ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಏಳು ಆಸನಗಳುಳ್ಳ ಟಾಟಾ ಹ್ಯಾರಿಯರ್ ಅಥವಾ ಬಝರ್ಡ್ ಕಾರನ್ನು 2019ರ ಜೆನೆವಾ ಮೋಟಾರ್ ಶೋನಲ್ಲಿ ಪ್ರದರ್ಶಿಸಲಾಗಿದ್ದು, ಈ ಕಾರು ಮಾರುಕಟ್ಟೆಯಲಿ ಹೆಚ್ಚಿನ ನಿರೀಕ್ಷಯೆನ್ನು ಹುಟ್ಟುಹಾಕಿದೆ. ಟಾಟಾ ಮೋಟಾರ್ಸ್ ಸಂಸ್ಥೆಯು ಬಝರ್ಡ್ ಕಾರನ್ನು ಈ ವರ್ಷ ಮುಗಿಯುವುದರೊಳಗೆ ಬಿಡುಗಡೆ ಮಾಡುವ ತೀರ್ಮಾನದಲಿದ್ದು, ಹ್ಯಾರಿಯರ್ ಕಾರಿನ ರೇಂಜ್ ಅನ್ನು ವಿಸ್ತರಿಸಲು ಹೆಕ್ಸಾ ಕಾರಿನ ಸ್ಥಾನವನ್ನು ಈ 7 ಸೀಟರ್ ಹ್ಯಾರಿಯರ್ ನೀಡಲಾಗುತ್ತಿದೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಟಾಟಾ ಹೆಕ್ಸಾ ಕಾರುಗಳು ಮೊದಲಿಗೆ ಜನವರಿ 2017, ರಲ್ಲಿ ಬಿಡುಗಡೆಗೊಂಡಿದ್ದು, ಈ ಕಾರಿನಲ್ಲಿರುವ 2.2 ಲೀಟರ್ ಡೀಸೆಲ್ ಎಂಜಿನ್ ಮುಂಬರುವ ಬಿಎಸ್-6 ಎಮಿಷನ್ ಹೊರಸೂಸುವಿಕೆಯ ಪರೀಕ್ಷೆಯಲ್ಲಿ ಪಾಸ್ ಆಗಲು ಸಾಧ್ಯವಾಗದ ಕಾರಣ, ಈ ಎಂಜಿನ್ ಅನ್ನು ಪ್ಯಾಸೆಂಜರ್ ಕಾರುಗಳ ಬದಲಿದೆ ಅವುಗಳಲ್ಲಿ ಹೆಚ್ಚಿನ ಪ್ರಮಾಡದಲ್ಲಿ ಬದಲಾವಣೆಗಳನ್ನು ಮಾಡಿ, ಟಾಟಾ ಮೋಟಾರ್ಸ್‍ನಲ್ಲಿನ ವಾಣಿಜ್ಯ ವಾಹನಗಳಿಗೆ ನೀಡಲಾಗುವುದು.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಈ ಕುರಿತಾಗಿ ಟಾಟಾ ಮೋಟಾರ್ಸ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ ರಾಜೇಂದ್ರ ಪೆಟ್ಕರ್‍‍‍ರವರು, ನಾಮ್ಮಲ್ಲಿರುವ ಪ್ಯಾಸೆಂಜರ್ ಮತ್ತು ವಾಣಿಜ್ಯ ವಾಹನಗಳ ಎಂಜಿನ್‍ನಲ್ಲಿರುವ ಪವರ್‍‍ಟ್ರೈನ್ ಅನ್ನು ಹಂಚಿಕೊಳ್ಳುತ್ತೇವೆ. ಆದುದರಿಂದ ಪ್ಯಾಸೆಂಜರ್ ಕಾರುಗಳಿಗೆ ಸೂಕ್ತವಾಗದ ಪವರ್‍‍ಟ್ರೈನ್ ಎಂಜಿನ್, ಪ್ಯಾಸೆಂಜರ್ ವಾಹನಗಳಿಗೂ ಸೂಕ್ತವಾಗದೇ ಇರಲಾರದು. ಆದುದರಿಂದ 2.2 ಲೀಟರ್‍ ಡೀಸೆಲ್ ಎಂಜಿನ್ ಅನ್ನು ಬಿಎಸ್-6 ಅಪ್ಗ್ರೇಡ್ ಮಾಡಿ ವಾಣಿಜ್ಯ ವಾಹನಗಳಲಿ ನೀಡುತ್ತೇವೆ. ಎಂದು ಹೇಳಿದ್ದಾರೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಪ್ರಸ್ಥುತ ಮಾರಾಟವಾಗುತ್ತಿರುವ ಟಾಟಾ ಹ್ಯಾರಿಯರ್ ಕಾರಿನಲ್ಲಿ 2.0 ಲೀಟರ್‍‍ನ ಡೀಸೆಲ್ ವೇರಿಯೆಂಟ್‍‍ಗೆ ಹೆಚ್ಚಿನ ಬೇಡಿಕೆಯು ಬರುತ್ತಿದ್ದು, ಇದೇ ಎಂಜಿನ್ ಅನ್ನು ನಮ್ಮ ಮುಂದಿನ ಪ್ಯಾಸೆಂಜರ್ ವಾಹನಗಳಲ್ಲಿ ಕೂಡಾ ಬಳಸಲಾಗುತ್ತದೆ ಎಂದು ಹೆಳಲಾಗಿದೆ. ಏಕೆಂದರೆ 2.0 ಲೀಟರ್‍‍ನ ಡೀಸೆಲ್ ಎಂಜಿನ್ ಇದೊಂದು ಸುಧಾರಿತ ಮತ್ತು ಉತ್ತಮವಾಗಿ ಸ್ಥಾಪಿಸಲಾಗಿದೆ ಎನ್ನಲಾಗಿದ್ದು, ಬಿಎಸ್6 ಜಾರಿಯಾದ ನಂತರವೂ ಇದೇ ಎಂಜಿನ್ ಅನ್ನು ಬಳಸುತ್ತೇವೆ ಎಂದು ಹೆಳಿದ್ದಾರೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಎಂಜಿನ್ ಸಾಮರ್ಥ್ಯ

ವರದಿ ಪ್ರಕಾರ ಟಾಟಾ ಬಝರ್ಡ್ ಕಾರುಗಳಲ್ಲಿ ಬಿಎಸ್6 ಆಧಾರಿತ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ಟಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯ ಪಡೆದುಕೊಳ್ಳಲಿದೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಇದೀಗ ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಎಕ್ಸ್‌ಯುವಿ 500, ಜೀಪ್ ಕಂಪಾಸ್ ಮತ್ತು ಬಿಡುಗಡೆಗೊಳ್ಳಲಿರುವ ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲು ಸಜ್ಜುಗೊಳ್ಳುತ್ತಿರುವ ಟಾಟಾ ಕ್ಯಾಸಿನ್ನಿ ಕಾರು, ತನ್ನ ಎದುರಾಳಿಗಳಿಗಿಂತಲೂ ಗಾತ್ರದಲ್ಲಿ ಅಧಿಕವಾಗಿರಲಿದೆಯಂತೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಬಝರ್ಡ್ ಕಾರು, 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ. ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಮತ್ತೊಂದು ವಿಚಾರ ಅಂದ್ರೆ, ಹೊಸ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಕಾರಿನ ವಿನ್ಯಾಸ

ಬಝರ್ಡ್ ಎಸ್‍ಯುವಿ ಕಾರು ಐಷಾರಾಮಿ ಒಳವಿನ್ಯಾಸದೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಪೆಸ್ ಹೊಂದಿದ್ದು, ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್, ಪ್ರೀಮಿಯಂ ಆಡಿಯೊ ಸಿಸ್ಟಂ ಹಾಗೂ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿರಲಿದೆ. ಜೊತೆಗೆ ಹೊಸ ಕಾರು ಆಪ್ಟಿಮಲ್ ಮಾಡ್ಯುಲರ್ ಎಫಿಶಿಯೆಂಟ್ ಗ್ಲೋಬಲ್ ಅಡ್ವಾನ್ಸ್ಡ್ ಪ್ಲಾಟ್‍ಫಾರ್ಮ್ ಅನ್ನು ಆಧರಿಸಿದ್ದು, ಇದೇ ತಂತ್ರವನ್ನು ಲ್ಯಾಂಡ್ ರೋವರ್ ಡಿಸ್ಕವರಿ ಕಾರಿನಲ್ಲಿಯೂ ಕೂಡಾ ಇದನ್ನು ನಾವು ಕಾಣಬಹುದಾಗಿದೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ಟಾಟಾ ಸಂಸ್ಥೆಯು ಸದ್ಯ ನಾಲ್ಕು ವಿವಿಧ ಮಾದರಿಯ ಕಾರುಗಳ ಬಿಡುಗಡೆಗಾಗಿ ಯೋಜನೆ ರೂಪಿಸಿದ್ದು, ಇದರಲ್ಲಿ ಮೊದಲಿಗೆ ಆಲ್‌ಟ್ರೊಜ್ ಕಾರು ಬಿಡುಗಡೆಯಾದ ನಂತರ ಈ ವರ್ಷದ ಹಬ್ಬದ ಋತುವಿನಲ್ಲಿ ಬಝರ್ಡ್ ಕಾರು ಮಾರುಕಟ್ಟೆಗೆ ಪ್ರವೇಶ ಪಡೆಯಲಿದೆ.

ಟಾಟಾ ಹೆಕ್ಸಾ ಸ್ಥಾನವನ್ನು ಪಡೆಯಲಿದೆ 7 ಸೀಟರ್ ಹ್ಯಾರಿಯರ್ ಕಾರು

ಮೂಲಗಳ ಪ್ರಕಾರ, ಬಝರ್ಡ್ ಕಾರು 2019ರ ಅಂತ್ಯದಲ್ಲಿ ಇಲ್ಲವೇ 2020ರ ಆರಂಭದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಎಸ್‌ಯುವಿ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ದೊರೆಯಲಿದೆ. ಎಕ್ಸ್‌ಶೋರೂಂ ಪ್ರಕಾರ ಆರಂಭಿಕ ಆವೃತ್ತಿಯು ರೂ.18 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.21 ಲಕ್ಷ ಬೆಲೆ ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

Source: AutoCarIndia

Article Published On: Thursday, July 4, 2019, 9:46 [IST]
English summary
Seven Seater Tata Harrier TO Replace Hexa. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+