ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಸ್ವಿಜರ್ಲ್ಯಾಂಡ್‌ನ ಜೀನೆವಾದಲ್ಲಿ ನಡೆಯುತ್ತಿರುವ 2019ರ ಅಂತಾರಾಷ್ಟ್ರೀಯ ಆಟೋ ಮೇಳದಲ್ಲಿ ಭಾರತೀಯ ಆಟೋ ಉತ್ಪಾದನಾ ಸಂಸ್ಥೆಗಳ ಹೊಸ ಕಾರು ಮಾದರಿಗಳು ಭಾರೀ ಸದ್ದು ಮಾಡುತ್ತಿದ್ದು, ಇದರಲ್ಲಿ ಟಾಟಾ ನಿರ್ಮಾಣದ 5ಕ್ಕೂ ಹೆಚ್ಚು ಕಾರು ಮಾದರಿಗಳನ್ನು ಅನಾವರಣಗೊಂಡಿವೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಟಾಟಾ ಸಂಸ್ಥೆಯು ನೆಕ್ಸಾನ್ ಮತ್ತು ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಬಿಡುಗಡೆಯ ನಂತರ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಯ ಯೋಜನೆಯಲ್ಲಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬರುತ್ತಿರುವ ಆಲ್‌ಟ್ರೊಜ್ ಕಾರು ಟಾಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರು ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿರುವ ಟಾಟಾ ಸಂಸ್ಥೆಯು ಇಂದಿನಿಂದ ಆರಂಭವಾಗಲಿರುವ ಜೀನೆವಾ ಆಟೋ ಮೇಳದಲ್ಲಿ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ನಾಲ್ಕು ಹೊಸ ಕಾರು ಮಾದರಿಗಳನ್ನು ಅನಾವರಣಗೊಳಿಸಿದೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಚಾಣಕ್ಷತೆಯ ಆಧಾರದ ಮೇಲೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು, ಬಲಿಷ್ಠತೆ, ಪರ್ಫಾಮೆನ್ಸ್ ಮತ್ತು ದಕ್ಷತೆಯಲ್ಲಿ ಇತರೆ ಅರ್ಬನ್ ಕಾರುಗಳಿಂತಲೂ ಆಲ್‌ಟ್ರೊಜ್ ಉತ್ತಮವಾಗಿರಲಿವೆ ಎಂದಿದೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಈಗಾಗಲೇ 2018ರಲ್ಲೇ ಆಲ್‌ಟ್ರೊಜ್ ಕಾರನ್ನು ಪ್ರದರ್ಶನ ಮಾಡಿ ಕಾರು ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿರುವ ಟಾಟಾ ಸಂಸ್ಥೆಯು ಹೊಸ ಕಾರಿನ ವಿನ್ಯಾಸಗಳನ್ನು ಇಂಪ್ಯಾಕ್ಟ್ ಡಿಸೈನ್ 2.0 ಡಿಸೈನ್ ಆಧರಿತ ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ನಿರ್ಮಾಣ ಮಾಡಿದೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಮಾರುಕಟ್ಟೆಯಲ್ಲಿ ಸದ್ಯ ಮಾರಾಟವಾಗುತ್ತಿರುವ ನೆಕ್ಸಾನ್ ಎಸ್‌ಯುವಿ ಮಾದರಿಗಳಿಂತಲೂ ವಿಶೇಷ ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವ ಆಲ್‌ಟ್ರೊಜ್ ಪ್ರಿಮಿಯಂ ಹ್ಯಾಚ್‌ಬ್ಯಾಕ್ ಕಾರುಗಳು ಶಾರ್ಪ್ ಎಡ್ಜ್‌ ಮತ್ತು ಸ್ಪೋರ್ಟಿ ಲುಕ್ ಸೌಲಭ್ಯವು ಕಾರಿನ ಅಂದ ಹೆಚ್ಚಿಸಿವೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು, ಹೊಸ ಕಾರಿನ ಎಂಜಿನ್ ವೈಶಿಷ್ಟ್ಯತೆಗಳ ಬಗೆಗೆ ಸಂದರ್ಶನವೊಂದರಲ್ಲಿ ಕೆಲವು ಮಾಹಿತಿಗಳನ್ನು ಹಂಚಿಕೊಳ್ಳುವ ಮೂಲಕ ವಿವಿಧ ಮಾದರಿಯ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ವರದಿಗಳ ಪ್ರಕಾರ, ಆಲ್‌ಟ್ರೊಜ್ ಕಾರು ಮಾದರಿಯು ಪೆಟ್ರೋಲ್ ಎಂಜಿನ್‌ನೊಂದಿಗೆ 48ಕೆವಿ ಮೈಲ್ಡ್ ಹೈಬ್ರಿಡ್(ಎಲೆಕ್ಟ್ರಿಕ್ ಮೋಟಾರ್) ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದ್ದು, ಇದು ಕಾರಿನ ಇಂಧನ ದಕ್ಷತೆಯನ್ನು ಹೆಚ್ಚಿಸುವಲ್ಲಿ ಸಾಕಷ್ಟು ಅನುಕೂಲಕರವಾಗಲಿದೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಹೀಗಾಗಿ ಜೋಡಣೆ ಮಾಡಲು ಉದ್ದೇಶಿಸಿರುವ 1.2-ಲೀಟರ್, ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಜೊತೆಗೆ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನ ಅಳವಡಿಕೆ ಮಾಡಿದ್ದಲ್ಲಿ ಕಾರಿನ ಮೈಲೇಜ್ ಹೆಚ್ಚಳದ ಜೊತೆಗೆ ಇಂಗಾಲ ಹೊರಸೂಸುವಿಕೆ ಪ್ರಮಾಣವನ್ನು ಸಹ ತಗ್ಗಿಸಲು ನೆರವಾಗಲಿದೆ.

MOST READ: 15 ಸಾವಿರ ಸಿಸಿ ಎಂಜಿನ್ ಸಾಮರ್ಥ್ಯದೊಂದಿಗೆ ರಸ್ತೆಗಿಳಿದ ವಿಶ್ವದ ಅತಿದೊಡ್ಡ ಮಾಡಿಫೈ ಎಸ್‌ಯುವಿ ಕಾರು

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಪ್ರಸ್ತುತ ಮಾರುಕಟ್ಟೆಯಲ್ಲಿ ಕೇವಲ ಐಷಾರಾಮಿ ಕಾರುಗಳಲ್ಲಿ ಮಾತ್ರವೇ ಮೈಲ್ಡ್ ಹೈಬ್ರಿಡ್ ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದ್ದು, ಈ ಹೊಸ ಸೌಲಭ್ಯವಿದಲ್ಲಿ ಕಾರು ಸ್ಟಾರ್ಟ್ ಆಗುವ ಸಂದರ್ಭ ಮತ್ತು ನಿಗದಿತ ಪ್ರಮಾಣದ ದೂರದ ತನಕ ಪೆಟ್ರೋಲ್ ಎಂಜಿನ್‌ಗೆ ಬದಲಾಗಿ ಎಲೆಕ್ಟ್ರಿಕ್ ಮೋಟಾರ್ ಸಹಾಯದೊಂದಿಗೆ ಚಲಿಸುತ್ತೆ.

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಜೊತೆಗೆ ಹೊಸ ಕಾರಿನ ಬ್ಯಾನೆಟ್ ಹಾಗೂ ಹಿಂಭಾಗದ ವಿಂಡೋಗಳು ಕೂಡಾ ವಿಭಿನ್ನ ರಚನೆ ಹೊಂದಿದ್ದು, ಕಟರ್ ಫ್ರೀ ಡಿಸೈನ್‌ನೊಂದಿಗೆ ಸ್ಲಿಕ್ ಹೆಡ್‌ಲ್ಯಾಂಪ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್, ಎಬಿಎಸ್ ಸೇರಿದಂತೆ ಎಲ್ಇಡಿ ಟೈಲ್ ಲೈಟ್ಸ್, ಫಾಗ್ ಲ್ಯಾಂಪ್ ಮತ್ತು ವಿನೂತನ ಗ್ರೀಲ್‌ಗಳು ಈ ಕಾರಿಗೆ ಮತ್ತಷ್ಟು ಮೆರಗು ತಂದಿವೆ.

MOST READ: ಕೇವಲ 2 ಸೆಕೆಂಡುಗಳಲ್ಲಿ 100ಕಿ.ಮಿ ವೇಗದಲ್ಲಿ ಚಲಿಸುತ್ತೆ ಮಹೀಂದ್ರಾ ಒಡೆತನದ ಈ ಹೈಪರ್ ಕಾರು

ಬಲೆನೊ ಮತ್ತು ಐ20 ಪ್ರತಿಸ್ಪರ್ಧಿ ಟಾಟಾ ಆಲ್‌ಟ್ರೊಜ್ ಕಾರು ಅನಾವರಣ

ಹಾಗೆಯೇ ಆಲ್‌ಟ್ರೊಜ್ ಮಾದರಿಯಲ್ಲಿ ಎಲೆಕ್ಟ್ರಿಕ್ ವರ್ಷನ್ ಮಾದರಿಯನ್ನು ಸಹ ಪ್ರದರ್ಶನ ಮಾಡಿರುವ ಟಾಟಾ ಸಂಸ್ಥೆಯು ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಮುಂಬರುವ ಮೇ ಅಥವಾ ಜೂನ್ ಹೊತ್ತಿಗೆ ಹೊಸ ಆಲ್‌ಟ್ರೊಜ್ ಕಾರು ಮಾರಾಟಕ್ಕೆ ಲಭ್ಯವಾಗಲಿದೆ.

Article Published On: Tuesday, March 5, 2019, 18:44 [IST]
English summary
2019 Geneva Motor Show: Tata Altroz & Altroz EV Premium Hatchbacks Revealed. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+