ರೂ. 56 ಟೋಲ್ ಸುಂಕ ಕಟ್ಟದೆ ಸಿಬ್ಬಂದಿ ಮೇಲೆ ದರ್ಪ ತೋರಿದ ಸಚಿವರ ಪತ್ನಿ..!
ದೇಶಾದ್ಯಂತ ಟೋಲ್ ಪ್ಲಾಜಾಗಳಲ್ಲಿ ನಿಯಮದ ಪ್ರಕಾರ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮಂತ್ರಿ, ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ರಾಜ್ಯ ಸಚಿವರು, ಶಾಸಕರು ಮತ್ತು ತುರ್ತು ಸೇವೆ ವಾಹನಗಳಿಗೆ ಸುಂಕ ವಿನಾಯ್ತಿ ನೀಡಲಾಗಿದೆ. ಆದ್ರೆ ಟೋಲ್‌ಗಳಲ್ಲಿ ಬಹುತೇಕ ರಾಜಕಾರಣಿಗಳ ಸಂಬಂಧಿಕರು ಮತ್ತು ರೋಲ್ ಕಾಲ್ ಸಂಘಟನೆಗಳು ಸಹ ಟೋಲ್ ನೀಡದೇ ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವ ಪ್ರಕರಣಗಳು ದಿನಂಪ್ರತಿ ನಡೆಯುತ್ತಲೇ ಇವೆ.

ಹೆದ್ದಾರಿ ಬಳಕೆಗೆ ಸುಂಕ ಪಾವತಿಸುವ ಸಂಬಂಧ ಈ ಹಿಂದೆ ಅನೇಕ ರಾಜಕೀಯ ಮುಖಂಡರು ಟೋಲ್ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿರುವ ಹಲವಾರು ಪ್ರಕರಣಗಳ ಬಗ್ಗೆ ನೀವು ಕೇಳಿದ್ದಿರಿ. ಇಲ್ಲೂ ಕೂಡಾ ಅಂತದ್ದೇ ಒಂದು ಘಟನೆ ನಡೆದಿದ್ದು, ಸಚಿವರ ಪತ್ನಿಯೊಬ್ಬರು ಟೋಲ್ ಕಟ್ಟದೆಯೇ ಸಿಬ್ಬಂದಿ ಮೇಲೆ ದರ್ಪ ತೋರಿರುವ ಘಟನೆ ನಡೆದಿದೆ.

ಸಚಿವರಿಗೆ ನೀಡಲಾದ ಟೋಲ್ ಸುಂಕ ವಿನಾಯ್ತಿಯನ್ನು ದುರುಪಯೋಗ ಪಡಿಸಿಕೊಳ್ಳಲು ಯತ್ನಿಸಿರುವ ಮಹಿಳೆಯು ಟೋಲ್ ಸಿಬ್ಬಂದಿ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೇ ಪತಿಯ ಪ್ರಭಾವದಿಂದ ಟೋಲ್ ಸಿಬ್ಬಂದಿ ಮೇಲೆ ಕ್ರಮಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.

ಆಂಧ್ರಪ್ರದೇಶದ ಮದ್ಗುಲಪಲ್ಲಿ ಟೋಲ್‌ನಲ್ಲಿ ಈ ಘಟನೆ ನಡೆದಿದ್ದು, ಹೈದ್ರಾಬಾದ್‌ನಿಂದ ಗುಂಟೂರಿನತ್ತ ತೆರಳುತ್ತಿದ್ದ ಖಾಸಗಿ ಬಳಕೆಯ ಟೊಯೊಟಾ ಫಾರ್ಚೂನರ್ ಕಾರನ್ನು ತಡೆದ ಟೋಲ್ ಸಿಬ್ಬಂದಿಯು ರೂ.56 ಸುಂಕ ಪಾವತಿಸುವಂತೆ ಸೂಚಿಸಿದ್ದಾರೆ.

ಆದ್ರೆ ಆಂಧ್ರ ಕ್ಯಾಬಿನೆಟ್ ಸಚಿವ ಪ್ರತಿಪತಿ ಪುಲ್ಲರಾವ್ ಅವರ ಪತ್ನಿ ವೆಂಕಟಕುಮಾರಿ ಮಾತ್ರ ಇದಕ್ಕೆ ಒಪ್ಪದೆ ತನ್ನ ಪತಿ ಓರ್ವ ಪ್ರಭಾವಿ ಸಚಿವರಾಗಿದ್ದು, ಟೋಲ್ ಸುಂಕವು ತಮಗೆ ಅನ್ವಯವಾಗುವುದಿಲ್ಲ ಎಂದು ವಾಗ್ವಾದ ಮಾಡಿದ್ದಾರೆ. ಆದ್ರೆ ಈ ಬಗ್ಗೆ ಪೂರ್ಣ ಮಾಹಿತಿ ನೀಡಿದ ಸಿಬ್ಬಂದಿಯು ಸಚಿವರಿಗೆ ಮಾತ್ರ ಅದು ಅನ್ವಯಸುತ್ತೆ ಹೊರತು ಅವರ ಸಂಬಂಧಿಕರು ಮತ್ತು ಆಪ್ತರ ಕಾರುಗಳಿಗೆ ಅಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ಈ ವೇಳೆ ಸಚಿವ ಪತ್ನಿಯ ವಾಗ್ವಾದಕ್ಕೆ ಜಗ್ಗದ ಟೋಲ್ ಸಿಬ್ಬಂದಿಯು ಸಚಿವ ಪತ್ನಿಯಿಂದ ಹೆದ್ದಾರಿ ಸುಂಕವನ್ನು ವಸೂಲಿ ಮಾಡಿದ್ದು, ತಮ್ಮ ಪತಿಯ ಪ್ರಭಾವದಿಂದ ಟೋಲ್ ಕೇಳಿದ ಸಿಬ್ಬಂದಿ ವಿರುದ್ಧ ಕ್ರಮ ಜರಗಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಟೋಲ್ ಕಟ್ಟದೆ ಸಿಬ್ಬಂದಿ ಜೊತೆ ವಾಗ್ವಾದ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರ ಪತ್ನಿಯ ನಡೆಯ ಬಗ್ಗೆ ಬಹುತೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಟೋಲ್‌ನಲ್ಲಿ ಸಚಿವರು ಮತ್ತು ಶಾಸಕರಿಗೆ ಶುಲ್ಕ ವಿನಾಯ್ತಿಯನ್ನು ನೀಡುವಾಗ ಆ ಕಾರಿನಲ್ಲಿ ಸ್ವತಃ ಶಾಸಕರು ಮತ್ತು ಸಚಿವರು ಇದ್ದಲ್ಲಿ ಮಾತ್ರವೇ ಸುಂಕ ವಿನಾಯ್ತಿ ನೀಡಬೇಕು ಎಂಬ ನಿಯಮವಿದೆ. ಆದ್ರೆ ಇದೆಲ್ಲಾ ಗೊತ್ತಿದ್ದರೂ ಸಚಿವ ಪಿ. ಪುಲ್ಲ ರಾವ್ ಅವರ ಪತ್ನಿ ಮಾತ್ರ ಟೋಲ್ ಕೇಳಿದ ಸಿಬ್ಬಂದಿ ವಿರುದ್ದ ದರ್ಪ ತೋರಿದ್ದಾರೆ.
MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಸದ್ಯ ಈ ಪ್ರಕರಣದ ಸಂಬಂಧ ಯಾವುದೇ ರೀತಿಯ ಪ್ರಕರಣಗಳು ದಾಖಲಾಗಿಲ್ಲವಾದರೂ ರಾಜಕೀಯ ವ್ಯಕ್ತಿಗಳ ಪ್ರಭಾವದಿಂದಾಗಿ ಬಹುತೇಕ ಟೋಲ್ ಪ್ಲಾಜ್ ಮಾಲೀಕರು ಇಂತಹ ಪ್ರಕರಣಗಳಲ್ಲಿ ಮೌನ ವಹಿಸುತ್ತಾರೆ. ಆದ್ರೆ ಟೋಲ್ ಕೇಳುವ ಸಿಬ್ಬಂದಿ ಮಾತ್ರ ಹಲ್ಲೆಗೊಳಗಾಗುತ್ತಿರುವುದು ಮಾತ್ರ ವಿಪರ್ಯಾಸ.
MOST READ: 78 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಿಕ್ಕಿಬಿದ್ದ ಕಾರು ಮಾಲೀಕನ ಕಥೆ ಹರೋಹರ

ಇದು ಕೇವಲ ಒಂದು ಭಾಗದ ಕತೆಯಲ್ಲ. ದೇಶಾದ್ಯಂತ ಬಹುತೇಕ ಟೋಲ್ ಪ್ಲಾಜಾಗಳಲ್ಲಿ ದಿನಂಪ್ರತಿ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಹೆದ್ದಾರಿ ಬಳಕೆಗೆ ಶುಲ್ಕ ಪಾವತಿಸದೇ ತಮ್ಮ ಪ್ರಭಾವ ತೋರಲು ಮುಂದಾಗುವ ರಾಜಕೀಯ ಪುಡಾರಿಗಳು ಮತ್ತು ರೋಲ್‌ಕಾಲ್ ಸಂಘಟನೆಗಳೇ ಈ ತರಹದ ಪ್ರಕರಣಗಳಲ್ಲಿ ಹೆಚ್ಚಾಗಿ ಭಾಗಿಯಾಗುತ್ತಿದ್ದರೂ ಇವರ ಮೇಲೆ ಕ್ರಮಕೈಗೊಳ್ಳುವುದು ತುಂಬಾ ವಿರಳ.


Click it and Unblock the Notifications








