ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಸ್ಕೋಡಾ ಭಾರತೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಆವೃತ್ತಿಯ ಕೊಡಿಯಾಕ್ ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಅಣಿಯಾಗಿದೆ. ಪೆಟ್ರೋಲ್ ಅವೃತ್ತಿಯ ಕೊಡಿಯಾಕ್ 2020ರಿಂದ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಿರಲಿದೆ. ಪೆಟ್ರೋಲ್ ಆವೃತ್ತಿಯ ಹೊರತಾಗಿ ಸ್ಕೋಡಾ ಆರ್ ಎಸ್ ವೆರಿಯಂಟ್ ಎಸ್‍ಯುವಿಯನ್ನು ಸಹ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ.

ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಝಿಗ್ ವ್ಹೀಲ್ಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸ್ಕೋಡಾ ಇಂಡಿಯಾದ ಸೇಲ್ಸ್, ಸರ್ವಿಸ್ ಮತ್ತು ಮಾರುಕಟ್ಟೆ ವಿಭಾಗದ ಡೈರೆಕ್ಟರ್ ಜಾಕ್ ಹೋಲಿಸ್ ರವರು ಕಂಪನಿಯು ಕೊಡಿಯಾಕ್ ಪೆಟ್ರೋಲ್ ಆವೃತ್ತಿಯನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿದ್ದು, 2020ರ ಸುಮಾರಿಗೆ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಂಭವವಿದೆ ಎಂದು ತಿಳಿಸಿದರು. ಸ್ಕೋಡಾ ಅಂತರರಾಷ್ಟ್ರಿಯ ಕೊಡಿಯಾಕ್ ಮಾದರಿಯು - 1.5 ಲೀಟರ್ ಮತ್ತು 2.0 ಲೀಟರ್ ಟಿಎಸ್ಐ ಯೂನಿಟ್‍ - ಎಂಬ 2 ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ದೊರೆಯಲಿದೆ.

ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಜೆಕ್ ಬ್ರಾಂಡ್ ನ ಕಂಪನಿ ಚಿಕ್ಕ ಗಾತ್ರದ 1.5 ಲೀಟರಿನ ಟಿಎಸ್ಐ ಯೂನಿಟನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಈ ಪೆಟ್ರೋಲ್ ಎಂಜಿನ್ 150 ಬಿಹೆಚ್‍ಪಿ ಮತ್ತು 250 ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, 6 ಸ್ಪೀಡಿನ ಮ್ಯಾನುವಲ್ ಅಥವಾ 7 ಸ್ಪೀಡಿನ ಡಿಎಸ್‍ಜಿ ಆಟೊಮ್ಯಾಟಿಕ್ ಗೇರ್ ಬಾಕ್ಸ್ ಗಳನ್ನು ಹೊಂದಿರಲಿದೆ.

ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಚಿಕ್ಕ ಗಾತ್ರದ ಎಂಜಿನ್ ಫ್ರಂಟ್ ವ್ಹೀಲ್ ಗಳಿಗೆ ಮಾತ್ರ ಪವರ್ ನೀಡಲಿದೆ. 2.0 ಲೀಟರಿನ ಇನ್ನೊಂದು ಟಿಎಸ್ಐ ಪೆಟ್ರೋಲ್ ಎಂಜಿನ್ 190 ಬಿಹೆಚ್‍ಪಿ ಮತ್ತು 320 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಡಿಎಸ್‍ಜಿ ಗೇರ್ ಬಾಕ್ಸ್ ಹೊಂದಿರಲಿದ್ದು, ಮ್ಯಾನುವಲ್ ಟ್ರಾನ್ಸ್ ಮಿಷನ್ ಹೊಂದಿರುವುದಿಲ್ಲ.

ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಈ ಮಾದರಿಯಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಂ ಸ್ಟಾಂಡರ್ಡ್ ಆವೃತ್ತಿಯಲ್ಲಿ ದೊರೆಯಲಿದೆ. ಸದ್ಯಕ್ಕೆ ಭಾರತದಲ್ಲಿ ಸ್ಕೋಡಾ ಕೊಡಿಯಾಕ್ ಮಾದರಿಯನ್ನು ಸಿಂಗಲ್ ಎಂಜಿನ್ ನಲ್ಲಿ ಮಾರಾಟ ಮಾಡಲಾಗುವುದು. ಇದು 2.0 ಲೀಟರ್ ಡೀಸೆಲ್ ಟಿಡಿಐ ಆಗಿರಲಿದ್ದು, 150 ಬಿಹೆಚ್‍ಪಿ ಮತ್ತು 340 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದು ಸ್ಟಾಂಡರ್ಡ್ 7 ಸ್ಪೀಡ್ ಡಿಎಸ್‍ಜಿ ಆಟೊ ಮ್ಯಾಟಿಕ್ ಟ್ರಾನ್ಸ್ ಮಿಷನ್ ಆಗಿದ್ದು, ಎಲ್ಲಾ 4 ವ್ಹೀಲ್ ಗಳಿಗೂ ಪವರ್ ಕಳುಹಿಸುವ ಎಡಬ್ಲ್ಯೂಡಿ ಹೊಂದಿದೆ.

ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಸ್ಕೋಡಾದ ಅಭಿಪ್ರಾಯದಲ್ಲಿ ಸ್ಕೋಡಾ ಪೆಟ್ರೋಲ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಎಂಟ್ರಿ ಲೆವೆಲ್ ನಲ್ಲಿ ಪರಿಚಯಿಸುವುದರಿಂದ ಎಸ್‍ಯುವಿ ಗಳ ಬೆಲೆಯು ಕಡಿಮೆಯಾಗುವ ಸಾಧ್ಯತೆಗಳಿವೆ. ಇದು ಭಾರತೀಯ ಮಾರುಕಟ್ಟೆಯಲ್ಲಿರುವ 7 ಸೀಟ್ ಗಳ ಸೆಗ್ ಮೆಂಟಿನಲ್ಲಿ ಪೈಪೋಟಿಯನ್ನು ಹೆಚ್ಚಿಸಲಿದೆ.

MUST READ: ಆಡಿ ಆರ್8ರ ಬದಲಿಗೆ ರಸ್ತೆಗಿಳಿಯಲಿರುವ ಆಲ್ ಎಲೆಕ್ಟ್ರಿಕ್ ಸೂಪರ್ ಕಾರು

ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಹೋಲಿಸ್ ರವರು ಹೇಳಿದಂತೆ ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಆವೃತ್ತಿಯ ಹೊರತಾಗಿ ಸ್ಪೋರ್ಟ್ ಮಾದರಿಯ ಕೊಡಿಯಾಕ್ ಆರ್‍ಎಸ್ ವೆರಿಯಂಟ್ ಅನ್ನು ಸಹ ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ. ಸ್ಕೋಡಾ ಕೊಡಿಯಾಕ್ ಆರ್‍ಎಸ್ 2.0 ಲೀಟರಿನ ಟ್ವಿನ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿರಲಿದ್ದು 236 ಬಿಹೆಚ್‍ಪಿ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 7 ಸ್ಪೀಡಿನ ಡಿಎಸ್‍ಜಿ ಗೇರ್ ಬಾಕ್ಸ್ ಹೊಂದಿದೆ. ಸ್ಕೋಡಾ ಕೊಡಿಯಾಕ್ ಆರ್‍ಎಸ್ ಮಾದರಿಯನ್ನು ಕಳೆದ ವರ್ಷ ಅನಾವರಣಗೊಳಿಸಲಾಗಿತ್ತು.

ಸ್ಕೋಡಾ ಕೊಡಿಯಾಕ್ ಪೆಟ್ರೋಲ್ ಕಾರಿನ ಮಾಹಿತಿ ಬಹಿರಂಗ

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಸ್ಕೋಡಾ ಕೊಡಿಯಾಕ್ ಸದ್ಯಕ್ಕೆ ಡೀಸೆಲ್ ಆವೃತ್ತಿಯಲ್ಲಿ ಮಾತ್ರ ದೊರೆಯುತ್ತಿದ್ದು, ಭಾರತದಲ್ಲಿನ ಎಕ್ಸ್ ಶೋ ರೂಂ ದರದಂತೆ ಆರಂಭಿಕ ಬೆಲೆಯನ್ನು ರೂ.34.49 ಲಕ್ಷಗಳಿಂದ ನಿಗದಿಗೊಳಿಸಲಾಗಿದೆ. ಸ್ಕೋಡಾ ಕಂಪನಿಯ ಅನಿಸಿಕೆ ಪ್ರಕಾರ ಕೊಡಿಯಾಕ್ ನ ಪೆಟ್ರೋಲ್ ಆವೃತ್ತಿಯ ಬಿಡುಗಡೆಯಿಂದ ಎಸ್‍ಯುವಿ ಗಳ ಬೆಲೆ ಕಡಿಮೆಯಾಗುವ ಸಾಧ್ಯತೆಗಳಿದ್ದು, ಈ ಸೆಗ್ ಮೆಂಟಿನಲ್ಲಿ ಸ್ಪರ್ಧಾತ್ಮಕ ವಾಗುವ ಸಂಭವಗಳಿವೆ. ಸ್ಕೋಡಾ ಕೊಡಿಯಾಕ್ ದೇಶಿಯ ಮಾರುಕಟ್ಟೆಯಲ್ಲಿರುವ ಟೊಯೊಟಾ ಫಾರ್ಚುನರ್, ಫೋರ್ಡ್ ಎಂಡಿವರ್ ಮತ್ತು ಮಹೀಂದ್ರಾ ಅಲ್ಟುರಸ್ ಜಿ4 ವಾಹನಗಳಿಗೆ ಪ್ರತಿಸ್ಪರ್ಧಿಯಾಗುವ ಸಾಧ್ಯತೆಗಳಿವೆ.

More from DriveSpark

Article Published On: Thursday, April 25, 2019, 14:58 [IST]
English summary
Skoda Kodiaq Petrol Launch Details Revealed — Might Bring In The Kodiaq RS As Well - Read in Kannada
Read more on ಸ್ಕೋಡಾ skoda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+