ಹೊಸ ವಿನ್ಯಾಸದಲ್ಲಿ ನೆಕ್ಸಾನ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
ಟಾಟಾ ಮೋಟಾರ್ಸ್ ತನ್ನ ಜನಪ್ರಿಯ ಕಾರುಗಳಲ್ಲಿ ಒಂದಾದ ನೆಕ್ಸಾನ್ ಎಸ್‍ಯುವಿಯನ್ನು ಡ್ಯುಯಲ್ ಟೋನ್ ಬಣ್ಣದಲ್ಲಿ ಮಾರ್ಪಾಡಿಸಿದೆ. ಹೊಸ ಬಣ್ಣದಲ್ಲಿರುವ ಟಾಟಾ ನೆಕ್ಸಾನ್ ಎಸ್‍ಯುವಿ ಕಾರುಗಳು ಟಾಪ್ ಮಾದರಿಗಳಾದ ಝಡ್ಎಕ್ಸ್ ಮತ್ತು ಝಡ್ಎಕ್ಸ್ಎ ಪ್ಲಸ್ ವೆರಿಯಂಟ್ ಗಳಲ್ಲಿ ಲಭ್ಯವಿವೆ.

ಡ್ಯುಯಲ್ ಟೋನ್ ಬಣ್ಣದ ಟಾಟಾ ನೆಕ್ಸಾನ್ ಝಡ್ಎಕ್ಸ್ ಮಾದರಿಯ ಬೆಲೆಗಳು ದೆಹಲಿಯ ಎಕ್ಸ್ ಶೋ ರೂಂ ಪ್ರಕಾರ ರೂ. 9.34 ಲಕ್ಷಗಳಿಂದ ಆರಂಭವಾಗುತ್ತವೆ ಮತ್ತು ಟಾಪ್ ಎಂಡ್ ಮಾದರಿ ಝಡ್ಎಕ್ಸ್ಎ ಪ್ಲಸ್ ವೆರಿಯಂಟ್ ಮಾದರಿಯ ಬೆಲೆಗಳು ರೂ 10.90 ಲಕ್ಷಗಳಿಂದ ಆರಂಭವಾಗುತ್ತವೆ. ಎರಡೂ ವೆರಿಯಂಟ್ ಗಳು ಸೊನಿಕ್ ಸಿಲ್ವರ್ ಮತ್ತು ಐವರಿ ವೈಟ್ ಎಂಬ ಎರಡು ರೂಫ್ ಬಣ್ಣಗಳಲ್ಲಿ ಲಭ್ಯವಿದೆ.

ಸೊನಿಕ್ ಸಿಲ್ವರ್ ರೂಫ್ ಅನ್ನು ಮೊರಕ್ಕೊ ಬ್ಲೂ, ವೆರ್‍ಮಂಟ್ ರೆಡ್, ಕ್ಯಾಲ್‍ಗರಿ ವೈಟ್ ಅಥವಾ ಎಟನಾ ಅರೇಂಜ್ ಬಣ್ಣಗಳೊಂದಿಗೆ ಹೊಂದಾಣಿಕೆ ಮಾಡಬಹುದು. ಅದೇ ರೀತಿ ಐವರಿ ವೈಟ್ ರೂಫ್ ಅನ್ನು ಮೊರಕ್ಕೊ ಬ್ಲೂ, ವೆರ್‍ಮಂಟ್ ರೆಡ್, ಎಟನಾ ಅರೇಂಜ್ ಅಥವಾ ಗ್ಲಾಸ್ ಗೋ ಗ್ರೇ ಬಣ್ಣಗಳೊಂದಿಗೆ ಹೊಂದಾಣಿಕೆ ಮಾಡಬಹುದು.

ಡ್ಯುಯಲ್ ಟೋನ್ ಬಣ್ಣದ ಝಡ್ಎಕ್ಸ್ ಮತ್ತು ಝಡ್ಎಕ್ಸ್ ಎ ಪ್ಲಸ್ ಮಾದರಿಯ ಟಾಟಾ ನೆಕ್ಸಾನ್ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡೂ ವಿಧಗಳಲ್ಲಿ ಲಭ್ಯವಿದೆ. ಟಾಟಾ ನೆಕ್ಸಾನ್ 110 ಬಿಹೆಚ್‍ಪಿ ಮತ್ತು 170 ಎನ್ಎಂ ಟಾರ್ಕ್ ಉತ್ಪಾದಿಸುವ 1.2 ಲೀಟರ್ ರೆವೊಟ್ರಾನ್ ಟರ್ಬೋ ಪೆಟ್ರೊಲ್ ಎಂಜಿನ್ ಹೊಂದಿದೆ.

ಡೀಸೆಲ್ ಮಾದರಿಯು 110 ಬಿಹೆಚ್‍ಪಿ ಮತ್ತು 260 ಎನ್ಎಂ ಟಾರ್ಕ್ ಉತ್ಪಾದಿಸುವ 1.5 ಲೀಟರ್ ರೆವೊಟಾರ್ಕ್ ಎಂಜಿನ್ ಹೊಂದಿದೆ. ಎರಡೂ ಎಂಜಿನ್ ಗಳು ಸ್ಟಾಂಡರ್ಡ್ ಸಿಕ್ಸ್ ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಮತ್ತು ಸಿಕ್ಸ್ ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಎರಡನ್ನೂ ಹೊಂದಿವೆ.

ಟಾಟಾ ಮೋಟಾರ್ಸ್ ದೇಶೀಯ ಮಾರುಕಟ್ಟೆಗಾಗಿ ಆಲ್ಟ್ ರೋಜ್ ಪ್ರೀಮಿಯಂ ಹ್ಯಾಚ್ ಬ್ಯಾಕ್ ಮಾದರಿಯನ್ನು ಉತ್ಪಾದನೆ ಮಾಡುತ್ತಿದೆ. ಟಾಟಾ ಆಲ್ಟ್ ರೋಜ್ ಕಾರನ್ನು 2019ರ ಜಿನಿವಾ ಮೋಟಾರ್ ಶೋ ನಲ್ಲಿ ಅನಾವರಣಗೊಳಿಸಲಾಗಿತ್ತು.

ಟಾಟಾ ಆಲ್ಟ್ ರೋಜ್ ಕಾರು ವರ್ಷಾಂತ್ಯದಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಟಾಟಾ ಆಲ್ಟ್ ರೋಜ್ ಟಾಟಾ ಕಂಪನಿಯ ಹೊಸ ಆಲ್ಫಾ ಪ್ಲಾಟ್ ಫಾರ್ಮ್ ಆಗಿರಲಿದೆ. ಟಾಟಾ ಮೋಟಾರ್ಸ್ ಸದ್ಯ ಚಾಲ್ತಿಯಲ್ಲಿರುವ ಟಿಯಾಗೋ, ಟೈಗೋರ್ ಮತ್ತು ನೆಕ್ಸಾನ್ ಕಾರುಗಳನ್ನು ಅಪ್ ಡೇಟ್ ಮಾಡುತ್ತಿದೆ. ಸದ್ಯ ಚಾಲಿಯಲ್ಲಿರುವ ಮಾದರಿಗಳಲ್ಲಿ ಕಂಪನಿಯ ಇಂಪ್ಯಾಕ್ಟ್ 2.0 ಡಿಸೈನ್ ಲ್ಯಾಂಗ್ವೆಜ್ ನಿಂದ ಕಾಸ್ ಮೇಟಿಕ್ ಬದಲಾವಣೆಗಳಾಗಲಿವೆ.
MOST READ: ಕೆಟಿಎಂ ಸಂಸ್ಥೆಯಿಂದ ಭಾರತಕ್ಕೆ ಬರಲಿದೆ 500ಸಿಸಿ ಬೈಕ್..!!

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಟಾಟಾ ನೆಕ್ಸಾನ್ ಕಾರು ಭಾರತೀಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ಕಾರುಗಳ ಪೈಕಿ ಒಂದಾಗಿದೆ. ಟಾಟಾ ನೆಕ್ಸಾನ್ ಕಾರುಗಳ ಮಾರಾಟವು ಪ್ರತಿ ತಿಂಗಳು ಹೆಚ್ಚಾಗುತ್ತಲೇ ಇದೆ, ಡ್ಯುಯಲ್ ಟೋನ್ ಬಣ್ಣದ ಯೋಜನೆಯ ನಂತರ ನೆಕ್ಸಾನ್ ಮತ್ತಷ್ಟು ಗ್ರಾಹಕರನ್ನು ಆಕರ್ಷಿಸುವ ಸಾಧ್ಯತೆಗಳಿವೆ.


Click it and Unblock the Notifications