ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಕಾರುಗಳ ಉತ್ಪಾದನೆದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಸ್ಕೋಡಾ ಇಂಡಿಯಾ ಸಂಸ್ಥೆಯು ಮಾರುಕಟ್ಟೆಯಲ್ಲಿನ ಬೇಡಿಕೆ ಅನುಗುಣವಾಗಿ ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ವಿವಿಧ ಮಾದರಿಯ ಆರು ಹೊಸ ಕಾರು ಮಾದರಿಗಳನ್ನು ಪರಿಚಯಿಸಲು ಸಜ್ಜಾಗುತ್ತಿದ್ದು, ಮೊದಲ ಹಂತದಲ್ಲಿ ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ ರಸ್ತೆಗಿಳಿಯಲಿದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಸ್ಕೋಡಾ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಕಾರುಗಳ ಮಾರಾಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯ ಜೊತೆಗೂಡಿ ಇಂಡಿಯಾ 2.0 ಎನ್ನುವ ಯೋಜನೆಗೆ ಚಾಲನೆ ನೀಡಿದ್ದು, ಕಾರು ಉತ್ಪಾದನೆಯಲ್ಲಿ ಸುಧಾರಿತ ತಂತ್ರಜ್ಞಾನ ಅಳವಡಿಕೆ ಮತ್ತು ಮಾರಾಟ ಮಳಿಗೆಗಳ ವಿಸ್ತರಣೆಗೆ ಹೆಚ್ಚಿನ ಒತ್ತು ನೀಡುತ್ತಿದೆ. ಹೊಸ ಯೋಜನೆ ಅಡಿ ಒಟ್ಟು ಆರು ಹೊಸ ಕಾರು ಮಾದರಿಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದು, 2020ರ ಮಧ್ಯಂತರದಲ್ಲಿ ಬಿಡುಗಡೆಯಾಗಲಿರುವ ಕಾಮಿಕ್ ಕಾರು ಕಿಯಾ ಸೆಲ್ಟೊಸ್, ಹ್ಯುಂಡೈ ಕ್ರೆಟಾ ಮತ್ತು ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲಿದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಸ್ಕೋಡಾ ಸಂಸ್ಥೆಯು ಇಂಡಿಯಾ ಸದ್ಯ 2.0 ಯೋಜನೆಗಾಗಿ ಬರೋಬ್ಬರಿ ರೂ.200 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆಗಾಗಿ ಫೋಕ್ಸ್‌ವ್ಯಾಗನ್ ಕೂಡಾ ಸ್ಕೋಡಾ ಜೊತೆ ಕೈಜೋಡಿಸಿದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಹೊಸ ಯೋಜನೆ ಅಡಿಯಲ್ಲಿ ಕಾರು ಉತ್ಪಾದನೆಯಲ್ಲಿ ಬದಲಾವಣೆ ತರುವುದಲ್ಲದೇ ಮಾರುಕಟ್ಟೆಯಲ್ಲಿನ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಮಾದರಿಯ ಕಾರು ಮಾದರಿಗಳನ್ನು ಬಿಡುಗಡೆಗೊಳಿಸುತ್ತಿದ್ದು, ಕಾಮಿಕ್ ಕಂಪ್ಯಾಕ್ಟ್ ಎಸ್‌ಯುವಿ ಮತ್ತು ಕರೋಕ್ ಎಸ್‌ಯುವಿ ಸೇರಿದಂತೆ ಒಟ್ಟು ಆರು ಕಾರುಗಳು ರಸ್ತೆಗಿಳಿಸಲಿದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಸದ್ಯ ಸ್ಕೋಡಾ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿ ರ‍್ಯಾಪಿಡ್ ಸೆಡಾನ್, ಒಕ್ಟಿವಿಯಾ ಸೆಡಾನ್, ಸೂರ್ಪಬ್ ಸೆಡಾನ್ ಮತ್ತು ಕೊಡಿಯಾಕ್ ಎಸ್‌ಯುವಿ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಬಿಡುಗಡೆಯಾಗಲಿರುವ ಆರು ಹೊಸ ಕಾರುಗಳಲ್ಲಿ ಎರಡು ವಿದೇಶಿ ಮಾರುಕಟ್ಟೆಗಳಿಂದ ಆಮದು ಮಾಡಿಕೊಳ್ಳಲಾದ ಕಾರು ಮಾದರಿಗಳಾದರೆ ಇನ್ನುಳಿದ ನಾಲ್ಕು ಹೊಸ ಕಾರುಗಳು ಇಂಡಿಯಾ 2.0 ಯೋಜನೆಯಡಿ ಭಾರತದಲ್ಲೇ ನಿರ್ಮಾಣವಾಗಲಿವೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಕೇಂದ್ರ ಸರ್ಕಾರವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದ್ದು, 2,500 ಕಾರುಗಳನ್ನು ಯಾವುದೇ ಹೆಚ್ಚುವರಿ ತೆರಿಗೆ ಇಲ್ಲದೇ ವಿದೇಶಿ ಮಾರುಕಟ್ಟೆಗಳಿಂದ ಭಾರತಕ್ಕೆ ಆಮದು ಮಾಡಿಕೊಂಡು ಮಾರಾಟ ಮಾಡುವ ಅವಕಾಶ ಒದಗಿಸಿದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಈ ಹಿನ್ನಲೆಯಲ್ಲಿ ಬಹುತೇಕ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳು ವಿದೇಶಿ ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆ ಹೊಂದಿರುವ ಕೆಲವು ಕಾರು ಮಾದರಿಗಳನ್ನು ಹೊಸ ಆಮದು ನೀತಿಯಡಿ ಮಾರಾಟ ಮಾಡಲು ನಿರ್ಧರಿಸಿವೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಸ್ಕೋಡಾ ಇಂಡಿಯಾ ಕೂಡಾ ಇದೇ ನಿಟ್ಟಿನಲ್ಲಿ ಯುರೋಪ್ ಮಾರುಕಟ್ಟೆಯಿಂದ ಎರಡು ಐಷಾರಾಮಿ ಕಾರು ಆವೃತ್ತಿಗಳನ್ನು ಆಮದು ಮಾಡಿಕೊಳ್ಳಲಿದ್ದು, ಇನ್ನುಳಿದ ಮೂರು ಕಾರು ಮಾದರಿಗಳಾದ ಕಾಮಿಕ್, ಕರೋಕ್ ಮತ್ತು ಹೊಸ ತಲೆಮಾರಿನ ರ‍್ಯಾಪಿಡ್ ಸೆಡಾನ್ ಕಾರುಗಳನ್ನು ಇಲ್ಲಿಯೇ ಉತ್ಪಾದನೆ ಮಾಡಿ ಮಾರಾಟ ಮಾಡಲಿದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಇನ್ನು 2.0-ಇಂಡಿಯಾ ಯೋಜನೆಗಾಗಿ ಸ್ಕೋಡಾ ಸಂಸ್ಥೆಯು ಭಾರತದಲ್ಲಿ ರೂ.200 ಕೋಟಿ ಬಂಡವಾಳ ಹೂಡಿಕೆ ಮಾಡಿದ್ದಲ್ಲಿ ಫೋಕ್ಸ್‌ವ್ಯಾಗನ್ ಸಂಸ್ಥೆಯು 1 ಬಿಲಿಯನ್ ಯುರೋ(ರೂ.8 ಸಾವಿರ ಕೋಟಿ) ಬಂಡವಾಳ ಹೂಡಿಕೆಯೊಂದಿಗೆ ಹಲವು ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದೆ.

ಕಿಯಾ ಸೆಲ್ಟೊಸ್ ಪ್ರತಿಸ್ಪರ್ಧಿ ಸ್ಕೋಡಾ ಕಾಮಿಕ್ ಬಿಡುಗಡೆ ಮಾಹಿತಿ ಬಹಿರಂಗ

ಹೀಗಾಗಿ ಭಾರತದಲ್ಲಿ ಬಿಡುಗಡೆಯಾಗಲಿರುವ ಸ್ಕೋಡಾ ಹೊಸ ಕಾರುಗಳು ಭಾರೀ ಸದ್ದು ಮಾಡುವ ನೀರಿಕ್ಷೆಯಲ್ಲಿದ್ದು, ಬೆಲೆ ವಿಚಾರವಾಗಿ ಮಹತ್ವದ ನಿರ್ಣಯ ಕೈಗೊಳ್ಳುತ್ತಿದೆ. ಒಂದು ವೇಳೆ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಕಾರು ರೂ.12 ಲಕ್ಷದಿಂದ ರೂ.16 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಿದ್ದಲ್ಲಿ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಸಾಧಿಸುವುದರಲ್ಲಿ ಎರಡು ಮಾತಿಲ್ಲ.

Most Read Articles

Kannada
Read more on ಸ್ಕೋಡಾ skoda
English summary
Skoda has confirmed that Kamiq compact SUV will be launched in India by mid of 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X