ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಟಾಟಾ ಮೋಟಾರ್ಸ್ ಸಂಸ್ಥೆಯು ಹ್ಯಾರಿಯರ್ ಎಸ್‌ಯುವಿ ಆವೃತ್ತಿಯಲ್ಲಿ ಗ್ರಾಹಕರ ಬೇಡಿಕೆಯೆಂತೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸುತ್ತಿದ್ದು, ಇದೇ ಮೊದಲ ಬಾರಿಗೆ ಹ್ಯಾರಿಯರ್‌ನಲ್ಲಿ ಆಲ್ ಬ್ಲ್ಯಾಕ್ ಎಡಿಷನ್ ಆವೃತ್ತಿಯ ಬಿಡುಗಡೆಯ ಸುಳಿವು ನೀಡಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಟಾಟಾ ಸಂಸ್ಥೆಯು ಹ್ಯಾರಿಯರ್ ಎಸ್‌ಯುವಿ ಕಾರು ಮಾರಾಟದಲ್ಲಿ ಸದ್ಯ ಉತ್ತಮ ಮುನ್ನಡೆ ಸಾಧಿಸುತ್ತಿದ್ದು, ಹ್ಯಾರಿಯರ್ ಬಿಡುಗಡೆಯಾದ 6 ತಿಂಗಳ ನಂತರ ಗ್ರಾಹಕರ ಬೇಡಿಕೆಯೆಂತೆ ಹೊಸ ಕಾರಿನಲ್ಲಿ ಕೆಲವು ಬದಲಾವಣೆಗಳನ್ನು ಪರಿಚಯಿಸುತ್ತಿದೆ. ಹ್ಯಾರಿಯರ್ ಕಾರಿನಲ್ಲಿ ಇದೇ ಮೊದಲು ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ಪ್ಯಾನರೊಮಿಕ್ ಸನ್‌ರೂಫ್ ಆಯ್ಕೆಯನ್ನು ನೀಡಲಾಗಿದ್ದು, ಇದರ ಜೊತೆಗೆ ಐಷಾರಾಮಿ ಲುಕ್ ಹೊಂದಿರುವ ಆಲ್ ಬ್ಲ್ಯಾಕ್ ಎಡಿಷನ್ ಮಾದರಿಯನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸುವ ಸುಳಿವು ನೀಡಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಆಲ್ ಬ್ಲ್ಯಾಕ್ ಎಡಿಷನ್ ಮಾದರಿಯು ಸಂಪೂರ್ಣವಾಗಿ ಕಪ್ಪು ಬಣ್ಣದ ವಿನ್ಯಾಸವನ್ನು ಹೊಂದಿದ್ದು, ಇದು ಕಾರಿಗೆ ಐಷಾರಾಮಿ ಲುಕ್ ನೀಡುತ್ತದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಹೊಸ ಎಡಿಷನ್ ಪರಿಚಯಿಸಲಾಗುತ್ತಿದ್ದು, ಜೀಪ್ ಕಂಪಾಸ್, ಎಕ್ಸ್‌ಯುವಿ 500 ಮತ್ತು ಎಂಜಿ ಹೆಕ್ಟರ್ ಕಾರಿಗೆ ಇದು ಮತ್ತಷ್ಟು ಪೈಪೋಟಿ ನೀಡಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಇನ್ನು ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್‌ಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಎಂಜಿ ಹೆಕ್ಟರ್ ಕಾರು ಬೆಲೆಗಳಲ್ಲಿ ಹ್ಯಾರಿಯರ್‌ಗೆ ಸಮನಾಗಿದ್ದು, ಹಲವು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಟಾಟಾ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಹ್ಯಾರಿಯರ್ ಆವೃತ್ತಿಯನ್ನು ಉನ್ನತಿಕರಣಗೊಳಿಸುತ್ತಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಡ್ಯುಯಲ್ ಟೋನ್ ಬಣ್ಣದ ಜೊತೆಗೆ ಪ್ಯಾನರೊಮಿಕ್ ಸನ್‌ರೂಫ್ ಸೇರಿದಂತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯಗಳನ್ನು ಸಹ ಕಡ್ಡಾಯವಾಗಿ ನೀಡುತ್ತಿದ್ದು, ಇದು ಹ್ಯಾರಿಯರ್ ಮಾರಾಟ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಿದೆ. ಇದೀಗ ಹೊಸದಾಗಿ ಆಲ್ ಬ್ಲ್ಯಾಕ್ ಎಡಿಷನ್ ಸೇರಿದಂತೆ ಕ್ಯಾಲಿಸ್ಟೋ ಕಾಪರ್ ಜೊತೆ ಬ್ಲ್ಯಾಕ್ ರೂಫ್, ಅಕ್ರಾಸ್ ವೈಟ್ ಜೊತೆ ಏರಿಯಲ್ ಸಿಲ್ವರ್, ಏರಿಯಲ್ ಸಿಲ್ವರ್ ಜೊತೆ ಬ್ಲ್ಯಾಕ್ ಡ್ಯುಯಲ್ ಟೋನ್ ಮತ್ತು ಪ್ಯಾನರೊಮಿಕ್ ಸನ್‌ರೂಫ್ ಆಯ್ಕೆಗಳನ್ನು ಪಡೆದುಕೊಂಡಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಹ್ಯಾರಿಯರ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ಯಾಲಿಸ್ಟೋ ಕಾಪರ್, ಟೆರಿಮಿಸ್ಟೋ ಗೋಲ್ಡ್, ಏರಿಯಲ್ ಸಿಲ್ವರ್, ಟೆಲಿಸ್ಟೊ ಗ್ರೇ ಮತ್ತು ಅಕ್ರಾಸ್ ವೈಟ್ ಎಂಬ ಐದು ಮೊನೊ ಟೋನ್ ಬಣ್ಣಗಳಲ್ಲಿ ಲಭ್ಯವಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಕೇವಲ ಹ್ಯಾರಿಯರ್ ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಆವೃತ್ತಿಯಲ್ಲಿ ಮಾತ್ರವೇ ನೀಡಲಾಗಿದ್ದು, ಡ್ಯುಯಲ್ ಟೋನಿ ಬಣ್ಣವನ್ನು ಹೊಂದಿರುವ ಮಾದರಿಯು ಸಾಮಾನ್ಯ ಎಕ್ಸ್‌ಜೆಡ್ ಆವೃತ್ತಿಗಿಂತ ಬೆಲೆಯಲ್ಲಿ ರೂ. 20 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿರಲಿವೆ. ಜೊತೆಗೆ ಪ್ಯಾನರೊಮಿಕ್ ಸನ್‌ರೂಫ್ ಸೌಲಭ್ಯವು ಕೂಡಾ ಗ್ರಾಹಕರ ಬೇಡಿಕೆ ಮೇರೆಗೆ ಮಾತ್ರವೇ ಜೋಡಣೆ ಮಾಡಲಾಗುತ್ತಿದ್ದು, ಇದಕ್ಕೂ ಕೂಡಾ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಸದ್ಯ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಟಾಟಾ ಹ್ಯಾರಿಯರ್ ಮಾದರಿಯು ಕಳೆದ ಜನವರಿಯಲ್ಲಿ ಬಿಡುಗಡೆಗೊಂಡ ತಿಂಗಳಿನಿಂದಲೂ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆಯನ್ನು ಕಾಯ್ದುಕೊಂಡು ಬಂದಿದೆ. ಇದೀಗ ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಎಡಿಷನ್ ಜೊತೆಗೆ ಡ್ಯುಯಲ್ ಟೋನ್ ಸನ್‌ರೂಫ್, ಆ್ಯಪಲ್ ಕಾರ್ ಪ್ಲೇ ಸೌಲಭ್ಯವನ್ನು ಉನ್ನತಿಕರಿಸಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸೌಲಭ್ಯವು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಟಾಟಾ ಹ್ಯಾರಿಯರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.13 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.16.56 ಲಕ್ಷ ಬೆಲೆ ಹೊಂದಿದೆ. ಜೊತೆಗೆ ಡ್ಯುಯಲ್ ಟೋನ್ ಖರೀದಿ ಮಾಡಿದ್ದಲ್ಲಿ ಹೆಚ್ಚುವರಿಯಾಗಿ ರೂ.20 ಸಾವಿರ ಪಾವತಿ ಮಾಡಬೇಕಾಗುತ್ತೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಯಾಗಲಿದೆ ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Article Published On: Monday, August 19, 2019, 17:59 [IST]
English summary
Tata Harrier Black Edition Launching In Next Month. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+