ಅಧಿಕ ಪವರ್ ಔಟ್‍ಪುಟ್ ನೀಡಲಿದೆ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಈ ಕಾರು ಬಿಡುಗಡೆಘೂ ಮುನ್ನವೇ ಇದರ ದೇಶಿಯ್ ಅಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ತುಹಾಕಿತ್ತು. ಇದೇ ವರ್ಷದ ಪ್ರಾರಂಭದಲ್ಲಿ ಬಿಡುಗಡೆಯಾದ ಈ ಕಾರು ಆಕರ್ಷಕವಾದ ವಿನ್ಯಾಸವನ್ನು ಮತ್ತು ಇನ್ನಿತರೆ ವಿಶೇಷ ಫೀಚರ್‍‍ಗಳನ್ನು ಪಡೆದ ಕಾರಣ ಮಾರುಕಟ್ಟೆಯಲ್ಲಿ ಇಂದಿಗೂ ಸಹ ಸೆಗ್ಮೆಂಟ್‍ನಲ್ಲಿ ಹೆಚ್ಚಿನ ಮಾರಾಟವನ್ನು ಕಾಣುತ್ತಿದೆ.

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಕಾರು ಬಿಡಗಡೆಗೊಂಡಾಗಿನಿಂದಲೂ ಕೇವಲ ಒಂದು ಎಂಜಿನ್ ಮತ್ತು ಒಂದೇ ಗೇರ್‍‍ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, ಶೀಘ್ರವೇ ಅಧಿಕ ಸಾಮರ್ಥ್ಯ ನೀಡುವ ಮಾದರಿಯಲ್ಲಿ ಅಭಿವೃದ್ಧಿಗೊಳ್ಳಲಿದೆ. ಏಕೆಂದರೆ ಈ ಕಾರಿನಲ್ಲಿ ನೀಡಲಾದ 2.0 ಲೀಟರ್ ಡೀಸೆಲ್ ಎಂಜಿನ್ ಅನ್ನು ಜೀಪ್ ಕಂಪಾಸ್ ಕಾರಿನಲ್ಲಿಯು ಸಹ ನೀಡಲಾಗಿದ್ದು, ಹ್ಯಾರಿಯರ್‍ ಗಿಂತಲೂ ಜೀಪ್ ಕಂಪಾಸ್ ಹೆಚ್ಚಿನ ಪವರ್ ಔಟ್‍ಪುಟ್ ಅನ್ನು ನೀಡುತ್ತಿದೆ.

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಜೀಪ್ ಕಂಪಾಸ್ ಕಾರು 2.0 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 170 ಬಿಹೆಚ್‍ಪಿ ಉತ್ಪಾದಿಸಿದ್ದಲ್ಲಿ, ಟಾಟಾ ಹ್ಯಾರಿಯರ್ 140 ಬಿಹೆಚ್‍ಪಿ ಉತ್ಪಾದಿಸುತ್ತದೆ. ಆದರೆ ಎರಡೂ ಕಾರುಗಳು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ನಿಟ್ಟಿನಲ್ಲಿ ಹ್ಯಾರಿಯರ್ ಕಾರಿನ ಮಾರಾಟವನ್ನು ಮತ್ತಷ್ಟು ಅಧಿಕಗೊಳಿಸಲು ಟಾಟಾ ಮೋಟಾರ್ಸ್ ಸಂಸ್ಥೆಯು ಬಿಎಸ್-6 ಆಧಾರಿತ ಎಂಜಿನ್ ಅನ್ನು ನೀಡಲಿದೆ ಎಂದು ಕಾರ್‍‍ಟಾಕ್ ವರದಿಗಳು ತಿಳಿಸುತ್ತಿದೆ.

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಬಿಎಸ್-6 ಆಧಾರಿತ 2.0 ಲೀಟರ್ ಕ್ರೆಯೋಟೆಕ್ ಡೀಸೆಲ್ ಎಂಜಿನ್ ಪಡೆದಿದ್ದೆ ಆದಲ್ಲಿ 170ಬಿಹೆಚ್‍ಪಿ ಮತ್ತು 350 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದ್ದು, ಜೀಪ್ ಕಂಪಾಸ್ ನಂತಯೆ ಪವರ್ ಔಟ್‍ಪುಟ್ ಒದಗಿಸಲಿದೆ. ಇನ್ನು ಈ ಕಾರು ಸಧ್ಯಕ್ಕೆ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಖರೀದಿಗೆ ಲಭ್ಯವಿದ್ದು, ಭವಿಷ್ಯದಲಿ ಆಟೋಮ್ಯಾತಿಕ್ ಮಾದರಿಯು ಸಹ ಬಿಡುಗಡೆಗೊಳ್ಳಲಿದೆ.

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಟಾಟಾ ಹ್ಯಾರಿಯರ್ ಬೆಲೆ

ಸದ್ಯ ಟಾಟಾ ಹ್ಯಾರಿಯರ್ ಕಾರುಗಳು ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ವೇರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.13.0 ಲಕ್ಷ ಮತ್ತು ಹೈ ಎಂಡ್ ಮಾದರಿಯ ಬೆಲೆಯನ್ನು ರೂ.16.55 ಲಕ್ಷ ಬೆಲೆ ಹೊಂದಿದೆ.

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಇನ್ನು ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ಕಾರುಗಳನ್ನು ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ಕಾರಿನ ವಿನ್ಯಾಸಕ್ಕೆ ಮೆರಗು ತಂದಿವೆ.

MOST READ: ಹೊಸ ಮೋಟಾರ್ ವೆಹಿಕಲ್ ಕಾಯ್ದೆಗೆ ಸಿಕ್ತು ಗ್ರೀನ್ ಸಿಗ್ನಲ್ - ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ.?

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಇಲ್ಲಿ ಇನ್ನೊಂದು ವಿಶೇಷ ಅಂದ್ರೆ, ದೇಶಿಯ ಮಾರುಕಟ್ಟೆಯಲ್ಲಿ ಟಾಟಾ ಜೊತೆ ಕೈಜೋಡಿಸಿರುವ ಜೆಎಲ್ಆರ್ ಕೂಡಾ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್" ಆರ್ಕಿಟೆಕ್ಚರ್ ತಂತ್ರವನ್ನೇ ಬಳಕೆ ಮಾಡುತ್ತಿದ್ದು, ಇದೇ ಕಾರಣಕ್ಕೆ ಟಾಟಾ ಕಾರುಗಳಲ್ಲೂ ಜೆಎಲ್ಆರ್ ಹೊಸ ಪ್ರಯೋಗ ಮಾಡಿರುವುದು ಹ್ಯಾರಿಯರ್ ಎಸ್‌ಯುವಿ ಮಾದರಿಯ ವಿನ್ಯಾಸಕ್ಕೆ ಐಷಾರಾಮಿ ಕಳೆ ಬಂದಿರುವುದು ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ.

MOST READ: ಪೆಟ್ರೋಲ್ ಬದಲಿಗೆ ಕೋಕಾಕೋಲಾ ತುಂಬಿಸಿದ ಭೂಪ- ಮುಂದೇನಾಯ್ತು?

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಹೊಸ ಡಿಸೈನ್ ತಂತ್ರಜ್ಞಾನದಿಂದಾಗಿ ಕಾರು ಸಾಕಷ್ಟು ಸ್ಟೈಲಿಷ್ ಆಗಿ ಕಾಣುವಂತಾಗಿದ್ದು, ಕಾರಿನ ಮುಂಭಾಗದಲ್ಲಿ ಹನಿಕೊಂಬ್ ಗ್ರೀಲ್ ಮತ್ತು ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಪಾಲಿಜೊನಲ್ ಮಾದರಿಯ ಎಲ್‌ಇಡಿ ಲೈಟ್ಸ್ ಮಾದರಿಯು ಕಾರಿಗೆ ಸ್ಪೋರ್ಟಿ ಲುಕ್ ನೀಡಿವೆ.

MOST READ: ಸದ್ಯದಲ್ಲೇ ಪ್ರತಿ ವಾಹನಗಳಿಗೂ ಕಲರ್ ಕೋಡ್ ಕಡ್ಡಾಯ..!

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಜೆನಾನ್ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್ ಮತ್ತು ಕಾರ್ನರಿಂಗ್ ಲೈಟ್ಸ್, ಶಾರ್ಕ್ ಫಿನ್ ಆ್ಯಂಟೆನಾ, 7 ಇಂಚಿನ ಡಿಜಿಟಲ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್, 8.8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 9 ಜೆಬಿಎಲ್ ಸ್ಪೀಕರ್ಸ್‍, 60:40 ವಿಭಜಿತ ಸೀಟ್‍ಗಳು ಮತ್ತು ನಾರ್ಮಲ್, ವೆಟ್ ಮತ್ತು ರಫ್ ಎಂಬ ಮೂರು ಟೆರೈನ್ ರೆಸ್ಪಾನ್ಸ್ ಮೊಡ್ಸ್ ಸೌಲಭ್ಯವಿದೆ.

ಎಂಜಿನ್ ವಿಚಾರವಾಗಿ ಅಪ್ಡೇಟ್ ಪಡೆಯಲಿದೆ ಟಾಟಾ ಹ್ಯಾರಿಯರ್

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸ್ಸಿಸ್ಟ್ ಪಡೆದುಕೊಂಡಿದೆ.

Most Read Articles

Kannada
English summary
Tata Harrier Will Produce Equal Power Output As Jeep Compass. Read In Kannada
Story first published: Friday, June 28, 2019, 9:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X