ಬಹಿರಂಗಗೊಂಡ ಸ್ಕೋಡಾ ಹೊಸ ಕಾರುಗಳ ಬಿಡುಗಡೆ ಮಾಹಿತಿ
ಸ್ಕೋಡಾ, ಭಾರತದಲ್ಲಿ ಕರೋಕ್ ಹಾಗೂ ಕಾಮಿಕ್ ಎಸ್‍ಯುವಿಗಳ ಬಿಡುಗಡೆ ದಿನವನ್ನು ನಿಗದಿಪಡಿಸಿದೆ. ಸ್ಕೋಡಾದ ಕರೋಕ್ 2020ರ ಮೊದಲ ಭಾಗದಲ್ಲಿ ಬಿಡುಗಡೆಯಾದರೆ, ಕಾಮಿಕ್ 2021ರ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿದೆ. ಈ ಎಸ್‍ಯುವಿಗಳು ಸ್ಕೋಡಾ ಇಂಡಿಯಾದ 2.0 ಯೋಜನೆಯ ಭಾಗಗಳಾಗಿವೆ.

ಸ್ಕೋಡಾ ಆಟೋ ಇಂಡಿಯಾದ ಸೇಲ್ಸ್, ಸರ್ವಿಸ್ ಹಾಗೂ ಮಾರ್ಕೆಟಿಂಗ್ ವಿಭಾಗದ ಡೈರೆಕ್ಟರ್ ಜಾಕ್ ಹೋಲಿಸ್ ಈ ವಿಷಯವನ್ನು ಖಚಿತಪಡಿಸಿದ್ದಾರೆ. ರವಿ ಬಾಳಿಗಾ ಎಂಬುವವರ ಟ್ವೀಟ್‍ಗೆ ಪ್ರತಿಕ್ರಿಯೆ ನೀಡಿರುವ ಜಾಕ್ ಹೋಲಿಸ್ ಹೊಸ ಎಸ್‍ಯುವಿಗಳ ಬಿಡುಗಡೆಯ ಬಗೆಗಿನ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶನಗೊಂಡ ನಂತರ ಕರೋಕ್ ಎಸ್‍ಯುವಿಯನ್ನು 2020ರ ಎರಡನೇ ಭಾಗದಲ್ಲಿ ಬಿಡುಗಡೆಗೊಳಿಸಲಾಗುವುದೆಂದು ನಿರೀಕ್ಷಿಸಲಾಗಿತ್ತು.

ಸ್ಕೋಡಾ ಕರೋಕ್, ಹಿಂದಿನ ತಲೆಮಾರಿನ ಸ್ಕೋಡಾ ಕೊಡಿಯಾಕ್ ಕಾರಿನಲ್ಲಿರುವ ಎಂಕ್ಯೂಬಿ ಎ0 ಪ್ಲಾಟ್‍ಫಾರಂ ವಿನ್ಯಾಸವನ್ನು ಹೊಂದಿರಲಿದೆ. ಟ್ವೀಟ್‍ನಲ್ಲಿ ಬಹಿರಂಗಪಡಿಸಿರುವಂತೆ ಕಾಮಿಕ್ ಮಧ್ಯಮ ಗಾತ್ರದ ಎಸ್‍ಯುವಿಯಾಗಿರಲಿದೆ.

ಸ್ಕೋಡಾ ಕಂಪನಿಯು ಭಾರತಕ್ಕಾಗಿ 2.0 ಯೋಜನೆಯನ್ನು ಕೈಗೆತ್ತಿಕೊಂಡಿದ್ದು, ಹೊಸ ಹೊಸ ತಂತ್ರಗಳೊಂದಿಗೆ ಹಲವಾರು ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಸ್ಕೋಡಾ ಕರೋಕ್, ಸ್ಕೋಡಾ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಪ್ರೀಮಿಯಂ ಎಸ್‍ಯುವಿಯಾಗಿದೆ.

ಕರೋಕ್ ಕಂಪನಿಯ ಪ್ರಮುಖ ಎಸ್‍ಯುವಿಯಾದ ಕೊಡಿಯಾಕ್‍ಗಿಂತ ಕೆಳಗಿನ ಸರಣಿಯಲ್ಲಿರಲಿರುವ ಸಾಧ್ಯತೆಗಳಿವೆ. 1.5 ಲೀಟರಿನ ಟರ್ಬೋಚಾರ್ಜ್ಡ್ ಪೆಟ್ರೋಲ್ ಹಾಗೂ 2.0 ಲೀಟರಿನ ಡೀಸೆಲ್ ಎಂಜಿನ್ ಆಯ್ಕೆಗಳಿರಲಿವೆ. 1.6 ಡೀಸೆಲ್ ಎಂಜಿನ್‍ನಲ್ಲಿ ಡಿಎಸ್‍ಜಿ ಗೇರ್‌ಬಾಕ್ಸ್ ಅಳವಡಿಸಿ, ಹೆಚ್ಚುವರಿ ಆಯ್ಕೆಯಾಗಿ ನೀಡಲಾಗುವುದು.

ಸ್ಕೋಡಾ ಕರೋಕ್ ಮುಂದಿನ ವರ್ಷ ಬಿಡುಗಡೆಯಾದ ನಂತರ ಜೀಪ್ ಕಂಪನಿಯ ಕಂಪಾಸ್‌ಗೆ ಪೈಪೋಟಿ ನೀಡಲಿದೆ. ಸ್ಕೋಡಾ ಕಾಮಿಕ್ ಕಾಂಪ್ಯಾಕ್ಟ್ ಎಸ್‍ಯುವಿಯಾಗಿದೆ. ಅದು ಸಹ ಎಂಕ್ಯೂಬಿ ಎ0 ಪ್ಲಾಟ್‌ಫಾರಂನ ಮೇಲೆ ನಿರ್ಮಾಣವಾಗಿದೆ.

ಕಾಮಿಕ್ ಎಸ್‍ಯುವಿಯಲ್ಲಿರುವ ಬಿಡಿಭಾಗಗಳನ್ನು ಫೋಕ್ಸ್‌ವ್ಯಾಗನ್ ಸರಣಿಯ ಇತರ ವಾಹನಗಳೊಂದಿಗೆ ಹಂಚಿಕೊಳ್ಳಲಿದೆ. ಈ ಕಾಂಪ್ಯಾಕ್ಟ್ ಎಸ್‌ಯುವಿ ಈ ಸೆಗ್‍ಮೆಂಟಿನಲ್ಲಿರುವ ಎಸ್‍ಯುವಿಗಳಲ್ಲಿಯೇ ಹೆಚ್ಚಿನ ಫೀಚರ್‍ಗಳನ್ನು ಹೊಂದಿದೆ.
MOST READ: ಏರಿಕೆಯಾಗಲಿವೆ ಇನೋವಾ ಕ್ರಿಸ್ಟಾ ಹಾಗೂ ಫಾರ್ಚೂನರ್ ದರಗಳು

ಕಾಮಿಕ್ ಎಸ್‍ಯುವಿ ಬಿಡುಗಡೆಯಾದ ನಂತರ ಕಿಯಾ ಸೆಲ್ಟೋಸ್, ನಿಸ್ಸಾನ್ ಕಿಕ್ಸ್ ಹಾಗೂ ಹ್ಯುಂಡೈ ಕ್ರೆಟಾಗಳಿಗೆ ಪೈಪೋಟಿ ನೀಡಲಿದೆ. ಸ್ಕೋಡಾ ತನ್ನ ಎಸ್‍ಯುವಿಗಳಿಗೆ ಕೆ ಅಕ್ಷರದಿಂದ ಶುರುವಾಗುವ ಹೆಸರುಗಳನ್ನು ಇಟ್ಟಿದೆ. ಈ ಹೆಸರುಗಳನ್ನು ಕೆನಡಾ ಹಾಗೂ ಗ್ರೀನ್‌ಲ್ಯಾಂಡ್‍ನಲ್ಲಿರುವ ಜನರು ಮಾತನಾಡುವ ಭಾಷೆಯಿಂದ ಪಡೆಯಲಾಗಿದೆ.
MOST READ: ಭಾರತದಲ್ಲಿ ಐಕಾನಿಕ್ ಯಜ್ಡಿ ಬೈಕ್‌ಗಳ ಮರುಬಿಡುಗಡೆ ಪಕ್ಕಾ

ಸ್ಕೋಡಾ ಭಾರತದಲ್ಲಿ, ಇಂಡಿಯಾ 2.0 ಯೋಜನೆಯಿಂದಾಗಿ 2025ರಿಂದ ಪ್ರತಿ ವರ್ಷ ಒಂದು ಲಕ್ಷ ವಾಹನಗಳನ್ನು ಮಾರಾಟ ಮಾಡುವ ಗುರಿ ಹೊಂದಿದೆ. ಈ ಹಿಂದೆ, ಸ್ಕೋಡಾದ ಇಂಡಿಯಾ 2.0 ಯೋಜನೆಯು ಬಂಡವಾಳವನ್ನು ವಿಸ್ತರಿಸುವುದರ ಹೊರತಾಗಿ ಉತ್ಪಾದನೆಯನ್ನು ಸ್ಥಳೀಕರಿಸಲು ಯೋಜಿಸಲಾಗಿದೆ ಎಂದು ಜಾಕ್ ಹೋಲಿಸ್ ಹೇಳಿದ್ದರು. ಕರೋಕ್ ಹಾಗೂ ಕಾಮಿಕ್ ಬಿಡುಗಡೆಯಿಂದಾಗಿ ತನ್ನ ಯೋಜನೆಯಲ್ಲಿನ ತನ್ನ ಗುರಿಯನ್ನು ಸಾಧಿಸಲು ಸಹಾಯವಾಗಲಿದೆ.
MOST READ: ಹೊಸ ಎಲೆಕ್ಟ್ರಿಕ್ ಸ್ಕೂಟರ್‍ಗಳನ್ನು ಬಿಡುಗಡೆಗೊಳಿಸಿದ ಹೀರೋ ಎಲೆಕ್ಟ್ರಿಕ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದು, ಬಿಡುಗಡೆಯ ಮಾಹಿತಿಯನ್ನು ನೀಡುವುದು ನಿಜಕ್ಕೂ ಶ್ಲಾಘನೀಯ. ಸ್ಕೋಡಾ ಕರೋಕ್ ಹಾಗೂ ಕಾಮಿಕ್, ತೀವ್ರವಾದ ಸ್ಪರ್ಧೆಯನ್ನು ಹೊಂದಿರುವ ಸೆಗ್‍ಮೆಂಟಿಗೆ ಉತ್ತಮವಾದ ಕೊಡುಗೆಯಾಗಲಿದೆ. ಸ್ಕೋಡಾದ ಇಂಡಿಯಾ 2.0 ಯೋಜನೆಯೊಂದಿಗೆ ಕಂಪನಿಯು ಮುಂದಿನ ವರ್ಷಗಳಲ್ಲಿ ಹೆಚ್ಚಿನ ಪ್ರಮಾಣದ ವಾಹನಗಳನ್ನು ಬಿಡುಗಡೆಗೊಳಿಸಲಿದೆ.


Click it and Unblock the Notifications