ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕಾರು ಎಸ್‌ಯುವಿ ಮಾದರಿಯಾದ ಹ್ಯಾರಿಯರ್‌ನಲ್ಲಿ ಹೊಸದಾಗಿ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದೆ. ಹೊಸ ಕಾರು ಸಂಪೂರ್ಣ ಕಪ್ಪು ಬಣ್ಣದ ವಿನ್ಯಾಸ ಹೊಂದಿದ್ದು, ಈ ಹಿಂದನಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಖರೀದಿಗೆ ಲಭ್ಯವಿರುವ ಸಾಮಾನ್ಯ ಹ್ಯಾರಿಯರ್‌ ಆವೃತ್ತಿಗಿಂತಲೂ ವಿಶೇಷ ಬಣ್ಣದ ಆಯ್ಕೆ ಹೊಂದಿರುವ ಡಾರ್ಕ್ ಎಡಿಷನ್ ಹ್ಯಾರಿಯರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.16.76 ಲಕ್ಷಕ್ಕೆ ಬಿಡುಗಡೆಗೊಂಡಿದ್ದು, ಹ್ಯಾರಿಯರ್ ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಆವೃತ್ತಿಯಲ್ಲಿ ಡಾರ್ಕ್ ಎಡಿಷನ್ ಖರೀದಿ ಮಾಡಬಹುದಾಗಿದ್ದು, ಸಾಮಾನ್ಯ ಬಣ್ಣದ ಟಾಪ್ ಎಂಡ್ ಮಾದರಿಗಿಂತ ಡಾರ್ಕ್ ಎಡಿಷನ್ ರೂ.19 ಸಾವಿರ ಹೆಚ್ಚುವರಿ ಬೆಲೆ ಪಡೆದಿದೆ.

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಡಾರ್ಕ್ ಎಡಿಷನ್ ಹ್ಯಾರಿಯರ್ ಮಾದರಿಯು ಸಂಪೂರ್ಣವಾಗಿ ಕಪ್ಪು ಬಣ್ಣವನ್ನು ಹೊಂದಿದ್ದು, ಹೊಸದಾಗಿ 17-ಇಂಚಿನ ಬ್ಲ್ಯಾಕ್ ಅಲಾಯ್ ವೀಲ್ಹ್, ಡಾರ್ಕ್ ಬ್ಯಾಡ್ಜ್ ಹೊರತುಪಡಿಸಿ ಈ ಹಿಂದಿನಂತೆಯೇ ಬಹುತೇಕ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಸದ್ಯ ಮಧ್ಯಮ ಗಾತ್ರದ ಎಸ್‌ಯುವಿ ಕಾರು ಮಾರಾಟದಲ್ಲಿ ಮುನ್ನುಗ್ಗುತ್ತಿರುವ ಟಾಟಾ ಹ್ಯಾರಿಯರ್ ಮಾದರಿಯು ಕಳೆದ ಜನವರಿಯಲ್ಲಿ ಬಿಡುಗಡೆಗೊಂಡ ತಿಂಗಳಿನಿಂದಲೂ ಕಾರು ಮಾರಾಟದಲ್ಲಿ ಉತ್ತಮ ಬೇಡಿಕೆಯನ್ನು ಕಾಯ್ದುಕೊಂಡು ಬಂದಿದೆ.

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಇದೀಗ ಹೊಸ ಕಾರಿನಲ್ಲಿ ಡಾರ್ಕ್ ಎಡಿಷನ್ ಜೊತೆಗೆ ಡ್ಯುಯಲ್ ಟೋನ್ ಸನ್‌ರೂಫ್, ಆ್ಯಪಲ್ ಕಾರ್ ಪ್ಲೇ ಸೌಲಭ್ಯವನ್ನು ಉನ್ನತಿಕರಿಸಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸೌಲಭ್ಯವು ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಟಾಟಾ ಹ್ಯಾರಿಯರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ವೆರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.13 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.16.56 ಲಕ್ಷ ಬೆಲೆ ಹೊಂದಿದ್ದು, ಇದೀಗ ಡಾರ್ಕ್ ಎಡಿಷನ್ ಮಾದರಿಯು ರೂ. 16.75 ಲಕ್ಷ ಬೆಲೆ ಹೊಂದಿದೆ.

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಇದರೊಂದಿಗೆ ಹ್ಯಾರಿಯರ್‌ನಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆಯನ್ನು ಕೂಡಾ ನೀಡಲಾಗುತ್ತಿದ್ದು, ಕೇವಲ ಹ್ಯಾರಿಯರ್ ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಆವೃತ್ತಿಯಲ್ಲಿ ಮಾತ್ರವೇ ನೀಡಲಾಗುತ್ತಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಡ್ಯುಯಲ್ ಟೋನ್ ಬಣ್ಣವನ್ನು ಹೊಂದಿರುವ ಮಾದರಿಯು ಸಾಮಾನ್ಯ ಎಕ್ಸ್‌ಜೆಡ್ ಆವೃತ್ತಿಗಿಂತ ಬೆಲೆಯಲ್ಲಿ ರೂ. 20 ಸಾವಿರ ಹೆಚ್ಚುವರಿ ಬೆಲೆ ಪಡೆದುಕೊಂಡಿದಿದ್ದು, ಜೊತೆಗೆ ಗ್ರಾಹಕರ ಬೇಡಿಕೆಯೆಂತೆ ಪ್ಯಾನರೊಮಿಕ್ ಸನ್‌ರೂಫ್ ಸೌಲಭ್ಯವನ್ನು ಕೂಡಾ ಹೆಚ್ಚುವರಿ ಮೊತ್ತದೊಂದಿಗೆ ಜೋಡಣೆ ಮಾಡಲಾಗುತ್ತಿದೆ.

MOST READ: ಮಕಾಡೆ ಮಲಗಿರುವ ಆಟೋ ಉದ್ಯಮಕ್ಕೆ ಮತ್ತೆ ಚುರುಕು ನೀಡಿದ ಕೇಂದ್ರ ಸರ್ಕಾರ..!

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

MOST READ: ಡೀಸೆಲ್ ಎಂಜಿನ್ ಸ್ಥಗಿತಗೊಳಿಸುವ ವಿಚಾರಕ್ಕೆ ಸ್ಪಷ್ಟನೆ ನೀಡಿದ ಮಾರುತಿ ಸುಜುಕಿ

ಟಾಟಾ ಹ್ಯಾರಿಯರ್‌ ಎಸ್‌ಯುವಿ ಆವೃತ್ತಿಯಲ್ಲಿ ಟಾರ್ಕ್ ಎಡಿಷನ್ ಬಿಡುಗಡೆ

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಪಡೆದುಕೊಂಡಿದೆ.

Article Published On: Friday, August 30, 2019, 20:31 [IST]
English summary
Tata Harrier Dark Edition launched in India at Rs 16.76 lakhs. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+