ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಟಾಟಾ ಹ್ಯಾರಿಯರ್ ಕಾರ್ ಅನ್ನು ಮೊದಲ ಬಾರಿಗೆ 2018ರ ಆಟೋ ಎಕ್ಸ್ ಪೋದಲ್ಲಿ ಪ್ರದರ್ಶಿಸಲಾಗಿತ್ತು. ಪ್ರದರ್ಶಿಸಲಾದ ಕಾರಿನಲ್ಲಿ ಪನೋರಾಮಿಕ್ ಸನ್‍‍‍ರೂಫ್ ಅಳವಡಿಸಲಾಗಿತ್ತು. ಈ ಸನ್‍‍ರೂಫ್ ಹೊಂದಿದ್ದ ಕಾರ್ ಅನ್ನು ಹಲವು ಜನ ಇಷ್ಟಪಟ್ಟಿದ್ದರು.

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಆದರೆ ಕಂಪನಿಯು ಟಾಟಾ ಹ್ಯಾರಿಯರ್ ಬಿಡುಗಡೆಗೊಳಿಸಿದ ಕಾರುಗಳು ಸನ್‍‍ರೂಫ್ ಹೊಂದಿರಲಿಲ್ಲ. ಟಾಟಾ ಮೋಟಾರ್ಸ್ ಸನ್‍‍ರೂಫ್‍‍ಗಳನ್ನು ಅಧಿಕೃತ ಬಿಡಿಭಾಗಗಳನ್ನಾಗಿ ಬಿಡುಗಡೆಗೊಳಿಸಿದೆ. ಈ ಬಿಡಿಭಾಗಕ್ಕೆ ರೂ.95,100 ಹಾಗೂ ಇನ್ಸ್ ಸ್ಟಾಲೇಷನ್ ಶುಲ್ಕವನ್ನು ಪ್ರತ್ಯೇಕವಾಗಿ ನಿಗದಿಪಡಿಸಿದೆ. ಟಾಟಾ ಕಂಪನಿಯು ಈ ಬಿಡಿಭಾಗದ ಮೇಲೆ ಎರಡು ವರ್ಷಗಳ ವಾರಂಟಿಯನ್ನು ಸಹ ನೀಡಲಿದೆ.

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಹೊಸದಾಗಿ ಹ್ಯಾರಿಯರ್ ಕಾರುಗಳನ್ನು ಖರೀದಿಸುವವರು ಸನ್‍‍ರೂಫ್ ಹೊಂದಿರುವ ಕಾರುಗಳನ್ನು ಪಡೆಯಲಿದ್ದಾರೆ. ಸನ್‍‍ರೂಫ್‍‍ಗಳನ್ನು ಹೊಂದಿಲ್ಲದೇ ಇರುವವರು ಈ ಬಿಡಿಭಾಗವನ್ನು ಹೆಚ್ಚುವರಿಯಾಗಿ ಅಳವಡಿಸಿಕೊಳ್ಳಬಹುದು. ಈ ಎಲೆಕ್ಟ್ರಿಕ್ ಸನ್‍‍ರೂಫ್‍ಗಳ ನಿಖರವಾದ ಗಾತ್ರವನ್ನು ಕಂಪನಿಯು ಬಹಿರಂಗಪಡಿಸಿಲ್ಲ.

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಆದರೆ ಇವುಗಳನ್ನು ಅಳವಡಿಸಿಕೊಳ್ಳುವುದರಿಂದ ವಾಹನಗಳ ವಾರಂಟಿಗೆ ಯಾವುದೇ ತೊಂದರೆಯಾಗುವುದಿಲ್ಲವೆಂದು ಕಂಪನಿಯು ತಿಳಿಸಿದೆ. ಟಾಟಾ ಹ್ಯಾರಿಯರ್‍‍‍ನಲ್ಲಿ ಸನ್‍‍ರೂಫ್‍‍ಗಳನ್ನು, ಟಾಟಾ ಸರ್ವಿಸ್ ಸೆಂಟರ್‍‍ಗಳಲ್ಲಿ ಅಳವಡಿಸಿಕೊಳ್ಳಬಹುದು.

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಟಾಟಾ ಕಂಪನಿಯು, ಸನ್‍‍ರೂಫ್‍‍ಗಳನ್ನು ಹೊಂದಿರುವ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಜೀಪ್ ಕಂಪಾಸ್ ಹಾಗೂ ಎಂಜಿ ಹೆಕ್ಟರ್ ಕಾರುಗಳಿಗೆ ಪೈಪೋಟಿ ನೀಡಲು ಟಾಟಾ ಹ್ಯಾರಿಯರ್‍‍ನಲ್ಲಿ ಸನ್‍‍ರೂಫ್‍‍ಗಳನ್ನು ನೀಡುತ್ತಿದೆ.

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಬಹುತೇಕ ಎಲ್ಲಾ ಕಂಪನಿಗಳ ಎಲ್ಲಾ ಸೆಗ್‍‍ಮೆಂಟ್‍‍ಗಳಲ್ಲಿರುವ ಕಾರುಗಳಲ್ಲಿ ಸನ್‍‍ರೂಫ್‍‍ಗಳನ್ನು ನೀಡಲಾಗುತ್ತಿದೆ. ಸಣ್ಣ ಕಾರುಗಳಿಂದ ಹಿಡಿದು, ಎಸ್‍‍ಯುವಿಗಳವರೆಗೆ ಎಲ್ಲಾ ಕಾರುಗಳು ಸನ್‍‍ರೂಫ್‍‍ಗಳನ್ನು ಹೊಂದುತ್ತಿವೆ. ಆದ ಕಾರಣ ಟಾಟಾ ಮೋಟಾರ್ಸ್ ಸನ್‍‍ರೂಫ್ ಅನ್ನು ಬಿಡಿಭಾಗಗಳಾಗಿ ಮಾರಾಟ ಮಾಡುತ್ತಿದೆ.

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಟಾಟಾ ಕಂಪನಿಯು ಟಾಟಾ ಹೆಕ್ಸಾ ಕಾರಿನಲ್ಲಿ ಮಾತ್ರ ಸನ್‍‍ರೂಫ್‍‍ಗಳನ್ನು ಅಳವಡಿಸಿ ಮಾರಾಟ ಮಾಡುತ್ತಿದೆ. ಟಾಟಾ ಮೋಟಾರ್ಸ್ ಕಂಪನಿಯು ಈ ಎಲೆಕ್ಟ್ರಿಕ್ ಸನ್‍‍ರೂಫ್‍ಗಳನ್ನು ಟಾಟಾ ಮೋಟಾರ್ಸ್‍‍ನ ಜಿನಿಯನ್ ಆಕ್ಸೆಸರೀಸ್‍‍ಗಳ ಮೂಲಕ ಮಾರಾಟ ಮಾಡುತ್ತಿದೆ.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಹ್ಯಾರಿಯರ್‍‍ನ ಎಲೆಕ್ಟ್ರಿಕ್ ಸನ್‍‍ರೂಫ್ ಹೆಚ್ 300 ಅನ್ನು ವೆಬಾಸ್ಟೊ ಕಂಪನಿಯು ತಯಾರಿಸಿ, ಅಳವಡಿಸುತ್ತದೆ. ಅಳವಡಿಸಿದ ದಿನದಿಂದ ಎರಡು ವರ್ಷಗಳ ವಾರಂಟಿ ನೀಡುತ್ತದೆ. ಟಾಟಾ ಕಂಪನಿಯ ಪ್ರಕಾರ ಹೆಚ್ 300 ಸನ್‍‍ರೂಫ್, ಹೊಸ ಗಾಳಿಯನ್ನು ನೀಡುವುದರ ಜೊತೆಗೆ ಕ್ಯಾಬಿನ್ ಒಳಗೆ ಹೆಚ್ಚು ಬೆಳಕು ಬೀಳುವಂತೆ ಮಾಡುತ್ತದೆ.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಹೆಚ್ 300 ಸನ್‌ರೂಫ್ ಟಿಂಟೆಡ್ ಪ್ರೊಟೆಕ್ಟಿವ್ ವೀನಸ್ ಗ್ಲಾಸ್ ಹೊಂದಿದೆ. ಇದು ಎಷ್ಟೇ ಪ್ರಮಾಣದ ನೈಸರ್ಗಿಕ ಬೆಳಕಿದ್ದರೂ ಅದರಲ್ಲಿರುವ ಯುವಿ ರೇಡಿಯೆಷನ್ ಹಾಗೂ ಸೂರ್ಯನ ಕಿರಣಗಳನ್ನು ಕಡಿಮೆ ಮಾಡುತ್ತದೆ. ಹೊಸ ಸನ್‌ರೂಫ್ ಹೆಚ್ಚು ಬೇಡಿಕೆಯನ್ನು ಹೊಂದಲಿದೆ ಎಂಬುದು ಕಂಪನಿಯ ಅಭಿಪ್ರಾಯವಾಗಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಹ್ಯಾರಿಯರ್‍‍ಗಳಿಗಾಗಿ ಸನ್‍‍ರೂಫ್‍ ಮಾರಾಟ ಮಾಡಲಿದೆ ಟಾಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ಸನ್‍‍ರೂಫ್‍‍ಗಳಿರುವ ಎಸ್‍‍ಯುವಿಯನ್ನು ಪ್ರದರ್ಶಿಸಿ ನಂತರ ಸನ್‍‍ರೂಫ್ ಇಲ್ಲದಿರುವ ಎಸ್‍‍ಯುವಿಯನ್ನು ಯಾವ ಕಾರಣಕ್ಕೆ ಬಿಡುಗಡೆಗೊಳಿಸಿತು ಎಂದು ತಿಳಿದು ಬಂದಿಲ್ಲ. ಎಂ‍‍ಜಿ ಹೆಕ್ಟರ್ ಹಾಗೂ ಕಿಯಾ ಸೆಲ್ಟೋಸ್ ಕಾರುಗಳ ಬಿಡುಗಡೆಯ ನಂತರ ಹ್ಯಾರಿಯರ್ ಕಾರಿನ ಮಾರಾಟ ಪ್ರಮಾಣವು ಕುಸಿದಿದೆ. ಸನ್‍‍ರೂಫ್‍‍ಗಳನ್ನು ಅಳವಡಿಸಿ ಮಾರಾಟ ಮಾಡಿದ ನಂತರ ಹ್ಯಾರಿಯರ್ ಕಾರುಗಳ ಮಾರಾಟವು ಚೇತರಿಸಿ ಕೊಳ್ಳಲಿದೆಯಾ ಕಾದು ನೋಡೋಣ.

Most Read Articles

Kannada
English summary
Tata Harrier Sunroof Pricing, Warranty, And Details - Read in kannada
Story first published: Tuesday, August 27, 2019, 12:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X