ್ ತನ್ನದಾಗಿಸಿಕೊಂಡಿದ್ದರೂ ಸಹ 2017ರಿಂದ ಇದುವರೆಗೆ ಕೇವಲ 40 ಬಸ್‌ಗಳನ್ನು ಮಾತ್ರವೇ ಪೂರೈಕೆ ಮಾಡಿದೆ.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇದರಿಂದ ಟಾಟಾ ಮೋಟಾರ್ಸ್ ವಿರುದ್ಧ ಕಾನೂನು ಕ್ರಮಕೈಗೊಂಡಿರುವ ಕೇಂದ್ರ ಬೃಹತ್ ಕೈಗಾರಿಕಾ ಸಚಿವಾಲಯವು ನಿಗದಿ ಅವಧಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸದ ಟಾಟಾ ವಿರುದ್ದ ರೂ.3.42 ಕೋಟಿ ದಂಡ ವಿಧಿಸಿದ್ದು, ಇನ್ನುಳಿದ 60 ಬಸ್‌ಗಳನ್ನು ಮುಂದಿನ ಒಂದು ತಿಂಗಳ ಒಳಗಾಗಿ ಪೂರೈಕೆ ಮಾಡುವಂತೆ ಡೆಡ್‌ಲೈನ್ ನೀಡಿದೆ.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇಲ್ಲವಾದಲ್ಲಿ ಎಲೆಕ್ಟ್ರಿಕ್ ಬಸ್‌ಗಳ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರವು ನೀಡುತ್ತಿರುವ ಸಬ್ಸಡಿಯನ್ನು ಕೂಡಾ ಕಳೆದುಕೊಳ್ಳುವ ಸಾಧ್ಯತೆಗಳಿದ್ದು, ಮುಂಬರುವ ದಿನಗಳಲ್ಲಿ ಕರೆಯಲಾಗುವ ಟೆಂಡರ್ ಪ್ರಕ್ರಿಯೆಗಳಿಂದ ದೂರವಿಡುವುದಾಗಿ ಎಚ್ಚರಿಕೆ ನೀಡಿದೆ.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇನ್ನು ಬೆಂಗಳೂರಿನಲ್ಲೂ ಕೂಡಾ ಎಲೆಕ್ಟ್ರಿಕ್ ಬಸ್‌ಗಳನ್ನು ರಸ್ತೆಗಿಳಿಸುವ ಸಂಬಂಧ ಬಿಎಂಟಿಸಿ ಕೂಡಾ ಬರೋಬ್ಬರಿ 80 ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಕೆ ಮಾಡುವಂತೆ ಬೇಡಿಕೆಗೆ ಸಲ್ಲಿಸಿದ್ದು, ಇದುವರೆಗೂ ಒಂದೇ ಒಂದು ಬಸ್ ಕೂಡಾ ಪೂರೈಕೆ ಮಾಡಲಾಗಿಲ್ಲ.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಹೀಗಾಗಿ ಟಾಟಾ ಮೋಟಾರ್ಸ್‌ಗೆ ನೀಡಲಾಗಿರುವ ಟೆಂಡರ್ ಪ್ರಕ್ರಿಯೆಯನ್ನು ಕಡೆದುಕೊಳ್ಳಲು ಬಹುತೇಕ ರಾಜ್ಯ ಸರ್ಕಾರಗಳು ಚರ್ಚೆ ನಡೆಸುತ್ತಿದ್ದು, ಇದೀಗ ಹೊಸದಾಗಿ ನೀಡಲಾಗಿರುವ ಡೆಡ್‌ಲೈನ್ ಒಳಗಾಗಿ ಬಸ್ ಪೂರೈಕೆ ಮಾಡದೇ ಇದ್ದಲ್ಲಿ ಟಾಟಾ ಸಂಸ್ಥೆಗೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

MOST READ: ಕಾನೂನು ಬಾಹಿರ ಮಾಡಿಫೈ ಮಾಡಿಸಿದ ಕಾರು ಮಾಲೀಕನಿಗೆ ಬರೋಬ್ಬರಿ 5 ಲಕ್ಷ ದಂಡ..!

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಟಾಟಾ ಸಂಸ್ಥೆಯು ಸಂಸ್ಥೆಯು ಸದ್ಯ ಚೀನಾ ಮೂಲದ ಎಲೆಕ್ಟ್ರಿಕ್ ವಾಹನಗಳ ಉತ್ಪಾದನಾ ಸಂಸ್ಥೆಯಾದ ಬಿವೈಡಿ ಜೊತೆಗೂಡಿ ಮುಂಬೈನಲ್ಲಿ ಹೊಸ ಬಸ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದ್ದು, ಬಿವೈಡಿ ಅಂಗಸಂಸ್ಥೆಯಾದ ಬ್ರಿಡ್ಜ್‌ಸ್ಟೋನ್ ಸಂಸ್ಥೆಯು ಟಾಟಾ ಎಲೆಕ್ಟ್ರಿಕ್ ಬಸ್‌ಗಳನ್ನು ಓಲೆಕ್ಟ್ರಾ ಹೆಸರಿನೊಂದಿಗೆ ಪರಿಚಯಿಸುತ್ತಿದೆ.

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಇದರಿಂದಾಗಿ ಓಲೆಕ್ಟ್ರಾ ಬಸ್‌ಗಳ ಬ್ಯಾಟರಿ ಉತ್ಪಾದನೆಯಲ್ಲಿ ಕೆಲವು ಗೊಂದಲಗಳು ಸೃಷ್ಠಿಯಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಪೂರ್ಣಪ್ರಮಾಣದ ಬೇಡಿಕೆ ಪೂರೈಕೆ ಮಾಡಲು ತುಸು ಸಮಯಾವಕಾಶ ನೀಡುವಂತೆ ಟಾಟಾ ಸಂಸ್ಥೆಯು ಕೇಂದ್ರಕ್ಕೆ ಮನವಿ ಮಾಡಿದೆ.

MOST READ: ವಾಹನಗಳ ಕಳ್ಳತನಕ್ಕೆ ಬ್ರೇಕ್ ಹಾಕಲು ಹೊಸ ರೂಲ್ಸ್ ಜಾರಿ ಮಾಡಿದ ಕೇಂದ್ರ ಸರ್ಕಾರ..!

ಎಲೆಕ್ಟ್ರಿಕ್ ಬಸ್ ಪೂರೈಕೆಯಲ್ಲಿ ವಿಳಂಬ- ಟಾಟಾ ಮೋಟಾರ್ಸ್‌ಗೆ ರೂ.3.42 ಕೋಟಿ ದಂಡ..!

ಒಟ್ಟಿನಲ್ಲಿ ಎಲೆಕ್ಟ್ರಿಕ್ ಬಸ್ ಪೂರೈಕೆಗಾಗಿ ಬಹುತೇಕ ಟೆಂಡರ್‌ಗಳನ್ನು ತನ್ನದಾಗಿಸಿಕೊಂಡು ಸಂಕಷ್ಟಕ್ಕೆ ಸಿಲುಕಿರುವ ಟಾಟಾ ಸಂಸ್ಥೆಯು ನಿಗದಿತ ಅವಧಿಯಲ್ಲಿ ಎಲೆಕ್ಟ್ರಿಕ್ ಬಸ್‌ಗಳನ್ನು ಪೂರೈಸಲು ಹೊಸ ಯೋಜನೆಯ ಮೊರೆ ಹೋಗಿದೆ.

Source: Economic Times

Article Published On: Friday, April 5, 2019, 13:24 [IST]
English summary
Government may blacklist Tata Motors for delaying delivery of e-buses. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+