2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

2020ರ ಜನವರಿ 22ರಂದು ಟಾಟಾ ಬಹುನೀರಿಕ್ಷಿತ ಆಲ್‌ಟ್ರೊಜ್ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಮಾದರಿಯು ಅಧಿಕೃತವಾಗಿ ಬಿಡುಗಡೆಯಾಗಲಿದ್ದು, ಹೊಸ ಕಾರು ಫೆಬ್ರುವರಿ 5ರಿಂದ 12ರ ತನಕ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಗ್ರಾಹಕರ ಕೈಸೇರಲಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಟಾಟಾ ಸಂಸ್ಥೆಯು ಈಗಾಗಲೇ ಹೊಸ ಕಾರಿನ ಖರೀದಿಗಾಗಿ ರೂ.21 ಸಾವಿರ ಮುಂಗಡಗದೊಂದಿಗೆ ಅಧಿಕೃತವಾಗಿ ಬುಕ್ಕಿಂಗ್ ಆರಂಭಿಸಿದ್ದು, ಆಲ್‌ಟ್ರೊಜ್ ಹೊಸ ಕಾರು ಬಿಎಸ್-6 ಎಂಜಿನ್‌ನೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿದೆ. ಆಲ್‌ಟ್ರೊಜ್ ಕಾರು ಗ್ರಾಹಕರ ನೀರಿಕ್ಷೆಗಿಂತಲೂ ಹೆಚ್ಚಿನ ಮಟ್ಟದ ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬರುವ ಸುಳಿವು ನೀಡಿದ್ದು, ಆಲ್ಬಾಟ್ರೊಸ್ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಸಿದ್ದವಾಗಿರುವ ಆಲ್‌ಟ್ರೊಜ್ ಕಾರು ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಲಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಹ್ಯಾರಿಯರ್ ಕಾರು ಬಿಡುಗಡೆಯ ಯಶಸ್ವಿ ನಂತರ ಕಾರು ಮಾರಾಟದಲ್ಲಿ ಮಹತ್ವದ ಬದಲಾಣೆ ಪರಿಚಯಿಸುತ್ತಿರುವ ಟಾಟಾ ಸಂಸ್ಥೆಯು ಸುಧಾರಿತ ತಂತ್ರಜ್ಞಾನ ಪ್ರೇರಿತ ಆಲ್ಫಾ ಪ್ಲ್ಯಾಟ್‌ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಸಿದ್ದಗೊಳಿಸಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಇಂಪ್ಯಾಕ್ಟ್ 2.0 ಡಿಸೈನ್‌ನಿಂದಾಗಿ ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ವಿಶೇಷ ಎನ್ನಿಸುವ ಆಲ್‌ಟ್ರೊಜ್ ಕಾರು ಗ್ರೆ ಮತ್ತು ಬ್ಲ್ಯಾಕ್ ಬಣ್ಣದ ಕ್ಯಾಬಿನ್, ಡ್ಯಾಶ್‌ಬೋರ್ಡ್ ಸುತ್ತಲು ಸಿಲ್ವರ್ ಆಕ್ಸೆಂಟ್, ಫಾಲೋ ಮೀ ಹೆಡ್‌ಲ್ಯಾಂಪ್, ಹೈ ಎಂಡ್ ಆವೃತ್ತಿಯಲ್ಲಿ ಸೆಮಿ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೋಡಣೆ ಹೊಂದಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಹಾಗೆಯೇ ಸ್ಟ್ಯಾಂಡರ್ಡ್ ಆಗಿ ಹೊಸ ಕಾರಿನಲ್ಲಿ 7-ಇಂಚಿನ್ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಮಡಿಕೆ ಮಾಡಬಹುದಾದ ಮಲ್ಟಿ ಇನ್‌ಫಾರ್ಮ್‌ಮೆಷನ್ ಡಿಸ್‌‌ಪ್ಲೇ, ಎತ್ತರವನ್ನು ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಆಸನ, ಎರಡು ಬದಿಯಲ್ಲೂ ಸೆಂಟರ್ ಆರ್ಮ್ ರೆಸ್ಟ್, 12 ವೊಲ್ಟ್ ಚಾರ್ಜಿಂಗ್ ಪೋರ್ಟ್ಸ್, ನಾಲ್ಕು ಬಾಗಿಲುಗಳಲ್ಲೂ ಬಾಟಲ್ ಹೋಲ್ಡರ್ಸ್, ಕೀ ಲೆಸ್ ಎಂಟ್ರಿ, ಹಿಂಬದಿಯ ಸವಾರರಿಗೂ ಎಸಿ ವೆಂಟ್ಸ್ ಸೇರಿದಂತೆ ಹಲವಾರು ಹೊಸ ಫೀಚರ್ಸ್‌ಗಳು ಆಲ್‌ಟ್ರೊಜ್ ಕಾರಿನಲ್ಲಿವೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಎಂಜಿನ್ ಸಾಮರ್ಥ್ಯ

ಸದ್ಯ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಕಾರಿನಲ್ಲಿ ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ನೀಡಲಾಗಿದ್ದು, ಎರಡು ಕಾರು ಮಾದರಿಗಳಲ್ಲೂ ಸ್ಟ್ಯಾಂಡರ್ಡ್ ಆಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯನ್ನು ಮಾತ್ರವೇ ನೀಡಲಾಗಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಮಾಹಿತಿಗಳ ಪ್ರಕಾರ, ಮೊದಲ ಹಂತವಾಗಿ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಿತ ಟ್ರಾನ್ಸ್‌ಮಿಷನ್ ಆಯ್ಕೆಯನ್ನು ಮಾತ್ರವೇ ನೀಡಿರುವ ಟಾಟಾ ಮೋಟಾರ್ಸ್ ಸಂಸ್ಥೆಯು 2020ರ ಮಾರ್ಚ್ ಅಥವಾ ಏಪ್ರಿಲ್ ಹೊತ್ತಿಗೆ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಜೊತೆಗೆ ಪೆಟ್ರೋಲ್ ಟರ್ಬೋ ಎಂಜಿನ್ ಮಾದರಿಯನ್ನು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಇನ್ನು ಬಿಡುಗಡೆಯಾಗಲಿರುವ ಸಾಮಾನ್ಯ 1.2-ಲೀಟರ್ ಪೆಟ್ರೋಲ್ ಆವೃತ್ತಿಯು 86-ಬಿಎಚ್‌ಪಿ, 113-ಎನ್ಎಂ ಟಾರ್ಕ್ ಮತ್ತು 1.5-ಲೀಟರ್ ಡೀಸೆಲ್ ಆವೃತ್ತಿಯು 90-ಬಿಎಚ್‌ಪಿ, 200-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ವೆರಿಯೆಂಟ್‌ ಮತ್ತು ಬಣ್ಣಗಳು

ಎಕ್ಸ್‌ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ವೆರಿಯೆಂಟ್‌‌ಗಳನ್ನು ಹೊಂದಿರುವ ಆಲ್‌ಟ್ರೊಜ್‌ನಲ್ಲಿ ಹೈ-ಸ್ಟ್ರೀಟ್ ಗೋಲ್ಡ್, ಸ್ಕೈಲೈನ್ ಸಿಲ್ವರ್, ಡೌನ್‌ಟೌನ್ ರೆಡ್, ಮಿಡ್‌ಟೌನ್ ಗ್ರೇ ಮತ್ತು ಅವೆನ್ಯೂ ವೈಟ್ ಎನ್ನುವ ಐದು ಬಣ್ಣಗಳ ಆಯ್ಕೆ ಹೊಂದಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಇದರೊಂದಿಗೆ ಟಾಟಾ ಸಂಸ್ಥೆಯು ಹೊಸ ಆಲ್‌ಟ್ರೊಜ್ ಕಾರಿನಲ್ಲೂ ಈ ಹಿಂದಿನ ನೆಕ್ಸಾನ್ ಮತ್ತು ಹ್ಯಾರಿಯರ್ ಮಾದರಿಯಲ್ಲೇ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ 5 ಸ್ಟಾರ್ ರೇಟಿಂಗ್ ಒದಗಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಹಾಗೆಯೇ ಹೊಸ ಕಾರಿನಲ್ಲಿ ಡ್ಯಯಲ್ ಏರ್‌ಬ್ಯಾಗ್, ಎಬಿಎಸ್ ಮತ್ತು ಇಬಿಡಿ, ರಿಯರ್ ಪಾರ್ಕಿಂಗ್ ಸೆನ್ಸಾರ್, ಐಸೊಫಿಕ್ಸ್ ಚೈಲ್ಡ್ ಮೌಂಟ್ ಸೀಟ್, ಫ್ರಂಟ್ ಫಾಗ್ ಲೈಟ್ ಜೊತೆ ಕಾರ್ನಿಂಗ್ ಫಂಕ್ಷನ್ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಿದೆ.

2020ರ ಆಟೋ ಎಕ್ಸ್‌ಪೋ ನಂತರವೇ ಗ್ರಾಹಕರ ಕೈಸೇರಲಿದೆ ಟಾಟಾ ಆಲ್‌ಟ್ರೊಜ್

ಆಲ್‌ಟ್ರೊಜ್ ಬೆಲೆ(ಅಂದಾಜು)

ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.5.50 ಲಕ್ಷದಿಂದ ಟಾಪ್ ಎಂಡ್ ಕಾರಿನ ಬೆಲೆಯು ರೂ.8 ಲಕ್ಷ ಬೆಲೆ ಅಂದಾಜಿಸಲಾಗಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಹ್ಯುಂಡೈ ಐ20, ಮಾರುತಿ ಬಲೆನೊ, ಟೊಯೊಟಾ ಗ್ಲಾಂಝಾ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ವಿಶ್ವಾಸದಲ್ಲಿದೆ.

Most Read Articles

Kannada
English summary
Tata Altroz deliveries starts in February 2020. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X