ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಟಾಟಾ ಮೋಟಾರ್ಸ್ ತನ್ನ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಟಾಟಾ ಮೋಟಾರ್ಸ್‍‍ನ ಹೊಸ ಜಿಪ್‌ಟ್ರಾನ್ ಪವರ್‌ಟ್ರೇನ್‌ ಬಳಸಿದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು 2020ರ ಆರಂಭದಿಂದ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುವುದು. ಅನಾವರಣ ಸಮಾರಂಭದಲ್ಲಿ, ಟಾಟಾ ಮೋಟಾರ್ಸ್ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್‍‍ಗಳನ್ನು 2019ರ ಡಿಸೆಂಬರ್ 20ರಿಂದ ದೇಶಾದ್ಯಂತವಿರುವ ಆಯ್ದ ಡೀಲರ್‍‍ಗಳಲ್ಲಿ ಆರಂಭವಾಗಲಿದೆ ಎಂದು ಘೋಷಿಸಿತು.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬುಕ್ಕಿಂಗ್‍‍ಗಾಗಿ ರೂ.21,000 ಪಾವತಿಸಬೇಕು. ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ 30.2 ಕಿ.ವ್ಯಾನ ಲಿಥಿಯಂ ಐಯಾನ್ ಬ್ಯಾಟರಿಯನ್ನು ಅಳವಡಿಸಲಾಗಿದೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಈ ಬ್ಯಾಟರಿಯನ್ನು ಶಾಶ್ವತ ಮ್ಯಾಗ್ನೆಟ್ ಎಸಿ ಮೋಟರ್‌ಗೆ ಜೋಡಿಸಲಾಗಿದೆ. ಲಿಥಿಯಂ ಐಯಾನ್ ಬ್ಯಾಟರಿಯು ಲಿಕ್ವಿಡ್ ಕೂಲ್ ಆಗಿದ್ದು, ಧೂಳು ಹಾಗೂ ನೀರು ನಿರೋಧಕ ಐಪಿ 67 ಸರ್ಟಿಫಿಕೇಷನ್‍‍ನೊಂದಿಗೆ ಬರಲಿದೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಟಾಟಾ ನೆಕ್ಸಾನ್‍‍ನಲ್ಲಿರುವ ಮೋಟರ್ ಅನ್ನು ಒಂದು ಬಾರಿ ಚಾರ್ಜ್‌ ಮಾಡಿದರೆ, 300 ಕಿ.ಮೀವರೆಗೂ ಚಲಿಸುತ್ತದೆ. ಈ ಮೋಟರ್ 245 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಟಾಟಾ ಮೋಟಾರ್ಸ್‍‍ನ ಹೊಸ ನೆಕ್ಸಾನ್ ಎಲೆಕ್ಟ್ರಿಕ್ ಕಾರು 9.9 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಕ್ರಮಿಸುತ್ತದೆ ಎಂದು ಹೇಳಲಾಗಿದೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಟಾಟಾ ಮೋಟಾರ್ಸ್ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಬ್ಯಾಟರಿಯು ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಹೊಂದಿದೆ. ಇದರಿಂದಾಗಿ ಕೇವಲ 60 ನಿಮಿಷಗಳಲ್ಲಿ ಬ್ಯಾಟರಿಯನ್ನು 80% ಚಾರ್ಜ್ ಮಾಡಬಹುದು. ಸ್ಟಾಂಡರ್ಡ್ ಚಾರ್ಜಿಂಗ್‍‍ನಲ್ಲಿ 8 ಗಂಟೆಗಳು ಬೇಕಾಗುತ್ತವೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿರುವ ಬ್ಯಾಟರಿಗಳು ಬಿಎಂಎಸ್ (ಬ್ಯಾಟರಿ ಮ್ಯಾನೇಜ್‍‍ಮೆಂಟ್ ಸಿಸ್ಟಂ)ನೊಂದಿಗೆ ಬರಲಿವೆ. ಈ ಸಿಸ್ಟಂ ಸ್ಥಿರವಾದ ಪರ್ಫಾಮೆನ್ಸ್ ನೊಂದಿಗೆ 8 ವರ್ಷಗಳವರೆಗೆ ಬಾಳಿಕೆ ಬರುತ್ತದೆ. ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಪವರ್‌ಟ್ರೇನ್‌ನಲ್ಲಿ ಕೂಲಿಂಗ್ ಸರ್ಕ್ಯೂಟ್ ಅಳವಡಿಸಲಾಗಿದ್ದು, ಬಿಸಿಯಾದ ವಾತಾವರಣದಲ್ಲಿಯೂ ಸಹ ಸ್ಮೂಥ್ ಆದ ಪರ್ಫಾಮೆನ್ಸ್ ನೀಡುತ್ತದೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ಪೆಟ್ರೋಲ್ ಎಂಜಿನ್ ಹೊಂದಿರುವ ಎಸ್‍ಯುವಿಯ ಫೇಸ್‍‍ಲಿಫ್ಟ್ ಆವೃತ್ತಿಯಂತಿದೆ. ನೆಕ್ಸಾನ್ ಕಾರಿನ ಫೇಸ್‍‍ಲಿಫ್ಟ್ ಆವೃತ್ತಿಯು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ನೆಕ್ಸಾನ್ ಎಲೆಕ್ಟ್ರಿಕ್ ಕಾರಿನಲ್ಲಿ ಎಲ್ಇಡಿ ಡಿಆರ್‍‍ಎಲ್‍‍ಗಳನ್ನು ಹೊಂದಿರುವ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳಿರಲಿವೆ. ಹೆಡ್‌ಲ್ಯಾಂಪ್‌ಗಳ ಮಧ್ಯದಲ್ಲಿ ಅಪ್‍‍‍‍ಡೇಟ್ ಮಾಡಲಾದ ಫ್ರಂಟ್ ಗ್ರಿಲ್‍‍ಗಳಿವೆ. ಮುಂಭಾಗದ ಬಂಪರ್‌ನಲ್ಲಿ ಹೊಸ ಫಾಗ್ ಲ್ಯಾಂಪ್ ಹಾಗೂ ಅಪ್‍‍ಡೇಟೆಡ್ ಸೆಂಟ್ರಲ್ ಏರ್ ಇನ್‍‍ಟೇಕ್‍‍ಗಳಿವೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಅನಾವರಣ ಸಮಾರಂಭದಲ್ಲಿ ಪ್ರದರ್ಶಿಸಲಾದ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಹೊಸ ಎಲೆಕ್ಟ್ರಿಕ್ ಟೀಲ್ ಬಣ್ಣವನ್ನು ಹೊಂದಿದೆ. ಈ ವರ್ಷದ ಆರಂಭದಲ್ಲಿ 2019ರ ಜಿನೀವಾ ಮೋಟಾರ್ ಶೋದಲ್ಲಿ ಪ್ರದರ್ಶಿಸಲಾದ ಟಾಟಾ ಆಲ್ಟ್ರೋಜ್ ಎಲೆಕ್ಟ್ರಿಕ್ ಕಾರ್ ಸಹ ಇದೇ ಬಣ್ಣವನ್ನು ಹೊಂದಿತ್ತು.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಹೊಸ ಬಣ್ಣದ ಹೊರತಾಗಿ, ಸ್ಟ್ಯಾಂಡರ್ಡ್ ಹಾಗೂ ಎಲೆಕ್ಟ್ರಿಕ್ ಆವೃತ್ತಿಯ ಕಾರುಗಳ ನಡುವಿನ ವ್ಯತ್ಯಾಸವನ್ನು ಗುರುತಿಸಲು ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ನೀಲಿ ಅಂಶಗಳನ್ನು ಹೊಂದಿರಲಿದೆ. ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್ ಅನ್ನು ಎಕ್ಸ್‌ಎಂ, ಎಕ್ಸ್‌ ಝಡ್ ಪ್ಲಸ್ ಹಾಗೂ ಎಕ್ಸ್‌ ಝಡ್ ಪ್ಲಸ್ ಲಕ್ಸ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುವುದು.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಈ ಎಲ್ಲಾ ಮೂರು ಮಾದರಿಗಳಲ್ಲಿ ಸ್ಟ್ಯಾಂಡರ್ಡ್ ಆಗಿ ಹಲವಾರು ಫೀಚರ್ ಹಾಗೂ ಎಕ್ವಿಪ್‍‍ಮೆಂಟ್‍‍ಗಳನ್ನು ನೀಡಲಾಗುವುದು. ಇವುಗಳಲ್ಲಿ ಕೀ ಲೆಸ್ ಎಂಟ್ರಿ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಡ್ಯುಯಲ್ ಡ್ರೈವಿಂಗ್ ಮೋಡ್, ಪುಶ್-ಬಟನ್ ಸ್ಟಾರ್ಟ್ / ಸ್ಟಾಪ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯಿಡ್ ಆಟೋ ಹೊಂದಿರುವ 7 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ ಹಾಗೂ ವೈಪರ್, 16 ಇಂಚಿನ ಡೈಮಂಡ್ ಕಟ್ ಅಲಾಯ್ ವ್ಹೀಲ್ ಸೇರಿದಂತೆ ಇನ್ನಿತರ ಫೀಚರ್‍‍ಗಳಿವೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಟಾಟಾ ಮೋಟಾರ್ಸ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರ್ ಅಲ್ಲದಿದ್ದರೂ, ಕಂಪನಿಯ ಹೊಸ ಜಿಪ್‍‍ಟ್ರಾನ್ ಪವರ್‌ಟ್ರೇನ್ ಅನ್ನು ಬಳಸಿದ ಮೊದಲ ಕಾರ್ ಆಗಿದೆ. ಹೊಸ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.15 ಲಕ್ಷದಿಂದ ರೂ.18 ಲಕ್ಷಗಳಾಗಲಿದೆ.

ಅನಾವರಣಗೊಂಡ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರ್

ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ, ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಕಾರು ಮಹೀಂದ್ರಾ ಇಎಕ್ಸ್‌ಯುವಿ 300 ಹಾಗೂ ಎಂಜಿ ಇ ಝಡ್‌ಎಸ್ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿದೆ.

Article Published On: Thursday, December 19, 2019, 19:21 [IST]
English summary
Tata Nexon EV Unveiled In India Ahead Of 2020 Launch: Bookings To Start Soon - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+