Just In
- 26 min ago ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡುತ್ತವೆ!
- 2 hrs ago Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- 14 hrs ago ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- 15 hrs ago ಕಂಪನಿಗೆ 140ರ ಸಂಭ್ರಮ: ಕೇವಲ 140 ವಿಶೇಷ ಆವೃತ್ತಿಗಳು ನಿರ್ಮಾಣ: ಬುಕಿಂಗ್ ಆರಂಭ
Don't Miss!
- Movies ಪಶ್ಚಾತಾಪದ ಅಗ್ನಿಕುಂಡದಲ್ಲಿ ಪರಿಣಿತಿ ಚೋಪ್ರಾ ; ನನ್ನೆಲ್ಲ ಸೋಲುಗಳಿಗೆ ಆ ವ್ಯಕ್ತಿಗಳೇ ಕಾರಣ ಎಂದ ನಟಿ..!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಡೀಲರ್ಗಳ ಯಾರ್ಡ್ ತಲುಪುತ್ತಿರುವ ಟಾಟಾ ಹ್ಯಾರಿಯರ್ ಕಾರು...
ಈಗಾಗಲೆ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಹೊಚ್ಚಹೊಸ ಹ್ಯಾರಿಯರ್ ಎಸ್ಯುವಿ ಕಾರನ್ನು 2019ರ ಜನವರಿ 23ರಂದು ಆದ್ದೂರಿಯಾಗಿ ಬಿಡುಗಡೆಗೊಳಿಸಲಿದ್ದು, ಇದೀಗ ಡೀಲರ್ಗಳ ಯಾರ್ಡ್ ಅನ್ನು ತಲುಪುತ್ತಿವೆ.
ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿರುವುದಲ್ಲದೇ ಕೈಗೆಟುಕುವ ಬೆಲೆಯಲ್ಲಿ ಹೊಸ ಕಾರಿನ ದರ ನಿಗದಿ ಮಾಡಿರುವುದು ಗಮನಸೆಳೆಯುತ್ತಿವೆ.
ಈಗಾಗಲೇ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ಮತ್ತು ಮೀಡಿಯಾ ಡ್ರೈವ್ನಲ್ಲಿ ಎಲ್ಲರ ಗಮನಸೆಳೆದ ಟಾಟಾ ಹ್ಯಾರಿಯರ್ ಎಸ್ಯುವಿ ಕಾರು ಇದೀಗ, ತನ್ನ ಮತ್ತೊಂದು ಎದುರಾಳಿಯಾದ ಜೀಪ್ ಕಂಪಾಸ್ ಎಸ್ಯುವಿ ಕಾರಿನೊಂದಿಗೆ ಕಾಣಿಸಿಕೊಂಡಿತ್ತು.
ಟಾಟಾ ಮೋಟಾರ್ಸ್ನ ಡೀಲರ್ಗಳು ಈಗಾಗಲೇ ಹೊಸ ಹ್ಯಾರಿಯರ್ ಕಾರುಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ಕೂಡಾ ನೀಡಿದ್ದು, ರೂ.30 ಸಾವಿರ ಮುಂಗಡ ಪಾವತಿಸಿ ಹೊಸ ಕಾರು ಖರೀದಿಗಾಗಿ ಬುಕ್ ಮಾಡಬಹುದಾಗಿದೆ.
ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್ಟಿ ಮತ್ತು ಎಕ್ಸ್ಜೆಡ್ ಎಂಬ ನಾಲ್ಕು ವೇರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳನ್ನು ನಿಗದಿಮಾಡಲಾಗಿದೆ.
ಎಂಜಿನ್ ಸಾಮರ್ಥ್ಯ
ಹ್ಯಾರಿಯರ್ ಎಸ್ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 140-ಬಿಹೆಚ್ಪಿ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದಲ್ಲದೆ ಹ್ಯುಂಡೈನಿಂದ ಎರವಲು ಪಡೆಯಲಾದ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಅನ್ನು ಸಹ ಆಯ್ಕೆ ರೂಪದಲ್ಲಿರಲಿವೆ.
ವೇರಿಯೆಂಟ್ಗಳು ಮತ್ತು ತಾಂತ್ರಿಕ ಸೌಲಭ್ಯಗಳು
ಹ್ಯಾರಿಯರ್ ಎಕ್ಸ್ಇ
ಆರಂಭಿಕ ಆವೃತ್ತಿಯಾಗಿರುವ ಹ್ಯಾರಿಯಲ್ ಎಕ್ಸ್ಇ ಕಾರುಗಳಲ್ಲಿ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಸ್, ಎಲ್ಇಡಿ ಡಿಆರ್ಎಲ್, 16 ಇಂಚಿನ ಸ್ಟೀಲ್ ವ್ಹೀಲ್ಸ್, ಎಲ್ಇಡಿ ಟೈಲ್ ಲೈಟ್ಸ್ . ಪವರ್ ಅಡ್ಜೆಸ್ಟೆಬಲ್ ಒಆರ್ವಿಎಂಗಳು, ಮ್ಯಾನುವಲ್ ಎಸಿ, ರಿಯರ್ ಎಸಿ ವೆಂಟ್ಸ್, ಪವರ್ ವಿಂಡೋಸ್, 4 ಇಂಚಿನ ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ ಒದಗಿಸಲಾಗಿದೆ.
ಹಾಗೆಯೇ ಪ್ರಯಾಣಿಕರ ಸುರಕ್ಷತೆಗಾಗಿ ಸೆಂಟ್ರಲ್ ಲಾಕಿಂಗ್, ಡ್ಯುಯಲ್ ಏರ್ಬ್ಯಾಗ್ಸ್, ಎಬಿಎಸ್ನೊಂದಿಗೆ ಇಬಿಡಿ ಪಾರ್ಕಿಂಗ್ ಸೆನ್ಸಾರ್ಸ್, ಸ್ಪೀಡ್ ಸೆನ್ಸಿಟಿವ್ ಡೋರ್ ಲಾಕ್, ಸೀಟ್ ಬೆಲ್ಟ್ ರಿಮೈಂಡರ್ ಅನ್ನು ನೀಡಲಾಗಿದೆ.
ಹ್ಯಾರಿಯರ್ ಎಕ್ಸ್ಎಂ
ಎರಡನೇ ಮಾದರಿಯ ಎಕ್ಸ್ಎಂ ಆವೃತ್ತಿಯಲ್ಲಿ ಫ್ರಂಟ್ ಫಾಗ್ ಲ್ಯಾಂಪ್ಸ್, ಫಾಲೋ-ಮೀ-ಹೋಂ ಹೆಡ್ಲ್ಯಾಂಪ್ಸ್, ರಿಯರ್ ವೈಪರ್ಸ್, ಬೂಟ್ ಲ್ಯಾಂಪ್ಸ್, ರಿಯರ್ ಪಾರ್ಸಲ್ ಸೆಲ್ಫ್, 7 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 4 ಸ್ಪೀಕರ್ಸ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಕಂಟ್ರೋಲ್ಸ್, ರಿಮೋಟ್ ಸೆಂಟ್ರಲ್ ಲಾಕಿಂಗ್ ಜೊತೆಗೆ ಇಕೊ, ಸಿಟಿ ಮತ್ತು ಸ್ಪೋರ್ಟ್ ಎಂಬ ಮಲ್ಟಿ ಡ್ರೈವಿಂಗ್ ಮೋಡ್ಗಳನ್ನು ಪಡೆದುಕೊಂಡಿದೆ.
ಹ್ಯಾರಿಯರ್ ಎಕ್ಸ್ಟಿ
ಈ ವೇರಿಯೆಂಟ್ನಲ್ಲಿ ಆಟೋಮ್ಯಾಟಿಕ್ ಹೆಡ್ಲ್ಯಾಂಪ್ಸ್, ಡ್ಯುಯಲ್ ಫಂಕ್ಷನ್ ಎಲ್ಇಡಿ ಡಿಆರ್ಎಲ್, 17 ಇಂಚಿನ ಅಲಾಯ್ ವ್ಹೀಲ್ಸ್, ರಿಯರ್ ಡೀಫಾಗರ್, ಪುಶ್-ಬಟನ್ ಸ್ಟಾರ್ಟ್, 8 ವಿಧಗಳಲ್ಲಿ ಹೊಂದಾಣಿಕೆ ಮಾಡಬಹುದಾದ ಡ್ರೈವರ್ ಸೀಟ್ಸ್, ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಕ್ರೂಸ್ ಕಂಟ್ರೋಲ್ ಅಡ್ಜೆಸ್ಟೆಬಲ್ ಒಆರ್ವಿಎಂಗಳು ಮತ್ತು ರಿವರ್ಸ್ ಕ್ಯಾಮೆರಾ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.
ಹ್ಯಾರಿಯರ್ ಎಕ್ಸ್ಜೆಡ್
ಜೆನಾನ್ ಪ್ರೊಜೆಕ್ಟರ್ ಹೆಡ್ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್, 60:40 ವಿಭಜಿತ ಸೀಟ್ಗಳು, ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್, ಆರು ಏರ್ಬ್ಯಾಗ್ಗಳು, ಇಎಸ್ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.
ಕಾರಿನ ಬೆಲೆಗಳು(ಆನ್ ರೋಡ್ ಪ್ರಕಾರ)
ಕಂಪ್ಯಾಕ್ಟ್ ಎಸ್ಯುವಿ ಕಾರುಗಳಲ್ಲಿ ವಿಶೇಷ ಡಿಸೈನ್ ಹೊತ್ತು ಬಂದಿರುವ ಹ್ಯಾರಿಯರ್ ಕಾರಿನ ಬೆಲೆಯನ್ನು ಆನ್ ರೋಡ್ ಪ್ರಕಾದ ಆರಂಭಿಕವಾಗಿ ರೂ. 16 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯನ್ನು ರೂ. 21 ಲಕ್ಷಕ್ಕೆ ಬಿಡುಗಡೆಗೊಳಿಸುವುದಾಗಿ ಟಾಟಾ ಸಂಸ್ಥೆಯೇ ಹೇಳಿಕೊಂಡಿದೆ.
ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ (ಜಾಗ್ವಾರ್, ಲ್ಯಾಂಡ್ ರೋವರ್, ರೇಂಜ್ ರೋವರ್) ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ವಿನ್ಯಾಸಕ್ಕೆ ಮತ್ತಷ್ಟು ಮೆರಗು ಬಂದಿದೆ.
ಒಟ್ಟಿನಲ್ಲಿ ಪ್ರೀಮಿಯಂ ಎಸ್ಯುವಿ ಕಾರುಗಳ ಸರಣಿಯಲ್ಲಿ ಟಾಟಾ ಹ್ಯಾರಿಯರ್ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಜೀಪ್ ಕಂಪಾಸ್, ಹ್ಯುಂಡೈ ಕ್ರೆಟಾ ಮತ್ತು ಮಹೀಂದ್ರಾ ಎಕ್ಸ್ಯುವಿ500 ಕಾರುಗಳಿಗೆ ಸಾಕಷ್ಟು ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.
Source:gaadiwaadi