ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್

ಟಾಟಾ ಮೋಟಾರ್ಸ್ ಸಂಸ್ಥೆಯು 2019ರ ಜಿನೀವಾ ಮೋಟಾರ್ ಶೋನಲ್ಲಿ ಎಚ್‍2‍‍‍‍‍‍ಎಕ್ಸ್ ಕಾನ್ಸೆಪ್ಟ್ ಅನ್ನು ಅನಾವರಣಗೊಳಿಸಿತ್ತು. ಎಚ್2ಎಕ್ಸ್ (ಹಾರ್ನ್‍‍ಬಿಲ್) ಮಾದರಿಯು 2020ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ ಮತ್ತು ದೆಹಲಿಯ 2020ರ ಆಟೋ ಎಕ್ಸ್‌ಪೋದಲ್ಲಿ ಈ ಮಾದರಿಯನ್ನು ಅನಾವರಣಗೊಳಿಸುವ ನಿರೀಕ್ಷೆಗಳಿವೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್ ಮಾದರಿ

ಹೊಸ ಹೆಚ್‍2ಎಕ್ಸ್(ಹಾರ್ನ್‍‍ಬಿಲ್) ಅನ್ನು ಟಾಟಾದ ಆಲ್ಫಾ ಫ್ಲಾಟ್‍‍ಫಾರ್ಮ್‍‍ನಲ್ಲಿ ಅಭಿವೃದ್ದಿಪಡಿಸಲಾಗುವುದು ಎಂದು ಹೇಳಲಾಗಿದ್ದು, ಈ ಕಾರಿನಲ್ಲಿ ವ್ಹೀಲ್‍‍ಬೇಸ್ ಹೊಂದುವ ನಿರೀಕ್ಷೆಯಿದೆ. ಕಂಪನಿಯ ಪ್ರಕಾರ, ಜಿನೀವಾದಲ್ಲಿ ಅನಾವರಣಗೊಂಡ ಕಾನ್ಸೆಪ್ಟ್ ಆವೃತ್ತಿಯ ಉತ್ಪಾದನಾ ಮಾದರಿಯು ಹೇಗಿರುತ್ತದೆ ಎಂಬುದರ ಬಗ್ಗೆ ಸರಿಸೂಮರು ಶೇ.75ರಷ್ಟು ಇದೇ ಮಾದರಿಯಲ್ಲಿರಬಹುದು.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್ ಮಾದರಿ

2019ರ ಜಿನೀವಾ ಮೋಟಾರ್ ಶೋನಲ್ಲಿ ಕಾಣಿಸಿಕೊಂಡಿರುವ ಹೆಚ್‍2ಎಕ್ಸ್ ಪರಿಕಲ್ಪನೆಯನ್ನು ಸ್ಪ್ಲಿಟ್ ಹೆಡ್‍‍ಲ್ಯಾಂಪ್ ವಿನ್ಯಾಸ, ದೊಡ್ಡ ಅಲಾಯ್ ವ್ಹೀಲ್‍‍ಗಳು ಮತ್ತು ಪನೋರಾಮಿಕ್ ಸನ್‍‍ರೂಫ್ ಅನ್ನು ಹೊಂದಿದೆ. ದೊಡ್ಡ ಅಲಾಯ್ ವ್ಹೀಲ್ ಬಗ್ಗೆ ಮಾಹಿತಿ ಇಲ್ಲವಾದರೂ ಸನ್‍‍ರೂಫ್ ಉತ್ಪಾದನಾ ಮಾದರಿಯಲ್ಲಿ ಹೊಂದಿರಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್ ಮಾದರಿ

ಶೀಘ್ರದಲ್ಲೇ ಅನಾವರಣಗೊಳ್ಳಲಿರುವ ಹೆಚ್‍2ಎಕ್ಸ್ ಇಂಟಿರಿಯರ್ ಸಣ್ಣ ಮಟ್ಟದಲ್ಲಿರವ ಸಾಧ್ಯತೆಗಳಿದೆ. ಈ ಕಾರು ಇನ್ಪೋಟೇನ್‍‍ಮೆಂಟ್ ಸಿಸ್ಟಂ, ಪೂರ್ಣ ಪ್ರಮಾಣದ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮತ್ತು ಇತರ ನೂತನ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್ ಮಾದರಿ

ಕಾರಿನ ಎಂಜಿನ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರಬಹುದು. ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿರುವ ಎಂಜಿನ್ ಅನ್ನು ಅಳವಡಿಸಲಾಗುತ್ತದೆ. ಇದೇ ಮಾದರಿಯ ಎಂಜಿನ್ ಪ್ರಸ್ತುತ ಟಾಟಾ ಟಿಯಗೋ ಕಾರಿನಲ್ಲಿ ಕಾಣಿಸಿಕೊಂಡಿದೆ. ಈ ಎಂಜಿನ್ 84 ಬಿ‍ಹೆಚ್‍ಪಿ ಪವರ್ ಮತ್ತು 114 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್ ಮಾದರಿ

ಮುಂಬರುವ ಟಾಟಾ ಹೆಚ್‍2ಎಕ್ಸ್ ಅಥವಾ ಹಾರ್ನ್‍‍ಬಿಲ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ಪ್ರಕಾರ ರೂ.4.75 ಲಕ್ಷದಿಂದ ರೂ.5.75 ಲಕ್ಷಗಳಾಗಿದೆ. ಎಚ್‍2ಎಕ್ಸ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮಾರುತಿ ಸುಜುಕಿ ಇಗ್ನಿಸ್ ಮತ್ತು ಮಹಿಂದ್ರಾ ಕೆಯುವಿ 100 ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್ ಮಾದರಿ

ಇದರೊಂದಿಗೆ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಆವೃತ್ತಿಯನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಮುಂಬರುವ ತಿಂಗಳು ಡಿಸೆಂಬರ್ 16ರಂದು ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್, ನೆಕ್ಸಾನ್ ಎಲೆಕ್ಟ್ರಿಕ್ ಮತ್ತು ನೆಕ್ಸಾನ್ ಫೇಸ್‌ಲಿಫ್ಟ್ ಕಾರು ಮಾದರಿಯನ್ನು ಸಹ ಅನಾವರಣಗೊಳಿಸಿದೆ.

ಶೀಘ್ರದಲ್ಲೇ ಅನಾವರಣಗೊಳ್ಳಲಿದೆ ಟಾಟಾ ಹೆಚ್‍2ಎಕ್ಸ್ ಮಾದರಿ

ಟಾಟಾ ಮೋಟಾರ್ಸ್ ತನ್ನ ಹೆಚ್‍2ಎಕ್ಸ್ 2020ರ ದೆಹಲಿ ಆಟೋ ಎಕ್ಸ್ ಪೋದಲ್ಲಿ ಅನಾವರಣಗೊಳಿಸುವ ಸಾಧ್ಯತೆಗಳಿವೆ. ಈ ಹೆಚ್‍2ಎಕ್ಸ್ ಮಾದರಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಟಾಟಾ ಮೋಟಾರ್ಸ್ ಕಂಪನಿಯ ಈ ಕಾರು ವಿಭಿನ್ನವಾದ ವಿನ್ಯಾಸವನ್ನು ಹೊಂದಿದೆ.

Article Published On: Sunday, November 24, 2019, 13:00 [IST]
English summary
Tata H2X (Hornbill) Production Ready Model To Be Unveiled At Delhi Auto Expo 2020 - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+