ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಹೆಚ್ಚುತ್ತಿರುವ ಮಾಲಿನ್ಯ ತಡೆಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಯು ಹೆಚ್ಚಿನ ಪ್ರಾಮುಖ್ಯತೆ ಪಡೆಯುತ್ತಿದ್ದು, ದೇಶದ ಪ್ರಮುಖ ನಗರಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲೂ ಕೂಡಾ ಈಗಾಗಲೇ ವಿವಿಧ ಸಂಸ್ಥೆಗಳ ಎಲೆಕ್ಟ್ರಿಕ್ ವಾಹನಗಳು ಸಂಚಾರ ಆರಂಭಿಸಿದ್ದು, ಇದೇ ಮೊದಲ ಬಾರಿಗೆ ಟಾಟಾ ನಿರ್ಮಾಣದ ಟಿಗೋರ್ ಎಲೆಕ್ಟ್ರಿಕ್ ಕಾರಿಗೆ ಚಾಲನೆ ನೀಡಲಾಯ್ತು.

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಬೆಂಗಳೂರಿನ ಎಪಿಎನ್ ಟ್ರಾವೆಲ್ ಸಂಸ್ಥೆಯು ಟಾಟಾ ನಿರ್ಮಾಣದ ಟಿಗೋರ್ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿದ್ದು, ಕಾರ್ಪೊರೆಟ್ ಸಂಸ್ಥೆಯ ಉದ್ಯೋಗಿಗಳ ಓಡಾಟಕ್ಕೆ ಬಳಕೆ ಮಾಡಲು ನಿರ್ಧರಿಸಿದೆ. ಜಯನಗರದ ಮುಖ್ಯ ಕಛೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟಾಟಾ ಸಂಸ್ಥೆಯು ಟಿಗೋರ್ ಎಲೆಕ್ಟ್ರಿಕ್ ಕಾರುಗಳನ್ನು ಎಪಿಎನ್ ಸಂಸ್ಥೆಗೆ ಹಸ್ತಾಂತರಿಸಿದ್ದು, ಸಂಸದ ತೇಜೆಸ್ವಿ ತೇಜಸ್ವಿ ಸೂರ್ಯ ಸೇರಿದಂತೆ ಹಲವು ಜನಪ್ರತಿನಿಧಿಗಳು ಭಾಗಿಯಾಗಿದ್ದರು.

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಇನ್ನು ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ಹಲವಾರು ಮಹತ್ವದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಮತ್ತು ಖರೀದಿಸುವ ಗ್ರಾಹಕರಿಗೂ ಕೂಡಾ ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದೆ.

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಇದರಲ್ಲಿ ಪ್ರಮುಖವಾಗಿ ಜಿಎಸ್‌ಟಿ ದರ ಇಳಿಕೆಯು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ವರದಾನವಾಗಿದ್ದು, ಟಾಟಾ ಸೇರಿದಂತೆ ಪ್ರಮುಖ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಇವಿ ಬೆಲೆಗಳನ್ನು ಕಡಿತಗೊಳಿಸಿವೆ.

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಗ್ಗಿಸಲು ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮಾರಾಟದ ಮೇಲೆ ಹೆಚ್ಚಿನ ಮಟ್ಟದ ಸೆಸ್ ಸೇರಿದಂತೆ ದುಬಾರಿ ನೋಂದಣಿ ಶುಲ್ಕ ವಿಧಿಸುತ್ತಿರುವ ಕೇಂದ್ರ ಸರ್ಕಾರವು ಅದಕ್ಕೆ ಪರ್ಯಾಯವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸಲು ಕ್ರಮಕೈಗೊಳ್ಳುತ್ತಿದೆ. ಈ ಹಿಂದೆ ಫೇಮ್ ಯೋಜನೆಯ ಮೂಲಕ ಸಬ್ಸಡಿ ಯೋಜನೆಯನ್ನು ಘೋಷಿಸಿದ್ದ ಕೇಂದ್ರವು ಈ ಬಾರಿ ಜಿಎಸ್‌ಟಿ ಪ್ರಮಾಣದಲ್ಲಿ ಭಾರೀ ಕಡಿತ ಮಾಡಿರುವುದು ಹೊಸ ಬದಲಾವಣೆಗೆ ಕಾರಣವಾಗಿದೆ.

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಎಲೆಕ್ಟ್ರಿಕ್ ವಾಹನಗಳ ಮೇಲೆ ಈ ಹಿಂದೆ ವಿಧಿಸಲಾಗುತ್ತಿದ್ದ ಜಿಎಸ್‌ಟಿ ಪ್ರಮಾಣವನ್ನು ನೀತಿ ಆಯೋಗದ ಶಿಫಾರಸ್ಸು ಮೇರೆಗೆ ಶೇ.12ರಿಂದ ಶೇ.5ಕ್ಕೆ ಇಳಿಕೆ ಮಾಡಲಾಗಿದ್ದು, ಇದು ಎಲೆಕ್ಟ್ರಿಕ್ ವಾಹನಗಳನ್ನು ಉತ್ಪಾದಿಸುವ ಸಂಸ್ಥೆಗಳ ಜೊತೆಗೆ ಎಲೆಕ್ಟ್ರಕ್ ವಾಹನ ಖರೀದಿದಾರರಿಗೂ ಸಾಕಷ್ಟು ಸಹಕಾರಿಯಾಗಲಿದೆ.

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಕೇಂದ್ರ ಸರ್ಕಾರದ ಹೊಸ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿರುವ ಜಿಎಸ್‌ಟಿ ದರ ಕಡಿತ ಯೋಜನೆಯನ್ನು ಅಗಸ್ಟ್ 1ರಿಂದಲೇ ಅನ್ವಯವಾಗುವಂತೆ ಜಾರಿಗೆ ತರಲಾಗಿದ್ದು, ಟಾಟಾ ಸಂಸ್ಥೆಯು ಹೊಸ ಯೋಜನೆಯ ಭಾಗವಾಗಿ ಬೆಲೆ ಇಳಿಕೆ ಮಾಡಿದೆ. ಸದ್ಯ ಟಿಗೋರ್ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಮಾಡುತ್ತಿರುವ ಟಾಟಾ ಸಂಸ್ಥೆಯು ಬರೋಬ್ಬರಿ ರೂ.80 ಸಾವಿರ ಬೆಲೆ ಇಳಿಕೆ ಮಾಡಿದೆ.

MOST READ: 15 ವರ್ಷ ಮೇಲ್ಪಟ್ಟ ಹಳೆಯ ವಾಹನ ಹೊಂದಿರೋ ಮಾಲೀಕರಿಗೆ ಸದ್ಯದಲ್ಲೇ ಶಾಕಿಂಗ್ ನ್ಯೂಸ್..!?

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಹೊಸ ದರ ಪಟ್ಟಿಯ ಪ್ರಕಾರ ಈ ಹಿಂದೆ ಸಬ್ಸಡಿ ರಹಿತ ಟಿಗೋರ್ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.12.35 ಲಕ್ಷ ಮತ್ತು ರೂ.12.71 ಲಕ್ಷ ಇದ್ದ ಬೆಲೆ ಇದೀಗ ಜಿಎಸ್‌ಟಿ ಇಳಿಕೆ ನಂತರ ರೂ. 11.58 ಲಕ್ಷಕ್ಕೆ ಮತ್ತು ರೂ. 11.92 ಲಕ್ಷಕ್ಕೆ ಇಳಿಕೆಯಾಗಿದೆ. ಹಾಗೆಯೇ ಸಬ್ಸಡಿ ಸಹಿತ ಟಿಗೋರ್ ಕಾರಿನ ಮಾರಾಟ ಬೆಲೆಯು ಈ ಹಿಂದೆ ಇದ್ದ ರೂ. 10.99 ಲಕ್ಷ ಮತ್ತು ರೂ.11.09 ಲಕ್ಷ ಬೆಲೆಯು ಇದೀಗ ರೂ.9.96 ಲಕ್ಷ ಮತ್ತು ರೂ.10.30 ಲಕ್ಷಕ್ಕೆ ಇಳಿಕೆಯಾಗಿದೆ.

MOST READ: ಅತ್ಯುತ್ತಮ ಮೈಲೇಜ್ ಹೊಂದಿರುವ ಟಾಪ್ 10 ಡೀಸೆಲ್ ಕಾರುಗಳಿವು..!

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಹೊಸ ಆದೇಶದಿಂದಾಗಿ ಅಗಸ್ಟ್ 1ರಿಂದಲೇ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ಸಾಕಷ್ಟು ಇಳಿಕೆಯಾಗಲಿದ್ದು, ಎಲೆಕ್ಟ್ರಿಕ್ ವಾಹನ ಉತ್ಪಾದನಾ ಸಂಸ್ಥೆಗಳು ಇದಕ್ಕೆ ಹರ್ಷ ವ್ಯಕ್ತಪಡಿಸಿವೆ. ಯಾಕೆಂದ್ರೆ ಹೊಸ ಯೋಜನೆಯಿಂದಾಗಿ ಎಲೆಕ್ಟ್ರಿಕ್ ವಾಹನ ಬೆಲೆ ಕಡಿಮೆಯಾಗಿ ಮಾರಾಟ ಪ್ರಮಾಣವು ಹೆಚ್ಚಲಿದ್ದು, ಡೀಸೆಲ್ ಮತ್ತು ಪೆಟ್ರೋಲ್ ವಾಹನಗಳ ಮೇಲೆ ಗ್ರಿನ್ ಸೆಸ್ ಹೆಚ್ಚಾಗುವುದರಿಂದ ಎಲೆಕ್ಟ್ರಿಕ್ ವಾಹನಗಳಿಗೂ ಇದು ಪೂರಕವಾಗಿದೆ.

MOST READ: ಕೇಂದ್ರದಿಂದ ಮಹತ್ವದ ಯೋಜನೆ- ಶೀಘ್ರದಲ್ಲೇ ಸಂಚಾರ ಆರಂಭಿಸಲಿವೆ 5,559 ಎಲೆಕ್ಟ್ರಿಕ್ ಬಸ್‌ಗಳು

ನಮ್ಮ ಬೆಂಗಳೂರಿನಲ್ಲೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಓಡಾಟಕ್ಕೆ ಗ್ರೀನ್ ಸಿಗ್ನಲ್

ಇದರೊಂದಿಗೆ ಕೇಂದ್ರ ಸರ್ಕಾರವು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವ ಗ್ರಾಹಕರಿಗೆ ತೆರಿಗೆ ವಿನಾಯ್ತಿ ಸಹ ನೀಡಿದ್ದು, ಬರೋಬ್ಬರಿ 1.5 ಲಕ್ಷದವರೆಗೆ ತೆರಿಗೆ ವಿನಾಯ್ತಿಯನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಈ ಹಿಂದಿನ ಫೇಮ್ 2 ಯೋಜನೆ ಅಡಿಯಲ್ಲಿ ಘೋಷಣೆ ಮಾಡಲಾಗಿರುವ ಸಬ್ಸಡಿ ಯೋಜನೆಯನ್ನು ಸಹ ಮುಂದುವರಿಸಲಾಗಿದೆ.

Most Read Articles

Kannada
English summary
Tata Motors eMobility Business growth story continues in Bengaluru.
Story first published: Monday, August 12, 2019, 20:32 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X