ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಸ್ಕೋಡಾ ಆಟೋ ಇಂಡಿಯಾ ಭಾರತದ 53 ನಗರಗಳಲ್ಲಿರುವ ತನ್ನ ಶೋರೂಂ ಹಾಗೂ ಸರ್ವಿಸ್ ಸೆಂಟರ್‍‍ಗಳನ್ನು ನವೀಕರಣಗೊಳಿಸಲಿದೆ. ಕಂಪನಿಯು ತನ್ನ ಡೀಲರ್‍‍ಗಳ ಜೊತೆಗೂಡಿ ರೂ.120 ಕೋಟಿ ಹೂಡಿಕೆ ಮಾಡಿ ತನ್ನ ಶೋರೂಂಗಳನ್ನು ನವೀಕರಿಸಲಿದೆ.

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಶೋರೂಂಗಳ ಈ ನವೀಕರಣವು ಭಾರತದಲ್ಲಿ ಇದುವರೆಗೂ ಮಾಡಲಾದ ಅತಿ ದೊಡ್ಡ ನವೀಕರಣವಾಗಿದೆ. ಸ್ಕೋಡಾ ಕಂಪನಿಯು ತನ್ನ ಹೊಸ ಕಾರ್ಪೋರೆಟ್ ಐಡೆಂಟಿಟಿ ಹಾಗೂ ಡಿಸೈನ್ (ಸಿ‍ಐ‍‍ಸಿ‍‍ಡಿ) ಅನುಸಾರ ತನ್ನ ಶೋರೂಂಗಳನ್ನು ನವೀಕರಿಸುತ್ತಿದೆ.

ಈ ನವೀಕರಣವನ್ನು ಭಾರತದಲ್ಲಿರುವ ಸ್ಕೋಡಾ ಕಂಪನಿಯ 63 ಸೇಲ್ಸ್ ಹಾಗೂ 61 ಸರ್ವಿಸ್ ಟಚ್ ಪಾಯಿಂಟ್‍‍ಗಳಲ್ಲಿ ಮಾಡಲಾಗುತ್ತದೆ. ಈ ನವೀಕರಣ ಅಭಿಯಾನವು ಸ್ಕೋಡಾ ಕಂಪನಿಯ ಇಂಡಿಯಾ 2.0 ಯೋಜನೆಯ ಭಾಗವಾಗಿದೆ.

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಇನ್ನು ಮುಂದೆ ಸ್ಕೋಡಾ ಶೋರೂಂಗಳ ರಿಸೆಪ್ಷನ್ ಬಳಿ ಸ್ಪಷ್ಟವಾದ, ಸರಳವಾದ ನೇಮ್ ಪ್ಲೇಟ್‍‍ಗಳಿರಲಿವೆ. ಗ್ರಾಹಕರನ್ನು ಆಕರ್ಷಿಸಲು ಹೊಸ ವಿನ್ಯಾಸದ ಬಣ್ಣ, ಮಾಡ್ಯುಲರ್ ಡಿಸೈನ್ ಫೀಚರ್ಸ್ ಹಾಗೂ ಹೊಸ ಲೈಟಿಂಗ್ ವಿನ್ಯಾಸಗಳಿರಲಿವೆ.

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಪ್ರೀಮಿಯಂ ಗುಣಮಟ್ಟದ ವಸ್ತುಗಳನ್ನು ಬಳಸುವುದರೊಂದಿಗೆ, ಪ್ರಕಾಶಮಾನವಾದ ಹಾಗೂ ಆಹ್ಲಾದಕರವಾದ ವಾತಾವರಣದೊಂದಿಗೆ ಹೆಚ್ಚು ಸ್ನೇಹಪರ ವಾತಾವರಣವನ್ನು ಸೃಷ್ಟಿಸುವ ಉದ್ದೇಶವನ್ನು ಕಂಪನಿಯು ಹೊಂದಿದೆ. ಇದರಿಂದಾಗಿ ಶೋರೂಂಗಳು ಗ್ರಾಹಕ ಕೇಂದ್ರಿತವಾಗಲಿವೆ.

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಇತರ ಹೊಸ ಡಿಸೈನ್ ಫೀಚರ್‍‍ಗಳೆಂದರೆ, ಪರಿಣಾಮಕಾರಿಯಾದ ಲೈಟಿಂಗ್‍‍ಗಳು ಹಾಗೂ ಗ್ರಾಫಿಕ್ಸ್ ಗಳು. ಶೋರೂಂನಾದ್ಯಂತ ಮರದ ಟ್ರಿಮ್‍‍ಗಳನ್ನು ಇಡಲಾಗುತ್ತದೆ. ಸ್ಕೋಡಾ ಆಟೋ ಇಂಡಿಯಾ ಪ್ರೈ ಲಿ. ಸೇಲ್ಸ್, ಸರ್ವಿಸ್ ಹಾಗೂ ಮಾರ್ಕೆಟಿಂಗ್‍‍ನ ನಿರ್ದೇಶಕರಾದ ಜಾಕ್ ಹೊಲಿಸ್‍‍‍ರವರು ಈ ಬಗ್ಗೆ ಮಾತನಾಡಿದ್ದಾರೆ.

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಕಂಪನಿಯ ಶೋರೂಂಗಳನ್ನು ನವೀಕರಿಸುತ್ತಿರುವ ಉದ್ದೇಶವು ಭಾರತದಲ್ಲಿ ಕಂಪನಿಯ ನೆಟ್ ವರ್ಕ್ ಅನ್ನು ಬಲಶಾಲಿಯಾಗಿಸುವುದಾಗಿದೆ. ಸ್ಕೋಡಾ ಕಂಪನಿಯು ತನ್ನ ಚಾನೆಲ್ ಪಾರ್ಟ್‍‍ನರ್‍‍ಗಳ ಜೊತೆಗೂಡಿ ಕಂಪನಿಯ ಗ್ರಾಹಕರಿಗೆ ಹೆಚ್ಚಿನ ಅನುಭವವನ್ನು ನೀಡಲಿದೆ ಎಂದು ಹೇಳಿದರು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಡೀಲರ್‍‍ಶಿಪ್ ಡಿಸೈನ್ ಕಾನ್ಸೆಪ್ಟ್ ಕಂಪನಿಯ ಸಿಂಪ್ಲಿ ಕ್ಲವರ್ ವಿತ್ ಎ ಹ್ಯುಮನ್ ಟಚ್ ತತ್ವವನ್ನು ಪ್ರತಿನಿಧಿಸುತ್ತದೆ. ನವೀಕರಣದ ಜೊತೆಗೆ ಕಂಪನಿಯು ಶೋರೂಂಗಳಲ್ಲಿರುವ ಮಾರಾಟ ಪ್ರತಿನಿಧಿಗಳಿಗೆ ಸಾಧನವೊಂದನ್ನು ನೀಡಲಿದೆ. ಈ ಸಾಧನದಲ್ಲಿ ಗ್ರಾಹಕರು ಕಂಪನಿಯ ಎಲ್ಲಾ ಸರಣಿಯ ಕಾರುಗಳನ್ನು ವೀಕ್ಷಿಸಬಹುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಐಕನ್ಸಲ್ಟೆಂಟ್ ಎಂದು ಕರೆಯಲಾಗುವ ಈ ಸಾಧನದಿಂದಾಗಿ ಗ್ರಾಹಕರು ಕಾರು ಖರೀದಿಸುವಾಗ ಆ ಕಾರುಗಳನ್ನು ಮಾಡಿಫೈ ಮಾಡಿಕೊಳ್ಳಬಹುದಾಗಿದೆ. ಈ ಫೀಚರ್‍‍ಗಳನ್ನು ಅಳವಡಿಸುವುದರ ಜೊತೆಗೆ ಕಂಪನಿಯು ತನ್ನ ಸಿಬ್ಬಂದಿಗೆ ಗ್ರಾಹಕರೊಂದಿಗೆ ಸೌಮ್ಯವಾಗಿ ಮಾತನಾಡುವುದರ ಜೊತೆಗೆ, ಗ್ರಾಹಕರ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಬೇಕೆಂಬ ಬಗ್ಗೆ ತರಬೇತಿ ನೀಡಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಈ ನವೀಕರಣದಲ್ಲಿ ಸರ್ವಿಸ್‍‍ಗೆ ಬರುವ ಗ್ರಾಹಕರ ಕಾರುಗಳನ್ನು ನಿಗದಿತ ಅವಧಿಯೊಳಗೆ ನೀಡಿ, ಸಂಪೂರ್ಣವಾದ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲಾಗುವುದು. ಕಂಪನಿಯು ಸರ್ವಿಸ್ ಕೇಂದ್ರಗಳಲ್ಲಿ ಬಿಡಿಭಾಗಗಳನ್ನು ಸ್ವಚ್ಛವಾಗಿಟ್ಟು ಕೊಳ್ಳುವುದರ ಜೊತೆಗೆ ಸುಲಭವಾಗಿ ದೊರಕುವಂತೆ ಇಟ್ಟುಕೊಳ್ಳುವ ವ್ಯವಸ್ಥೆಯನ್ನು ಮಾಡಲಿದೆ.

ಶೋರೂಂಗಳ ನವೀಕರಣಕ್ಕೆ 120 ಕೋಟಿ ವ್ಯಯಿಸಲಿದೆ ಸ್ಕೋಡಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಇಂಡಿಯಾ 2.0 ಯೋಜನೆಯ ಭಾಗವಾಗಿ ಸ್ಕೋಡಾ ಕಂಪನಿಯು ತನ್ನ ಶೋರೂಂಗಳನ್ನು ನವೀಕರಿಸುವ ಕೆಲಸವನ್ನು ಮಾಡುತ್ತಿದೆ. ಸ್ಕೋಡಾ ಕಂಪನಿಯು ಹೆಚ್ಚು ಗ್ರಾಹಕರನ್ನು ತನ್ನ ಶೋರೂಂ ಹಾಗೂ ಸರ್ವಿಸ್ ಸೆಂಟರ್‍‍ಗಳತ್ತ ಆಕರ್ಷಿಸಿ ಅವರಿಗೆ ಹಿತವಾದ ಅನುಭವವನ್ನು ನೀಡುವ ಉದ್ದೇಶವನ್ನು ಹೊಂದಿದೆ. ಸ್ಕೋಡಾ ಕಂಪನಿಯು ಹಲವಾರು ಹೊಸ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿದ್ದು, ಈ ನವೀಕರಣವನ್ನು ಹೆಚ್ಚುವರಿಯಾದ ಫೀಚರ್ ಎಂದೇ ಹೇಳಬಹುದು.

Most Read Articles

Kannada
Read more on ಸ್ಕೋಡಾ skoda
English summary
Skoda Invests Rs 120 Crore For Rebranding Showrooms & Service Centres: Part Of INDIA 2.0 Project - Read in Kannada
Story first published: Saturday, September 28, 2019, 15:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more