ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ಟಾಟಾ ಮೋಟಾರ್ಸ್ ವಿನೂತನ ವಿನ್ಯಾಸದ ಆಲ್‌ಟ್ರೋಜ್ ಕಾರು ಸದ್ಯ ಭಾರತೀಯ ಆಟೋ ಉದ್ಯಮದ ಪ್ರಮುಖ ಆಕರ್ಷಣೆಯಾಗಿದ್ದು, ಬಿಡುಗಡೆಯ ಉದ್ದೇಶದಿಂದ ದೇಶದ ವಿವಿಧಡೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ. ನಿನ್ನೆಯಷ್ಟೇ ಹಿಮಾಚಲ ಪ್ರದೇಶದಲ್ಲೂ ಕೂಡಾ ಆಲ್‌ಟ್ರೋಜ್ ಕಾರು ಸ್ಪಾಟ್ ಟೆಸ್ಟಿಂಗ್ ನಡೆಸಿದ್ದು, ಹ್ಯಾಚ್‌ಬ್ಯಾಕ್ ಪ್ರಿಯರ ಆಕರ್ಷಣೆಗೆ ಕಾರಣವಾಗಿತ್ತು.

ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ವಿನೂತನ ವಿನ್ಯಾಸದ ಹ್ಯಾರಿಯರ್ ಬಿಡುಗಡೆಯ ಯಶಸ್ವಿ ನಂತರ ಭವಿಷ್ಯದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಿಸುತ್ತಿರುವ ಟಾಟಾ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆಗೆ ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಕಾರನ್ನು ಸಹ ಮುಂದಿನ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಪರಿಚಯಿಸುವ ಸುಳಿವು ನೀಡಿದೆ.

ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ಇದಕ್ಕೆ ಕಾರಣ, ಆಲ್‌ಟ್ರೊಜ್ ಕಾರಿನ ಎಂಜಿನ್ ಪರ್ಫಾಮೆನ್ಸ್ ಗುಣಲಕ್ಷಣಗಳು ಇತರೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಿಂತಲೂ ಉತ್ತಮವಾಗಿರುವುದಲ್ಲದೇ ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತುಬರುತ್ತಿರುವುದು ಸ್ಪಾಟ್ ಟೆಸ್ಟಿಂಗ್ ವೇಳೆ ಖಚಿತವಾಗಿದೆ.

ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್‌ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾದರಿಗಳು ಅಭಿವೃದ್ಧಿಯಾಗುತ್ತಿದ್ದು, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಲಭ್ಯವಾಗಲಿದೆ.

ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ಪೆಟ್ರೋಲ್ ಆವೃತ್ತಿಗಾಗಿ ಆಯ್ಕೆ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯನ್ನು ಟಿಯಾಗೋದಿಂದ ಎರವಲು ಪಡೆದಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳನ್ನು ನೆಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆದಿರುವ ಟಾಟಾ ಸಂಸ್ಥೆಯು ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದೆ.

ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ಪ್ರಮುಖ ವಿಚಾರ ಅಂದ್ರೆ, ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಕಾರು ನಿರ್ಮಾಣದಲ್ಲಿ ಭಾರೀ ಬದಲಾವಣೆ ತರುತ್ತಿದ್ದು, ಹ್ಯಾರಿಯರ್ ಕಾರು ಮಾದರಿಯಲ್ಲೇ ಹೊಸ ಆಲ್‌ಟ್ರೊಜ್ ಕಾರನ್ನು ಸಹ ಇಂಪ್ಯಾಕ್ಟ್ ಡಿಸೈನ್ 2.0 ಅಡ್ವಾನ್ಸ್ ಆಕ್ಟಿಟೆಕ್ಕರ್ ವಿನ್ಯಾಸದೊಂದಿಗೆ ಅಭಿವೃದ್ಧಿಗೊಳಿಸಿದೆ.

ಇದು ಕಾರಿನ ತೂಕವನ್ನು ಕಡಿತಗೊಳಿಸುವಲ್ಲಿ ಸಾಕಷ್ಟು ನೆರವಾಗಿದ್ದು, ಇದು ನೇರವಾಗಿ ಕಾರಿನ ಎಂಜಿನ್ ಪರ್ಫಾಮೆನ್ಸ್ ಪರಿಣಾಮ ಬೀರುವುದಲ್ಲದೇ ಮೈಲೇಜ್ ಪ್ರಮಾಣ ಕೂಡಾ ಹೆಚ್ಚಳವಾಗಲಿದೆ.

ಕಣಿವೆ ರಾಜ್ಯದಲ್ಲಿ ಸ್ಪಾಟ್ ಟೆಸ್ಟಿಂಗ್ ನಡೆಸಿದ ಟಾಟಾ ಆಲ್‌ಟ್ರೋಜ್

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಜೂನ್ ಅಥವಾ ಜುಲೈ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ.7 ಲಕ್ಷ ಮತ್ತು ಆಲ್‌ಟ್ರೊಜ್ ಕಾರಿನ ಬೆಲೆಯು ರೂ.10 ಲಕ್ಷದೊಳಗೆ ಬೆಲೆ ನಿಗದಿಯಾಗಬಹುದು ಎಂದಿದೆ.

Most Read Articles

Kannada
English summary
Spy Video: Tata Altroz Spied Testing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X