ಟಾಟಾ ಉತ್ಪಾದನೆಯ ಈ ಜನಪ್ರಿಯ ವಾಹನಗಳು ಇನ್ಮುಂದೆ ಸಿಗುವುದಿಲ್ಲ..!

ಸುರಕ್ಷಾ ನಿಯಮಗಳನ್ನು ಅಪ್‍‍ಡೇಟ್ ಮಾಡದ ಕಾರಣ ಟಾಟಾ ಮೋಟಾರ್ಸ್ ಏರ್‍‍ಬ್ಯಾಗ್‍‍ಗಳನ್ನು ಹೊಂದಿಲ್ಲದ ಬೋಲ್ಟ್, ಜೆಸ್ಟ್ ಹಾಗೂ ಸಫಾರಿ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಿದೆ. ಈ ಮಾದರಿಯ ವಾಹನಗಳ ಸ್ಟಾಕ್ ಇರುವವರೆಗೂ ಮಾರಾಟವನ್ನು ಮುಂದುವರೆಸಲಾಗುವುದು.

ಟಾಟಾ ಉತ್ಪಾದನೆಯ ಈ ಜನಪ್ರಿಯ ವಾಹನಗಳು ಇನ್ಮುಂದೆ ಸಿಗುವುದಿಲ್ಲ..!

ಬೋಲ್ಟ್ ಹಾಗೂ ಜೆಸ್ಟ್ ವಾಹನಗಳ ಮಾರಾಟದಲ್ಲಿ ಹಲವು ವರ್ಷಗಳಿಂದ ಭಾರಿ ಕುಸಿತ ಉಂಟಾಗಿದ್ದರೂ, ಟಾಟಾ ಮೋಟಾರ್ಸ್ ಈ ವಾಹನಗಳ ಮಾರಾಟವನ್ನು ಮುಂದುವೆರೆಸಿತ್ತು. ಡೀಸೆಲ್ ಆವೃತ್ತಿಯ ಎಕ್ಸ್ ಎಂ, ಪೆಟ್ರೋಲ್ ಆವೃತ್ತಿಯ ಎಕ್ಸ್ ಇ, ಎಕ್ಸ್ ಎಂ ಮಾದರಿಯ ಬೋಲ್ಟ್ ಹಾಗೂ ಜೆಸ್ಟ್ ವಾಹನಗಳನ್ನು ಸ್ಥಗಿತಗೊಳಿಸಲಾಗಿದೆ. ಸ್ಟಾಂಡರ್ಡ್ ಡ್ಯೂಯಲ್ ಏರ್‍‍ಬ್ಯಾಗ್, ಎ‍‍ಬಿ‍ಎಸ್‍ ಹೊಂದಿರುವ ಎಕ್ಸ್ ಟಿ ಮಾದರಿಯ ವಾಹನಗಳನ್ನು ಮಾರಾಟ ಮಾಡಲಾಗುವುದು.

ಟಾಟಾ ಉತ್ಪಾದನೆಯ ಈ ಜನಪ್ರಿಯ ವಾಹನಗಳು ಇನ್ಮುಂದೆ ಸಿಗುವುದಿಲ್ಲ..!

ಅದೇ ರೀತಿಯಾಗಿ ಟಾಟಾ ಸಫಾರಿಯ ಎಲ್‍ಎಕ್ಸ್ ಬೇಸ್ ಹಾಗೂ ವಿ‍ಎಕ್ಸ್ 4X4 ಮಾದರಿಗಳನ್ನು ಇನ್ನು ಮುಂದೆ ಉತ್ಪಾದನೆ ಮಾಡಲಾಗುವುದಿಲ್ಲ. ಮಾರಾಟ ಮುಂದುವರೆಸುವ ಮಾದರಿಗಳಲ್ಲಿ ಸರ್ಕಾರವು ನಿಗದಿಪಡಿಸಿರುವ ಸುರಕ್ಷಾ ಕ್ರಮಗಳಾದ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಮುಂಭಾಗದ ಪ್ರಯಾಣಿಕರಿಗಾಗಿ ಸೀಟ್ ಬೆಲ್ಟ್ ವಾರ್ನಿಂಗ್, ಸ್ಪೀಡ್ ಅಲರ್ಟ್ ಸಿಸ್ಟಂ ಫೀಚರ್‍‍ಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುವುದು.

ಟಾಟಾ ಉತ್ಪಾದನೆಯ ಈ ಜನಪ್ರಿಯ ವಾಹನಗಳು ಇನ್ಮುಂದೆ ಸಿಗುವುದಿಲ್ಲ..!

ಈ ಅಪ್‍‍ಡೇಟ್‍‍ಗಳನ್ನು ಅಳವಡಿಸಿದ ನಂತರ ಬೆಲೆಗಳಲ್ಲಿ ಬದಲಾವಣೆಗಳಾಗುವುದಿಲ್ಲ. ಟಾಪ್ ಎಂಡ್ ಮಾದರಿಯ ಬೋಲ್ಟ್ ಹಾಗೂ ಜೆಸ್ಟ್ ವಾಹನಗಳು ಹೊಸದಾಗಿ ಬರಲಿರುವ ನಿಯಮಗಳಾದ ಭಾರತ್ ನ್ಯೂ ವೆಹಿಕಲ್ ಸೇಫ್ಟಿ ಅಸ್ಸೆಸ್‍‍ಮೆಂಟ್ ಪ್ರೊಗ್ರಾಮ್ ನ ಅಪಘಾತ ತಡೆ (ಕ್ರಾಶ್ ಟೆಸ್ಟ್) ಪರೀಕ್ಷೆಯಲ್ಲಿ ಯಶಸ್ವಿಯಾಗುವ ಸಾಧ್ಯತೆಗಳಿವೆ.

ಟಾಟಾ ಉತ್ಪಾದನೆಯ ಈ ಜನಪ್ರಿಯ ವಾಹನಗಳು ಇನ್ಮುಂದೆ ಸಿಗುವುದಿಲ್ಲ..!

ಸಫಾರಿ ವಾಹನವು ಈ ಪರೀಕ್ಷೆಯಲ್ಲಿ ಯಶಸ್ವಿಯಾಗುವ ಸಾಧ್ಯತೆಗಳ ಬಗ್ಗೆ ಮಾಹಿತಿಯಿಲ್ಲ. 2019ರ ಅಕ್ಟೋಬರ್ 1 ರ ಗಡುವಿನ ನಂತರ ಹಳೆ ಎಸ್‍‍ಯುವಿ ವಾಹನದ ಉತ್ಪಾದನೆಯನ್ನು ನಿಲ್ಲಿಸಲಾಗುವುದು. ಡೀಸೆಲ್ ಮಾದರಿಯ ಜೆಸ್ಟ್ ಹಾಗೂ ಬೋಲ್ಟ್ ವಾಹನಗಳಲ್ಲಿರುವ 1.3 ಲೀಟರಿನ ಫಿಯೆಟ್ ಮಾದರಿಯ ಮಲ್ಟಿಜೆಟ್ ಎಂಜಿನ್‍‍ನಲ್ಲಿ ಬಿ‍ಎಸ್ 6 ನಿಯಮಕ್ಕೆ ತಕ್ಕಂತೆ ಬದಲಾವಣೆ ಮಾಡುವ ಸಾಧ್ಯತೆಗಳಿಲ್ಲ. ಹೊಸ ನಿಯಮಗಳು ಜಾರಿಗೆ ಬರಲಿರುವ ಏಪ್ರಿಲ್ 1 2020ರ ನಂತರದಲ್ಲಿ ಟಾಟಾ ಮೋಟಾರ್ಸ್ ಕಂಪನಿಯು ಹೊಸ ನಿಯಮಗಳನ್ನು ಅಳವಡಿಸಲಾಗದ ತನ್ನ ಕಾಂಪ್ಯಾಕ್ಟ್ ಡೀಸೆಲ್ ಮಾದರಿಯ ವಾಹನಗಳನ್ನು ಸ್ಥಗಿತಗೊಳಿಸಲಿದೆ.

MOST READ: 2020ರಲ್ಲಿ ಬಿಡುಗಡೆಯಾಗಲಿದೆ ಸುಜುಕಿ ಇಂ‍ಟ್ರೂಡರ್ 250

ಟಾಟಾ ಉತ್ಪಾದನೆಯ ಈ ಜನಪ್ರಿಯ ವಾಹನಗಳು ಇನ್ಮುಂದೆ ಸಿಗುವುದಿಲ್ಲ..!

ಟಾಟಾ ಮೋಟಾರ್ಸ್ 2020ರ ವೇಳೆಗೆ ತನ್ನ ವಾಹನಗಳಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳನ್ನು ಮಾಡಲಿದೆ. ಹಳೆಯದಾದ ಹಾಗೂ ಮಾರಾಟದಲ್ಲಿ ಅಷ್ಟೇನೂ ಪ್ರಗತಿ ಕಾಣದ ಹೆಕ್ಸಾ ರೀತಿಯ ವಾಹನಗಳನ್ನು ಸ್ಥಗಿತಗೊಳಿಸಿ, ಆಲ್ಟ್ರೋಜ್ ಹ್ಯಾಚ್‍‍ಬ್ಯಾಕ್, ಹೆಚ್2‍‍‍ಎಕ್ಸ್ ಮಿನಿ ಎಸ್‍‍ಯುವಿ, 7 ಸೀಟಿನ ಹ್ಯಾರಿಯರ್ ಬಜರ್ಡ್ ಮುಂತಾದ ಹೊಸವಾಹನಗಳನ್ನು ಬಿಡುಗಡೆ ಮಾಡಲಿದೆ. ಟಾಟಾ ಮೋಟಾರ್ಸ್ ಈ ಸೆಗ್‍‍ಮೆಂಟಿನಲ್ಲಿ ಹ್ಯುಂಡೈ‍‍ನ ಕ್ರೆಟಾ ವಾಹನಕ್ಕೆ ಪೈಪೋಟಿ ನೀಡಲು ಬ್ಲಾಕ್‍‍ಬರ್ಡ್ ವಾಹನವನ್ನು ಅಭಿವೃದ್ಧಿಪಡಿಸುತ್ತಿದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ತನ್ನ ಎಲ್ಲಾ ವಾಹನಗಳನ್ನು ಎಲೆಕ್ಟ್ರಿಕ್ ಆಗಿ ಪರಿವರ್ತಿಸುವ ಗುರಿಯನ್ನಿಟ್ಟುಕೊಂಡಿದೆ.

Most Read Articles

Kannada
English summary
Tata Safari 4×4, Bolt, Zest select variants production discontinued - Read in kannada
Story first published: Monday, May 27, 2019, 10:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X