ಕೂಲಿ ಕೆಲಸ ಮಾಡುತ್ತಿದ್ದವನು ಇಂದು ಐಷಾರಾಮಿ ಕಾರುಗಳ ಮಾಲೀಕ..!

ಕಡು ಬಡತನದಲ್ಲಿ ಬೆಳೆದು ಯಶಸ್ವಿಯಾಗಿರುವವರು ಪ್ರಪಂಚಾದ್ಯಂತ ಅನೇಕ ಜನರಿದ್ದಾರೆ. ಭಾರತದಲ್ಲಿಯೂ ಸಹ ಈ ರೀತಿಯ ಅನೇಕ ವ್ಯಕ್ತಿಗಳಿದ್ದಾರೆ. ಈ ಲೇಖನದಲ್ಲಿ ಮನೆ ಬಿಟ್ಟು ಹೋಗಿ ಶತಕೋಟ್ಯಾಧಿಪತಿಯಾಗಿ ಹಿಂದಿರುಗಿದವರ ಬಗ್ಗೆ ನೋಡೋಣ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಕೆ ಟಿ ರಬೀವುಲ್ಲಾ ಎಂಬುವವರೇ ಹೀಗೆ ಮನೆ ಬಿಟ್ಟು ಹೋಗಿ ಬಿಲಿಯನೇರ್ ಆಗಿ ವಾಪಸ್ ಆದವರು. ಇದು ಯಾವುದೋ ಸಿನಿಮಾದ ಕಥೆಯಲ್ಲ. ಬದಲಿಗೆ ನಿಜವಾಗಿಯೂ ನಡೆದಿರುವ ಸತ್ಯವಾದ ಘಟನೆ. ರಬೀವುಲ್ಲಾರವರು ಯುವಕರಿದ್ದಾಗ ಮಧ್ಯ ಪ್ರಾಚ್ಯದಲ್ಲಿ ಕೆಲಸ ಮಾಡುವ ಸಲುವಾಗಿ ಹೋದರು.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಅಲ್ಲಿ ಹೋದ ಬಳಿಕ ಕೂಲಿ ಕೆಲಸ ಮಾಡುತ್ತಿದ್ದರು. ತಾವು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ಉಳಿಸಿ ತಮ್ಮದೇ ಆದ ವ್ಯವಹಾರವನ್ನು ಆರಂಭಿಸಲು ಬಯಸಿದರು. ಹೀಗೆ ಆರಂಭಿಸಿದ ಉದ್ಯಮದಲ್ಲಿ ಇಂದು ಪ್ರಪಂಚದಾದ್ಯಂತ 10,000ಕ್ಕೂ ಹೆಚ್ಚು ಜನರು ಕೆಲಸ ಮಾಡುತ್ತಿದ್ದಾರೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಅಂದ ಹಾಗೆ ರಬೀವುಲ್ಲಾರವರು ಅಲ್ ಜಜೀರಾ ಶಿಫಾ ಗ್ರೂಪಿನ ಮಾಲೀಕರಾಗಿದ್ದಾರೆ. ಈ ಗ್ರೂಪ್ ಜಗತ್ತಿನಲ್ಲಿರುವ ಅತಿ ದೊಡ್ಡ ಆಸ್ಪತ್ರೆಗಳಲ್ಲಿ ಒಂದಾಗಿದೆ. ಈ ಆಸ್ಪತ್ರೆಗಳಲ್ಲಿ 700 ಕ್ಕೂ ಹೆಚ್ಚು ಜನ ವೈದ್ಯರು ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಾರೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ರಬೀವುಲ್ಲಾರವರು ಪ್ರಪಂಚದಲ್ಲಿರುವ ಯಶಸ್ವಿ ಉದ್ಯಮಿಗಳ ಪೈಕಿ ಒಬ್ಬರಾಗಿದ್ದು, ವೈದಕೀಯ ಕ್ಷೇತ್ರದಲ್ಲಿರುವ ಅಗ್ರಗಣ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಬಾಲ್ಯದಲ್ಲಿ ಹಣಕಾಸಿನ ಪರಿಸ್ಥಿತಿಯಿಂದಾಗಿ ಓದಲು ಸಾಧ್ಯವಾಗದಿದ್ದರೂ ತಮ್ಮ ಸಾಧನೆಯಿಂದಾಗಿ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ತಮ್ಮ ಬಹುತೇಕ ಸಮಯವನ್ನು ಗಲ್ಫ್ ರಾಷ್ಟ್ರಗಳಲ್ಲಿ ಕಳೆಯುವ ರಬೀವುಲ್ಲಾರವರು ಕೇರಳದಲ್ಲಿ ಇತ್ತೀಚಿಗಷ್ಟೇ ವಿಲ್ಲಾವೊಂದನ್ನು ನಿರ್ಮಿಸಿದ್ದಾರೆ. ಈ ವಿಲ್ಲಾದಲ್ಲಿರುವ ಗ್ಯಾರೇಜ್‍‍ನಲ್ಲಿ ದುಬಾರಿ ಬೆಲೆಯ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಇವರ ಬಳಿ ಯಾವೆಲ್ಲಾ ಕಾರುಗಳಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಲ್ಯಾಂಡ್ ರೋವರ್ ರೇಂಜ್ ರೋವರ್

ಲ್ಯಾಂಡ್ ರೋವರ್ ರೇಂಜ್ ರೋವರ್ ಕಾರ್ ಅನ್ನು ಪ್ರಪಂಚದಲ್ಲಿರುವ ಬಹುತೇಕ ಎಲ್ಲಾ ಮಿಲೆನಿಯರ್‍‍ಗಳು ಹೊಂದಿರುತ್ತಾರೆ. ರಬೀವುಲ್ಲಾರವರು ಈ ಕಾರಿನಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ. ಟಾಪ್ ಎಂಡ್ ಆವೃತ್ತಿಯ ಈ ಕಾರಿನ ಬೆಲೆಯು ಭಾರತದಲ್ಲಿ ರೂ.2.14 ಕೋಟಿಗಳಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ರೋಲ್ಸ್ ರಾಯ್ಸ್ ಫ್ಯಾಂಟಮ್ 2

ರೋಲ್ಸ್ ರಾಯ್ಸ್ ಕಾರುಗಳು ಐಷಾರಾಮಿ ಕಾರುಗಳ ಮುಕುಟದಂತಿವೆ. ರಬೀವುಲ್ಲಾರವರು ಬಿಳಿಬಣ್ಣದ ರೋಲ್ಸ್ ರಾಯ್ಸ್ ಫ್ಯಾಂಟಮ್ ಸೀರಿಸ್‍ 2 ಕಾರ್ ಅನ್ನು ಹೊಂದಿದ್ದಾರೆ. ಫ್ಯಾಂಟಮ್ ಸೀರಿಸ್‍ 2 ಕಾರು ಈ ಮಾದರಿಯಲ್ಲಿರುವ ಪ್ರಮುಖ ಆವೃತ್ತಿಯಾಗಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಈ ಕಾರಿನಲ್ಲಿ ಹಲವು ಕಸ್ಟಮ್ ಅಂಶಗಳನ್ನು ಅಳವಡಿಸಬಹುದಾಗಿದೆ. ಬ್ರಿಟನ್ ಮೂಲದ ರೋಲ್ಸ್ ರಾಯ್ಸ್ ಈ ಕಾರಿನಲ್ಲಿ 6.8 ಲೀಟರಿನ ವಿ12 ಪೆಟ್ರೋಲ್ ಎಂಜಿನ್ ಅಳವಡಿಸಿದೆ. ಈ ಎಂಜಿನ್ 453 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಈ ಕಾರಿನ ಬೆಲೆಯು ಭಾರತದಲ್ಲಿ ರೂ.10 ಕೋಟಿಗಳಾಗಿದೆ.

MOST READ: 500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಫೆರಾರಿ 458 ಇಟಾಲಿಯಾ

ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರುವ ಫೆರಾರಿ 458 ಕಾರು ಭಾರತದಲ್ಲಿರುವ ಬೆರಳೆಣಿಕೆಯಷ್ಟು ಫೆರಾರಿ ಕಾರುಗಳಲ್ಲಿ ಒಂದಾಗಿದೆ. 458 ಇಟಾಲಿಯಾ ಕಾರಿನಲ್ಲಿ ಫೆರಾರಿ ಫಾರ್ಮುಲಾ 1 ಟೀಂನಲ್ಲಿರುವ ವಿನ್ಯಾಸದಿಂದ ಅಭಿವೃದ್ಧಿಪಡಿಸಲಾಗಿದೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಈ ಕಾರಿನಲ್ಲಿ ಅಳವಡಿಸಲಾಗಿರುವ 4.5 ಲೀಟರಿನ ವಿ8 ಎಂಜಿನ್ 562 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ. ಈ ಕಾರಿನ ಬೆಲೆಯು ದೇಶಿಯ ಮಾರುಕಟ್ಟೆಯಲ್ಲಿ ರೂ.3.5 ಕೋಟಿಗಳಾಗಿದೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಬೆಂಟ್ಲಿ ಫ್ಲೈಯಿಂಗ್ ಸ್ಪರ್

ಯಾವುದೇ ಕೋಟ್ಯಾಧಿಪತಿಗಳಿರಲ್ಲಿ ಬೆಂಟ್ಲಿ ಕಾರುಗಳನ್ನು ಹೊಂದಲು ಬಯಸುತ್ತಾರೆ. ರಬೀವುಲ್ಲಾರವರು ಸಹ ಇದರಿಂದ ಹೊರತಾಗಿಲ್ಲ. ಅವರು ಬೆಂಟ್ಲಿ ಕಂಪನಿಯ ಫ್ಲೈಯಿಂಗ್ ಸ್ಪರ್ ಕಾರ್ ಅನ್ನು ಹೊಂದಿದ್ದಾರೆ. ಈ ಕಾರಿನ ಬೆಲೆ ರೂ.2.5 ಕೋಟಿಗಳಾಗಿದೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಪೋರ್ಷೆ ಕ್ಯಾನ್

ಜರ್ಮನಿ ಮೂಲದ ಪೋರ್ಷೆ ಕಂಪನಿಯ ಕಾರುಗಳನ್ನು ಮಿಲೆನಿಯರ್‍‍ಗಳು ತಮ್ಮ ಪ್ರತಿಷ್ಟೆಯನ್ನು ತೋರಿಸಲು ಖರೀದಿಸುತ್ತಾರೆ. ಈ ಕಂಪನಿಯ ಕಾರುಗಳು ತಮ್ಮ ಶೇಪಿನಿಂದಾಗಿ ಜನರ ಗಮನ ಸೆಳೆಯುತ್ತವೆ. ಪೋರ್ಷೆ ಕ್ಯಾನ್ ಕಾರಿನಲ್ಲಿ ಬಲಶಾಲಿಯಾದ 4.8 ಲೀಟರಿನ ವಿ8 ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 496 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಮರ್ಸಿಡಿಸ್ ಬೆಂಝ್ ಎಸ್ ಕ್ಲಾಸ್

ಮರ್ಸಿಡಿಸ್ ಬೆಂಝ್ ಕಂಪನಿಯ ಎಸ್ ಕ್ಲಾಸ್ ಕಾರು ಈ ಸೆಗ್‍‍ಮೆಂಟಿನಲ್ಲಿರುವ ಐಷಾರಾಮಿ ಕಾರ್ ಆಗಿದೆ. ಈ ಕಾರಿನಲ್ಲಿ 5.0 ಲೀಟರಿನ ವಿ12 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ನಿಸ್ಸಾನ್ ಪ್ಯಾಟ್ರೋಲ್

ನಿಸ್ಸಾನ್ ಕಂಪನಿಯ ಪ್ಯಾಟ್ರೋಲ್ ಕಾರುಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುತ್ತಿಲ್ಲ. ಈ ಕಾರುಗಳನ್ನು ಹೊರ ದೇಶಗಳಿಂದ ಆಮದು ಮಾಡಿಕೊಂಡು ಇಲ್ಲಿನ ರಸ್ತೆಗಳಿಗೆ ಸರಿಹೊಂದುವಂತೆ ಮಾಡಿಫೈಗೊಳಿಸಿಕೊಂಡು ಬಳಸಲಾಗುತ್ತಿದೆ. ಈ ಕಾರಿನಲ್ಲಿರುವ 4.6 ಲೀಟರಿನ ಪೆಟ್ರೋಲ್ ಎಂಜಿನ್ 400 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ರೋಲ್ಸ್ ರಾಯ್ಸ್ ಘೋಸ್ಟ್

ಘೋಸ್ಟ್ ಕಾರು ರೋಲ್ಸ್ ರಾಯ್ಸ್ ಕಂಪನಿಯ ಎಂಟ್ರಿ ಲೆವೆಲ್ ಕಾರ್ ಆಗಿದ್ದರೂ, ಹಲವಾರು ಅಲ್ಟ್ರಾ ಲಗ್ಷುರಿ ಫೀಚರ್‍‍ಗಳನ್ನು ಹೊಂದಿದೆ. ಈ ಕಾರಿನಲ್ಲಿ 6.6 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 562 ಬಿ‍‍ಹೆಚ್‍‍ಪಿ ಪವರ್ ಹಾಗೂ 780 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಕಾರಿನ ಬೆಲೆಯು ರೂ.4.9 ಕೋಟಿಗಳಾಗಿದೆ.

ಕೂಲಿ ಮಾಡುತ್ತಿದ್ದವ ಇಂದು ಐಷಾರಾಮಿ ಕಾರುಗಳ ಮಾಲೀಕ..!

ಫೋಕ್ಸ್‌ವ್ಯಾಗನ್ ಬೀಟಲ್

ರಬೀವುಲ್ಲಾರವರು ಹೊಂದಿರುವ ಮತ್ತೊಂದು ದುಬಾರಿ ಕಾರು ಫೋಕ್ಸ್‌ವ್ಯಾಗನ್‍ ಕಂಪನಿಯ ಬೀಟಲ್. ಅವರ ಬಳಿಯಿರುವ ಹಳದಿ ಬಣ್ಣದ ಬೀಟಲ್ ಕಾರಿನಲ್ಲಿ 2.0 ಲೀಟರಿನ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 114 ಬಿ‍‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

Source: Cartoq

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಟೀ ಮಾರಿದ ವ್ಯಕ್ತಿಯೊಬ್ಬರು ದೇಶದ ಪ್ರಧಾನಮಂತ್ರಿಯಾಗಿರುವ ಸಾಧನೆಯ ಕಥೆ ಎಲ್ಲರಿಗೂ ಗೊತ್ತಿದೆ. ಅದೇ ಮಾದರಿಯಲ್ಲಿ ಟೀ ಮಾರಿದ ಕನ್ನಡಿಗನೊಬ್ಬ ಇಂದು ಐಷಾರಾಮಿ ಲ್ಯಾಂಬೊರ್ಗಿನಿ ಡೀಲರ್ ಆಗಿರುವ ಯಶೋಗಾಥೆ ಇದು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಸಾಧಿಸುವವನಿಗೆ ಛಲವೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಬೆಂಗಳೂರಿನ ಸತೀಶ್ ಅವರೇ ಉದಾಹರಣೆಯಾಗಿದ್ದಾರೆ. 48 ವರ್ಷದ ರಿಯಲ್ ಎಸ್ಟೇಟ್ ಡೆವಲಪರ್ ಮತ್ತು ಉದ್ಯಮಿ ಟಿ.ಎಸ್.ಸತೀಶ್ ಅವರ ಯಶ್ವಸಿನ ರೋಚಕ ಕಥೆ ಇಲ್ಲಿದೆ. ಇವರು ದಕ್ಷಿಣ ಭಾರತದ ಮೊದಲ ಲ್ಯಾಂಬೊರ್ಗಿನಿ ಡೀಲರ್‍‍ಶಿಪ್ ಮಾಲೀಕರಾಗಿದ್ದಾರೆ.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಕರ್ನಾಟಕದ ಮೂಲದ ಸತೀಶ್ 13 ವರ್ಷವಿದ್ದಾಗ ಬೆಂಗಳೂರಿಗೆ ಆಗಮಿಸಿದ್ದರು. ಸತೀಶ್ ಅವರು ತಮ್ಮ ಅಕ್ಕ ಮತ್ತು ಅವರ ಪತಿಯೊಂದಿಗೆ ಮಲ್ಲೇಶ್ವರಂನ 10X10 ಅಡಿ ರೂಂನಲ್ಲಿ ವಾಸಿಸುತ್ತಿದ್ದರು. ಅವರು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿನ ಆಂಗ್ಲ ಶಾಲೆಯೊಂದಕ್ಕೆ ಸೇರಿಕೊಂಡರು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಅವರ ಆರ್ಥಿಕ ಪರಿಸ್ಥಿತಿ ಚಿಂತಾಜನಕ ವಾಗಿತ್ತು. ಅವರಿಗೆ ಕಾಲೇಜು ವಿದ್ಯಾಭಾಸ ಮುಂದುವರೆಸಲು ಹೆಚ್ಚಿನ ಹಣಕಾಸಿನ ಅಗತ್ಯವಿತ್ತು. ಇದೇ ಕಾರಣದಿಂದ ಅವರು ತಮ್ಮ 16ನೇ ವಯಸ್ಸಿನಲ್ಲಿ ವಕೀಲರ ಕಚೇರಿಯೊಂದರಲ್ಲಿ ಟೀ ಮತ್ತು ಕಾಫಿ ವಿತರಿಸುವ ಕೆಲಸಕ್ಕೆ ಸೇರಿಕೊಂಡಿದ್ದರು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಇವರು ಟೀ ಮಾರುವ ಕೆಲಸ ಮಾಡುತ್ತ ಬೆಂಗಳೂರಿನಲ್ಲಿ ದಯಾನಂದ್ ಸಾಗರ್ ಸಂಜೆ ಕಾಲೇಜಿನಲ್ಲಿ ಪದವಿ ಶಿಕ್ಷಣಕ್ಕಾಗಿ ಸೇರಿಕೊಂಡರು. ಅವರು 1987ರಲ್ಲಿ ಉದ್ಯೋಗ ಬದಲಿಸಿ ಟೈಟಾನ್ ವಾಚ್ಸ್ ಕಂಪನಿಯಲ್ಲಿ ಟೈಪಿಸ್ಟ್ ಕೆಲಸಕ್ಕೆ ಸೇರಿಕೊಂಡರು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಮೂರು ವರ್ಷಗಳ ನಂತರ ಅವರಿಗೆ ಹೆಚ್‍‍ಪಿ(ಹೆವ್ಲೆಟ್ ಪ್ಯಾಕರ್ಡ್) ಕಂಪನಿಯಲ್ಲಿ ಪರ್ಚೆಸಿಂಗ್ ವಿಭಾಗದಲ್ಲಿ ಟೈಪಿಸ್ಟ್ ಆಗಿ ಕೆಲಸ ಲಭಿಸಿತ್ತು. ಆಗ ಹೆಚ್‍‍ಪಿ ಕಂಪನಿಯಲ್ಲಿ ಅವರಿಗೆ ದೊರೆಯುತ್ತಿದ್ದ ಸಂಬಳ ಕೇವಲ ರೂ.1,200 ಆಗಿತ್ತು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಅಲ್ಲಿಂದ ಅವರು ಹೆಚ್‍‍ಪಿ ಕಂಪನಿಯಲ್ಲಿ ವಿವಿಧ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವರು ರಫ್ತು, ಸ್ಟೋರ್ಸ್ ಮತ್ತು ಟ್ಯಾಕ್ಸೆಷನ್ ವಿಭಾಗದಲ್ಲಿ ಕೆಲಸ ಮಾಡಿ ಅನುಭವನ್ನು ಪಡೆದುಕೊಂಡರು. ಅವರು ಅಂತಿಮವಾಗಿ 1999ರಲ್ಲಿ ಲಾಜಿಸ್ಟಿಕ್ಸ್ ಮ್ಯಾನೇಜರ್ ಆಗಿ ಆಯ್ಕೆಯಾದರು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಸತೀಶ್ ಅವರಿಗೆ ಅಲ್ಲಿ ರೂ.1.5 ಲಕ್ಷ ಸಂಬಳ ಸಿಗುತ್ತಿತ್ತು. ಇವರು ಹತ್ತು ವರ್ಷದಲ್ಲಿ ಒಂಬತ್ತು ಬಾರಿ ಪ್ರಮೊಷನ್ ಪಡೆದು ಅಷ್ಟು ದೊಡ್ಡ ಹುದ್ದೆಗೆ ಏರಿದರು. ಕೇವಲ 10 ವರ್ಷದಲ್ಲಿ ಒಂಬತ್ತು ಬಾರಿ ಪ್ರಮೋಷನ್ ಪಡೆದು ಅಷ್ಟು ದೊಡ್ಡ ಸ್ಥಾನವನ್ನು ಅಲಂಕರಿಸಬೇಕಾದರೆ ಅವರ ಕಠಿಣ ಪರಿಶ್ರಮ ಎಂತಹದು ಎಂಬುದನ್ನು ಅರಿಯಬಹುದು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

1999ರ ನಂತರ ಆವರು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದರು. ರಿಯಲ್ ಎಸ್ಟೇ‍ಟ್‍ನಲ್ಲಿ ಅವರು ರೂ.50,000 ಹೂಡಿಕೆ ಮಾಡುವ ಮೂಲಕ 4,000 ಚದರ ಅಡಿಯ ಜಾಗವನ್ನು ಖರೀದಿಸಿದರು. ಆದರೆ ಅರ್ಥಿಕ ಹಿಂಜರಿತ ಮತ್ತು ಕೆಲವು ಜನರು ಮೋಸ ಮಾಡಿದ ಕಾರಣ ಇವರಿಗೆ ನಷ್ಟ ಉಂಟಾಯಿತು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಆದರೂ ಅವರು ಛಲ ಬಿಡದೆ ತಮ್ಮ ಉದ್ಯೋಗವನ್ನು ಮುನ್ನಡೆಸಿದರು. ಆಗ ಹೆಚ್‍‍ಪಿ ಕಂಪನಿಯಲ್ಲಿ ಅವರ ಸ್ನೇಹಿತರು ಮತ್ತು ಮಾಜಿ ಸಹೋದ್ಯೋಗಿಗಳು ಬ್ಯಾಂಕ್ ಸಾಲಗಳನ್ನು ನೀಡಿ ಸಹಕರಿಸಿದರು. ಇವರ ಸಹಾಯದಿಂದ ಇವರು ಅಪಾರ್ಟ್‍‍ಪೆಂಟ್ ಅನ್ನು ಖರೀದಿಸಿದರು.

ಆರಂಭಿಕ ಐದು ವರ್ಷಗಳು ಅತ್ಯಂತ ಕಷ್ಟಕರವಾದವು ಮತ್ತು 2008-09ರಲ್ಲಿ ಬೆಂಗಳೂರು ಮತ್ತು ಕೇರಳದಲ್ಲಿ ಅನೇಕ ವಸತಿ ಯೋಜನೆಗಳನ್ನು ಪ್ರಾರಂಭಿಸುವ ಮೂಲಕ ಅವರು ರಿಯಲ್ ಎಸ್ಟೇಟ್‍‍ನಲ್ಲಿ ಬೆಳವಣಿಕೆಯನ್ನು ಕಂಡರು.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಅವರ ಕಂಪನಿಯು 2013ರಲ್ಲಿ ಒಟ್ಟು 400 ಕೋಟಿ ಗಡಿ ದಾಟಿದೆ. ಸತೀಶ್ ಅವರಿಗೆ ಕಾರುಗಳ ಬಗ್ಗೆ ಕ್ರೇಜ್ ಹೆಚ್ಚಿದೆ. ಇದೇ ಕಾರಣದಿಂದ ಅವರು ಪೋರ್ಷೆ ಕಾರ್ ಅನ್ನು ಖರೀದಿಸಲು ಯೋಜಿಸಿದ್ದರು. ಆದರೆ ಅವು ಬೆಂಗಳೂರಿನಂತಹ ಮಹಾನಗರದಲ್ಲಿ ಸಾಮಾನ್ಯವಾಗಿವೆ.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಇದೇ ಕಾರಣದಿಂದ ವಿಶಿಷ್ಟವಾದ ಕಾರ್ ಅನ್ನು ಖರೀದಿಸಲು ಸಂಶೋಧನೆಗಳನ್ನು ಮಾಡಿ ಅವರೇ ಸ್ವತಃ ಲಂಬೋರ್ಗಿನಿ ಡೀಲರ್‍‍ಶಿಪ್ ಅನ್ನು ತೆರಯಲು ನಿರ್ಧರಿಸುತ್ತಾರೆ. ನಂತರ ಅವರು ಸ್ವತಃ ಲ್ಯಾಂಬೊರ್ಗಿನಿ ಅವೆಂಟಡಾರ್ ರೋಡ್ ಸ್ಟರ್ ಅನ್ನು ಖರೀದಿಸಿದರು. ಈ ಕಾರಿನ ಬೆಲೆ ಸುಮಾರು ರೂ.8 ಕೋಟಿಯಾಗಿದೆ.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಇದು ಬೆಂಗಳೂರು ಅಲ್ಲದೇ ಭಾರತದಲ್ಲೇ ಅಪರೂಪದ ಕಾರ್ ಆಗಿತ್ತು. ಅವರ ಗ್ಯಾರೇಜ್‍‍ನಲ್ಲಿ ಲ್ಯಾಂಬೊರ್ಗಿನಿಯಲ್ಲದೆ ಅವರ ಬಳಿ ಐಷಾರಾಮಿ ಕಾರುಗಳಾದ ಬಿ‍ಎಂ‍ಡಬ್ಲ್ಯು, ಎರಡು ಆಡಿ ಕಾರು, ಪೋಕ್ಸ್ ವ್ಯಾಗನ್ ಪಾಸಾಟ್ ಮತ್ತು ಹ್ಯುಂಡೈ ವರ್ನಾ ಕಾರುಗಳಿವೆ.

ಟೀ ಮಾರುತ್ತಿದ್ದ ಈ ಕನ್ನಡಿಗನ ಇಂದು ಐಷಾರಾಮಿ ಕಾರು ಡೀಲರ್

ಉದ್ಯಮಿಗಳು ದೊಡ್ಡ ಕನಸು ಕಾಣಬೇಕು ಮತ್ತು ದೃಢ ಮನಸ್ಸಿನಿಂದ ಅವರ ಗುರಿಗಳತ್ತ ಗಮನಿಸಬೇಕು ಎಂದು ಅವರು ಸದಾ ಪ್ರೇರಣೆಯ ಮಾತುಗಳನ್ನು ಹೇಳುತ್ತಾರೆ. ಸದ್ಯ ಇವರು ಬೆಂಗಳೂರಿನಂತಹ ಮಹಾನಗರದಲ್ಲಿರುವ ಶ್ರೀಮಂತರಲ್ಲಿ ಒಬ್ಬರಾಗಿದ್ದಾರೆ. ಉದ್ಯೂಗದಲ್ಲಿ ಯಶ್ವಸಿಯಾಗಬೇಕೆನ್ನುವ ಕನಸು ಕಂಡಿರುವವರಿಗೆ ಇವರ ಜೀವನ ಕಥೆಯು ಪ್ರೇರಣೆಯಾಗಿದೆ.

Most Read Articles

Kannada
English summary
From a labourer to the owner of luxurious cars - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more