2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಎಂಟ್ರಿ ಲೆವಲ್ ಮಲ್ಟಿ ಪ್ಯಾಸೆಂಜರ್ ವೆಹಿಕಲ್ ವಿಭಾಗದಲ್ಲಿ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿರುವ ರೆನಾಲ್ಟ್ ಟ್ರೈಬರ್ ಕಾರು ಮಾದರಿಯು ಸದ್ಯ ಸಾಮಾನ್ಯ ಪೆಟ್ರೋಲ್ ಮಾದರಿಯಲ್ಲಿ ಮಾತ್ರವೇ ಮಾರಾಟವಾಗುತ್ತಿದ್ದು, ಶೀಘ್ರದಲ್ಲೇ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಳ್ಳಲಿದೆ.

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಕಳೆದ ಅಗಸ್ಟ್ 28 ರಂದು ಬಿಡುಗಡೆಯಾಗಿರುವ ಟ್ರೈಬರ್ ಕಾರಿನಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಮಾತ್ರವೇ ಖರೀದಿಗೆ ಲಭ್ಯವಿದ್ದು, ಅಧಿಕ ಪರ್ಫಾಮೆನ್ಸ್ ನೀಡಬಲ್ಲ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ಗಾಗಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಬೇಡಿಕೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಟರ್ಬೋಚಾರ್ಜ್ಡ್ ಎಂಜಿನ್ ನೀಡಲು ಮುಂದಾಗಿರುವ ರೆನಾಲ್ಟ್ ಸಂಸ್ಥೆಯು ಹೊಸ ಎಂಜಿನ್ ಆಯ್ಕೆಯನ್ನು 2020ರ ಮಾರ್ಚ್ ಕೊನೆಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಹೊಸ ಎಂಜಿನ್ ಮಾದರಿಯು ರೆನಾಲ್ಟ್ ಮತ್ತು ನಿಸ್ಸಾನ್ ಸಂಸ್ಥೆಯ ಸಹಭಾಗಿತ್ವದ ಯೋಜನೆ ಅಡಿ ಅಭಿವೃದ್ದಿಗೊಂಡಿದೆ.

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿರುವ ಬಿಎಸ್-6 ನಿಯಯದಂತೆ ರೆನಾಲ್ಟ್ ಸಂಸ್ಥೆಯು ಡೀಸೆಲ್ ಎಂಜಿನ್ ಕಾರುಗಳ ಮಾರಾಟವನ್ನು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದು, ನಿಸ್ಸಾನ್ ಜೊತೆಗೂಡಿ ಹೊಸ ಮಾದರಿಯ ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಹೆಚ್ಚಿಸುವ ಯೋಜನೆ ಕೈಗೆತ್ತಿಕೊಂಡಿದೆ.

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಇನ್ನು ಪ್ರಸ್ತುತ ಮಾರುಕಟ್ಟೆಯಲ್ಲಿ ಟ್ರೈಬರ್ ಕಾರು ಸಾಮಾನ್ಯ ಮಾದರಿಯ 1.0-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಸಹಾಯದೊಂದಿಗೆ 71-ಬಿಎಚ್‌ಪಿ ಮತ್ತು 96-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಹೊಸದಾಗಿ ಪರಿಚಯಿಸಲಾಗುತ್ತಿರುವ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 1.0-ಲೀಟರ್ ತ್ರಿ ಸಿಲಿಂಡರ್ ಮೂಲಕ 95-ಬಿಎಚ್‌ಪಿ ಉತ್ಪಾದನಾ ಸಾಮಾರ್ಥ್ಯ ಹೊಂದಿದ್ದು, ಬೆಲೆಯಲ್ಲೂ ತುಸು ದುಬಾರಿಯಾಗಿರಲಿದೆ.

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಹಾಗೆಯೇ ಉತ್ಪಾದನಾ ವೆಚ್ಚ ನಿರ್ವಹಣೆಗಾಗಿ ಬೆಲೆ ಏರಿಕೆ ಮುಂದಾಗಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ಮುಂಬರುವ ಜನವರಿ 1ರಿಂದಲೇ ಬೆಲೆ ಹೆಚ್ಚಳ ಮಾಡುವುದಾಗಿ ಘೋಷಿಸಿದ್ದು, ಇದೀಗ ರೆನಾಲ್ಟ್ ಕೂಡಾ ಟ್ರೈಬರ್ ಕಾರಿನ ಬೆಲೆಯಲ್ಲಿ ರೂ.10 ಸಾವಿರ ಏರಿಕೆ ಮಾಡಿದೆ. ಬೆಲೆ ಹೆಚ್ಚಳವು ಹೊಸ ವರ್ಷದ ಆರಂಭದಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹೊಸ ವರ್ಷದ ಸಂಭ್ರಮಕ್ಕಾಗಿ ಕಾರು ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಟ್ರೈಬರ್ ಕಾರು ಆರ್‌ಎಕ್ಸ್ಇ, ಆರ್‌ಎಕ್ಸ್ಎಲ್, ಆರ್‌ಎಕ್ಸ್‌ಎಸ್ ಮತ್ತು ಎರ್‌ಎಕ್ಸ್‌ಜೆಡ್ ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 4.95 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು 6.49 ಲಕ್ಷ ಬೆಲೆ ಹೊಂದಿದೆ.

MOST READ: ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಬೆಲೆ ಏರಿಕೆಯ ನಂತರ ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.4.95 ಲಕ್ಷ ಬೆಲೆಯನ್ನೇ ಮುಂದುವರಿಸಲಾಗಿದ್ದು, ಇನ್ನುಳಿದ ಮೂರು ವೆರಿಯೆಂಟ್‌ಗಳ ಬೆಲೆಗಳಲ್ಲಿ ಮಾತ್ರವೇ ರೂ.10 ಸಾವಿರ ಏರಿಕೆ ಮಾಡಲಾಗಿದೆ.

MOST READ: ಕೂಲಿ ಕೆಲಸ ಮಾಡುತ್ತಿದ್ದವನು ಇಂದು ಐಷಾರಾಮಿ ಕಾರುಗಳ ಮಾಲೀಕ..!

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಇನ್ನುಳಿದಂತೆ ಹೊಸ ಕಾರು ತಾಂತ್ರಿಕವಾಗಿ ಬಲಿಷ್ಠವಾಗಿದ್ದು, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಸ್, ಪವರ್ ವಿಂಡೋ, ಕೀ ಲೆಸ್ ಎಂಟ್ರಿ, ಮೂರು ಸಾಲುಗಳಲ್ಲೂ ಎಸಿ ವೆಂಟ್ಸ್, ಪುಶ್ ಬಟನ್ ಸ್ಟಾರ್ಟ್/ಸ್ಟಾಪ್, ಮೊಬೈಲ್ ಫೋನ್ ಚಾರ್ಜ್ ಸಾಕೆಟ್‌ ಮತ್ತು ರಿಯರ್ ವಾಷ್ ವೈಪರ್ ಸೇರಿದಂತೆ ಹಲವು ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿದೆ.

MOST READ: ಮಾರುತಿ ಸುಜುಕಿ ಬ್ರೆಝಾ ಕಾರಿಗೆ ಪೈಪೋಟಿ ನೀಡಲಿದೆ ರೆನಾಲ್ಟ್ ಹೊಸ ಕಂಪ್ಯಾಕ್ಟ್ ಎಸ್‌ಯುವಿ

2020ರ ಮಾರ್ಚ್ ಅಂತ್ಯಕ್ಕೆ ಹೊಸ ಪೆಟ್ರೋಲ್ ಎಂಜಿನ್ ಪಡೆಯಲಿದೆ ರೆನಾಲ್ಟ್ ಟ್ರೈಬರ್

ಆಸನ ಸೌಲಭ್ಯ

7-ಸೀಟರ್ ಸೀಟರ್ ಮಾದರಿಯಾಗಿರುವ ಟ್ರೈಬರ್ ಕಾರು ದೂರದ ಪ್ರಯಾಣಕ್ಕೆ ಅಷ್ಟಾಗಿ ಅನುಕೂಲಕರವಾಗಿಲ್ಲವಾದರೂ 5 ಜನ ಯಾವುದೇ ತೊಂದರೆ ಇಲ್ಲದೇ ಪ್ರಯಾಣಿಸಬಹುದಾಗಿದ್ದು, 3ನೇ ಸಾಲಿನ ಆಸನಗಳನ್ನು ಮಡಿಕೆ ಮಾಡಿ ಲಗೇಜ್‌ಗಾಗಿ ಹೆಚ್ಚುವರಿ ಬೂಟ್ ಸ್ಪೆಸ್ ಅನುಕೂಲ ಮಾಡಿಕೊಳ್ಳಬಹುದು.

Most Read Articles

Kannada
English summary
Renault triber getting a new 1.0-litre turbocharged-petrol engine option in 2020. Read more in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X