ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಸ್ಕೋಡಾ ಸಂಸ್ಥೆಯು ತನ್ನ ಬಹುನೀರಿಕ್ಷಿತ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ ಕಾರಿನ ಅಧಿಕೃತ ಚಿತ್ರಗಳನ್ನು ಬಹಿರಂಗಗೊಳಿಸಿದ್ದು, ಹೊಸ ಕಾರು ಮುಂದಿನ ತಿಂಗಳು ಜೀನೆವಾದಲ್ಲಿ ನಡೆಯಲಿರುವ 2019ರ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸುವ ಸುಳಿವು ನೀಡಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಭಾರತದಲ್ಲಿ ಸದ್ಯ ಮಧ್ಯಮ ಗಾತ್ರದ ಎಸ್‌ಯುವಿಗಳ ಸದ್ದು ಜೋರಾಗಿದ್ದು, ಸ್ಕೋಡಾ ಕೂಡಾ ಇದೇ ನಿಟ್ಟಿನಲ್ಲಿ ಹೊಸ ಮಾದರಿಯ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆ ಮಾಡುತ್ತಿದೆ. ಸದ್ಯ ಉತ್ಪಾದನೆ ಹಂತದಲ್ಲಿರುವ ಹೊಸ ಕಾರಿನ ಡಿಸೈನ್ ಕುರಿತಾದ ಚಿತ್ರಗಳನ್ನು ಬಿಡುಗಡೆ ಮಾಡಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಮುಂದಿನ ತಿಂಗಳು ಮಾರ್ಚ್‌ ಆರಂಭದಲ್ಲಿ ನಡೆಯಲಿರುವ ಜಿನೆವಾ ಆಟೋ ಮೇಳದಲ್ಲಿ ಸ್ಕೋಡಾ ಬಿಡುಗಡೆ ಮಾಡಲಿರುವ ಹೊಸ ಕಾಮಿಕ್ ಕಾರು ಅನಾವರಣಗೊಳ್ಳಲಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೊಡಿಯಾಕ್ ಮತ್ತು ಕರೊಕ್ ಕಾರುಗಳ ಮಧ್ಯದಲ್ಲಿ ಸ್ಥಾನ ಪಡೆದುಕೊಳ್ಳಲಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಭಾರತದಲ್ಲಿ ಜನಪ್ರಿಯವಾಗುತ್ತಿರುವ ಹ್ಯುಂಡೈ ಕ್ರೇಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಕಾಮಿಕ್ ಕಾರನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಈ ಬಗ್ಗೆ ಸ್ಕೋಡಾ ಇಂಡಿಯಾ ಮತ್ತಷ್ಟು ಮಾಹಿತಿ ಬಿಡುಗಡೆ ಮಾಡಲಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಇತ್ತ ಫೋಕ್ಸ್‌ವ್ಯಾಗನ್ ಜೊತೆಗಿನ 'ಇಂಡಿಯಾ 2.0 ಪ್ರೋಜೆಕ್ಟ್' ಸಹ ಭಾರತೀಯ ಗ್ರಾಹಕರನ್ನು ಗುರಿಯಾಗಿಸಿ ಅಗ್ಗದ ಬೆಲೆಯ ಕಾರುಗಳನ್ನು ಅಭಿವೃದ್ಧಿ ಮಾಡಲು ಒಪ್ಪಿಗೆ ಸೂಚಿಸಿರುವ ಸ್ಕೋಡಾ, ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳಿಗೆ MQB ಪ್ಲ್ಯಾಟ್‌ಫಾರ್ಮ್ ಆಧರಿಸಿ ಕಾರು ಅಭಿವೃದ್ಧಿ ಮಾಡುತ್ತಿರುವ ಉತ್ತಮ ಬೆಳವಣಿಗೆ ಎನ್ನಬಹುದು.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಅಗ್ಗದ ಬೆಲೆಗಳಲ್ಲಿ ಉತ್ತಮ ಎಸ್‌ಯುವಿಗಳ ಖರೀದಿಗೆ ಭಾರತೀಯ ಗ್ರಾಹಕರು ಹೆಚ್ಚಿನ ಆಸಕ್ತಿ ತೊರುತ್ತಿದ್ದು, ಎಕ್ಸ್‌ಶೋರೂಂ ಪ್ರಕಾರ ರೂ.12 ಲಕ್ಷದಿಂದ ರೂ.16 ಲಕ್ಷದ ಒಳಗಿನ ಕಾರು ಮಾದರಿಗಳು ಬಹುತೇಕ ಯಶಸ್ವಿಯಾಗಿರುವುದು ಕಾಮಿಕ್ ಕಾರು ಅಭಿವೃದ್ದಿಗೆ ಪ್ರೇರಣೆಯಾಗಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಹೀಗಾಗಿಯೇ ಫೋಕ್ಸ್‌ವ್ಯಾಗನ್ ಸಂಸ್ಥೆಯು ಸಹ ಭಾರತೀಯ ಮಾರುಕಟ್ಟೆ ಸೇರಿದಂತೆ ವಿಶ್ವದ ಪ್ರಮುಖ ಮಾರುಕಟ್ಟೆಗಳಿಗಾಗಿ ವಿವಿಧ ಕಾರು ಮಾದರಿಗಳನ್ನು ಪರಿಚಯಿಸುವ ಇರಾದೆಯಲ್ಲಿದ್ದು, 'ಇಂಡಿಯಾ 2.0 ಪ್ರೋಜೆಕ್ಟ್' ಎನ್ನುವ ಬೃಹತ್ ಯೋಜನೆ ಒಂದನ್ನು ಸಿದ್ದಪಡಿಸಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಈ ಹೊಸ ಯೋಜನೆಯ ಜವಾಬ್ದಾರಿಯನ್ನು ಸ್ಕೋಡಾ ಸಂಸ್ಥೆಯೇ ವಹಿಸಿಕೊಂಡಿದ್ದು, ಮುಂಬರುವ ಫೋಕ್ಸ್‌ವ್ಯಾಗನ್ ಸಂಸ್ಥೆಯ ಪ್ರತಿಯೊಂದು ಕಾರು ಮಾದರಿಯು ಸಹ ಸ್ಕೋಡಾ ತಂತ್ರಜ್ಞಾನ ಪ್ರೇರಣೆಯೊಂದಿಗೆ ಮಾರುಕಟ್ಟೆಗೆ ಪ್ರವೇಶಿಸಲಿವೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಇದರಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯ ಟಿ-ಕ್ರಾಸ್ ಎಸ್‌ಯುವಿ ಕೂಡಾ ಭಾರತದಲ್ಲಿ ಬಿಡುಗಡೆಯಾಗುತ್ತಿದ್ದು, ಇದೇ ಕಾರಿನ 1.0-ಲೀಟರ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅನ್ನು ಹೊಸ ಕಾಮಿಕ್ ಕಾರಿನಲ್ಲೂ ಸಹ ಬಳಕೆ ಮಾಡುವ ಸಾಧ್ಯತೆಗಳಿವೆ.

MOST READ: ಏರ್ ಶೋ ವೇಳೆ ಅಗ್ನಿ ದುರಂತ- ಕಾರು ಮಾಲೀಕರಿಗೆ ಧೈರ್ಯ ತುಂಬಿದ ಟೊಯೊಟಾ..!

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಎಂಜಿನ್ ಸಾಮರ್ಥ್ಯ

ಕಾಮಿಕ್ ಕಾರು ಒಟ್ಟು ಎರಡು ಪೆಟ್ರೋಲ್ ಎಂಜಿನ್ ಮತ್ತು ಒಂದು ಡೀಸೆಲ್ ಎಂಜಿನ್‌ಗಳಲ್ಲಿ ಅಷ್ಟೇ ಅಲ್ಲದೇ ಸಿಎನ್‌ಜಿ ಆಯ್ಕೆಯನ್ನು ಸಹ ಹೊಂದಿರಲಿದ್ದು, ಪೆಟ್ರೋಲ್ ಮಾದರಿಯಲ್ಲಿ 1.0-ಲೀಟರ್ ಟರ್ಬೋ ಎಂಜಿನ್ ಮತ್ತು 1.5-ಲೀಟರ್ ಟಿಎಸ್ಐ ಟರ್ಬೋ ಪೆಟ್ರೋಲ್ ಎಂಜಿನ್ ಪಡೆದಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಇನ್ನು ಡೀಸೆಲ್ ಆವೃತ್ತಿಯಲ್ಲಿ 1.6-ಲೀಟರ್ ಟಿಡಿಐ ಎಂಜಿನ್ ಲಭ್ಯವಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ ಪೆಟ್ರೋಲ್ ವೆರಿಯೆಂಟ್‌ಗಳಲ್ಲಿ ಸೆವೆನ್ ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

MOST READ: 2ನೇ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಶಾಕ್ ನೀಡಿದ ಕೇಂದ್ರ ಸರ್ಕಾರ..!

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಬಿಡುಗಡೆ ಮತ್ತು ಬೆಲೆ(ಅಂದಾಜು)

ಮೊದಲು ಜೀನೆವಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳ್ಳಲಿರುವ ಹೊಸ ಕಾಮಿಕ್ ಕಾರು 2019ರ ಮಧ್ಯಂತರದಲ್ಲಿ ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, ತದನಂತರ 2020ರ ಫೆಬ್ರುವರಿನಲ್ಲಿ ನಡೆಯಲಿರುವ ಇಂಡಿಯನ್ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ನಂತರವಷ್ಟೇ ಭಾರತದಲ್ಲಿ ಕಾಮಿಕ್ ಹವಾ ಶುರುವಾಗಲಿದೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಹೀಗಾಗಿ ಬಿಡುಗಡೆಯಾಗಲಿರುವ ಹೊಸ ಕಾರು ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಆವೃತ್ತಿಗಳಿಗೆ ತೀವ್ರ ಪೈಪೋಟಿ ನೀಡಲಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.11 ಲಕ್ಷದಿಂದ ರೂ.15 ಲಕ್ಷ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿವೆ.

ಹ್ಯುಂಡೈ ಕ್ರೆಟಾ ಹಿಂದಿಕ್ಕುತ್ತಾ ಸ್ಕೋಡಾ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ?

ಅದೇ ರೀತಿ ಫೋಕ್ಸ್‌ವ್ಯಾಗನ್ ನಿರ್ಮಾಣದ ಟಿ-ಕ್ರಾಸ್ ಎಸ್‌ಯುವಿ ಕೂಡಾ ಇದೇ ವರ್ಷದ ಮಧ್ಯಂತರದಲ್ಲಿ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಈ ಹಿನ್ನೆಲೆಯಲ್ಲಿ ಟಿ-ಕ್ರಾಸ್ ಬಿಡುಗಡೆಯ ನಂತರವಷ್ಟೇ ಕಾಮಿಕ್ ಕಾರು ಗ್ರಾಹಕರ ಕೈಸೇರಲಿದೆ.

Article Published On: Wednesday, February 27, 2019, 11:09 [IST]
English summary
Skoda Kamiq Revealed — World Premiere At Geneva Motor Show 2019. Read in Kannada.
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+