ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಸಂಸ್ಥೆಯು ಸಧ್ಯ ತಮ್ಮ ಉತ್ಪಾದನ ಗುಣಮಟ್ಟದ ಬಗ್ಗೆ ಹೆಚ್ಚು ಸದ್ದು ಮಾಡುತ್ತಿದ್ದು, ಈ ಸದ್ದಿಗೆ ಪ್ರಮುಖ ಕಾರಣವೆಂದರೆ ಅದು ಟಾಟಾ ನೆಕ್ಸಾನ್. ಎಕೆಂದರೆ ಇದು ಕಳೆದ ವರ್ಷ ಗ್ಲೋಬಲ್ ಎನ್‍ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‍ನಲ್ಲಿ 5ಕ್ಕೆ 5 ಅಂಕವನ್ನು ಪಡೆದು ಭಾರತದ ಸೇಫೆಸ್ಟ್ ಎಸ್‍ಯುವಿ ಎಂಬ ಬಿರುದನ್ನು ಪಡೆದುಕೊಂಡಿದೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಸಂಸ್ಥೆಯು ಮುಂದಿನ ಕೆಲವು ತಿಂಗಳುಗಳಲ್ಲಿ ತಮ್ಮ ಮೂರು ಹೊಸ ಇಂಧನ ಆಧಾರಿತ ಕಾರುಗಳು ಮತ್ತು ನಾಲ್ಕು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ. ಆಟೋ ಕಾರ್ ಇಂಡಿಯಾ ವರದಿ ಪ್ರಕಾರ ಹಾಗೆಯೆ ಇದೀಗ ಗ್ರಾಹಕರ ಬೇಡಿಕೆಯಂತೆ ತಮ್ಮ ಜನಪ್ರಿಯ ಎಸ್‍ಯುವಿ ನೆಕ್ಸಾನ್ ಕಾರಿಗೆ ಹೊಸ ಅಪ್ಡೇಟ್ ಅನ್ನು ನೀಡಲಾಗಿದ್ದು, ನೆಕ್ಸಾನ್ ಕಾರಿನ ಎಕ್ಸ್ಜೆಡ್, ಎಕ್ಸ್ಜೆಡ್+ ಮತ್ತು ಎಕ್ಸ್ಜೆಡ್ಎ+ ವೇರಿಯೆಂಟ್‍‍ಗಳಲ್ಲಿ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಮಾರುಕಟ್ಟೆಯಲ್ಲಿ ಟಾಟಾ ನೆಕ್ಸಾನ್ ಕಾರನ್ನು ಹೊಂದಿಕ್ಕಲು ಬುಡುಗಡೆಗೊಂಡ ಹ್ಯುಂಡೈ ವೆನ್ಯೂ, ಮಾರುತಿ ಸುಜುಕಿ ಬ್ರೆಝಾ, ಮಹೀಂದ್ರಾ ಎಕ್ಸ್‌ಯುವಿ 300 ಎಂಬ ಕಾಂಪ್ಯಾಕ್ಟ್ ಎಸ್‍ಯುವಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿದ್ದು, ಟಾಟಾ ನೆಕ್ಸಾನ್ ಕಾರಿಗಿಂತಲೂ ಕಡಿಮೆ ಸಂಖ್ಯೆಯಲ್ಲಿ ತನ್ನ ಮತ್ತೊಂದು ಎದುರಾಳಿಯಾದ ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ಮಾರಾಟವಾಗುತ್ತಿದೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಈ ನಿಟ್ಟಿನಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ನೆಕ್ಸಾನ್ ಕಾರಿನ ಮಾರಾಟವನ್ನು ಹೆಚ್ಚಿಸಲು ಕೆಲವು ದಿನಗಳ ಹಿಂದಷ್ಟೇ ಈ ಕಾರಿನ ಹೊಸ ವೇರಿಯೆಂಟ್ ಅನ್ನು ಸಹ ಬಿಡುಗಡೆ ಮಾಡಲಾಗಿತ್ತು. ಇದೀಗ ನೆಕ್ಸಾನ್ ಕಾರುಗಳಲ್ಲಿ 6.5 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡುವ ಬದಲಿಗೆ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಒದಗಿಸಲಾಗುತ್ತಿದೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಅಷ್ಟೆ ಅಲ್ಲದೆಯೆ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ಜನಪ್ರಿಯ ಕಾರುಗಳ ಎಲೆಕ್ಟ್ರಿಕ್ ವರ್ಷನ್ ಅನ್ನು ಬಿಡುಗಡೆ ಮಾಡಲಿದ್ದು, ಸಧ್ಯ ಆಲ್‍ಟ್ರೋಜ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಪ್ರದರ್ಶಿಸಲಾಗುತ್ತು. ಇದರ ಜೊತೆಗೆ ಇದಿಗ ಲಭ್ಯವಾದ ಮಾಹಿತಿಗಳ ಪ್ರಕಾರ ಟಾಟಾ ಮೋಟಾರ್ಸ್ ಸಂಸ್ಥೆಯು ತಮ್ಮ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಸಹ ಬಿಡುಗಡೆ ಮಾಡಲಿದೆಯಂಯತೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್‍ನ 74ನೇ ಆನ್ಯುವಲ್ ಜೆನರಲ್ ಮೀಟಿಂಗ್‍‍ನಲ್ಲಿ ಸಂಸ್ಥೆಯ ಚೇರ್‍‍‍ಮೆನ್ ಆದ ಎನ್. ಚಂದ್ರಶೇಕರನ್‍‍ರವರು ಟಾಟಾ ನೆಕ್ಸಾನ್ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಪರಿಚಯುವುದರ ಬಗ್ಗೆ ಖಚಿಪಡಿಸಲಾಗಿದ್ದು, ಮುಂದಿನ 18 ತಿಂಗಳಿನಲ್ಲಿ ಎಲೆಕ್ಟ್ರಿಕ್ ಮಾದರಿಯ ನೆಕ್ಸಾನ್ ಕಾರುಗಳನ್ನು ಬಿಡುಗಡೆ ಮಾಡಲಿದ್ದಾರಂತೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಈ ಜೆನರಲ್ ಮೀಟಿಂಗ್‍ನಲ್ಲಿ ಟಾಟಾ ನೆಕ್ಸಾನ್ ಎಸ್‍ಯುವಿ ಕಾರಿನ ಎಲೆಕ್ಟ್ರಿಕ್ ಮಾದರಿಯ ಕುರಿತಾಗಿ ಇಷ್ಟೆ ಮಾಹಿತಿಗಳು ಲಭ್ಯವಾಗಿದ್ದು, ಆಲ್‍‍ಟ್ರೋಜ್ ಇವಿ ಕಾರಿನಲ್ಲಿ ಬಳಸಲಾದ ಬ್ಯಾಟರಿ ಟೆಕ್ನಾಲಜಿ ಮತ್ತು ಟಿಗೋರ್ ಇವಿ ಕಾರಿನಲ್ಲಿ ಬಳಸಲಾದ ಲೀಥಿಯಂ ಐಯಾನ್ ಬ್ಯಾಟರಿಯ ಪ್ಯಾಕೇಜ್ ಅನ್ನು ಹೊಂದಿರಲಿದೆ ಎಂದು ಹೇಳಲಾಗುತ್ತಿದೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಇಷ್ಟೆ ಅಲ್ಲದೆಯೆ ಟಾಟಾ ನೆಕ್ಸಾನ್ ಎಲ್ಕೆಕ್ಟ್ರಿಕ್ ಮಾದರಿಯ ಕಾರು ಆಲ್‍ಟ್ರೋಜ್ ಎಲೆಕ್ಟ್ರಿಕ್ ಕಾರಿನ ಮಾದರಿಯಲ್ಲಿ ಡಿಸಿ ಮತ್ತು ಎಸಿ ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನು ಸಹ ಹೊಂದಿರಲಿದ್ದು, ಆಲ್‍ಟ್ರೋಜ್ ಇವಿ ಕಾರು ಮೇಲೆ ಹೇಳಿರುವ ಹಾಗೆ ಈ ವರ್ಷದ ಜೆನೆವಾ ಮೋಟಾರ್ ಶೋನಲ್ಲಿ ಸಾಧಾರಣ ಪ್ರೀಮಿಯಂ ಆಲ್‍ಟ್ರೋಜ್ ಕಾರಿನ ಜೊತೆಗೆ ಕಾಣಿಸಿಕೊಂಡಿತ್ತು.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಜೊತೆಗೆ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.10 ಲಕ್ಷದೊಳಗೆ ಇರಲಿದೆ ಎನ್ನುವ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಂದಿರುವ ಕಾರು ಮಾದರಿ ಇದಾಗಿರಲಿದೆ ಎಂದಿದ್ದಾರೆ. ಹೀಗಾಗಿ ಇದು ಬಲೆನೊ ಮತ್ತು ಐ20 ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಇನ್ನು ಹೊಸ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರು ಪ್ರತಿ ಚಾರ್ಜ್‌ಗೆ 250-300 ಕಿ.ಮಿ ಮೈಲೇಜ್ ರೇಂಜ್ ಬ್ಯಾಟರಿ ಸೌಲಭ್ಯ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 60 ನಿಮಿಷಗಳಲ್ಲಿ ಶೇ.80 ಚಾರ್ಜ್ ಮಾಡಬಹುದಾದ ಗುಣಮಟ್ಟದ ಬ್ಯಾಟರಿ ಜೋಡಣೆ ಮಾಡಲಿದೆ.

ಹೊಸ ಅಪ್ಡೇಟ್ ಪಡೆದ 'ಭಾರತದ ಸೇಫೆಸ್ಟ್ ಎಸ್‍ಯುವಿ' ಟಾಟಾ ನೆಕ್ಸಾನ್

ಸದ್ಯ ಕೇಂದ್ರ ಸರ್ಕಾರವು ಸಹ ಎಲೆಕ್ಟ್ರಿಕ್ ಕಾರುಗಳನ್ನು ಉತ್ತೇಜಿಸುವ ಸಂಬಂಧ ಬರೋಬ್ಬರಿ 10 ಸಾವಿರ ಕೋಟಿ ಬಿಡುಗಡೆ ಮಾಡಿದ್ದು, ಎಲೆಕ್ಟ್ರಿಕ್ ಕಾರುಗಳಿ ಸಬ್ಸಡಿ ಸೇರಿದಂತೆ ತ್ವರಿತ ಗತಿಯಲ್ಲಿ ಚಾರ್ಜಿಂಗ್ ಸ್ಟೆಷನ್‌ಗಳ ನಿರ್ಮಾಣಕ್ಕಾಗಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿದೆ. ಹೀಗಾಗಿ ಟಾಟಾ ಆಲ್‌ಟ್ರೊಜ್ ಕಾರು ಗ್ರಾಹಕರ ಆಕರ್ಷಣೆಗೆ ಕಾರಣವಾಗಲಿದ್ದು, 2020ರ ಆರಂಭದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ವರ್ಷನ್ ಆಲ್‌ಟ್ರೊಜ್ ಬಿಡುಗಡೆಯಾದ ನಂತವಷ್ಟೇ ಎಲೆಕ್ಟ್ರಿಕ್ ಕಾರು ಕೂಡಾ ಗ್ರಾಹಕರ ಕೈ ಸೇರಲಿದೆ.

Article Published On: Saturday, August 3, 2019, 9:31 [IST]
English summary
Tata Nexon Gets 7 Inch Touchscreen Infotainment System. Read In Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+