ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಆಂಧ್ರಪ್ರದೇಶದಲ್ಲಿ ಭಾರೀ ಬಹುಮತದೊಂದಿಗೆ ಅಧಿಕಾರಕ್ಕೇರಿರುವ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಸದ್ಯ ಖಾಸಗಿ ಭದ್ರತೆ ವಿಚಾರವಾಗಿ ಭಾರೀ ಚರ್ಚೆಗೆ ಕಾರಣವಾಗಿದ್ದು, ನೂತನ ಮುಖ್ಯಮಂತ್ರಿಗೆ 4 ಕೋಟಿ ವೆಚ್ಚದಲ್ಲಿ ಗರಿಷ್ಠ ಭದ್ರತೆಗಾಗಿ ಬುಲೆಟ್ ಪ್ರೂಫ್ ಕಾರುಗಳನ್ನು ನೀಡಲಾಗಿದೆ.

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಜಗನ್ ಮೋಹನ್ ರೆಡ್ಡಿಯವರಿಗೆ ಕೆಲವು ಕಾರಣಾಂತರಗಳಿಂದ ಜೆಡ್ ಪ್ಲಸ್ ಸೆಕ್ಯೂರಿಟಿ ನೀಡಲಾಗಿದ್ದು, ಅಧಿಕೃತ ಓಡಾಟಕ್ಕಾಗಿ ಇದೀಗ ಬರೋಬ್ಬರಿ 4 ಕೋಟಿ ವೆಚ್ಚದಲ್ಲಿ 6 ಬುಲೆಟ್ ಕಾರುಗಳನ್ನು ನೀಡಲಾಗಿದೆ. ಜೆಡ್ ಪ್ಲಸ್ ಭದ್ರತಾ ಪಡೆಯಲ್ಲಿ ಒಟ್ಟು ಆರು ಬುಲೆಟ್ ಪ್ರೂಫ್ ಕಾರುಗಳಿದ್ದು, ಜಗನ್ ಮೋಹನ್ ರೆಡ್ಡಿ ಓಡಾಟಕ್ಕಾಗಿ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಬಳಕೆ ಮಾಡಿದ್ದಲ್ಲಿ ಸಿಎಂ ಕಾರಿಗೆ ಕಾವಲಿಗಾಗಿ 5 ಹೆಚ್ಚುವರಿ ಫಾರ್ಚೂನರ್ ಕಾರುಗಳ ಭದ್ರತೆ ಹೊಂದಿದೆ.

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಭದ್ರತಾ ಪಡೆಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ಟೊಯೊಟಾ ನಿರ್ಮಾಣದ ಫಾರ್ಚೂನರ್ ಮತ್ತು ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರುಗಳು ರಾಜಕಾರಣಿಗಳ ಆಯ್ಕೆಯಲ್ಲಿ ಅಗ್ರಸ್ಥಾನದಲ್ಲಿ ಖಾಸಗಿ ಭದ್ರತೆಗಾಗಿ ಈ ಕಾರುಗಳು ಸಾಕಷ್ಟು ಅನುಕೂಲಕರವಾಗಿವೆ.

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಹೀಗಾಗಿ ಜೆಡ್ ಪ್ಲಸ್ ಪಡೆಯಲ್ಲೂ ಟೊಯೊಟಾ ಫಾರ್ಚೂನರ್ ಮತ್ತು ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರುಗಳನ್ನೇ ಹೆಚ್ಚಾಗಿ ಬಳಕೆ ಮಾಡಲಾಗಿದ್ದು, ಇದೀಗ ನೂತನ ಸಿಎಂ ಜಗನ್ ಮೋಹನ್ ರೆಡ್ಡಿ ಸಹ ಗರಿಷ್ಠ ಭದ್ರತೆಯುಳ್ಳ ಲ್ಯಾಂಡ್ ಕ್ರೂಸರ್ ಪ್ರಾಡೋ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಸದ್ಯ ಮಾರುಕಟ್ಟೆಯಲ್ಲಿ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು 1.13 ಕೋಟಿ ಬೆಲೆ ಹೊಂದಿದ್ದು, ಸಿಎಂ ಭದ್ರತೆಗಾಗಿ ದುಬಾರಿ ವೆಚ್ಚದಲ್ಲಿ ಬುಲೆಟ್ ಪ್ರೂಫ್ ಮಾಡಿಫೈಗೊಳಿಸಲಾಗಿದೆ. ಇದರಿಂದ ಮಾಡಿಫೈಗೊಂಡಿರುವ ಕಾರು ಸುಮಾರು 1.50 ಕೋಟಿ ಬೆಲೆ ಹೊಂದಿದೆ ಎನ್ನಲಾಗಿದ್ದು, ಭದ್ರತಾ ಸಿಬ್ಬಂದಿ ಇರುವ ಇನ್ನುಳಿದ 5 ಕಾರುಗಳು ಸಹ ಬುಲೆಟ್ ಪ್ರೂಫ್ ಸೌಲಭ್ಯದೊಂದಿಗೆ ಮಾಡಿಫೈಗೊಳಿಸಲಾಗಿದೆ.

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಜೆಡ್ ಪ್ಲಸ್ ಭದ್ರತೆಯಲ್ಲಿ ಲ್ಯಾಂಡ್ ಕ್ರೂಸರ್ ಪ್ರಾಡೋ ಜೊತೆ 5 ಫಾರ್ಚೂನರ್ ಕಾರುಗಳಿದ್ದು, ಫಾರ್ಚೂನರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ರೂ.34 ಲಕ್ಷ ಬೆಲೆ ಹೊಂದಿದ್ದು, ಇವುಗಳು ಕೂಡಾ ಬುಲೆಟ್ ಪ್ರೂಫ್ ಸೌಲಭ್ಯ ಹೊಂದಿರುವುದರಿಂದ ಬೆಲೆಯಲ್ಲಿ ತುಸು ದುಬಾರಿ ಎನ್ನಿಸಲಿವೆ.

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಮಾಹಿತಿಗಳ ಪ್ರಕಾರ ಒಂದು ಫಾರ್ಚೂನರ್ ಬುಲೆಟ್ ಪ್ರೂಫ್ ಮಾದರಿಯ ಬೆಲೆ ರೂ. 50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದ್ದು, ಫಾರ್ಚೂನರ್ ಕಾರುಗಳ ಖರೀದಿಗಾಗಿಯೇ ಬರೋಬ್ಬರಿ ರೂ. 2.50 ಕೋಟಿ ಖರ್ಚು ಮಾಡಲಾಗಿದೆ.

ಇನ್ನುಳಿದಂತೆ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು ರೂ.1.50 ಕೋಟಿ ಬೆಲೆ ಹೊಂದಿದ್ದು, ಜೆಡ್ ಪ್ಲಸ್ ಭದ್ರತೆಯ ವಾಹನಗಳಿಗಾಗಿ ಒಟ್ಟು 4 ಕೋಟಿ ವೆಚ್ಚ ಮಾಡಲಾಗಿದೆ. ಇದಲ್ಲದೇ ಜೆಡ್ ಪ್ಲಸ್ ವಾಹನಗಳೊಂದಿಗೆ ಟೊಯೊಟಾ ಇನೋವಾ ಕ್ರಿಸ್ಟಾ, ಮಹೀಂದ್ರಾ ಟಿಯುವಿ300, ಟಾಟಾ ಸಫಾರಿ, ಮಹೀಂದ್ರಾ ಬೊಲೆರೊ, ಮಹೀಂದ್ರಾ ಸ್ಕಾರ್ಪಿಯೋ ಸಹ ಈ ಭದ್ರತಾ ಪಡೆಯಲ್ಲಿ ಕಾರ್ಯನಿರ್ವಹಿಸುತ್ತವೆ.

MOST READ:ನರೇಂದ್ರ ಮೋದಿಯವರ ನೆಚ್ಚಿನ ಆಯ್ಕೆ ರೇಂಜ್ ರೋವರ್ ವೊಗ್ ಸ್ಪೆಷಲ್ ಏನು?

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಇನ್ನು ಭದ್ರತಾ ಪಡೆಯ ಪ್ರಮುಖ ಆಕರ್ಷಣೆಯಾಗಿರುವ ಟೊಯೊಟಾ ಲ್ಯಾಂಡ್ ಕ್ರೂಸರ್ ಪ್ರಾಡೋ ಕಾರು ದುಬಾರಿ ಬೆಲೆಗೆ ತಕ್ಕಂತೆ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, 2,982-ಸಿಸಿ ಡೀಸೆಲ್ ಎಂಜಿನ್‌ನೊಂದಿಗೆ 173-ಬಿಹೆಚ್‌ಪಿ ಮತ್ತು 410-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಜೊತೆಗೆ ಪ್ರಯಾಣಿಕರ ಸುರಕ್ಷತೆಗೂ ಈ ಕಾರಿನಲ್ಲಿ ಹೆಚ್ಚಿನ ಒತ್ತು ನೀಡಲಾಗಿದ್ದು, ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ 7 ಏರ್‌ಬ್ಯಾಗ್‌ಗಳು, ಎಬಿಎಸ್ ಜೊತೆ ಇಬಿಡಿ, ವೆಹಿಕಲ್ ಸ್ಟ್ಯಾಬಿಲಿಟಿ ಕಂಟ್ರೋಲ್, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ತ್ರಿ ಜೋನ್ ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಕ್ರೂಸ್ ಕಂಟ್ರೊಲ್, 360 ಡ್ರಿಗಿ ವ್ಯೂವ್ ಕ್ಯಾಮೆರಾ, ಪ್ರತಿ ಸೀಟುಗಳ ಮುಂಭಾಗದಲ್ಲೂ ಟಚ್ ಸ್ಕೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂನೊಂದಿಗೆ ಹೋಂದಾಣಿಕೆ ಮಾಡಿಕೊಳ್ಳಬಹುದಾದ ಸ್ಟೀರಿಂಗ್ ಮೌಂಟೆಡ್ ಜೋಡಣೆ ಹೊಂದಿದೆ.

MOST READ:ರೂ. 56 ಟೋಲ್ ಸುಂಕ ಕಟ್ಟದೆ ಸಿಬ್ಬಂದಿ ಮೇಲೆ ದರ್ಪ ತೋರಿದ ಸಚಿವರ ಪತ್ನಿ..!

ಆಂಧ್ರ ನೂತನ ಸಿಎಂ ಜಗನ್ ಭದ್ರತೆಗಾಗಿ 4 ಕೋಟಿ ವೆಚ್ಚದ ಬುಲೆಟ್ ಪ್ರೂಫ್ ಕಾರ್

ಹಾಗೆಯೇ ಫಾರ್ಚೂನರ್ ಕಾರು ಸಹ ಬಲಿಷ್ಠ ಎಸ್‌ಯುವಿಗಳಲ್ಲಿ ಒಂದಾಗಿದ್ದು, ಇದು ಕೂಡಾ ಆಲ್ ವೀಲ್ಹ್ ಡ್ರೈವ್ ಟೆಕ್ನಾಲಜಿಯೊಂದಿಗೆ 2.8-ಲೀಟರ್ ಟರ್ಬೋ ಡೀಸೆಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ವೈಶಿಷ್ಟ್ಯತೆಗಳು ಈ ಕಾರಿನಲ್ಲಿವೆ.

Most Read Articles

Kannada
English summary
Ap cm ys jagan toyota fortuner vehicle convoy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X