ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರದರ್ಶನಗೊಂಡ ರೆನಾಲ್ಟ್ ಟ್ರೈಬರ್
ರೆನಾಲ್ಟ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟ್ರೈಬರ್ 7 ಸೀಟರ್ ಎಂಪಿವಿ ಮಾದರಿಯನ್ನು ಇದೇ ತಿಂಗಳು 28ರಂದು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಬಿಡುಗಡೆಗೂ ಮುನ್ನ ಸಾರ್ವಜನಿಕವಾಗಿ ಮೊದಲ ಬಾರಿಗೆ ಪ್ರದರ್ಶನಗೊಳಿಸಿ ಗ್ರಾಹಕರನ್ನು ಸೆಳೆಯಲಾಗುತ್ತಿದೆ.

ಟ್ರೈಬರ್ ಎಂಪಿವಿ ಮಾದರಿಯು ಆರ್‌ಎಕ್ಸ್ಇ, ಎರ್‌ಎಕ್ಸ್ಎಸ್, ಆರ್‌ಎಕ್ಸ್‌ಟಿ ಮತ್ತು ಎರ್‌ಎಕ್ಸ್‌ಜೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ ಎನ್ನಲಾಗಿದ್ದು, ತಾಂತ್ರಿಕ ಸೌಲಭ್ಯಗಳ ಜೋಡಣೆಗೆ ಅನುಗುಣವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.4 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಆವೃತ್ತಿಯು ರೂ. 5.8 ಲಕ್ಷ ಬೆಲೆ ಪಡೆದುಕೊಳ್ಳಲಿದೆ ಎಂದು ಹೇಳಲಾಗಿದ್ದು, ಮೂರನೇ ಸಾಲಿನ ಆಸನ ವ್ಯವಸ್ಥೆಯನ್ನು ಖರೀದಿಸುವ ಆಸಕ್ತ ಗ್ರಾಹಕರು ಹೆಚ್ಚುವರಿ ರೂ.6 ಸಾವಿರ ಪಾವತಿಸಬೇಕಂತೆ.

ಸದ್ಯ ಎಂಪಿವಿ ಕಾರುಗಳಿಗೆ ವಿಶೇಷ ಬೇಡಿಕೆಯಿದ್ದು, ಕುಟುಂಬ ಸಮೇತರಾಗಿ ಪ್ರಯಾಣಿಸುವುದಕ್ಕಾಗಿ ಎಂಪಿವಿಗಳಿಗೆ ಹೆಚ್ಚು ಬೇಡಿಕೆ ಪಡೆದುಕೊಳ್ಳುತ್ತಿವೆ. ಹೀಗಾಗಿಯೇ ವ್ಯಯಕ್ತಿಕ ಕಾರು ಬಳಕೆದಾರರನ್ನು ಗಮನದಲ್ಲಿಟ್ಟುಕೊಂಡು ಅಗ್ಗದ ಬೆಲೆಯಲ್ಲಿ ಉತ್ತಮ ಫೀಚರ್ಸ್ ಸೌಲಭ್ಯವುಳ್ಳ ಹೊಸ ಎಂಪಿವಿ ಅಭಿವೃದ್ಧಿಗೊಳಿಸಲು ಯತ್ನಿಸಿರುವ ರೆನಾಲ್ಟ್ ಸಂಸ್ಛೆಯು ಟ್ರೈಬರ್ ಎನ್ನುವ ಹೊಸ ಕಾರು ಮಾದರಿಯನ್ನು ರಸ್ತೆಗಿಳಿಸುತ್ತಿದೆ.

ರೆನಾಲ್ಟ್ ಸಂಸ್ಥೆಯು ಫೇಸ್‌ಲಿಫ್ಟ್ ಕಾರುಗಳ ಚಾರ್ಸಿ ತಂತ್ರಜ್ಞಾನವನ್ನು ಸಂಪೂರ್ಣ ಬದಲಾವಣೆಗೊಳಿಸಿದ್ದು, ಫೇಸ್‌ಲಿಫ್ಟ್ ಕ್ವಿಡ್ ಮಾದರಿಯಲ್ಲೇ ಇದೀಗ ಅನಾವರಣಗೊಳಿಸಲಾದ ಟ್ರೈಬರ್ ಎಂಪಿವಿ ಕಾರು ಕೂಡಾ ಹೊಸ ತಂತ್ರಜ್ಞಾನದಡಿಯಲ್ಲೇ ಅಭಿವೃದ್ಧಿ ಹೊಂದಿದೆ. ಹೊಸ ಕಾರುಗಳ ಅಭಿವೃದ್ಧಿಗಾಗಿ ರೆನಾಲ್ಟ್ ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಬಳಕೆ ಮಾಡುತ್ತಿದ್ದು, ಕ್ವಿಡ್ ಮಾದರಿಯಲ್ಲೇ ಇರುವ ಟ್ರೈಬರ್ ಕಾರಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ 7 ಸೀಟರ್ ಸೌಲಭ್ಯವನ್ನು ಜೋಡಿಸಲಾಗಿದೆ.

ಕಾರಿನ ಉದ್ದಳತೆ ಮತ್ತು ತೂಕ
ಹೊಸ ಕಾರಿನ ಮೇಲೆ ತೆರಿಗೆ ತಗ್ಗಿಸಲು ಹೊಸ ಕಾರನ್ನು 4 ಮೀಟರ್‌ಗಿಂತಲೂ ಹೆಚ್ಚು ವಿಸ್ತರಣೆ ಮಾಡದಿರಲು ನಿರ್ಧರಿಸಿರುವ ರೆನಾಲ್ಟ್ ಸಂಸ್ಥೆಯು ಟ್ರೈಬರ್ ಕಾರನ್ನು 3,990-ಎಂಎಂ ಉದ್ದ, 1,739-ಎಂಎಂ ಅಗಲ, 1,637-ಎಂಎಂ ಎತ್ತರ, 2,636-ಎಂಎಂ ವೀಲ್ಹ್‌ಬೆಸ್ ಮತ್ತು 182-ಎಂಎಂ ಗ್ರೌಂಡ್ ಕ್ಲಿಯೆರೆನ್ಸ್ ಒದಗಿಸಿದ್ದು, ಸಿಎಂಎಫ್-ಎ ಪ್ಲಾಟ್‌ಫಾರ್ಮ್ ಬಳಕೆಯಿಂದಾಗಿ ಹೊಸ ಕಾರು 947 ಕೆಜಿ ತೂಕ ಪಡೆದುಕೊಂಡಿದೆ.

ಇನ್ನು ಹೊಸ ಟ್ರೈಬರ್ ಕಾರಿನಲ್ಲಿ 15-ಇಂಚಿನ ಅಲಾಯ್ ವೀಲ್ಹ್‌ಗಳನ್ನು ಜೋಡಿಸಲಾಗಿದ್ದು, ರೂಫ್ ರೈಲ್ಸ್, ಮ್ಯಾಟೆ ಬ್ಲ್ಯಾಕ್ ಕ್ಲ್ಯಾಡಿಂಗ್, ವೀಲ್ಹ್ ಆರ್ಚ್, ಸಿಗ್ನಲ್ ಇಂಡಿಕೇಟರ್, ರೀವರ್ಸ್ ಲ್ಯಾಂಪ್ ಮತ್ತು ಟೈಲ್ ಲ್ಯಾಂಪ್ ಗಮನಸೆಳೆಯಲಿದ್ದು, ಒಟ್ಟು 5 ವಿವಿಧ ಆಕರ್ಷಕ ಬಣ್ಣಗಳಲ್ಲಿ(ಐಸ್ ಕೂಲ್ ವೈಟ್, ಮೂನ್‌ಲೈಟ್ ಸಿಲ್ವರ್, ಎಲೆಕ್ಟ್ರಿಕ್ ಬ್ಲ್ಯೂ, ಫ್ಲೈರಿ ರೆಡ್, ಆರೇಂಜ್) ಖರೀದಿಗೆ ಲಭ್ಯವಿರಲಿದೆ.

ಕಾರಿನ ಒಳಾಂಗಣ
ವಿನ್ಯಾಸ ಟ್ರೈಬರ್ ಕಾರು ಡ್ಯುಯಲ್ ಟೋನ್ ಇಂಟಿರಿಯರ್ ಜೋಡಿಸಲಾಗಿದ್ದು, ಡ್ಯಾಶ್‌ಬೋರ್ಡ್ ಮೇಲೆ ಸಿಲ್ವರ್ ಟ್ರಿಮ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, 3.5-ಇಂಚಿನ ಮಲ್ಟಿ ಇನ್ಪಾಮೆಷನ್ ಡಿಸ್‌ಪ್ಲೇ, 7.8-ಇಂಚಿನ ಟಚ್‌ಸ್ಕ್ರೀನ್ ಸಿಸ್ಟಂ ಜೊತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯ ನೀಡಲಾಗಿದೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಆಸನ ಸೌಲಭ್ಯ
7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ನಿರ್ಮಾಣ ಮಾಡಿಕೊಳ್ಳಬಹುದು. ಮೂರನೇ ಸಾಲನ್ನು ಮಡಿಕೆ ಮಾಡಿದ್ದಲ್ಲಿ 625-ಲೀಟರ್‌ನಷ್ಟು ಸ್ಥಳಾವಕಾಶ ಮಾಡಿಕೊಳ್ಳಬಹುದಾಗಿದ್ದು, ಬೇಡವಾದಲ್ಲಿ 84-ಲೀಟರ್‌ನಷ್ಟು ಸ್ಥಳಾವಕಾಶ ಸಿಗಲಿದೆ.
MOST READ: ಹೋಂಡಾ ಕಾರುಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ..!

ಎಂಜಿನ್ ಸಾಮರ್ಥ್ಯ
1.0-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಟ್ರೈಬರ್ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಬಿಡುಗಡೆಯಾದ ನಂತರವಷ್ಟೇ ಗ್ರಾಹಕರ ಬೇಡಿಕೆ ಮೇರೆಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆಯನ್ನು ನೀಡಲಿದೆ.
MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ಸುರಕ್ಷಾ ಸೌಲಭ್ಯಗಳು
ಹೊಸ ಸುರಕ್ಷಾ ನಿಯಮಗಳಿಗೆ ಅನುಗುಣವಾಗಿ ಟ್ರೈಬರ್ ಕಾರಿನಲ್ಲಿ ನಾಲ್ಕು ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ರಿಯರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ವಾರ್ನಿಂಗ್, ಕೀ ಲೆಸ್ ಎಂಟ್ರಿ, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ಗಳನ್ನು ನೀಡಲಾಗಿದೆ.

ಈ ಮೂಲಕ ಬಜೆಟ್ ಬೆಲೆಯಲ್ಲಿ ಅತ್ಯುತ್ತಮ ವೈಯಕ್ತಿಕ ಬಳಕೆಯ ಎಂಪಿವಿ ಕಾರು ಮಾದರಿಯಾಗಿ ಹೊರಹೊಮ್ಮಿರುವ ರೆಲಾನ್ಟ್ ಟ್ರೈಬರ್ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ವ್ಯಾಗನ್‌ಆರ್, ಸ್ವಿಫ್ಟ್, ಹ್ಯುಂಡೈ ಗ್ರಾಂಡ್ ಐ10 ಮತ್ತು ಎಂಪಿವಿ ಮಾದರಿಯಾದ ಎರ್ಟಿಗಾ ಕಾರಿಗೂ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದೆ.


Click it and Unblock the Notifications