ಅಕ್ಟೋಬರ್‌ನಲ್ಲಿ ಜಾರಿಯಾಗುವ ಹೊಸ ರೂಲ್ಸ್ ಪ್ರಕಾರವೇ ರಸ್ತೆಗಿಳಿಯಲಿವೆ ಟಾಟಾ ಕಾರುಗಳು
ಕಳೆದ ಎರಡು ವರ್ಷಗಳ ಅವಧಿಯಲ್ಲಿ ಆಟೋ ಉದ್ಯಮವು ಹಲವಾರು ಬದಲಾವಣೆಗಳಿಗೆ ಸಾಕ್ಷಿಯಾಗಿದ್ದು, ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಮತ್ತಷ್ಟು ಸುಧಾರಣೆಗಾಗಿ ಕೇಂದ್ರ ಸಾರಿಗೆ ಇಲಾಖೆಯು ಹೊಸ ಹೊಸ ಯೋಜನೆಗಳನ್ನು ಪರಿಚಯಿಸಲು ಸಿದ್ದತೆ ನಡೆಸಿರುವುದು ಆಟೋ ಉತ್ಪಾದನಾ ವಲಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಕೆಲವೇ ವರ್ಷಗಳ ಹಿಂದಷ್ಟೇ ಬಹುತೇಕ ವಾಹನ ಖರೀದಿದಾರರು ಸುರಕ್ಷತೆಗಿಂತ ಬೆಲೆ ಮತ್ತು ಮೈಲೇಜ್ ಬಗೆಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ರು. ಆದ್ರೆ ಇದೀಗ ಕಾಲ ಬದಲಾಗಿದೆ. ಬೆಲೆ ಮತ್ತು ಮೈಲೇಜ್ ಜೊತೆಗೆ ಹೊಸ ವಾಹನದಲ್ಲಿರುವ ಸುರಕ್ಷತೆ ಕುರಿತಂತೆ ಹೆಚ್ಚು ಆಲೋಚನೆ ಮಾಡುತ್ತಿರುವುದು ಇಂದು ಆಟೋ ಉದ್ಯಮದಲ್ಲಿ ಹಲವು ಬದಲಾವಣೆಗಳಿಗೆ ಕಾರಣವಾಗಿದೆ. ಹೀಗಾಗಿ ದೇಶಾದ್ಯಂತ ಪ್ರಯಾಣಿಕರ ಸುರಕ್ಷತೆಗಾಗಿ ಕೇಂದ್ರ ಸರ್ಕಾರವು ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೆ ತರುತ್ತಿದೆ.

ಸದ್ಯ ಮಾರುಕಟ್ಟೆಯಲ್ಲಿ ಹಾಟ್ ಚೀಪ್ಸ್‌ನಂತೆ ಮಾರಾಟವಾಗುತ್ತಿರುವ ಅಗ್ಗದ ಬೆಲೆಯ ಬಹುತೇಕ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದ್ದು, ಅಪಘಾತದ ತೀವ್ರತೆಯನ್ನು ತಗ್ಗಿಸಲು ಪ್ರತಿಯೊಂದು ವಾಹನದಲ್ಲೂ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿರುವುದು ಅಗತ್ಯವಾಗಿದೆ.

ಇದಕ್ಕಾಗಿಯೇ ಇದೇ ವರ್ಷ ಅಕ್ಟೋಬರ್ 1ರಿಂದಲೇ ಹೊಸ ರೂಲ್ಸ್ ಜಾರಿ ಮಾಡುತ್ತಿರುವ ಕೇಂದ್ರ ಸಾರಿಗೆ ಇಲಾಖೆಯು #SaferCarsForIndia ಅಭಿಯಾನದಡಿ ನಿರ್ದಿಷ್ಟ ಪ್ರಮಾಣದಲ್ಲಿ ಸುರಕ್ಷತೆಯನ್ನು ಹೊಂದಿರದ ಕೆಲವು ಕಾರು ಮತ್ತು ಬೈಕ್ ಮಾದರಿಗಳನ್ನು ಮಾರಾಟದಿಂದ ನಿಷೇಧಗೊಳಿಸಲು ಪಟ್ಟಿ ಸಿದ್ದತೆ ಮಾಡಿಕೊಂಡಿದೆ.

ಇದರಿಂದ ಬಹುತೇಕ ಕಾರು ಮತ್ತು ಬೈಕ್ ಉತ್ಪಾದನಾ ಸಂಸ್ಥೆಗಳು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲಭ್ಯವಿರುವ ವಾಹನಗಳ ಹೊಸ ಆವೃತ್ತಿಗಳನ್ನು ಡೆಡ್‌ಲೈನ್‌ಗೂ ಮುನ್ನ ಕೇಂದ್ರ ಸಾರಿಗೆ ಇಲಾಖೆಯ ನಿಯಮಗಳಿಗೆ ಅನುಗುಣವಾಗಿ ಉನ್ನತಿಕರಿಸಿ ಮಾರಾಟ ಮಾಡುವ ಪ್ರಯತ್ನದಲ್ಲಿವೆ.

ಟಾಟಾ ಮೋಟಾರ್ಸ್ ಕೂಡಾ ಇದೇ ನಿಟ್ಟಿನಲ್ಲಿ ಯೋಜನೆ ರೂಪಿಸಿರುವುದಲ್ಲದೇ ಪ್ರಯಾಣಿಕರಿಗೆ ಗರಿಷ್ಠ ಮಟ್ಟದ ಸುರಕ್ಷೆ ನೀಡುವ ಸಂಬಂಧ ತನ್ನ ಕಾರುಗಳ ಉತ್ಪಾದನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದ್ದು, ನೆಕ್ಸಾನ್ ಕಾರಿನಲ್ಲಿ 5 ಸ್ಟಾರ್ ಸೇಫ್ಟಿ ಫೀಚರ್ಸ್‌ಗಳನ್ನು ಅಳವಡಿಸಿರುವುದು ಈಗಾಗಲೇ ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ.

ಇದಲ್ಲದೇ ನೆಕ್ಸಾನ್ ಕಾರಿಗೆ 5 ಸ್ಟಾರ್ ರೇಟಿಂಗ್ ಸಿಕ್ಕ ಬಳಿಕ ಕಾರಿನ ಮಾರಾಟ ಪ್ರಮಾಣ ಕೂಡಾ ದ್ವಿಗುಣಗೊಂಡಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಬಝರ್ಡ್ ಎಸ್‌ಯುವಿ, ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್ ಮತ್ತು ಹೆಚ್2ಎಕ್ಸ್ ಕೋಡ್‌ನೆಮ್ ಆಧಾರಿತ ಹಾರ್ನ್‌ಬಿಲ್ ಸ್ಮಾಲ್ ಎಸ್‌ಯಿವಿ ಕಾರು ಕೂಡಾ 5 ಸ್ಟಾರ್ ಸೇಫ್ಟಿ ಫೀಚರ್ಸ್‌ನೊಂದಿಗೆ ರಸ್ತೆಗಿಳಿಯುವುದು ಪಕ್ಕಾ ಆಗಿದೆ.
MOST READ: ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಈ ಕುರಿತಂತೆ ಟಾಟಾ ಸಂಸ್ಥೆಯ ಹಿರಿಯ ಅಧಿಕಾರಿಯೊಬ್ಬರು ಎಕ್ಸಾಮಿಕ್ಸ್ ಟೈಮ್ಸ್ ಸುದ್ದಿ ಸಂಸ್ಥೆಯ ಸಂದರ್ಶನವೊಂದರಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಲೆಗಿಂತ ಗ್ರಾಹಕರ ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡುವ ಉದ್ದೇಶದಿಂದ ಕಾರು ಉತ್ಪಾದನೆಯಲ್ಲಿ ಕೆಲವು ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲಾಗಿದ್ದು, ನಮ್ಮ ಹೊಸ ಯೋಜನೆಯು ಮುಂಬರುವ ದಿನಗಳಲ್ಲಿ ಗ್ರಾಹಕರ ಆಕರ್ಷಣೆಯಾಗುವ ವಿಶ್ವಾಸವಿದೆ ಎಂದಿದ್ದಾರೆ.

ಇನ್ನು ಸದ್ಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಶೇ. 60ರಷ್ಟು ಕಾರುಗಳು ಮಾರುತಿ ಸುಜುಕಿ ಮತ್ತು ಹ್ಯುಂಡೈ ನಿರ್ಮಾಣ ಕಾರುಗಳದ್ದೇ ಅಧಿಪತ್ಯ ಹೆಚ್ಚಿದ್ದು, ಬಹುತೇಕ ಕಾರುಗಳಲ್ಲಿ ಸುರಕ್ಷತೆ ಇಲ್ಲದ್ದಿದ್ದರೂ ಸಹ ಅಗ್ಗದ ಬೆಲೆ ಮತ್ತು ನಿರ್ವಹಣೆ ವೆಚ್ಚವು ಕಡಿಮೆ ಎನ್ನುವ ಉದ್ದೇಶದಿಂದ ಅಂತಹ ಕಾರುಗಳನ್ನೇ ಹೆಚ್ಚು ಖರೀದಿಸುತ್ತಿದ್ದಾರೆ.
MOST READ: ಅಪಘಾತದಲ್ಲಿ ಹ್ಯಾರಿಯರ್ ಕಾರು ಪುಡಿಪುಡಿಯಾದ್ರು ಪ್ರಯಾಣಿಕರಿಗೆ ಏನೂ ಆಗಲಿಲ್ಲ..!

ಆದ್ರೆ ಅಕ್ಟೋಬರ್ 1ರಿಂದ ಜಾರಿಯಾಗುವ ಹೊಸ ಪ್ರಕಾರ ಪ್ರತಿ ಕಾರು ಕೂಡಾ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಬೇಕಿದ್ದು, ಡ್ಯುಯಲ್ ಏರ್‌ಬ್ಯಾಗ್, ಎಲೆಕ್ಟ್ರಾನಿಕ್ ಸ್ಟ್ಯಾಬಿಲಿಟಿ ಪ್ರೋಗ್ರಾಂ, ಚೈಲ್ಡ್ ಐಸೋಫಿಕ್ಸ್ ಸೀಟು, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ, ಸೀಟ್ ಬೆಲ್ಟ್ ರಿಮೆಂಡರ್ ಸೇರಿದಂತೆ ಗುಣಮಟ್ಟದ ಬಾಡಿ ಕಿಟ್ ಹೊಂದಿರಬೇಕಿದ್ದು, ಇವುಗಳನ್ನು ಹೊಂದಿರದ ಕಾರುಗಳ ಮಾರಾಟಕ್ಕೆ ಬ್ರೇಕ್ ಬೀಳಲಿದು ನೂರಕ್ಕೆ ನೂರಷ್ಟು ಸತ್ಯ.


Click it and Unblock the Notifications