ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಕಾರು ಖರೀದಿದಾರರು ಕಾರಿನ ಬೆಲೆಗಳಿಂತ ಹೆಚ್ಚಾಗಿ ಕಾರಿನಲ್ಲಿರುವ ಸುರಕ್ಷತೆಗಾಗಿ ಕುರಿತಾಗಿ ಹೆಚ್ಚು ಗಮನಹರಿಸುತ್ತಿದ್ದು, ಇದೇ ವಿಚಾರವನ್ನು ಗುರಿಯಾಗಿಸಿಕೊಂಡು ಟಾಟಾ ಮೋಟಾರ್ಸ್ ಸಂಸ್ಥೆಯು ಸಹ ವಿಭಿನ್ನ ರೀತಿಯಲ್ಲಿ ನೆಕ್ಸಾನ್ ಎಸ್‌ಯುವಿ ಕಾರಿನ ಜಾಹೀರಾತು ಒಂದನ್ನು ಪ್ರಕಟಿಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ಹೌದು, ಟಾಟಾ ಸಂಸ್ಥೆಯು ಪ್ರೇಮಿಗಳ ದಿನಾಚರಣೆಯ ಹಿನ್ನೆಲೆಯಲ್ಲಿ ಸುರಕ್ಷೆಯ ಕುರಿತಾಗಿ ವಿಭಿನ್ನ ರೀತಿಯ ಜಾಹೀರಾತು ಪ್ರಕಟಿಸಿದ್ದು, ಇದು ಯುವ ಜೋಡಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ವಾಹನ ಚಾಲನೆಯಲ್ಲಿ ಸುರಕ್ಷತೆ ಎಷ್ಟು ಮುಖ್ಯವೋ ಇಬ್ಬರು ಯುವ ಪ್ರೇಮಿಗಳ ನಡುವೆಯೂ ಕೂಡಾ ಸುರಕ್ಷತೆ ಮುಖ್ಯ ಎನ್ನುವಂತಹ ಅರ್ಥದಲ್ಲಿ ಹೊಸ ಜಾಹೀರಾತು ಹೊರತಂದಿದೆ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ಅಂದಹಾಗೆ ಭಾರತದಲ್ಲಿ ಸದ್ಯ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ರೇಟಿಂಗ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಕಾರುಗಳು ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಇತರೆ ಯಾವುದೇ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಕೂಡಾ ಕನಿಷ್ಠ 4 ಸ್ಟಾರ್ ರೇಟಿಂಗ್ ಪಡೆದುಕೊಂಡಿಲ್ಲ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ಆದ್ರೆ ಟಾಟಾ ನೆಕ್ಸಾನ್ ಕಾರು ಮಾತ್ರ 5 ಸ್ಟಾರ್ ರೇಟಿಂಗ್ ಮೂಲಕ ಐಷಾರಾಮಿ ಕಾರುಗಳಿಗೂ ಸವಾಲು ಎಸೆದಿದ್ದು, ಅತಿ ಕಡಿಮೆ ಬೆಲೆಯಲ್ಲಿ ಖರೀದಿ ಲಭ್ಯವಿರುವ ಅತ್ಯುತ್ತಮ ಕಾರು ಎಂಬ ಹೆಗ್ಗಳಿಕೆ ಇದು ಪಾತ್ರವಾಗಿದೆ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ಇನ್ನು 2017ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಿದ್ದ ಟಾಟಾ ಜನಪ್ರಿಯ ನೆಕ್ಸಾನ್ ಎಸ್‌ಯುವಿ ಕಾರುಗಳು ಸದ್ಯ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿದ್ದು, ಇದರೊಂದಿಗೆ ಸುರಕ್ಷತೆಯಲ್ಲೂ ಹೊಸ ಭರವಸೆ ಮೂಡಿಸುವ ಮೂಲಕ ಪ್ರತಿಷ್ಠಿತ ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಅತ್ಯುತ್ತಮ ರೇಟಿಂಗ್ ತನ್ನದಾಗಿಸಿಕೊಂಡಿದೆ.

#SAFERCARSFORINDIA ಅಭಿಯಾನದಡಿ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಕಾರು ಮಾದರಿಗಳ ಸುರಕ್ಷೆ ಕುರಿತಂತೆ ಕ್ರ್ಯಾಶ್ ಟೆಸ್ಟಿಂಗ್‌ಗಳನ್ನು ಹಮ್ಮಿಕೊಂಡಿರುವ ಗ್ಲೋಬಲ್ ಎನ್‌ಸಿಎಪಿ ಸಂಸ್ಥೆಯು ಜನಪ್ರಿಯ ಸಂಸ್ಥೆಯ ಕಾರುಗಳ ಅಸಲಿಯತ್ತು ಬಯಲು ಮಾಡುತ್ತಿದೆ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ಪ್ರತಿ ಹೊಸ ಕಾರು ಮಾದರಿಗಳಿಗೂ ಸುರಕ್ಷೆ ವಿಚಾರವಾಗಿ ಜಾಗತಿಕ ಪ್ರಮಾಣ ಪತ್ರದ ಅವಶ್ಯಕತೆಯಿದ್ದು, ಟಾಟಾ ನೆಕ್ಸಾನ್ ಕಾರುಗಳು ಪಡೆದುಕೊಂಡಿರುವ ಉತ್ತಮ ರೇಟಿಂಗ್‌ನಿಂದಾಗಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂಬುವುದು ಖಾತ್ರಿಯಾಗಿದೆ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ವಿಶಿಷ್ಟ ವಿನ್ಯಾಸಗಳೊಂದಿಗೆ ಎಸ್‌ಯುವಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರುವ ನೆಕ್ಸಾನ್ ಆವೃತ್ತಿಗಳು ಇಂಪ್ಯಾಕ್ಟ್ 2.0 ಡಿಸೈನ್‌ನೊಂದಿಗೆ ಅಭಿವೃದ್ಧಿಗೊಂಡಿದ್ದು, ಮಲ್ಟಿ ಡ್ರೈವ್ ಮೋಡ್, ತೇಲುವ ಡ್ಯಾಶ್ ಟಾಪ್ ಎಚ್‌ಡಿ ಟಚ್‌ಸ್ಕ್ರೀನ್, ಹರ್ಮನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಬೃಹತ್ತಾದ ಸೆಂಟ್ರಲ್ ಕನ್ಸಾಲ್ ಪಡೆದುಕೊಂಡಿದೆ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ನೆಕ್ಸಾನ್ ಕಾರುಗಳಲ್ಲಿ ಚಾಲಕ ಮತ್ತು ಪ್ರಯಾಣಿಕ ಸೀಟುಗಳ ಕಡೆಗೆ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಐಸೋಫೆಕ್ಸ್ ಚೈಲ್ಡ್ ಮೌಟೆಂಡ್ ಸೀಟುಗಳು ಮತ್ತು ಬಲಿಷ್ಠ ಬಾಡಿ ಕಿಟ್ ಹೊಂದಿರುವುದು ಕಾರಿನ ಮೌಲ್ಯವನ್ನ ಹೆಚ್ಚಿಸಿದೆ.

ಪ್ರೇಮಿಗಳ ದಿನದಂದೇ ವಿಶೇಷ ಜಾಹೀರಾತು ಪ್ರಕಟಿಸಿದ ಟಾಟಾ ಮೋಟಾರ್ಸ್

1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರುವ ನೆಕ್ಸಾನ್ ಕಾರುಗಳು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿದೆ. ಈ ಮೂಲಕ ಯುವ ಸಮುದಾಯ ನೆಚ್ಚಿನ ಆಯ್ಕೆಯಾಗಿರುವ ನೆಕ್ಸಾನ್ ಕಾರುಗಳು ಇದೀಗ ಸುರಕ್ಷತೆಯಲ್ಲೂ ಮುನ್ನಡೆ ಸಾಧಿಸಿವೆ ಎನ್ನಬಹುದು.

Article Published On: Thursday, February 14, 2019, 18:27 [IST]
English summary
Tata Nexon Valentines Day Ad Is Cheeky Video. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+