ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಜಗತ್ತಿನಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬಳಕೆಯನ್ನು ಪರಿಣಾಮಕಾರಿ ತಗ್ಗಿಸುವ ಉದ್ದೇಶ ಬಹುತೇಕ ರಾಷ್ಟ್ರಗಳು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ವಾಹನ ಉತ್ಪಾದನಾ ಸಂಸ್ಥೆಗಳು ಮಾಲಿನ್ಯವನ್ನು ತಗ್ಗಿಸುವ ಉದ್ದೇಶದಿಂದ ಎರಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನ ಉತ್ಪಾದನೆಯತ್ತ ಹೆಚ್ಚು ಗಮನಹರಿಸುತ್ತಿವೆ. ಇವುಗಳಲ್ಲಿ ಲೈಟ್ಇಯರ್ ಎನ್ನುವ ಕಾರು ಉತ್ಪಾದನಾ ಸಂಸ್ಥೆಯು ಸಹ ವಿನೂತನ ಮಾದರಿಯ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಸಿದ್ದಗೊಳಿಸಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

2030ರ ಹೊತ್ತಿಗೆ ವಿಶ್ವಾದ್ಯಂತ ಶೇ.100 ರಷ್ಟು ಎಲೆಕ್ಟ್ರಿಕ್ ವಾಹನಗಳನ್ನು ರಸ್ತೆಗಿಳಿಸುವ ಉದ್ದೇಶದಿಂದ ಆಟೋ ಉತ್ಪಾದನಾ ಸಂಸ್ಥೆಗಳು ಅತಿ ಹೆಚ್ಚು ಮೈಲೇಜ್ ಪ್ರೇರಣೆಯ ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದನೆ ಮಾಡಿ ಮಾರಾಟಕ್ಕೆ ಸಿದ್ದವಾಗುತ್ತಿದ್ದು, ಇನ್ನು ಕೆಲವು ವಾಹನ ಉತ್ಪಾದನಾ ಸಂಸ್ಥೆಗಳು ಈಗಾಗಲೇ ಇವಿ ವಾಹನಗಳನ್ನು ಮಾರಾಟ ಮಾಡುತ್ತಿವೆ.

ಆದ್ರೆ ಬಹುತೇಕ ಎಲೆಕ್ಟ್ರಿಕ್ ವಾಹನ ಖರೀದಿದಾರರು ಸದ್ಯ ಹೆಚ್ಚು ಮೈಲೇಜ್ ನೀಡಬಲ್ಲ ಇವಿ ವಾಹನಗಳ ಖರೀದಿಗೆ ಎದುರು ನೋಡುತ್ತಿದ್ದು, ನೆದರ್‌ಲ್ಯಾಂಡ್ ಮೂಲದ ಲೈಟ್ಇಯರ್ ಎನ್ನುವ ಸ್ಟಾರ್ಟ್ಅಪ್ ಸಂಸ್ಥೆಯೊಂದು ವಿನೂತನ ವಿನ್ಯಾಸದೊಂದಿಗೆ ಅತಿಹೆಚ್ಚು ಮೈಲೇಜ್ ಇವಿ ಕಾರನ್ನು ಸಿದ್ದಪಡಿಸಿದೆ.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಆಟೋ ಉದ್ಯಮಕ್ಕೆ ಇದೇ ಮೊಲದ ಬಾರಿ ಕಾಲಿಡುತ್ತಿರುವ ಲೈಟ್ಇಯರ್ ಸಂಸ್ಥೆಯು ಎಲೆಕ್ಟ್ರಿಕ್ ಕಾರುಗಳ ನಿರ್ಮಾಣದ ಮೇಲೆ ವಿಶೇಷ ಆಸಕ್ತಿ ತೊರುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಅತಿ ಹೆಚ್ಚು ಮೈಲೇಜ್ ನೀಡಬಲ್ಲ ಲೈಟ್ಇಯರ್ ಓನ್ ಎನ್ನುವ ಪೋಟೋಟೈಪ್ ಕಾರು ಮಾದರಿಯನ್ನು ಅಭಿವೃದ್ದಿಗೊಳಿಸಿ ಪ್ರದರ್ಶನ ಮಾಡಿದೆ.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಈ ಕಾರಿನ ಮತ್ತೊಂದು ವಿಶೇಷ ಅಂದ್ರೆ, ಇದು ಸಂಪೂರ್ಣ ಸೋಲಾರ್ ಪವರ್ ಪ್ರೇರಣೆಯೊಂದಿಗೆ ಚಲಿಸುವ ಎಲೆಕ್ಟ್ರಿಕ್ ಕಾರು ಮಾದರಿಯಾಗಿದ್ದು, ಪೂರ್ತಿಯಾಗಿ ಒಂದು ಬಾರಿ ಚಾರ್ಜ್ ಆದರಲ್ಲಿ ಬರೋಬ್ಬರಿ 725 ಕಿ.ಮಿ ಮೈಲೇಜ್ ಹಿಂದಿರುಗಿಸುವುದು ಗುಣವೈಶಿಷ್ಟ್ಯತೆ ಹೊಂದಿರವುದು ಎಲೆಕ್ಟ್ರಿಕ್ ಕಾರುಗಳ ಮಾರಾಟದಲ್ಲಿ ಹೊಸ ಸಂಚಲನ ಸೃಷ್ಠಿಸುವ ತವಕದಲ್ಲಿದೆ.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಸೋಲಾರ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಲೈಟ್ಇಯರ್ ಓನ್ ಕಾರಿನ ರೂಫ್ ಟಾಪ್ ಸಂಪೂರ್ಣವಾಗಿ ಸೋಲಾರ್ ಪ್ಯಾನೆಲ್‌ನಿಂದಲೇ ಆವೃತ್ತವಾಗಿದ್ದು, ಅತಿ ಕಡಿಮೆ ಪ್ರಮಾಣದ ಬಿಸಿಲಿನ ವಾತಾವರಣದಲ್ಲೂ ಚಾರ್ಜ್ ಆಗುವ ಗುಣವೈಶಿಷ್ಟ್ಯತೆ ಈ ಕಾರಿಗಿದೆ. ಹಾಗೆಯೇ ಈ ಕಾರಿನಲ್ಲಿ ಹೆಚ್ಚುವರಿ ಚಾರ್ಜಿಂಗ್ ಮಾಡಿಕೊಳ್ಳಲು ಸಹ ಅವಕಾಶವಿದ್ದು, ನಗರಪ್ರದೇಶಗಳಲ್ಲಿ ಓಡಾಟಕ್ಕಾಗಿ ಸೋಲಾರ್ ಪವರ್ ಮತ್ತು ಲಾಂಗ್ ಡ್ರೈವ್ ಪ್ರಯಾಣಕ್ಕಾಗಿ ಚಾರ್ಜಿಂಗ್ ಪಾಯಿಂಟ್ ಬಳಕೆಯಾಗಲಿದೆ.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಲೈಟ್ಇಯರ್ ಸಂಸ್ಥೆಯ ಮಾಹಿತಿ ಪ್ರಕಾರ, ಸೋಲಾರ್ ಪವರ್‌‌ನಿಂದ ಲೈಟ್ಇಯರ್ ಓನ್ ಕಾರನ್ನು ಒಂದು ಗಂಟೆ ಬಿಸಿಲಿನಲ್ಲಿ ಚಾರ್ಜ್ ಮಾಡಿದ್ದಲ್ಲಿ ಸರಾಸರಿಯಾಗಿ 12 ಕಿ.ಮಿ ಮೈಲೇಜ್ ಹಿಂದಿರುಗಿಸಲಿದ್ದು, ಹೆಚ್ಚುವರಿ ಟಾರ್ಜ್ ಮಾಡದೇ ಕೇವಲ ಸೋಲಾರ್ ಪವರ್ ಮೂಲಕವೇ ಕಾರು ಚಾಲನೆ ಮಾಡಬೇಕಿದ್ದಲ್ಲಿ ದಿನ 12 ಗಂಟೆಗಳಲ್ಲಿ 144 ಕಿ.ಮಿ ಮೈಲೇಜ್ ನೀಡಬಲ್ಲದು.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಹೀಗಾಗಿ ನಗರಪ್ರದೇಶದೊಳಗೆ ದಿನಬಳಕೆಗಾಗಿ ಎಲೆಕ್ಟ್ರಿಕ್ ಕಾರು ಖರೀದಿಸುವ ಇದು ಸೂಕ್ತ ಆಯ್ಕೆಯಾಗಿದ್ದು, ಸೋಲಾರ್ ಶಕ್ತಿಯ ಮೂಲಕ ದಿನಂಪ್ರತಿ 144ಕಿ.ಮಿ ಮೈಲೇಜ್ ಪಡೆದುಕೊಳ್ಳಬಹುದಾಗಿದೆ. ಒಂದು ವೇಳೆ ದೂರದ ಪ್ರಯಾಣದ ಅವಶ್ಯಕತೆಯಿದ್ದಲ್ಲಿ ಚಾರ್ಜಿಂಗ್ ಪಾಯಿಂಟ್ ಮೂಲಕ ಚಾರ್ಜ್ ಮಾಡಿ ಗರಿಷ್ಠ ಮಟ್ಟದ 725 ಕಿ.ಮಿ ಪ್ರಯಾಣ ಮಾಡಬಹುದು.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ನೀವು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದ್ದಲ್ಲಿ ಅದು ಕೊನೆಯಾಗುವ ಕೆಲವು ದಿನಗಳೇ ಬೇಕಿದ್ದು, ಸೋಲಾರ್ ಪವರ್ ಮೂಲಕ ಬ್ಯಾಟರಿಗೆ ಶಕ್ತಿ ಹಿಂದಿರುಗಿಸುತ್ತಲೇ ಇರುತ್ತದೆ. ಇದರಿಂದ ಇದು ಇತರೆ ಎಲೆಕ್ಟ್ರಿಕ್ ಕಾರುಗಳಿಂತೂ ವಿಭಿನ್ನವಾಗಿದ್ದು, ಮುಂದೊಂದು ದಿನ ವಿಶ್ವಾದ್ಯಂತ ಈ ಕಾರಿಗೆ ಅತಿ ಹೆಚ್ಚು ಬೇಡಿಕೆ ಸೃಷ್ಠಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಸದ್ಯ ವಿಶ್ವ ಆಟೋ ಉದ್ಯಮದಲ್ಲಿ ಲೈಟ್ಇಯರ್ ಸೋಲಾರ್ ಪವರ್ ಎಲೆಕ್ಟ್ರಿಕ್ ಕಾರಿನ ಕುರಿತು ಹೊಸ ಹೊಸ ಚರ್ಚೆಗಳು ನಡೆಯುತ್ತಿದ್ದು, ಅತಿ ಹೆಚ್ಚು ಮೈಲೇಜ್‌ನೊಂದಿಗೆ ಅತ್ಯಾಧುನಿಕ ಸುರಕ್ಷಾ ಸೌಲಭ್ಯ ಹೊಂದಿರುವ ಲೈಟ್ಇಯರ್ ಓನ್ ಕಾರಿನ ಬೆಲೆಯು ಟೆಸ್ಲಾ ಕಾರಿಗಿಂತಲೂ ದುಬಾರಿಯಾಗಿರಲಿವೆಯೆಂತೆ.

MOST READ: ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಸಿಂಗಲ್ ಚಾರ್ಜ್‌ಗೆ ಬರೋಬ್ಬರಿ 725 ಕಿಮಿ ಮೈಲೇಜ್ ನೀಡುತ್ತೆ ಈ ಎಲೆಕ್ಟ್ರಿಕ್ ಕಾರು

ಲೈಟ್ಇಯರ್ ಸಂಸ್ಥೆಯು ಸದ್ಯ ಮೂರು ಸೋಲಾರ್ ಪವರ್ ಕಾರುಗಳ ಫೋಟ್‌ಟೈಪ್ ಆವೃತ್ತಿಗಳನ್ನು ಅಭಿವೃದ್ದಿಗೊಳಿಸಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳಿಗೆ ಚಾಲನೆ ನೀಡಿದ್ದು,2020ರ ಹೊತ್ತಿಗೆ ಬಿಡುಗಡೆಯಾಗಲಿರುವ ಈ ಕಾರು ಭಾರತೀಯ ಮಾರುಕಟ್ಟೆಯ ಬೆಲೆಗಳ ಪ್ರಕಾರ ರೂ. 90 ಲಕ್ಷದಿಂದ ರೂ.1.20 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
725 Kilometers On A Single Charge — Here's The Lightyear One.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X