500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಹೊಸದಾಗಿ ಮತ್ತೊಂದು ಊರಿಗೆ ಹೋಗುವವರಿಗೆ, ವಿಮಾನ ನಿಲ್ದಾಣಗಳಿಗೆ ಯಾವುದೇ ಕಿರಿಕಿರಿ ಇಲ್ಲದೇ ತಲುಪಲು ಬಯಸುವವರಿಗೆ, ಆಟೋ ಸೇವೆಗಳಿಂದ ಬೇಸತ್ತವರಿಗಾಗಿಯೇ ಹುಟ್ಟಿಕೊಂಡ ಕಂಪನಿಗಳೇ ಕ್ಯಾಬ್ ಸೇವಾ ಸಂಸ್ಥೆಗಳು.

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಕ್ಯಾಬ್ ಸೇವೆಯನ್ನು ನೀಡುತ್ತಿರುವ ಕಂಪನಿಗಳು ಬೆಂಗಳೂರು, ಚೆನ್ನೈ, ದೆಹಲಿ, ಮುಂಬೈ, ಕೊಲ್ಕತ್ತಾ ಹಾಗೂ ಹೈದರಾಬಾದ್‍‍ನಲ್ಲಿ ಜನಪ್ರಿಯವಾಗುತ್ತಿವೆ. ಕ್ಯಾಬ್ ಸೇವೆಗಳು ದೇಶದ ಮೊದಲ ಹಂತದ ನಗರಗಳೂ ಮಾತ್ರವಲ್ಲದೇ ಎರಡನೇ ಹಂತದ ನಗರಗಳಲ್ಲೂ ಜನಪ್ರಿಯವಾಗುತ್ತಿವೆ.

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಒಲಾ ಕಂಪನಿಯು ಭಾರತದಲ್ಲಿ ಕ್ಯಾಬ್ ಸೇವೆಯನ್ನು ನೀಡುತ್ತಿರುವ ಜನಪ್ರಿಯ ಕಂಪನಿಗಳಲ್ಲಿ ಒಂದಾಗಿದೆ. ಒಲಾ ಎಂದರೆ ತಿಳಿಯದ ಜನರೇ ಇಲ್ಲ ಎನ್ನುವಷ್ಟು ಜನಪ್ರಿಯವಾಗಿದೆ. ಒಲಾ ಕಂಪನಿಯನ್ನು 2010ರಲ್ಲಿ ಆರಂಭಿಸಲಾಯಿತು.

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಒಲಾ ಕಂಪನಿಯ ಕೇಂದ್ರ ಕಚೇರಿಯು ಬೆಂಗಳೂರಿನಲ್ಲಿದೆ. ಒಲಾ ಕಂಪನಿಯು ತನ್ನ ಸೇವೆಯನ್ನು ಭಾರತದ ವಿವಿಧ ನಗರಗಳಲ್ಲಿ ನೀಡುತ್ತಿದೆ. ಭಾರತದಲ್ಲಿ ಮಾತ್ರವಲ್ಲದೇ ಆಸ್ಟ್ರೇಲಿಯಾ ಹಾಗೂ ನ್ಯೂಜಿ‍‍ಲ್ಯಾಂಡ್‍‍ನಲ್ಲಿಯೂ ಸಹ ಸೇವೆಯನ್ನು ನೀಡುತ್ತಿದೆ.

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಇದರ ಜೊತೆಗೆ ಒಲಾ ಕಂಪನಿಯು ಇಂಗ್ಲೆಂಡ್‍‍ನಲ್ಲಿಯೂ ಸಹ ತನ್ನ ಸೇವೆಯನ್ನು ನೀಡುತ್ತಿದೆ. ಇಷ್ಟೆಲ್ಲಾ ಸೇವೆಯನ್ನು ನೀಡುತ್ತಿರುವ ಒಲಾ ಕಂಪನಿಯಿಂದ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ.

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ವರದಿಗಳ ಪ್ರಕಾರ, ಒಲಾ ಕಂಪನಿಯು ತನ್ನ 500 ಜನ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿರುವುದು ತಿಳಿದು ಬಂದಿದೆ. ಒಲಾ ಕಂಪನಿಯು ನಷ್ಟವಾಗುವುದನ್ನು ತಪ್ಪಿಸುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿದೆ.

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಒಲಾ ಕಂಪನಿಯ ಈ ನಿರ್ಧಾರದಿಂದಾಗಿ ಕಂಪನಿಯ ಹಿರಿಯಾ ಮ್ಯಾನೇಜರ್ ಹಾಗೂ ಮಧ್ಯಮ ಶ್ರೇಣಿಯ ಉದ್ಯೋಗಿಗಳಿಗೆ ಹೆಚ್ಚಿನ ತೊಂದರೆಯಾಗಲಿದೆ ಎಂದು ವರದಿಯಾಗಿದೆ. ಇದರ ಜೊತೆಗೆ ಇನ್ನಷ್ಟು ಉದ್ಯೋಗಿಗಳನ್ನು ತೆಗೆದುಹಾಕುವ ಸಾಧ್ಯತೆಗಳಿವೆ.

MOST READ: ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್‌ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಒಲಾ ಕಂಪನಿಯು ಒಟ್ಟು 1,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಲಿದೆ. ಈ 1,000 ಉದ್ಯೋಗಿಗಳನ್ನು ಮುಂದಿನ ಆರು ತಿಂಗಳ ಅವಧಿಯಲ್ಲಿ ಮನೆಗೆ ಕಳುಹಿಸಲಾಗುವುದು. ಒಲಾ ಕಂಪನಿಯಲ್ಲಿ ಸುಮಾರು 4,500ದಷ್ಟು ಉದ್ಯೋಗಿಗಳಿದ್ದಾರೆ.

MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಈ ಪೈಕಿ 20%ನಷ್ಟು ಜನರನ್ನು ಉದ್ಯೋಗದಿಂದ ತೆಗೆದು ಹಾಕುವುದಾಗಿ ಹೇಳಲಾಗಿದೆ. ಆದರೆ ಒಲಾ ಕಂಪನಿಯು ತನ್ನ ಈ ನಿರ್ಧಾರದಿಂದಾಗಿ 5% ನಿಂದ 7% ವರೆಗಿನ ಉದ್ಯೋಗಿಗಳಿಗೆ ಮಾತ್ರ ತೊಂದರೆಯಾಗುವುದಾಗಿ ತಿಳಿಸಿದೆ.

MOST READ: ಕಾರು ಖರೀದಿಸಿದ ಮಾಲೀಕನ ಮೇಲೆ ಕೇಸ್ ಜಡಿದ ಎಂಜಿ ಮೋಟಾರ್..!

500 ಉದ್ಯೋಗಿಗಳನ್ನು ಮನೆಗೆ ಕಳುಹಿಸಲಿದೆ ಒಲಾ..!

ಒಲಾ ಕಂಪನಿಯು ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆಯೆಂದು ಹೇಳಲಾಗುತ್ತಿದೆ. ಒಲಾ ಕಂಪನಿಯ ಈ ನಿರ್ಧಾರವು ಕಂಪನಿಯ ಉದ್ಯೋಗಿಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

More from DriveSpark

Article Published On: Saturday, December 14, 2019, 13:18 [IST]
English summary
Ola lays off around 500 employees - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+