ಹೊಚ್ಚ ಹೊಸ ಸುಧಾರಿತ ಸೌಲಭ್ಯಗಳೊಂದಿಗೆ 2019ರ ಟಾಟಾ ಹೆಕ್ಸಾ ಬಿಡುಗಡೆ
ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಹೈ ಎಂಡ್ ಮಾದರಿಯಾದ ಹೆಕ್ಸಾ 2019ರ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಹೊಸ ಕಾರಿನಲ್ಲಿ ಈ ಬಾರಿ ಗ್ರಾಹಕರ ಗಮನಸೆಳೆಯುವಂತಹ ಕೆಲವು ಮಹತ್ವದ ಬದಲಾವಣೆಗಳನ್ನು ತರಲಾಗಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.12.99 ಲಕ್ಷಕ್ಕೆ ಬೆಲೆ ನಿಗದಿ ಮಾಡಲಾಗಿದೆ.

ಟಾಟಾ ಸಂಸ್ಥೆಯು ಸದ್ಯ ಜೆಎಲ್ಆರ್ ಸಂಸ್ಥೆಯ ಜೊತೆಗೂಡಿ ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಕಳೆದ ಜನವರಿಯಲ್ಲಿ ಹ್ಯಾರಿಯರ್ ಕಂಪ್ಯಾಕ್ಟ್ ಎಸ್‌ಯುವಿ ಪರಿಚಯಿಸಿದಲ್ಲದೇ ಮತ್ತಷ್ಟು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದೆ. ಹೀಗಾಗಿ ಇದೀಗ ಬಿಡುಗಡೆಯಾಗಿರುವ ಹೆಕ್ಸಾ ಕೂಡಾ ಈ ಹಿಂದಿನ ಮಾದರಿಗಿಂತ ಕೆಲವು ಬದಲಾವಣೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಹೆಕ್ಸಾ ಕಾರುಗಳು ಗ್ರಾಹಕರ ಆದ್ಯತೆ ಮೇರೆಗೆ ಒಟ್ಟು ಹತ್ತು ವೆರಿಯೆಂಟ್‌ಗಳಲ್ಲಿ ಖರೀದಿ ಲಭ್ಯವಿದ್ದು, ಟಾಪ್ ಎಂಡ್ ಆವೃತ್ತಿಗಳಾದ ಎಕ್ಸ್ಎಂ, ಎಕ್ಸ್ಎಂಎ ಮತ್ತು ಎಕ್ಸ್ಎಂ ಪ್ಲಸ್ ಆವೃತ್ತಿಗಳಲ್ಲಿ ಈ ಬಾರಿ 7-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್ ಸಿಸ್ಟಂ ಜೋಡಿಸಲಾಗಿದೆ.

ಈ ಹಿಂದೆ ಇದ್ದ 5-ಇಂಚಿನ ಟಚ್‌ಸ್ಕ್ರೀನ್ ಮಾದರಿಯನ್ನು ಉನ್ನತೀಕರಿಸಿರುವ ಟಾಟಾ ಸಂಸ್ಥೆಯು 2019ರ ಆವೃತ್ತಿಯಲ್ಲಿ ಆಂಡ್ರಾಯಿಡ್ ಆಟೋ, 10-ಸ್ಪೀಕರ್ಸ್ ಜೆಬಿಎಲ್ ಸಿಸ್ಟಂ ಸೇರಿದಂತೆ ಎಕ್ಸ್‌ಟಿ, ಎಕ್ಸ್‌ಟಿಎ ಮತ್ತು ಎಕ್ಸ್‌ಟಿಎ 4x4 ಆವೃತ್ತಿಯಲ್ಲಿ ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳನ್ನು ನೀಡಲಾಗಿದೆ.

ಇದರೊಂದಿಗೆ ಟಾಪ್ ಎಂಡ್ ಮಾದರಿಯಲ್ಲಿ 19-ಇಂಚಿನ ಡೈಮೆಂಡ್ ಕಟ್ ಅಲಾಯ್ ವೀಲ್ಹ್ ಆಯ್ಕೆ ನೀಡಲಾಗಿದ್ದು, ಇನ್ನುಳಿದಂತೆ ಆರಂಭಿಕ ಆವೃತ್ತಿಗಳಲ್ಲಿ 16-ಇಂಚಿನ ಚಾರ್ಕೊಲ್ ಗ್ರೇ ಅಲಾಯ್ ವೀಲ್ಹ್ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಿದೆ.

ಹೀಗಾಗಿ ಆರಂಭಿಕ ಹೆಕ್ಸಾ ಆವೃತ್ತಿಯ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.12.99 ಲಕ್ಷ ಇದ್ದಲ್ಲಿ ಟಾಪ್ ಎಂಡ್ ಮಾದರಿಯ ಬೆಲೆಯು ರೂ.18.37 ಲಕ್ಷ ಬೆಲೆ ಹೊಂದಿದ್ದು, ಕಾರಿನ ಟಾಪ್ ರೂಫ್‌ನಲ್ಲಿ ಈ ಬಾರಿ ಇನ್ಫಿನಿಟಿ ಬ್ಲ್ಯಾಕ್ ಮತ್ತು ಟೈಟಾನಿಯಂ ಗ್ರೇ ಡ್ಯುಯಲ್ ಟೋನ್ ಬಣ್ಣ ಪಡೆದುಕೊಂಡಿದೆ.

ಎಂಜಿನ್ ಸಾಮರ್ಥ್ಯ
ಹೆಕ್ಸಾ ಕಾರಿನಲ್ಲಿ ಹೊಸ ಇನ್ಪೋಟೈನ್ ಸಿಸ್ಟಂ ಮತ್ತು ಕೆಲವು ಹೊರಭಾಗದ ವಿನ್ಯಾಸಗಳಲ್ಲಿ ಬದಲಾವಣೆ ಹೊರತುಪಡಿಸಿ ಎಂಜಿನ್ ಮಾದರಿಯನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್/ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 2.2-ಲೀಟರ್ ಡೀಸೆಲ್ ಎಂಜಿನ್ ಮೂಲಕ 156-ಬಿಎಚ್‌ಪಿ ಮತ್ತು 400-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಹಾಗೆಯೇ ಆರಂಭಿಕ ಆವೃತ್ತಿಯಲ್ಲಿ 2.2-ಲೀಟರ್ ಡೀಸೆಲ್ ಎಂಜಿನ್ ಜೋಡಣೆ ಇದ್ದರೂ ಸಹ ಟಾಪ್ ಎಂಡ್ ಮಾದರಿಗಿಂತ ಕಡಿಮೆ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪ್ರೇರಣೆಯೊಂದಿಗೆ 150-ಬಿಎಚ್‌ಪಿ ಮತ್ತು 320-ಎನ್ಎಂ ಟಾರ್ಕ್ ಉತ್ಪಾದಿಸಿ ಟಾಪ್ ಎಂಡ್ ಮಾದರಿಗಿಂತಲೂ ತುಸು ಹೆಚ್ಚಿನ ಮಟ್ಟದ ಮೈಲೇಜ್ ನೀಡುತ್ತದೆ.
MOST READ: ಕಾರು ಖರೀದಿಸಲು ಬಂದ ಮಹಿಳೆ ಮಾಡಿದ ಎಡವಟ್ಟಿನಿಂದ ಡೀಲರ್ಸ್ ಕಕ್ಕಾಬಿಕ್ಕಿ

ಇದರೊಂದಿಗೆ ಪರ್ಫಾಮೆನ್ಸ್ ಪ್ರಿಯರು ಟಾಪ್ ಎಂಡ್ ಆವೃತ್ತಿಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದಲ್ಲಿ ಆರಂಭಿಕ ಆವೃತ್ತಿಯು ಹೆಚ್ಚಿನ ಮೈಲೇಜ್ ನೀರಿಕ್ಷೆ ಮಾಡುವ ಗ್ರಾಹಕರ ಆಯ್ಕೆಗೆ ಅನುಕೂಲವಾಗಿದ್ದು, ಪ್ರತಿ ಲೀಟರ್ ಡೀಸೆಲ್‌ಗೆ 14.4 ಕಿ.ಮಿ ಮೈಲೇಜ್ ನೀಡುತ್ತೆ.

ಖರೀದಿಗೆ ಲಭ್ಯವಿರುವ ಬಣ್ಣಗಳು
ಹೆಕ್ಸಾ ಕಾರುಗಳು ಒಟ್ಟು ಐದು ಬಣ್ಣಗಳಲ್ಲಿ ಖರೀದಿ ಲಭ್ಯವಿದ್ದು, ಅರ್ಬನ್ ಬ್ರೊಂಜ್, ಅರಿಜೋನಾ ಬ್ಲೂ, ಸ್ಕೈ ಗ್ರೇ, ಟಗ್‍ಸ್ಟನ್ ಸಿಲ್ವರ್ ಮತ್ತು ಪರ್ಲ್ ವೈಟ್ ಬಣ್ಣಗಳು ಆಯ್ಕೆ ಹೊಂದಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಇದರ ಹೊರತವಾಗಿ ಈ ಹಿಂದಿನ ಹಲವು ಸೌಲಭ್ಯಗಳು ಹೆಕ್ಸಾ ಕಾರಿನಲ್ಲಿದ್ದು, 4x2 ಮತ್ತು 4x4 ಡ್ರೈವ್ ಟೆಕ್ನಾಲಜಿ, 6 ಏರ್‌ಬ್ಯಾಗ್‌ಗಳು, ಎಬಿಎಸ್ ಫ್ರಂಟ್ ಮತ್ತು ರಿಯರ್‌ನಲ್ಲಿ ಪವರ್ ವಿಂಡೋ, ಆಟೋ ಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಲೆದರ್ ಸೀಟುಗಳು ಮತ್ತು ರಿಮೋಟ್ ಕಂಟ್ರೋಲ್ ಸೆಂಟ್ರಲ್ ಲಾಕಿಂಗ್ ಸೌಲಭ್ಯ ಹೊಂದಿದೆ.


Click it and Unblock the Notifications