ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಎಸ್‌ಯುವಿ ಕಾರು ಮಾರಾಟದಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಟಾಟಾ ಸಂಸ್ಥೆಯು ಹ್ಯಾರಿಯರ್ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ನೀಡಲು ಮುಂದಾಗಿದ್ದು, ಹೊಸ ಕಾರು ಆವೃತ್ತಿಯು ಶೀಘ್ರದಲ್ಲೇ ರಸ್ತೆಗಿಳಿಯಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಸದ್ಯ ಮಾರುಕಟ್ಟೆಯಲ್ಲಿ ಡೀಸೆಲ್ ಆಟೋಮ್ಯಾಟಿಕ್ ಕಾರುಗಳಿಗೆ ಹೆಚ್ಚು ಬೇಡಿಕೆ ಬರುತ್ತಿದ್ದು, ಟಾಟಾ ಸಂಸ್ಥೆಯು ಸಹ ಇದೇ ನಿಟ್ಟಿನಲ್ಲಿ ಹ್ಯಾರಿಯರ್‌ನಲ್ಲೂ ಎಎಂಟಿ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಿದ್ದತೆ ನಡೆಸಿದೆ. ಹೊಸ ಕಾರಿನ ಕಾರ್ಯಕ್ಷಮತೆ ಕುರಿತಂತೆ ಈಗಾಗಲೇ ರೋಡ್ ಟೆಸ್ಟಿಂಗ್ ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋ ಹೊಸ ಕಾರು ಪ್ರದರ್ಶನಗೊಳಿಸಿ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಸದ್ಯ ಹ್ಯಾರಿಯಲ್ಲಿ ಡಿಸೇಲ್ ಮ್ಯಾನುವಲ್ ಆವೃತ್ತಿಗಳನ್ನು ಮಾತ್ರವೇ ಮಾರಾಟ ಮಾಡಲಾಗುತ್ತಿದ್ದು, ಬಹುಬೇಡಿಕೆಯ ಪೆಟ್ರೋಲ್ ಮತ್ತು ಆಟೋಮ್ಯಾಟಿಕ್ ಆವೃತ್ತಿಗಳನ್ನು ಖರೀದಿಗೆ ಬಯಸುವ ಗ್ರಾಹಕರು ಪ್ರತಿಸ್ಪರ್ಧಿ ಕಾರುಗಳತ್ತ ಮುಖ ಮಾಡುತ್ತಿದ್ದಾರೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಈ ಹಿನ್ನಲೆಯಲ್ಲಿ ಪ್ರತಿಸ್ಪರ್ಧಿ ಕಾರುಗಳಿಗೆ ಪೈಪೋಟಿಯಾಗಿ ಪೆಟ್ರೋಲ್ ಎಂಜಿನ್ ಜೊತೆಗೆ ಡೀಸೆಲ್ ಮಾದರಿಯಲ್ಲಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪರಿಚಯಿಸಲು ಸಜ್ಜಾಗುತ್ತಿರುವ ಟಾಟಾ ಸಂಸ್ಥೆಯು ಎಂಜಿ ಮೋಟಾರ್ ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ಮತ್ತಷ್ಟು ಪೈಪೋಟಿ ನೀಡಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಡೀಸೆಲ್ ಆಟೋಮ್ಯಾಟಿಕ್ ಆವೃತ್ತಿಯು ಸಾಮಾನ್ಯ ಕಾರು ಮಾದರಿಗಿಂತಲೂ ರೂ.80 ಸಾವಿರದಿಂದ ರೂ.1 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಹೊಸ ಟ್ರಾನ್ಸ್‌ಮಿಷನ್ ಆಯ್ಕೆಯು ಕಾರು ಮಾರಾಟವನ್ನು ಮತ್ತಷ್ಟು ಹೆಚ್ಚಿಸಲಿದೆ. ಇದೊಂದಿಗೆ ಟಾಟಾ ಸಂಸ್ಥೆಯು ಆಟೋಮ್ಯಾಟಿಕ್ ಹ್ಯಾರಿಯರ್ ಮಾದರಿಯಲ್ಲಿ ಆಟೋಮ್ಯಾಟಿಕ್ ಸನ್‌ರೂಫ್ ಸೌಲಭ್ಯವನ್ನು ಸಹ ಪರಿಚಯಿಸುತ್ತಿದ್ದು, ಸದ್ಯಕ್ಕೆ ಮಾರುಕಟ್ಟೆಯಲ್ಲಿ ಪನೋರೊಮಿಕ್ ಸನ್‌ರೂಫ್ ಸೌಲಭ್ಯವನ್ನು ಬೇಡಿಕೆಯ ಆಧಾರ ಮೇಲೆ ಮಾರಾಟ ಮಾಡಲಾಗುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಇನ್ನು ಹ್ಯಾರಿಯರ್ ಕಾರು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೆರಿಯೆಂಟ್‌ಗಳೊಂದಿಗೆ ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.12.99 ಲಕ್ಷಕ್ಕೆ ಮತ್ತು ಹೈ ಎಂಡ್ ಮಾದರಿಯು ರೂ.16.95 ಲಕ್ಷ ಬೆಲೆ ಹೊಂದಿದ್ದು, ಇತ್ತೀಚೆಗೆ ಬಿಡುಗಡೆಯಾದ ಡಾರ್ಕ್ ಎಡಿಷನ್ ಸದ್ಯ ಭಾರೀ ಬೇಡಿಕೆ ಪಡೆದುಕೊಳ್ಳುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಡಾರ್ಕ್ ಎಡಿಷನ್ ಮಾದರಿಯು ಸಂಪೂರ್ಣ ಕಪ್ಪು ಬಣ್ಣದ ವಿನ್ಯಾಸ ಹೊಂದಿದ್ದು, ಈ ಹಿಂದನಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ. ಎಕ್ಸ್‌ಜೆಡ್ ಆವೃತ್ತಿಯಲ್ಲಿ ಡಾರ್ಕ್ ಎಡಿಷನ್ ಖರೀದಿ ಮಾಡಬಹುದಾಗಿದ್ದು, ಸಾಮಾನ್ಯ ಬಣ್ಣದ ಟಾಪ್ ಎಂಡ್ ಮಾದರಿಗಿಂತ ಡಾರ್ಕ್ ಎಡಿಷನ್ ರೂ.19 ಸಾವಿರ ಹೆಚ್ಚುವರಿ ಬೆಲೆ ಪಡೆದಿದೆ.

Source: Overdrive

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಡಾರ್ಕ್ ಎಡಿಷನ್ ಜೊತೆಗೆ ಡ್ಯುಯಲ್ ಟೋನ್ ಸನ್‌ರೂಫ್, ಆ್ಯಪಲ್ ಕಾರ್ ಪ್ಲೇ ಸೌಲಭ್ಯವನ್ನು ಉನ್ನತಿಕರಿಸಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸೌಲಭ್ಯವು ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಆಟೋಮ್ಯಾಟಿಕ್ ವರ್ಷನ್

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(1,956 ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ. ಇದೀಗ ಬಿಡುಗಡೆಯಾಗಲಿರುವ ಆಟೋಮ್ಯಾಟಿಕ್ ಆವೃತ್ತಿಯಲ್ಲಿ ಹ್ಯುಂಡೈನಿಂದ ಎರವಲು ಪಡೆಯಲಾದ 6-ಸ್ಪೀಡ್ ಗೇರ್‌ಬಾಕ್ಸ್ ಪರಿಚಯಿಸಲಿದ್ದು, ಕಾರಿನ ಒಳಭಾಗದ ತಾಂತ್ರಿಕ ಅಂಶಗಳಲ್ಲಿ ಕೆಲವು ಬದಲಾವಣೆಗಳಾಗಲಿವೆ.

Most Read Articles

Kannada
English summary
According to a report, Tata Motors is planning to launch the Harrier automatic model by February next year.
Story first published: Wednesday, November 6, 2019, 17:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X