ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಜನಪ್ರಿಯ ಕಾರು ಎಸ್‌ಯುವಿ ಮಾದರಿಯಾದ ಹ್ಯಾರಿಯರ್‌ನಲ್ಲಿ ಹೊಸದಾಗಿ ಬ್ಲ್ಯಾಕ್ ಎಡಿಷನ್ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಬಿಡುಗಡೆಯಾಗುವುದಕ್ಕೂ ಮುನ್ನ ಬೆಲೆ ಮಾಹಿತಿಯು ಸೋರಿಕೆಯಾಗಿದೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಸಾಮಾನ್ಯ ಹ್ಯಾರಿಯರ್‌ಗಿಂತಲೂ ವಿಶೇಷ ಬಣ್ಣದ ಆಯ್ಕೆ ಹೊಂದಿರುವ ಬ್ಲ್ಯಾಕ್ ಎಡಿಷನ್ ಹ್ಯಾರಿಯರ್ ಕಾರು ಮುಂದಿನ ತಿಂಗಳು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದ್ದು, ಗ್ರಾಹಕರ ಬೇಡಿಕೆಯೆಂತೆ ಹ್ಯಾರಿಯರ್ ಕಾರು ಹಲವು ಹೊಸ ಬದಲಾವಣೆಗಳನ್ನು ಪಡೆದುಕೊಳ್ಳುತ್ತಿದೆ. ಕಳೆದ ಜನವರಿಯಲ್ಲಿ ಮೊದಲ ಬಾರಿಗೆ ಬಿಡುಗಡೆಯಾಗಿದ್ದ ಹ್ಯಾರಿಯರ್ ಕಾರು ಗ್ರಾಹಕರ ಬೇಡಿಕೆಯೆಂತೆ ಕೆಲವು ಮಹತ್ವದ ಬದಲಾವಣೆ ಪಡೆದುಕೊಂಡಿದ್ದು, ಇದೀಗ ಬ್ಲ್ಯಾಕ್ ಎಡಿಷನ್ ಹೊರತರುತ್ತಿದೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಹ್ಯಾರಿಯರ್ ಮಾರಾಟದಲ್ಲಿ ಸದ್ಯ ಉತ್ತಮ ಮುನ್ನಡೆ ಸಾಧಿಸುತ್ತಿರುವ ಟಾಟಾ ಸಂಸ್ಥೆಯು ಇದೇ ಮೊದಲು ಡ್ಯುಯಲ್ ಟೋನ್ ಬಣ್ಣದೊಂದಿಗೆ ಪ್ಯಾನರೊಮಿಕ್ ಸನ್‌ರೂಫ್ ಆಯ್ಕೆಯನ್ನು ನೀಡಿದ್ದು, ಇದರ ಜೊತೆಯಲ್ಲಿ ಐಷಾರಾಮಿ ಲುಕ್ ಹೊಂದಿರುವ ಆಲ್ ಬ್ಲ್ಯಾಕ್ ಎಡಿಷನ್ ಮಾದರಿಯನ್ನು ಸಹ ನಿರ್ಮಾಣಮಾಡಿದೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಆಲ್ ಬ್ಲ್ಯಾಕ್ ಎಡಿಷನ್ ಮಾದರಿಯು ಸಂಪೂರ್ಣವಾಗಿ ಕಪ್ಪು ಬಣ್ಣದ ವಿನ್ಯಾಸವನ್ನು ಹೊಂದಿದ್ದು, ಇದು ಕಾರಿಗೆ ಐಷಾರಾಮಿ ಲುಕ್ ನೀಡುತ್ತದೆ. ಹೀಗಾಗಿ ಗ್ರಾಹಕರ ಬೇಡಿಕೆಯೆಂತೆ ಹೊಸ ಎಡಿಷನ್ ಪರಿಚಯಿಸಲಾಗುತ್ತಿದ್ದು, ಜೀಪ್ ಕಂಪಾಸ್, ಎಕ್ಸ್‌ಯುವಿ 500 ಮತ್ತು ಎಂಜಿ ಹೆಕ್ಟರ್ ಕಾರಿಗೆ ಇದು ಮತ್ತಷ್ಟು ಪೈಪೋಟಿ ನೀಡಲಿದೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಇನ್ನು ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್‌ಗೆ ಪೈಪೋಟಿಯಾಗಿ ಬಿಡುಗಡೆಯಾಗಿರುವ ಎಂಜಿ ಹೆಕ್ಟರ್ ಕಾರು ಬೆಲೆಗಳಲ್ಲಿ ಹ್ಯಾರಿಯರ್‌ಗೆ ಸಮನಾಗಿದ್ದು, ಹಲವು ಹೊಸ ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದೆ. ಇದರಿಂದ ಎಚ್ಚೆತ್ತುಕೊಂಡಿರುವ ಟಾಟಾ ಸಂಸ್ಥೆಯು ಗ್ರಾಹಕರ ಬೇಡಿಕೆಯೆಂತೆ ಹ್ಯಾರಿಯರ್ ಆವೃತ್ತಿಯನ್ನು ಉನ್ನತಿಕರಣಗೊಳಿಸುತ್ತಿದೆ. ಡ್ಯುಯಲ್ ಟೋನ್ ಬಣ್ಣದ ಜೊತೆಗೆ ಪ್ಯಾನರೊಮಿಕ್ ಸನ್‌ರೂಫ್ ಸೇರಿದಂತೆ ಆ್ಯಪಲ್ ಕಾರ್ ಪ್ಲೇ ಮತ್ತು ಆಂಡ್ರಾಯಿಡ್ ಆಟೋ ಸೌಲಭ್ಯಗಳನ್ನು ಸಹ ಕಡ್ಡಾಯವಾಗಿ ನೀಡುತ್ತಿದ್ದು, ಇದು ಹ್ಯಾರಿಯರ್ ಮಾರಾಟ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಇದೀಗ ಹೊಸದಾಗಿ ಆಲ್ ಬ್ಲ್ಯಾಕ್ ಎಡಿಷನ್ ಸೇರಿದಂತೆ ಕ್ಯಾಲಿಸ್ಟೋ ಕಾಪರ್ ಜೊತೆ ಬ್ಲ್ಯಾಕ್ ರೂಫ್, ಅಕ್ರಾಸ್ ವೈಟ್ ಜೊತೆ ಏರಿಯಲ್ ಸಿಲ್ವರ್, ಏರಿಯಲ್ ಸಿಲ್ವರ್ ಜೊತೆ ಬ್ಲ್ಯಾಕ್ ಡ್ಯುಯಲ್ ಟೋನ್ ಮತ್ತು ಪ್ಯಾನರೊಮಿಕ್ ಸನ್‌ರೂಫ್ ಆಯ್ಕೆಗಳನ್ನು ಪಡೆದುಕೊಂಡಿದೆ. ಹ್ಯಾರಿಯರ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಕ್ಯಾಲಿಸ್ಟೋ ಕಾಪರ್, ಟೆರಿಮಿಸ್ಟೋ ಗೋಲ್ಡ್, ಏರಿಯಲ್ ಸಿಲ್ವರ್, ಟೆಲಿಸ್ಟೊ ಗ್ರೇ ಮತ್ತು ಅಕ್ರಾಸ್ ವೈಟ್ ಎಂಬ ಐದು ಮೊನೊ ಟೋನ್ ಬಣ್ಣಗಳಲ್ಲಿ ಲಭ್ಯವಿದೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಕೇವಲ ಹ್ಯಾರಿಯರ್ ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಆವೃತ್ತಿಯಲ್ಲಿ ಮಾತ್ರವೇ ನೀಡಲಾಗಿದ್ದು, ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರುವ ಮಾದರಿಯು ಸಾಮಾನ್ಯ ಎಕ್ಸ್‌ಜೆಡ್ ಆವೃತ್ತಿಗಿಂತ ಬೆಲೆಯಲ್ಲಿ ರೂ. 20 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿರಲಿವೆ. ಜೊತೆಗೆ ಪ್ಯಾನರೊಮಿಕ್ ಸನ್‌ರೂಫ್ ಸೌಲಭ್ಯವು ಕೂಡಾ ಗ್ರಾಹಕರ ಬೇಡಿಕೆ ಮೇರೆಗೆ ಮಾತ್ರವೇ ಜೋಡಣೆ ಮಾಡಲಾಗುತ್ತಿದ್ದು, ಇದಕ್ಕೂ ಕೂಡಾ ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಸದ್ಯ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಟಾಟಾ ಹ್ಯಾರಿಯರ್ ಮಾದರಿಯು ಕಳೆದ ಜನವರಿಯಲ್ಲಿ ಬಿಡುಗಡೆಗೊಂಡ ತಿಂಗಳಿನಿಂದಲೂ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆಯನ್ನು ಕಾಯ್ದುಕೊಂಡು ಬಂದಿದೆ. ಇದೀಗ ಹೊಸ ಕಾರಿನಲ್ಲಿ ಆಲ್ ಬ್ಲ್ಯಾಕ್ ಎಡಿಷನ್ ಜೊತೆಗೆ ಡ್ಯುಯಲ್ ಟೋನ್ ಸನ್‌ರೂಫ್, ಆ್ಯಪಲ್ ಕಾರ್ ಪ್ಲೇ ಸೌಲಭ್ಯವನ್ನು ಉನ್ನತಿಕರಿಸಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸೌಲಭ್ಯವು ಮತ್ತಷ್ಟು ಗ್ರಾಹಕರನ್ನು ಸೆಳೆಯಲಿದೆ.

MOST READ: ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಟಾಟಾ ಹ್ಯಾರಿಯರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ. ವೆರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.13 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.16.56 ಲಕ್ಷ ಬೆಲೆ ಹೊಂದಿದ್ದು, ಬ್ಲ್ಯಾಕ್ ಎಡಿಷನ್ ಮಾದರಿಯು ರೂ. 16.75 ಲಕ್ಷ ಬೆಲೆ ಹೊಂದಬಹುದು ಎನ್ನಲಾಗಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಎಂಜಿನ್ ಸಾಮರ್ಥ್ಯ ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಟಾಟಾ ಹ್ಯಾರಿಯರ್ ಬ್ಲ್ಯಾಕ್ ಎಡಿಷನ್ ಬೆಲೆ ಮಾಹಿತಿ ಸೋರಿಕೆ

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಪಡೆದುಕೊಂಡಿದೆ.

Source: Team-BHP forum

Most Read Articles

Kannada
English summary
Tata Harrier Black Edition Prices Leaked: Expected To Be Around Rs 16.75 lakh.
Story first published: Friday, August 30, 2019, 15:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X