ಕ್ಯಾಮರಾದಲ್ಲಿ ಸೆರೆಯಾದ ಕ್ರೂಸ್ ಕಂಟ್ರೋಲ್ ಟಾಟಾ ನೆಕ್ಸಾನ್
ಭಾರತೀಯ ಮೂಲದ ಕಾರು ತಯಾರಕ ಕಂಪನಿ ಟಾಟಾ ಮೋಟಾರ್ಸ್ ಗ್ರಾಹಕರ ಸಲಹೆಗಳನ್ನು ಆಲಿಸುತ್ತಾ ಬಂದಿದ್ದು, ಅವುಗಳ ಪೈಕಿ ಕೆಲವನ್ನು ಕಾರ್ಯರೂಪಕ್ಕೆ ತಂದಿದೆ. ಕಂಪನಿಯು ಸದ್ಯಕ್ಕೆ ನೆಕ್ಸಾನ್ ಎಸ್‍ಯುವಿಯನ್ನು ನವೀಕರಿಸುತ್ತಿರುವುದು ತಿಳಿದು ಬಂದಿದೆ. ಕಂಪನಿಯು ಪ್ರಸ್ತುತ ಕ್ರೂಸ್ ಕಂಟ್ರೋಲ್ ಮಾದರಿಯನ್ನು ಪರೀಕ್ಷಿಸುತ್ತಿರುವುದು ಸ್ಪೈ ಚಿತ್ರಗಳಿಂದ ಕಂಡು ಬಂದಿದೆ.

ಇತ್ತೀಚಿಗೆ ಎರಡು ವಾಹನಗಳನ್ನು ಮರೆಮಾಚಿ ಪರೀಕ್ಷಿಸುತ್ತಿದ್ದಾಗ ಸಿದ್ಧಾರ್ಥ್ ಪಾಟೀಲ್ ಎಂಬುವವರು ಈ ನವೀಕೃತ ನೆಕ್ಸಾನ್ ಕಾರುಗಳನ್ನು ಗುರುತಿಸಿದ್ದಾರೆ. ಈ ಕಾರಿನ ಚಿತ್ರಗಳನ್ನು ಸೆರೆ ಹಿಡಿದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಎರಡು ವಾಹನಗಳ ಪೈಕಿ ಒಂದು ವಾಹನವು ಸ್ಟೀಯರಿಂಗ್ ವ್ಹೀಲ್‌ನ ಬಲಭಾಗದಲ್ಲಿ ಕ್ರೂಸ್ ಕಂಟ್ರೋಲ್ ಬಟನ್‌ಗಳನ್ನು ಹೊಂದಿದೆ.

ಚಿತ್ರಗಳಲ್ಲಿರುವ ನೆಕ್ಸಾನ್ ವಾಹನದಲ್ಲಿ ಬೇರೆ ಯಾವುದೇ ಬದಲಾವಣೆಗಳು ಕಾಣುವುದಿಲ್ಲ. ಟಾಟಾ ನೆಕ್ಸಾನ್ ಎಸ್‍ಯುವಿಯನ್ನು ಸದ್ಯಕ್ಕೆ 18 ಮಾದರಿ ಹಾಗೂ ಎಂಟು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಎಸ್‍ಯುವಿಯನ್ನು 1.2 ಲೀಟರ್ ಟರ್ಬೋಚಾರ್ಜ್ಡ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ರೆವೊಟೊರ್ಕ್ ಡೀಸೆಲ್ ಎಂಜಿನ್ ಎಂಬ ಎರಡು ಎಂಜಿನ್ ಆಯ್ಕೆಗಳನ್ನು ಮಾರಾಟ ಮಾಡಲಾಗುತ್ತಿದೆ.

1.2 ಲೀಟರ್ ಪೆಟ್ರೋಲ್ ಎಂಜಿನ್ 108 ಬಿಹೆಚ್‌ಪಿ ಪವರ್ ಹಾಗೂ 170 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ಗೆ 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಸಹ ಲಭ್ಯವಿದೆ.

1.5 ಲೀಟರ್ ಡೀಸೆಲ್ ಎಂಜಿನ್ 108 ಬಿಹೆಚ್‌ಪಿ ಪವರ್ ಹಾಗೂ 260 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ನಲ್ಲಿಯೂ ಸಹ 6 ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಎಂಜಿನ್ ಸಹ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಹೊಂದಿದೆ.

ಟಾಟಾದ ನೆಕ್ಸಾನ್ ಎಸ್‍ಯುವಿಯನ್ನು ಸದ್ಯಕ್ಕೆ - ಮೊರೊಕನ್ ಬ್ಲೂ, ಸಿಯಾಟಲ್ ಸಿಲ್ವರ್, ಗ್ಲ್ಯಾಸ್ಗೋ ಗ್ರೇ, ಕ್ಯಾಲ್ಗರಿ ವೈಟ್, ವರ್ಮೊಂಟ್ ರೆಡ್ ಹಾಗೂ ಎಟ್ನಾ ಆರೆಂಜ್ ಎಂಬ 6 ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಸ್ಪೈ ಚಿತ್ರಗಳಲ್ಲಿರುವ ಒಂದು ವಾಹನವು ರೆಡ್ ಶೇಡ್ ಬಣ್ಣದಲ್ಲಿರುವುದರಿಂದ ಟಾಟಾ ಕಂಪನಿಯು ನೆಕ್ಸಾನ್ ಎಸ್‍ಯುವಿಯನ್ನು, ಇನ್ನೂ ಹಲವು ಬಣ್ಣಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಈಗಿರುವ ಟಾಟಾ ನೆಕ್ಸಾನ್ ಎಸ್‍ಯುವಿಯ ಬೆಲೆಯು, ಭಾರತದ ಎಕ್ಸ್ ಶೋರೂಂ ದರದಂತೆ ರೂ.6.58 ಲಕ್ಷದಿಂದ ರೂ.11.00 ಲಕ್ಷಗಳವರೆಗೆ ಇದೆ. ನವೀಕೃತ ಮಾದರಿಯ ನೆಕ್ಸಾನ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.8 ಲಕ್ಷದಿಂದ ರೂ.12.50 ಲಕ್ಷಗಳವರೆಗೆ ಇರುವ ಸಾಧ್ಯತೆಗಳಿವೆ.

ನೆಕ್ಸಾನ್ ಈ ಸೆಗ್‍ಮೆಂಟಿನಲ್ಲಿರುವ ಅತ್ಯುತ್ತಮ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಸೆಗ್‍ಮೆಂಟಿನಲ್ಲಿ ಮಾರುತಿ ಸುಜುಕಿಯ ವಿಟಾರಾ ಬ್ರಿಝಾ, ಫೋರ್ಡ್‍ನ ಇಕೋಸ್ಪೋರ್ಟ್ ಹಾಗೂ ಮಹೀಂದ್ರಾದ ಎಕ್ಸ್‌ಯುವಿ 300ಗಳಿಗೆ ಪೈಪೋಟಿ ನೀಡುತ್ತದೆ.

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ವಾಹನಗಳು, ಪ್ರಾಣಿಗಳು, ಮನುಷ್ಯರು ಅಡ್ಡಾದಿಡ್ಡಿಯಾಗಿ ಚಲಿಸುವ ಭಾರತದಂತಹ ದೇಶದಲ್ಲಿ ಟಾಟಾ ನೆಕ್ಸಾನ್ ಕಾರಿನಲ್ಲಿ ಕ್ರೂಸ್ ಕಂಟ್ರೋಲ್ ಅಳವಡಿಸುತ್ತಿರುವುದು ನಿಜಕ್ಕೂ ಅದ್ಭುತವಾದ ಸಂಗತಿಯಾಗಿದೆ. ಆಲ್ ದಿ ಬೆಸ್ಟ್ ಟಾಟಾ ಮೋಟಾರ್ಸ್.
Image Courtesy: Siddharth Patil/Facebook


Click it and Unblock the Notifications