ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಸದ್ಯ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಕಾರಿಗೆ ಪೈಪೋಟಿಯಾಗಿ ಹಲವು ಕಾರು ಮಾದರಿಗಳು ಮಾರುಕಟ್ಟೆಗೆ ಲಗ್ಗೆಯಿಡುವ ಮೂಲಕ ಭಾರೀ ಪ್ರಮಾಣದ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿರುವ ಹ್ಯಾರಿಯರ್ ಮಾರಾಟ ಪ್ರಮಾಣವನ್ನು ಹೆಚ್ಚಿಸಲು ಪ್ರಿಯಾರಿಟಿ ಟೆಸ್ಟ್ ಡ್ರೈವಿಂಗ್ ಯೋಜನೆಯನ್ನು ಆರಂಭಿಸಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಪ್ರಿಯಾರಿಟಿ ಟೆಸ್ಟ್ ಡ್ರೈವಿಂಗ್ ಯೋಜನೆಯು ಸಾಮಾನ್ಯವಾಗಿ ಕಾರು ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ನೀಡುವ ಟೆಸ್ಟ್‌ ಡ್ರೈವ್‌ಗಿಂತಲೂ ತುಸು ಭಿನ್ನವಾಗಿದ್ದು, ಕಾರು ಮಾರಾಟವನ್ನು ಹೆಚ್ಚಿಸಲು ಈಗಾಗಲೇ ಬಹುತೇಕ ಕಾರು ಮಾರಾಟ ಸಂಸ್ಥೆಗಳು ಮಾರುಕಟ್ಟೆಯಲ್ಲಿ ಈ ಸೇವೆಯನ್ನು ಬಹಳ ದಿನಗಳ ಹಿಂದೆಯೇ ಪರಿಚಯಿಸಿವೆ. ಇದೀಗ ಟಾಟಾ ಸಂಸ್ಥೆಯು ಒರಿಕ್ಸ್ ಎನ್ನುವ ಕಾರ್ ಲೀಸಿಂಗ್ ಸಂಸ್ಥೆಯೊಂದಿಗೆ ಜೊತೆಗೂಡಿ ಪ್ರಿಯಾರಿಟಿ ಟೆಸ್ಟ್ ಡ್ರೈವ್ ಸೇವೆಗೆ ಚಾಲನೆ ನೀಡಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಒರಿಕ್ಸ್ ಸಂಸ್ಥೆಯು ಸದ್ಯ ಕಾರ್ ಲೀಸಿಂಗ್ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಟಾಟಾ ಜೊತೆಗಿನ ಪ್ರಿಯಾರಿಟಿ ಟೆಸ್ಟ್ ಡ್ರೈವ್ ಸೇವೆಯಿಂದಾಗಿ ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಇದು ನೆರವಾಗಲಿದೆ. ಲೀಸ್ ಪಡೆದ ವೇಳೆ ಒರಿಕ್ಸ್ ಸಂಸ್ಥೆಯು ಕಾರು ಮಾಲೀಕ್ವತ ಹೊಂದುವಂತೆ ಗ್ರಾಹಕರನ್ನು ಸೆಳೆಯಲಿದ್ದು, ಇದು ಟಾಟಾ ಸಂಸ್ಥೆಯ ಬ್ರಾಂಡ್ ಮೌಲ್ಯವನ್ನು ಕೂಡಾ ಹೆಚ್ಚಿಸಲಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಇದಲ್ಲದೇ ಪ್ರಸ್ತುತ ಮಾರುಕಟ್ಟೆಯಲ್ಲಿ ಟಾಟಾ ಹ್ಯಾರಿಯರ್ ಕಾರಿಗೆ ಕಿಯಾ ಸೆಲ್ಟೊಸ್ ಮತ್ತು ಎಂಜಿ ಹೆಕ್ಟರ್ ಕಾರುಗಳು ಭಾರೀ ಪೈಪೋಟಿ ನೀಡುತ್ತಿದ್ದು, ಗ್ರಾಹಕರನ್ನು ಸೆಳೆಯಲು ಆಕರ್ಷಕ ಆಫರ್ ಮತ್ತು ವಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಹೊಸದಾಗಿ ಹ್ಯಾರಿಯರ್ ಕಾರು ಖರೀದಿ ಮಾಡುವ ಗ್ರಾಹಕರಿಗೆ 5 ವರ್ಷ ಅಥವಾ ಅನ್ ಲಿಮಿಟೆಡ್ ಕಿ.ಮೀ ವಾರಂಟಿ ನೀಡಲಾಗಿದ್ದು, ಈಗಾಗಲೇ ಕಾರು ಖರೀದಿ ಮಾಡಿರುವ ಗ್ರಾಹಕರು ಕೂಡಾ ಹೆಚ್ಚುವರಿ ಮೊತ್ತ ಪಾವತಿಸಿ ಹೊಸ ವಾರಂಟಿ ಯೋಜನೆಯನ್ನು ಪಡೆದುಕೊಳ್ಳಬಹುದಾಗಿದೆ. ಹ್ಯಾರಿಯರ್ ಕಾರನ್ನು ಈ ಹಿಂದೆ 90 ದಿನದೊಳಗೆ ಖರೀದಿ ಮಾಡಿದ್ದಲ್ಲಿ ರೂ.25,960, 91 ದಿನದಿಂದ 180 ದಿನಗೊಳಗಾಗಿ ಖರೀದಿ ಮಾಡಿದ್ದಲ್ಲಿ ರೂ.28,556 ಮತ್ತು 180 ದಿನಗಳ ಹಿಂದಿನ ದಿನದಂದ ಖರೀದಿ ಮಾಡಿರುವ ಗ್ರಾಹಕರು ರೂ.31,152 ಪಾವತಿಸಿ ಹೊಸ ವಾರಂಟಿ ಯೋಜನೆಯನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಹೊಸ ವಾರಂಟಿ ಯೋಜನೆಯಲ್ಲಿ ವಾಹನದ ಪ್ರಮುಖ ಬಿಡಿಭಾಗಗಳ ಮೇಲೆ ಗರಿಷ್ಠ ಖಾತ್ರಿ ದೊರೆಯಲಿದ್ದು, ಮಾಲೀಕರಿಗೆ ಇದು ಒಂದು ಬಾರಿ ಹೊರೆಯಾದರೂ ಭವಿಷ್ಯದಲ್ಲಿ ಹೆಚ್ಚು ಹಣ ಪಾವತಿಸುವ ತೊಂದರೆ ತಪ್ಪಲಿದೆ. ಇನ್ನು ಟಾಟಾ ಮೋಟಾರ್ಸ್ ಸಂಸ್ಥೆಯು ಹ್ಯಾರಿಯರ್‌ನಲ್ಲಿ ಹೊಸದಾಗಿ ಡಾರ್ಕ್ ಎಡಿಷನ್ ಬಿಡುಗಡೆ ಮಾಡಿದ್ದು, ಹೊಸ ಕಾರು ಸಂಪೂರ್ಣ ಕಪ್ಪು ಬಣ್ಣದ ವಿನ್ಯಾಸ ಹೊಂದಿದ್ದು, ಈ ಹಿಂದನಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಖರೀದಿಗೆ ಲಭ್ಯವಿರುವ ಸಾಮಾನ್ಯ ಹ್ಯಾರಿಯರ್‌ ಆವೃತ್ತಿಗಿಂತಲೂ ವಿಶೇಷ ಬಣ್ಣದ ಆಯ್ಕೆ ಹೊಂದಿರುವ ಡಾರ್ಕ್ ಎಡಿಷನ್ ಹ್ಯಾರಿಯರ್ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.16.76 ಲಕ್ಷಕ್ಕೆ ಬಿಡುಗಡೆಗೊಂಡಿದ್ದು, ಹ್ಯಾರಿಯರ್ ಟಾಪ್ ಎಂಡ್ ಮಾದರಿಯಾದ ಎಕ್ಸ್‌ಜೆಡ್ ಆವೃತ್ತಿಯಲ್ಲಿ ಡಾರ್ಕ್ ಎಡಿಷನ್ ಖರೀದಿ ಮಾಡಬಹುದಾಗಿದ್ದು, ಸಾಮಾನ್ಯ ಬಣ್ಣದ ಟಾಪ್ ಎಂಡ್ ಮಾದರಿಗಿಂತ ಡಾರ್ಕ್ ಎಡಿಷನ್ ರೂ.19 ಸಾವಿರ ಹೆಚ್ಚುವರಿ ಬೆಲೆ ಪಡೆದಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಡಾರ್ಕ್ ಎಡಿಷನ್ ಜೊತೆಗೆ ಡ್ಯುಯಲ್ ಟೋನ್ ಸನ್‌ರೂಫ್, ಆ್ಯಪಲ್ ಕಾರ್ ಪ್ಲೇ ಸೌಲಭ್ಯವನ್ನು ಉನ್ನತಿಕರಿಸಲಾಗಿದ್ದು, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆಗೆ ಆಂಡ್ರಾಯಿಡ್ ಆಟೋ ಸೌಲಭ್ಯವು ಮತ್ತಷ್ಟು ಗ್ರಾಹಕರನ್ನು ಸೆಳೆಯುತ್ತಿದೆ. ಟಾಟಾ ಹ್ಯಾರಿಯರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಎಕ್ಸ್ಇ, ಎಕ್ಸ್ಎಂ, ಎಕ್ಸ್‌ಟಿ ಮತ್ತು ಎಕ್ಸ್‌ಜೆಡ್ ಎಂಬ ನಾಲ್ಕು ವೇರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ವೆರಿಯೆಂಟ್‍ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ಆರಂಭಿಕವಾಗಿ ರೂ.13 ಲಕ್ಷದಿಂದ ಹೈ ಎಂಡ್ ಮಾದರಿಯು ರೂ.16.56 ಲಕ್ಷ ಬೆಲೆ ಹೊಂದಿದ್ದು, ಇದೀಗ ಡಾರ್ಕ್ ಎಡಿಷನ್ ಮಾದರಿಯು ರೂ. 16.76 ಲಕ್ಷ ಬೆಲೆ ಹೊಂದಿದೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಹ್ಯಾರಿಯರ್ ಎಸ್‌ಯುವಿ ಕಾರು 2-ಲೀಟರ್(2 ಸಾವಿರ ಸಿಸಿ) 4 ಸಿಲಿಂಡರ್, ಕ್ರೆಯೊಟೆಕ್ ಡೀಸೆಲ್ ಎಂಜಿನ್ ಹೊಂದಿದ್ದು, 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ 140-ಬಿಹೆಚ್‍ಪಿ, 350-ಎನ್ಎಂ ಶಕ್ತಿಯನ್ನು ಉತ್ಪಾದಿಸುವ ಶಕ್ತಿಯೊಂದಿಗೆ ಪರ್ಫಾಮೆನ್ಸ್ ಪ್ರಿಯರ ಗಮನಸೆಳೆಯುತ್ತವೆ.

ಹ್ಯಾರಿಯರ್ ಕಾರು ಮಾರಾಟವನ್ನು ಹೆಚ್ಚಿಸಲು ಹೊಸ ಯೋಜನೆಗೆ ಚಾಲನೆ ನೀಡಿದ ಟಾಟಾ..!

ಹಾಗೆಯೇ ಸುರಕ್ಷತೆಗಾಗಿ ಹೆಚ್ಚಿನ ಆಯ್ಕೆಗಳಿದ್ದು, ಆರು ಏರ್‍‍ಬ್ಯಾಗ್‍ಗಳು, ಇಎಸ್‍ಪಿ ಮತ್ತು ಐಎಸ್ಒ ಚೈಲ್ಡ್ ಸೀಟ್ ಮೌಂಟ್ಸ್, ಹಿಲ್-ಹೋಲ್ಡ್, ಹಿಲ್ ಡಿಸ್ಸೆಂಟ್ ರೋಲ್-ಓವರ್, ಕಾರ್ನರಿಂಗ್ ಸ್ಟ್ಯಾಬಿಲಿಟಿ ಕಂಟ್ರೋಲ್ ಟ್ರಾಕ್ಷನ್, ಕಂಟ್ರೋಲ್ ಹೈಡ್ರಾಲಿಕ್ ಬ್ರೇಕ್ ಅಸಿಸ್ಟ್ ಪಡೆದುಕೊಂಡಿದೆ.

More from DriveSpark

Article Published On: Wednesday, October 23, 2019, 15:28 [IST]
English summary
Tata Motors Launches ‘Priority Test Drives’ For Harrier: Partners With Orix India. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+