ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ತಮ್ಮ ಸ್ಥಾನಮಾನಗಳ ಬಗ್ಗೆ ಹೇಳಿಕೊಳ್ಳುವುದೆಂದರೆ ಭಾರತೀಯರಿಗೆ ಎಲ್ಲಿಲ್ಲದ ಹೆಮ್ಮೆ. ಬಹುತೇಕ ಮಂದಿ ತಮ್ಮ ಸ್ಥಾನಮಾನವನ್ನು ತಮ್ಮ ವಾಹನಗಳಲ್ಲಿ ಸ್ಟಿಕ್ಕರ್‍‍ಗಳನ್ನು ಅಂಟಿಸಿಕೊಳ್ಳುವ ಮೂಲಕ ತೋರಿಸಿ ಕೊಳ್ಳುತ್ತಾರೆ. ಹಲವರು ತಮ್ಮ ಸರ್‍‍ನೇಮ್‍‍ಗಳನ್ನು, ಜಾತಿಗಳನ್ನು ಹಾಗೂ ಇನ್ನಿತರ ಸಂಗತಿಗಳನ್ನು ವಾಹನಗಳ ಮೇಲೆ ಬರೆಸಿಕೊಳ್ಳುತ್ತಾರೆ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಇನ್ನೂ ಕೆಲವರು ತಮ್ಮ ಕುಟುಂಬಗಳ ಹೆಸರನ್ನು ಕಾರಿನ ಮೇಲೆ ಬರೆಸಿಕೊಳ್ಳುತ್ತಾರೆ. ಅನೇಕ ಕಾರು ಮಾಲೀಕರು ವಾಹನದ ವಿಂಡ್‌ಶೀಲ್ಡ್ ಹಾಗೂ ನಂಬರ್‌ ಪ್ಲೇಟ್‌ಗಳಲ್ಲಿ ತಮ್ಮ ಪೋಸ್ಟ್‌ಗಳನ್ನು ಹಾಕುತ್ತಾರೆ. ನಂಬರ್ ಪ್ಲೇಟ್‌ನಲ್ಲಿ ಇಂತಹ ವಿಷಯಗಳನ್ನು ಬರೆಯುವುದು ಕಾನೂನುಬಾಹಿರವಾಗಿದೆ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಆದರೂ ಸಾರ್ವಜನಿಕವಾಗಿ ತಮ್ಮ ಸ್ಥಾನಮಾನವನ್ನು ತೋರಿಸಲು ಅನೇಕ ಜನರು ವಿಂಡ್‌ಶೀಲ್ಡ್ ಗಳನ್ನು ಬಳಸುತ್ತಾರೆ. ದೆಹಲಿಯ ಬಿಜೆಪಿ ಶಾಸಕ ಮಂಜಿಂದರ್ ಸಿಂಗ್ ಸಿರ್ಸಾ ಇತ್ತೀಚೆಗೆ ಟ್ವಿಟರ್‍‍ನಲ್ಲಿ ಚಿತ್ರವೊಂದನ್ನು ಶೇರ್ ಮಾಡಿದ್ದರು. ಆ ಚಿತ್ರದಲ್ಲಿರುವ ರೆನಾಲ್ಟ್ ಡಸ್ಟರ್ ಕಾರಿನ ಹಿಂಬದಿಯ ವಿಂಡ್ ಷೀಲ್ಡ್ ನಲ್ಲಿ ದಪ್ಪ ಅಕ್ಷರಗಳಲ್ಲಿ ಬರೆದ ಸನ್ ಆಫ್ ಎಂ‍ಎಲ್‍ಎ ಎಂದು ಬರೆಯಲಾಗಿತ್ತು.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಶಾಸಕ ಸಿರ್ಸಾರವರು, ಈ ವಾಹನವು ದೆಹಲಿ ವಿಧಾನಸಭೆಯ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರಿಗೆ ಸೇರಿದ್ದು ಎಂದು ಆರೋಪಿಸಿದ್ದರು. ಸ್ಪೀಕರ್‍‍ರವರ ಮಗ ಈ ರೀತಿಯಾಗಿ ಬರೆಸಿಕೊಂಡಿದ್ದಾನೆ ಸೇರಿದ್ದು ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಸ್ಪೀಕರ್‍‍ರವರ ವಕೀಲರು ಸಿರ್ಸಾರವರಿಗೆ ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಈ ಕಾರು ನನ್ನ ಕಕ್ಷಿದಾರರಿಗೆ ಆಗಲೀ ಅಥವಾ ಅವರ ಮಗನಿಗೇ ಆಗಲಿ ಸೇರಿಲ್ಲ. ಸುಳ್ಳು ಹಾಗೂ ಮಾನಹಾನಿಯ ವರದಿಗಳು ನನ್ನ ಕಕ್ಷಿದಾರರ ಗೌರವವನ್ನು ಹಾಳು ಮಾಡಿವೆ ಎಂದು ನೋಟಿಸಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಈ ನೋಟಿಸ್ ತಲುಪಿದ 7 ದಿನಗಳಲ್ಲಿ ಲಿಖಿತ ಕ್ಷಮೆ ಕೇಳುವಂತೆ ನೋಟಿಸ್‍‍ನಲ್ಲಿ ತಿಳಿಸಲಾಗಿದೆ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಜನರು ತಮ್ಮ ವಾಹನಗಳ ಮೇಲೆ ಈ ರೀತಿಯಾಗಿ ಬರೆಸಿಕೊಳ್ಳುವುದು ನಮ್ಮ ದೇಶದಲ್ಲಿ ಸಾಮಾನ್ಯ ಸಂಗತಿಯಾಗಿದೆ. ಸರ್ಕಾರಿ ಕ್ಷೇತ್ರಗಳಲ್ಲಿರುವ ಹಲವರು ತಾವು ಹೊಂದಿರುವ ಉನ್ನತ ಹುದ್ದೆಗಳ ಬಗ್ಗೆ ಅಥವಾ ತಮ್ಮ ಉನ್ನತ ಅಧಿಕಾರದ ಬಗ್ಗೆ ತೋರಿಕೆಗಾಗಿ ಈ ರೀತಿಯಾಗಿ ಬರೆಸಿ ಕೊಳ್ಳುತ್ತಾರೆ. ತಮ್ಮ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಹೊಂದಿರುವ ಸ್ಥಾನವನ್ನು ಸಹ ಬಳಸುತ್ತಾರೆ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ರಸ್ತೆಗಳಲ್ಲಿ ಬೇರೆಯವರ ಮುಂದೆ ಪ್ರತಿಷ್ಠೆ ತೋರಿಸಲು ಈ ರೀತಿಯಾಗಿ ತಮ್ಮ ವಾಹನಗಳಲ್ಲಿ ಬರೆಸಿಕೊಳ್ಳುವುದುಂಟು. ಈ ಹಿಂದೆ, ಇಂತಹ ಸಂದೇಶಗಳನ್ನು ಪ್ರದರ್ಶಿಸಿದ ಕಾರಣ ಹಾಗೂ ನಕಲಿ ಪೋಸ್ಟ್‌ಗಳನ್ನು ಬಳಸಿದ ಕಾರಣ ಅನೇಕ ವಾಹನಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ರೀತಿಯ ವಾಹನಗಳು ಸರಿಯಾದ ದಾಖಲೆಗಳನ್ನು ಹೊಂದಿರುವುದಿಲ್ಲ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಟೋಲ್‌ಗಳಲ್ಲಿ ಹಣ ಪಾವತಿಸದೇ ಉಚಿತವಾಗಿ ಪ್ರಯಾಣಿಸಲು ಸಹ ಈ ರೀತಿಯಾಗಿ ಮಾಡುತ್ತಾರೆ. ಹಿಂದೆ ಈ ರೀತಿಯಾಗಿ ಮಾಡುವಾಗ ಅನೇಕ ಘಟನೆಗಳು ಹಿಂಸೆಗೆ ತಿರುಗಿವೆ. ಇತ್ತೀಚೆಗೆ, ಉತ್ತರ ಪ್ರದೇಶದ ನೋಯ್ಡಾ ಪೊಲೀಸರು ವಾಹನಗಳ ಮೇಲೆ ಸ್ಟಿಕ್ಕರ್‍‍ಗಳನ್ನು ಅಂಟಿಸಿಕೊಂಡಿರುವ ವಿವಿಧ ವಾಹನಗಳ ವಿರುದ್ಧ ಕಾರ್ಯಾಚರಣೆ ನಡೆಸಿದ್ದರು.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ವಾಹನದ ವಿಂಡ್‌ಶೀಲ್ಡ್ ಅಥವಾ ನಂಬರ್ ಪ್ಲೇಟ್‌ನಲ್ಲಿ ಪ್ರದರ್ಶಿಸಲಾದ ಸ್ಟಿಕ್ಕರ್‍‍ಗಳನ್ನು ತೆಗೆದು ಹಾಕಿದ್ದರು. ನಂಬರ್ ಪ್ಲೇಟ್‌ನಲ್ಲಿ ಯಾವುದೇ ರೀತಿಯ ಸ್ಟಿಕ್ಕರ್‍‍ಗಳನ್ನು, ಸಂದೇಶಗಳನ್ನು ಹೊಂದಿರುವುದು ಭಾರತದಲ್ಲಿ ಕಾನೂನುಬಾಹಿರವಾಗಿದೆ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಈ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಬಹುದು ಎಂಬುದನ್ನು ಗಮನಿಸಬೇಕು. ಆದರೆ, ವಿಂಡ್ ಷೀಲ್ಡ್ ನಲ್ಲಿ ಸಂದೇಶವನ್ನು ಬರೆಯುವ ಬಗ್ಗೆ ನಿಯಮಗಳು ಸ್ಪಷ್ಟವಾಗಿಲ್ಲ. ಖಾಸಗಿ ಕಾರುಗಳಲ್ಲಿ ಪೊಲೀಸ್ ಎಂಬ ಸ್ಟಿಕ್ಕರ್‍‍ಗಳನ್ನು ಅಳವಡಿಸಿಕೊಳ್ಳಲು ಅನುಮತಿ ಇಲ್ಲ. ಈ ರೀತಿಯಾಗಿ ಮಾಡಬಾರದೆಂದು ಪೊಲೀಸ್ ಇಲಾಖೆ ನಿರ್ದೇಶನ ನೀಡಿದೆ.

ಎಂ‍ಎಲ್‍ಎ ಮಗ ಎಂದು ಕಾರಿನ ಮೇಲೆ ಸ್ಟಿಕ್ಕರ್ ಅಂಟಿಸಿಕೊಂಡ ಭೂಪ

ಯಾವುದೇ ರೀತಿಯ ಸಂದೇಶಗಳನ್ನೇ ಆಗಲಿ, ಬರಹಗಳನ್ನೇ ಆಗಲಿ, ವಾಹನದ ಹಿಂಭಾಗದ ವಿಂಡ್‌ಶೀಲ್ಡ್ ದೊಡ್ಡ ಗಾತ್ರದ ಅಕ್ಷರಗಳಲ್ಲಿ ಬರೆಯುವುದರಿಂದ ವಾಹನದ ನೋಟಕ್ಕೆ ಅಡ್ಡಿಯುಂಟಾಗಿ ಅಪಘಾತಗಳಿಗೆ ಕಾರಣವಾಗುತ್ತದೆ. ಆದರೆ, ಸುರಕ್ಷತೆಗೆ ಗಮನ ನೀಡದ ಕೆಲವರು ಅದನ್ನು ಮುಂದುವರೆಸಿದ್ದಾರೆ.

More from DriveSpark

Article Published On: Saturday, July 20, 2019, 13:37 [IST]
English summary
Son of MLA sticker on Renault Duster causes Speaker to threaten legal action against MLA - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+