Just In
- 1 hr ago Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- 15 hrs ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 16 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 17 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
Don't Miss!
- Movies 'ಯುವ ರಣಧೀರ ಕಂಠೀರವ' ಸಿನಿಮಾ ನಿಂತಿದ್ದೇಕೆ? ಕಥೆಗಾರ ಭಗೀರಥ ಏನಂದ್ರು?
- News ಲೋಕಸಭೆ ಚುನಾವಣೆ : ಶೇ 100ರಷ್ಟು ಮತದಾನವಾದರೆ ಸಿಗಲಿದೆ ಪ್ರಶಸ್ತಿ
- Sports IPL 2024: ಮತ್ತೊಂದು ರೋಚಕ ಪಂದ್ಯದಲ್ಲಿ SRH vs RCB ಕದನ; ಪಂದ್ಯದ ವಿವರ, ಸಂಭಾವ್ಯ ಆಡುವ 11ರ ಬಳಗ
- Finance ಆರ್ಬಿಐ ಡೆಪ್ಯುಟಿ ಗವರ್ನರ್ ರಬಿ ಶಂಕರ್ ಸೇವಾವಧಿ ವಿಸ್ತರಣೆ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡಿಸೆಂಬರ್ 1ರಿಂದ ಜಾರಿಗೆ ಬರಲಿರುವ ಫಾಸ್ಟ್ಟ್ಯಾಗ್ ಬಗ್ಗೆ ನಿಮಗೆಷ್ಟು ಗೊತ್ತು?
ನೀವು ಕಾರುಗಳನ್ನು ಬಳಸುತ್ತಿದ್ದರೆ, ಫಾಸ್ಟ್ಟ್ಯಾಗ್ ಎಂದರೇನು ಎಂಬ ಪ್ರಶ್ನೆಯು ನಿಮ್ಮ ಮನಸ್ಸಿಗೆ ಬಂದಿರಬಹುದು. ಸರ್ಕಾರವು ಫಾಸ್ಟ್ಟ್ಯಾಗ್ ಅನ್ನು ಏಕೆ ಹಾಗೂ ಹೇಗೆ ಜಾರಿಗೆ ತರಲಿದೆ ಎಂಬ ಪ್ರಶ್ನೆಗಳು ಏಳುವುದು ಸಹಜ.
ಈ ಲೇಖನದಲ್ಲಿ ಫಾಸ್ಟ್ಟ್ಯಾಗ್ ಹಾಗೂ ಅದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ನೀಡಲಿದ್ದೇವೆ. ಫಾಸ್ಟ್ಟ್ಯಾಗ್ ರೀಚಾರ್ಜ್, ಬ್ಯಾಲೆನ್ಸ್ ಚೆಕ್, ಕಸ್ಟಮರ್ ಕೇರ್ ನಂಬರ್ ಎಲ್ಲವನ್ನೂ ಈ ಲೇಖನದಲ್ಲಿ ನೋಡೋಣ.
ಫಾಸ್ಟ್ಟ್ಯಾಗ್ ಎಂದರೇನು?
ಭಾರತದ ಟೋಲ್ಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಪರಿಚಯಿಸಲಾಗಿದೆ. ಫಾಸ್ಟ್ಟ್ಯಾಗ್ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯಾಗಿದ್ದು, ಟೋಲ್ ಪ್ಲಾಜಾ ಮೂಲಕ ಹಾದುಹೋಗುವ ವಾಹನಗಳ ಟೋಲ್ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.
ಈ ವ್ಯವಸ್ಥೆಯನ್ನು ಭಾರತದಲ್ಲಿ ಮೊದಲ ಬಾರಿಗೆ 2014ರಲ್ಲಿ ಪರಿಚಯಿಸಲಾಯಿತು. ಇದನ್ನು ಭಾರತದೆಲ್ಲೆಡೆ ಜಾರಿಗೆ ತರಲಾಗುತ್ತಿದ್ದು, ಡಿಸೆಂಬರ್ 1ರಿಂದ ಕಡ್ಡಾಯಗೊಳಿಸಲಾಗಿದೆ. ಈ ಸೌಲಭ್ಯ ಹೊಂದಿರುವ ವಾಹನಗಳು ಯಾವುದೇ ಟೋಲ್ ಪ್ಲಾಜಾ ಮೂಲಕ ಹಾದುಹೋಗುವಾಗ ಗಂಟೆಗಟ್ಟಲೇ ಟೋಲ್ಗಳಲ್ಲಿ ನಿಲ್ಲುವ ಅಗತ್ಯವಿಲ್ಲ.
ಫಾಸ್ಟ್ಟ್ಯಾಗ್ಗಳನ್ನು ಎಲ್ಲಿ ಖರೀದಿಸಬೇಕು?
ಇದಕ್ಕಾಗಿ ನೀವು ಎಲ್ಲಿಯೂ ಹೋಗಬೇಕಾಗಿಲ್ಲ. ಮನೆಯಲ್ಲಿ ಕುಳಿತೇ ಫಾಸ್ಟ್ಟ್ಯಾಗ್ ಅನ್ನು ಖರೀದಿಸಬಹುದು. ದೇಶದಲ್ಲಿರುವ ಅನೇಕ ಬ್ಯಾಂಕುಗಳು ಆನ್ಲೈನ್ನಲ್ಲಿ ಫಾಸ್ಟ್ಟ್ಯಾಗ್ ಖರೀದಿಸುವ ಸೌಲಭ್ಯವನ್ನು ಒದಗಿಸುತ್ತಿವೆ.
ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಐಡಿಎಫ್ಸಿ, ಎಸ್ಬಿಐ, ಹೆಚ್ಡಿಎಫ್ಸಿ, ಸಿಂಡಿಕೇಟ್, ಪೇಟಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ಗಳಲ್ಲಿ ಫಾಸ್ಟ್ಟ್ಯಾಗ್ಗೆ ಅರ್ಜಿ ಸಲ್ಲಿಸಬಹುದು. ನಂತರ ಫಾಸ್ಟ್ಟ್ಯಾಗ್ ಅನ್ನು ನೇರವಾಗಿ ನಿಮ್ಮ ಮನೆಗೆ ತಲುಪಿಸಲಾಗುತ್ತದೆ.
ಇದರೊಂದಿಗೆ, ಫಾಸ್ಟ್ಟ್ಯಾಗ್ ಅನ್ನು ಟೋಲ್ ಪ್ಲಾಜಾ ಅಥವಾ ಅಧಿಕೃತ ಏಜೆನ್ಸಿ ಮೂಲಕವೂ ಖರೀದಿಸಬಹುದು. ಗ್ರಾಹಕರು ಆನ್ಲೈನ್ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬೇಕಾಗುತ್ತದೆ.
ಫಾಸ್ಟ್ಟ್ಯಾಗ್ಗಳನ್ನು ಎಲ್ಲಿ ಬಳಸಬೇಕು?
ರಾಷ್ಟ್ರೀಯ ಹೆದ್ದಾರಿ ಹಾಗೂ ಹಲವಾರು ರಾಜ್ಯ ಹೆದ್ದಾರಿಗಳು ಸೇರಿದಂತೆ ದೇಶಾದ್ಯಂತವಿರುವ 500ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಲ್ಲಿ ಫಾಸ್ಟ್ಟ್ಯಾಗ್ಗಳನ್ನು ಬಳಸಬಹುದು. ಡಿಸೆಂಬರ್ 1ರಿಂದ ಬಸ್, ಟ್ರಕ್, ಟ್ರಾಕ್ಟರ್ ಹಾಗೂ ಇತರ ಕಮರ್ಶಿಯಲ್ ವಾಹನಗಳು ಸೇರಿದಂತೆ ಎಲ್ಲಾ ನಾಲ್ಕು ಚಕ್ರಗಳಿಗೆ ಫಾಸ್ಟ್ಟ್ಯಾಗ್ ಅನ್ನು ಕಡ್ಡಾಯಗೊಳಿಸಲಾಗುವುದು.
ಫಾಸ್ಟ್ಟ್ಯಾಗ್ಗಳನ್ನು ರೀಚಾರ್ಜ್ ಮಾಡುವುದು ಹೇಗೆ?
ಚೆಕ್, ಆನ್ಲೈನ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೆಫ್ಟ್, ಆರ್ಟಿಜಿಎಸ್ ಹಾಗೂ ನೆಟ್ ಬ್ಯಾಂಕಿಂಗ್ ಮೂಲಕ ಫಾಸ್ಟ್ಟ್ಯಾಗ್ಗಳನ್ನು ರೀಚಾರ್ಜ್ ಮಾಡಬಹುದು.
ಗ್ರಾಹಕರು ರೂ.100ನಿಂದ ರೂ.1 ಲಕ್ಷದವರೆಗೆ ರೀಚಾರ್ಜ್ ಮಾಡಬಹುದು. ಗ್ರಾಹಕರು ಸುಲಭವಾಗಿ ರೀಚಾರ್ಜ್ ಮಾಡಲು ಬೇರೆ ಬೇರೆ ಏಜೆನ್ಸಿಗಳು ಬೇರೆ ಬೇರೆ ವಿಧಾನಗಳನ್ನು ಹಾಗೂ ಆಯ್ಕೆಗಳನ್ನು ನೀಡಲಾಗಿದೆ. ಅವುಗಳನ್ನು ಅನುಸರಿಸುವ ಮೂಲಕ ಫಾಸ್ಟ್ಟ್ಯಾಗ್ಗಳನ್ನು ರೀಚಾರ್ಜ್ ಮಾಡಬಹುದು.
ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ಚೆಕ್ ಮಾಡುವುದು ಹೇಗೆ?
ಫಾಸ್ಟ್ಟ್ಯಾಗ್ ಬ್ಯಾಲೆನ್ಸ್ ಪರಿಶೀಲಿಸಲು, ಸಂಸ್ಥೆಯ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಮಾಹಿತಿಯನ್ನು ಪಡೆಯಬಹುದು. ಇದರೊಂದಿಗೆ, ಪ್ರತಿ ಟೋಲ್ ವಹಿವಾಟಿನ ನಂತರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಸಂದೇಶ ವನ್ನು ಕಳುಹಿಸಲಾಗುತ್ತದೆ.
ಫಾಸ್ಟ್ಟ್ಯಾಗ್ನಿಂದಾಗುವ ಪ್ರಯೋಜನಗಳು
ಹೆದ್ದಾರಿಯಲ್ಲಿ ಚಾಲನೆ ಮಾಡುವಾಗ ಫಾಸ್ಟ್ಟ್ಯಾಗ್ನಿಂದ ಹಲವಾರು ಪ್ರಯೋಜನಗಳಾಗುತ್ತವೆ. ಅವುಗಳೆಂದರೆ
ಸುಲಭ ಪಾವತಿ - ಟೋಲ್ ಪ್ಲಾಜಾವನ್ನು ದಾಟುವಾಗ ನೀವು ಹಣವನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ.
ಫಾಸ್ಟ್ಟ್ಯಾಗ್ ವಾಹನಗಳಲ್ಲಿದ್ದರೆ ವಾಹನಗಳನ್ನು ನಿಲ್ಲಿಸುವ ಅಗತ್ಯವಿಲ್ಲ.
ಆನ್ಲೈನ್ ರೀಚಾರ್ಜ್ - ಡೆಬಿಟ್ / ಕ್ರೆಡಿಟ್ ಮತ್ತು ನೆಟ್ ಬ್ಯಾಂಕಿಂಗ್ ಬಳಸಿ ಫಾಸ್ಟ್ಟ್ಯಾಗ್ ಗ್ರಾಹಕರು ರೀಚಾರ್ಜ್ ಮಾಡಬಹುದು.
ಎಲ್ಲಾ ಟೋಲ್ ವಹಿವಾಟುಗಳಿಗೆ ಎಸ್ಎಂಎಸ್ ಸಂದೇಶ ಬರಲಿದೆ.
ಟೋಲ್ ಪಾವತಿಯ ಮೇಲೆ ಗ್ರಾಹಕರು 10%ನಷ್ಟು ರಿಯಾಯಿತಿ ಪಡೆಯಲಿದ್ದಾರೆ.
ವೆಬ್ ಪೋರ್ಟಲ್ ಸೌಲಭ್ಯವು ವಿಶೇಷವಾಗಿ ಫಾಸ್ಟ್ಟ್ಯಾಗ್ಗಳಿವೆ ಲಭ್ಯವಿರಲಿದೆ.
ಫಾಸ್ಟ್ಟ್ಯಾಗ್ನಿಂದಾಗಿ ಟೋಲ್ನಲ್ಲಿ ದಟ್ಟಣೆ ಕಡಿಮೆಯಾಗಲಿದೆ.
ಫಾಸ್ಟ್ಟ್ಯಾಗ್ ಕಸ್ಟಮರ್ ಕೇರ್ ನಂಬರ್ ಹಾಗೂ ಹೆಲ್ಪ್ ಲೈನ್ ನಂಬರ್
ಈಗಾಗಲೇ ಹೇಳಿದಂತೆ, ಫಾಸ್ಟ್ಟ್ಯಾಗ್ಗಳನ್ನು ಹಲವು ಬ್ಯಾಂಕುಗಳ ಮೂಲಕ ಖರೀದಿಸಬಹುದು. ಫಾಸ್ಟ್ಟ್ಯಾಗ್ ಸಂಬಂಧಿತ ಸಮಸ್ಯೆಗಳಿಗಾಗಿ ಈ ಕೆಳಗಿನ ಟೋಲ್ ಫ್ರೀ ಸಂಖ್ಯೆಗಳನ್ನು ಸಂಪರ್ಕಿಸಬಹುದು :
1. ಐಸಿಐಸಿಐ ಬ್ಯಾಂಕ್: 1860 210 1014
2. ಎಚ್ಡಿಎಫ್ಸಿ ಬ್ಯಾಂಕ್: 1800 120 1243
3. ಆಕ್ಸಿಸ್ ಬ್ಯಾಂಕ್: 1800 103 5577
4. ಎಸ್ಬಿಐ ಬ್ಯಾಂಕ್: 1800 110 018
5. ಸಿಂಡಿಕೇಟ್ ಬ್ಯಾಂಕ್: 1800 425 0585
ಇತರ ಬ್ಯಾಂಕುಗಳ ಟೋಲ್ ಫ್ರೀ ಸಂಖ್ಯೆಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಪಡೆಯಿರಿ.
ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಡಿಸೆಂಬರ್ 1ರಿಂದ ಭಾರತದಲ್ಲಿ ಫಾಸ್ಟ್ಟ್ಯಾಗ್ಗಳನ್ನು ಕಡ್ಡಾಯಗೊಳಿಸಲಾಗಿದೆ. ಎಲ್ಲಾ ವಾಹನ ತಯಾರಕ ಕಂಪನಿಗಳು ವಾಹನ ಮಾರಾಟದ ಸಮಯದಲ್ಲಿ ಫಾಸ್ಟ್ಟ್ಯಾಗ್ ಐಡಿಯನ್ನು ವಾಹನದಲ್ಲಿ ಅಳವಡಿಸುವುದನ್ನು ಸರ್ಕಾರವು ಕಡ್ಡಾಯಗೊಳಿಸಿದೆ.
ಹೊಸ ವಾಹನಗಳಲ್ಲಿ ಫಾಸ್ಟ್ಟ್ಯಾಗ್ಗಳನ್ನು ಈಗಾಗಲೇ ಅಳವಡಿಸಲಾಗಿದೆ. ಗ್ರಾಹಕರು ಇದಕ್ಕಾಗಿ ರೂ.500 ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಈ ಫಾಸ್ಟ್ಟ್ಯಾಗ್ಗಳು ದೇಶದ್ಯಾಂತ ಲಭ್ಯವಿರುವ 500 ಕ್ಕೂ ಹೆಚ್ಚು ಟೋಲ್ ಪ್ಲಾಜಾಗಳಿಗೆ ಅನ್ವಯಿಸಲಿದೆ.