ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ಬ್ಲ್ಯಾಕ್‍‍ಬರ್ಡ್

ಟಾಟಾ ಸಂಸ್ಥೆಯ ಬಹುನಿರೀಕ್ಷಿತ ಬ್ಲ್ಯಾಕ್‍‍ಬರ್ಡ್ ಕಾರ್ ಅನ್ನು ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಬಿಡುಗಡೆಗೂ ಮುನ್ನ ಕಾರನ್ನು ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ ಚಿತ್ರಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಟಾಟಾ ಮೋಟಾರ್ಸ್ ಸಂಸ್ಥೆಯು ಬ್ಲ್ಯಾಕ್‍‍ಬರ್ಡ್‍‍ನ ಸ್ಪಾಟ್ ಟೆಸ್ಟಿಂಗ್ ಅನ್ನು ಮುಂದುವರೆಸಿದ್ದು, 2020ರಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ಬ್ಲ್ಯಾಕ್‍‍ಬರ್ಡ್

ದೇಶಿಯ ಮಾರುಕಟ್ಟೆಯು ಎಸ್‍‍‍ಯುವಿ ಕಾರು ವಿಭಾಗದಲ್ಲಿ ಹಲವಾರು ಆಯ್ಕೆಗಳನ್ನು ಹೊಂದಿದೆ. ಪೂರ್ಣ ಪ್ರಮಾಣದ ಎಸ್‍‍ಯುವಿ ವಿಭಾಗವು ಸ್ಥಿರವಾದ ಮಾರಾಟ ನಡೆಯುತ್ತಿದ್ದರೆ, ಕ್ಯಾಂಪಕ್ಟ್ ಎಸ್‍ಯುವಿ ಮತ್ತು ಮಿಡ್ ಸೈಜ್ ಎಸ್‍‍ಯುವಿ ವಿಭಾಗದ ಮಾರಾಟದಲ್ಲಿಯೂ ಬೆಳವಣಿಗೆ ಕಂಡಿದೆ. ವಾಹನ ಉದ್ಯಮ ಕುಂಠಿತವಾಗಿದ್ದರೂ, ಕಿಯಾ ಸೆಲ್ಟೋಸ್ ಮತ್ತು ಎಂಜಿ ಹೆಕ್ಟರ್ ಕಾರಿಗಾಗಿ ಸಾವಿರಾರು ಬುಕ್ಕಿಂಗ್‍‍‍ಗಳು ನಡೆದಿವೆ. ಟಾಟಾ ನೆಕ್ಸಾನ್ ಮತ್ತು ಟಾಟಾ ಹ್ಯಾರಿಯರ್ ಕಾರುಗಳು ಸ್ಥಿರವಾಗಿ ಮಾರಾಟವಾಗುತ್ತಿವೆ. ಇದೇ ಕಾರಣದಿಂದ ಟಾಟಾ ಮೋಟಾರ್ಸ್ ಸಂಸ್ಥೆಯ ಮತ್ತೊಂದು ಎಸ್‍‍ಯುವಿ ಕಾರಿಗೆ ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದ್ದರೂ ಅಚ್ಚರಿ ಇಲ್ಲ. ಟಾಟಾ ಬ್ಲ್ಯಾಕ್‍‍ಬರ್ಡ್ ಬಿಡುಗಡೆಯಾಗಲು ಇನ್ನಷ್ಟು ಸಮಯ ಬೇಕಾಗಬಹುದು.

ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ಬ್ಲ್ಯಾಕ್‍‍ಬರ್ಡ್

ಈ ವರ್ಷದ ಆರಂಭದಲ್ಲಿ ಟಾಟಾ ಬ್ಲ್ಯಾಕ್‍‍ಬರ್ಡ್‍ಗೆ ಸಂಬಂಧಿಸಿದ ವರದಿಗಳು ಹೊರಬಂದಿದ್ದವು. ಆದರೆ ಟಾಟಾ ಕಂಪನಿಯು, ನೆಕ್ಸಾನ್ ಮತ್ತು ಟಾಟಾ ಹ್ಯಾರಿಯರ್ ನಡುವಿನ ಅಂತರವನ್ನು ಟಾಟಾ ಬ್ಲ್ಯಾಕ್‍ಬರ್ಡ್ ಮೂಲಕ ತುಂಬಲು ಯೋಜನೆ ರೊಪಿಸಿದೆ. ಟಾಟಾ ಬ್ಲ್ಯಾಕ್‍‍ಬರ್ಡ್ ಚೆರಿ ಟಿಗ್ಗೊ 5 ಎಕ್ಸ್ ಅನ್ನು ಮರುರೊಪಿಸಲಾದ ಆವೃತ್ತಿ ಎಂಬ ವದಂತಿಗಳಿವೆ. ತದನಂತರ ಟಾಟಾ ಬ್ಲ್ಯಾಕ್‍‍‍ಬರ್ಡ್ ಅನ್ನು ಆಲ್ಪಾ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ತಯಾರಾದ ಆವೃತ್ತಿ ಎಂದು ಖಚಿತವಾದಾಗ ಈ ವದಂತಿಗೆ ಬ್ರೇಕ್‍‍ಬಿತ್ತು.

ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ಬ್ಲ್ಯಾಕ್‍‍ಬರ್ಡ್

ಅಲ್ಪಾ ಟಾಟಾ ಮೋಟಾರ್ಸ್‍ನ ಇತ್ತೀಚಿನ ಮಾಡ್ಯುಲರ್ ಪ್ಲಾಟ್‍‍ಫಾರ್ಮ್ ಮತ್ತು ಮುಂಬರುವ ಟಾಟಾ ಆಲ್ಟ್ರೋ ಹ್ಯಾಚ್‍ಬ್ಯಾಕ್ ಹೊಸ ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿದ ಮೊದಲ ವಾಹನವಾಗಿದೆ. ರಶ್‍‍ಲೇನ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಟಾಟಾ ಬ್ಲ್ಯಾಕ್‌ಬರ್ಡ್‌ನ ಚಿತ್ರಗಳು ಎಸ್‍‍ಯುವಿಯ ಕೆಲವು ವಿನ್ಯಾಸದ ವಿವರಗಳನ್ನು ಬಹಿರಂಗಪಡಿಸುತ್ತವೆ.

ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ಬ್ಲ್ಯಾಕ್‍‍ಬರ್ಡ್

ಟಾಟಾದ ಸಿಗ್ನೇಚರ್ ಸ್ಪ್ಲಿಟ್ ಹೆಡ್‍ಲ್ಯಾಂಪ್ ವಿನ್ಯಾಸವು ಕಾರಿನ ಮುಂಭಾಗದಲ್ಲಿ ಗೋಚರಿಸುತ್ತಿದೆ. ಎಲ್‍ಇಡಿ ಡಿಆರ್‍ಎಲ್ ಮೇಲ್ಭಾಗದಲ್ಲಿ ಇದ್ದರೆ ಹೆಡ್‍ಲ್ಯಾಂಪ್‍‍ಗಳು ಬಂಪರ್‍‍ನ ಕೆಳ ಭಾಗದಲ್ಲಿ ಇರಿಸಲಾಗಿದೆ. ವಿಶಾಲವಾದ ಬಾಡಿ ಮತ್ತು ಸ್ಟೈಲಿಶ್ ಆದ ಅಲಾಯ್ ವೀಲ್‍‍ಗಳನ್ನು ಅಳವಡಿಸಲಾಗಿದೆ. ಒಳಾಂಗಣದ ಯಾವುದೇ ಚಿತ್ರಗಳಿಲ್ಲ, ಆದರೆ ಟಚ್‍‍ಸ್ಕ್ರೀನ್ ಇನ್ಫೋಟೈನ್‍‍ಮೆಂಟ್ ಸಿಸ್ಟಂ ಸೇರಿದಂತೆ ಪ್ರೀಮಿಯಂ ಒಳಾಂಗಣವನ್ನು ಹೊಂದಿರಬಹುದು. ಟಾಟಾ ನೆಕ್ಸಾನ್ ಕಾರಿಗೆ ಆಳವಡಿಸಲಾಗಿದ್ದ ಎಂಜಿನ್ ಅನ್ನೇ ಅಳವಡಿಸಿರುವ ಸಾಧ್ಯತೆಗಳು ಹೆಚ್ಚಿವೆ.

ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ಬ್ಲ್ಯಾಕ್‍‍ಬರ್ಡ್

ಎಂಜಿನ್ ಕ್ಷಮತೆ ಮತ್ತು ಟಾರ್ಕ್ ಅನ್ನು ಹೆಚ್ಚಿಸಲು ಅಪ್‍‍ಗ್ರೇಡ್ ಮಾಡುವ ಸಾಧ್ಯತೆ ಇದೆ. ಟಾಟಾ ನೆಕ್ಸಾ‍ನ್ 1.2 ಲೀಟರ್ ಪೇಟ್ರೋಲ್ ಮತ್ತು ಡೀಸೆಲ್ ಟಾರ್ಕ್ ಎಂಜಿನ್ ಹೊಂದಿದ್ದು, ಎರಡೂ ಎಂಜಿನ್‍‍ಗಳು 110 ಬಿಹೆಚ್‍‍‍ಪಿ ಪವರ್ ಮತ್ತು ಡೀಸೆಲ್ ಎಂಜಿನ್ 260 ಎನ್ಎಂ ಉತ್ಪಾದಿಸಿದರೆ, ಪೆಟ್ರೋಲ್ ಎಂಜಿನ್ 170 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಂಡು ಬಂದ ಟಾಟಾ ಬ್ಲ್ಯಾಕ್‍‍ಬರ್ಡ್

ಟಾಟಾ ಬ್ಲ್ಯಾಕ್‍‍ಬರ್ಡ್, ಟಾರ್ಕ್ ಅನ್ನು ತುಸು ಹೆಚ್ಚು ಉತ್ಪಾದಿಸಬಹುದು. ಅದೇ 6-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಹೊಂದಿರಬಹುದು, ಬಿಎಸ್-6 ಮಾಲಿನ್ಯ ನಿಯಾಮವಳಿಗೆ ಅನುಗುಣವಾಗಿ ಎಂಜಿನ್ ಅನ್ನು ಅಪ್‍‍ಗ್ರೇಡ್ ಮಾಡಬಹುದು. ಟಾಟಾ ಬ್ಲ್ಯಾಕ್‍‍ಬರ್ಡ್ ಕಿಯಾ ಸೆಲ್ಟೋಸ್ ಮತ್ತು ಹ್ಯುಂಡೈ ಕ್ರೆಟಾ ಕಾರಿಗೆ ಪೈಪೋಟಿ ನೀಡಲಿದೆ. ಕಾರು ಬಹುತೇಕ ಸಿದ್ದವಾಗಿದ್ದು, ಮುಂದಿನ 2020ರ ಇಂಡಿಯನ್ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಬಹುದು. ಎಸ್‍‍ಯುವಿ ವಿಭಾಗದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿದ ಸಂಸ್ಥೆಗಳಲ್ಲಿ ಒಂದಾಗಿರುವ ಟಾಟಾ ಸಂಸ್ಥೆಯ ಬಹುನಿರೀಕ್ಷಿತ ಟಾಟಾ ಬ್ಲ್ಯಾಕ್‍‍ಬರ್ಡ್ ಕಾರಿನ ಮೇಲೆ ಹೆಚ್ಚಿನ ನಿರೀಕ್ಷೆಯನ್ನು ಎಸ್‍‍ಯುವಿ ಕಾರು ಪ್ರಿಯರು ಹೊಂದಿದ್ದಾರೆ.

Article Published On: Tuesday, August 27, 2019, 11:23 [IST]
English summary
Tata Blackbird Spotted Ahead Of Launch: Spy Pics And Details - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+