ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಇದು ಸುರಕ್ಷತೆಯ ವಿಚಾರದಲ್ಲಿ ನೆಕ್ಸಾನ್ ಕಾರಿನ ನಂತರ ಹೆಚ್ಚು ಸದ್ದು ಮಾಡುತ್ತಿರುವ ಕಾರು. ಟಾಟಾ ಮೋಟಾರ್ಸ್ ಸಂಸ್ಥೆಯು ಕ್ಯಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ಉತ್ತಮ ಜನಪ್ರೀಯತೆಯನ್ನು ಪಡೆಯಲು ಹ್ಯಾರಿಯರ್ ಎಸ್‍ಯುವಿ ಕಾರನ್ನು ಇದೆ ವರ್ಷದ ಜನವರಿಯಲ್ಲಿ ಬಿಡುಗಡೆ ಮಾಡಿತ್ತು. ಹಾಗೆಯೆ ಇತ್ತೀಚೆಗಷ್ಟೆ ಗ್ರಾಹಕರ ಒತ್ತಾಯದ ಮೆರೆಗೆ ಈ ಕಾರಿನ ಡ್ಯುಯಲ್ ಟೋನ್ ಮಾದರಿಯನ್ನು ಸಹ ಬಿಡುಗಡೆ ಮಾಡಲಾಗಿತ್ತು.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಸಧ್ಯ ದೇಶಿಯ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್, ಮಹೀಂದ್ರಾ ಎಕ್ಸ್‌‌ಯುವಿ 500 ಮತ್ತು ಇನ್ನಿತರೆ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳಿಗೆ ಪೈಪೋಟಿ ನೀಡುತ್ತಿರುವ ಈ ಕಾರು ಪ್ರತೀ ತಿಂಗಳು ಸುಮಾರು 1500 ರಿಂದ 2000ವರೆಗು ಬುಕ್ಕಿಂಗ್ ಅನ್ನು ಪಡೆದುಕೊಳ್ಳುತ್ತಿದೆ. ಹಾಗೆಯೆ ಈ ಕಾರು 2018ರ ಐಪಿಎಲ್‍ನ ಅಫಿಶಿಯಲ್ ಕಾರು ಕೂಡಾ ಆಗಿತ್ತು. ಇದೀಗ ವಿಷಯ ಏನಪ್ಪಾ ಅಂದ್ರೆ ಮೇಲೆ ಹೇಳಿರುವ ಹಾಗೆ ಡ್ಯುಯಲ್ ಟೋನ್ ಬಣ್ಣದಲ್ಲಿ ಬಿಡುಗಡೆ ಮಾಡಲಾದ ಈ ಕಾರನ್ನು ಎಸ್ಆರ್‍‍ಟಿ ಕೊಯಂಬತ್ತೂರ್‍‍ರವರು ರೇಂಜ್ ರೋವರ್ ಮಾದರಿಯಲ್ಲಿ ತಯಾರು ಮಾಡಿದ್ದಾರೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಈ ಮಾಡಿಫೈ ಮಾಡಲಾದ ಟಾಟಾ ಹ್ಯಾರಿಯರ್ ಕಾರು ರೇಂಜ್ ರೋವರ್ ಕಾರಿನಿಂಡ ಸ್ಪೂರ್ತಿಯನ್ನು ಪಡೆದುಕೊಂಡಿದ್ದು, ಈ ಕಾರಿನಲ್ಲಿ ರೆಡ್ ಬಾದಿ ಪೆಯಿಂಟ್, ಕಪ್ಪು ಬಣ್ಣದಿಂದ ಸಜ್ಜುಗೊಂಡ ಪಿಲ್ಲರ್‍‍ಗಳು, ಹಾಗಯೆ ಕಪ್ಪು ಬಣ್ಣದಿಂದ ಸಜ್ಜುಗೊಂಡ ರೂಫ್, ವಿಂಗ್ ಮಿರರ್ಸ್ ಮತ್ತು ಫ್ರಟ್ ಗ್ರಿಲ್ ಅನ್ನು ಹೊಂದಿದೆ. ಈ ಕಾರು ಮತ್ತಷ್ಟು ಆಕರ್ಷಕವಾಗಿ ಕಾಣಲು ಹೆಡ್‍‍ಲ್ಯಾಂಪ್ಸ್ ಮತ್ತು ಟೈಲ್ ಲ್ಯಾಂಪ್ಸ್ ಕೆಳಭಾಗದಲ್ಲಿಯು ಸಹ ಕಪ್ಪು ಬಣ್ಣವನ್ನು ನೀಡಲಾಗಿದೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಈ ಕಾರಿನಲ್ಲಿ ಮತ್ತೊಂದು ಹೈಲೈಟ್ ಏನಪ್ಪಾ ಅಂದ್ರೆ ಇದಕ್ಕೆ ನೀಡಲಾದ ಕಪ್ಪು ಬಣ್ಣದ ಅಲಾಯ್ ವ್ಹೀಲ್ಸ್. ಈ ಕಾರಿಗೆ ಇಂಟಿಗ್ರೇಟೆಡ್ ರೂಫ್ ಸ್ಪಾಯ್ಲರ್ ಮತ್ತು ಶಾರ್ಕ್ ಫಿನ್ ಆಂಟೆನಾ ಅನ್ನು ಸಹ ಕಪ್ಪು ಬಣ್ಣದಿಂಡ ಸಜ್ಜುಗೊಳಿಸಲಾಗಿದೆ. ಕಾರನ್ನು ನೋಡಿದ ತಕ್ಷಣವೇ ಇದೊಂದು ರೇಂಜ್ ರೋವರ್ ಕಾರಿನ ಮತ್ತೊಂದು ಹೊಸ ವೇರಿಯೆಂಟ್ ಎಂದು ಅನಿಸುತ್ತೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಬೆಲೆ

ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಹ್ಯಾರಿಯರ್ ಕಾಂಪ್ಯಾಕ್ಟ್ ಎಸ್‍ಯುವಿ ಕಾರನ್ನು ಜನವರಿ 2019ರಲ್ಲಿ ಬಿಡುಗಡೆ ಮಾಡಲಾಗಿದ್ದು, ಕಳೆದ ತಿಂಗಳು ಮೊದಲ್ ಬಾರಿಗೆ ಬೆಲೆಯಲ್ಲಿ ಏರಿಕೆಯನ್ನು ಕಂಡಿತ್ತು. ಟಾಟಾ ಹ್ಯಾರಿಯರ್ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿ ಎಕ್ಸ್ ಶೋರುಂ ಪ್ರಕಾರ ರೂ. 13 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ಎಸ್‌ಯುವಿ ಮಾದರಿಯ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಎಂಜಿನ್ ಸಾಮರ್ಥ್ಯ

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಇದು ರೇಂಜ್ ರೋವರ್‍‍ನಿಂದ ಸ್ಪೂರ್ತಿ ಪಡೆದ ಟಾಟಾ ಹ್ಯಾರಿಯರ್

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Article Published On: Tuesday, July 16, 2019, 11:25 [IST]
English summary
Tata Harrier SUV Customised by SRT Coimbatore. Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+