ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಟಾಟಾ ಮೋಟಾರ್ಸ್ ತನ್ನ ಸರಣಿಯಲ್ಲಿರುವ ಪ್ಯಾಸೆಂಜರ್ ವಾಹನಗಳ ಮೇಲೆ ಆಕರ್ಷಕ ಆಫರ್‍‍ಗಳನ್ನು ನೀಡುತ್ತಿದೆ. ಟಾಟಾ ಕಂಪನಿಯು ಟಾಟಾ ಟಿಯಾಗೊ, ಟಿಗೋರ್, ನೆಕ್ಸೊ ಹಾಗೂ ಹೆಕ್ಸಾ ವಾಹನಗಳ ಮೇಲೆ ಎಷ್ಟು ಪ್ರಮಾಣದ ರಿಯಾಯಿತಿಗಳನ್ನು ನೀಡುತ್ತದೆ ಎಂಬುದನ್ನು ನೋಡೋಣ.

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ನ್ಯಾನೋ ಕಾರ್ ಅನ್ನು ಸ್ಥಗಿತಗೊಳಿಸಿದ ನಂತರ ಟಿಯಾಗೋ ಕಾರು ಟಾಟಾ ಕಂಪನಿಯ ಮೂಲ ಮಾದರಿಯ ಕಾರ್ ಆಗಿ ಮಾರಾಟವಾಗುತ್ತಿದೆ. ಟಿಯಾಗೋ ಟಾಟಾ ಕಂಪನಿಯ ಜನಪ್ರಿಯ ವಾಹನವಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ.

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಟಾಟಾ ಟಿಯಾಗೋ ಹ್ಯಾಚ್ ಬ್ಯಾಕ್ ಕಾರಿನ ಮೇಲೆ 3+ 3+3 ಆಫರ್ ನೀಡಲಾಗುವುದು. ಅಂದರೆ ಈ ಕಾರುಗಳ ಮೇಲೆ ಮೂರು ವರ್ಷ/75,000 ಕಿ.ಮೀಗಳ ವಾರಂಟಿ, ಮೂರು ವರ್ಷ/40,000 ಕಿ.ಮೀ ವಾರ್ಷಿಕ ಮೆಂಟೆನೆನ್ಸ್ ಕಾಂಟ್ರಾಕ್ಟ್ ಹಾಗೂ 3 ವರ್ಷಗಳ ರೋಡ್ ಸೈಡ್ ಅಸಿಸ್ಟೆನ್ಸ್ ಪ್ಯಾಕೇಜ್‍ ನೀಡಲಾಗುವುದು.

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಟಿಯಾಗೋ ಕಾರಿನ ಮೇಲೆ ನೀಡಲಾಗುತ್ತಿರುವ ಉಳಿದ ಆಫರ್‍‍ಗಳೆಂದರೆ, ಡೀಸೆಲ್ ಮಾದರಿಯ ಕಾರುಗಳನ್ನು ಖರೀದಿಸಿದಾಗ ಮೂರು ಗ್ರಾಂನ ಚಿನ್ನದ ನಾಣ್ಯಗಳನ್ನು ನೀಡಲಾಗುವುದು. ಇದರ ಜೊತೆಗೆ ಟಿಯಾಗೋ ಪೆಟ್ರೋಲ್ ಹಾಗೂ ಡೀಸೆಲ್ ಮಾದರಿಯ ಕಾರುಗಳ ಮೇಲೆ ಕ್ರಮವಾಗಿ ರೂ.10,000 ಹಾಗೂ ರೂ.15,000 ವಿನಿಮಯ ಬೋನಸ್ ನೀಡಲಾಗುವುದು.

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ನೆಕ್ಸಾನ್, ಟಾಟಾ ಮೋಟಾರ್ಸ್ ಸಬ್ 4 ಮೀಟರ್ ಸೆಗ್‍‍ಮೆಂಟಿನಲ್ಲಿ ಬಿಡುಗಡೆಗೊಳಿಸಿದ ಮೊದಲ ವಾಹನವಾಗಿದೆ. ಈ ಎಸ್‍‍ಯುವಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಈ ಕಾಂಪ್ಯಾಕ್ಟ್ ಎಸ್‍‍ಯುವಿಯ ಡೀಸೆಲ್ ಹಾಗೂ ಪೆಟ್ರೋಲ್ ಆವೃತ್ತಿಗಳ ಮೇಲೆ 3+3+3 ಆಫರ್ ನೀಡಲಾಗುವುದು.

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಇದರ ಜೊತೆಗೆ ನೆಕ್ಸಾನ್ ಕಾರಿನ ಪೆಟ್ರೋಲ್ ಆವೃತ್ತಿಯ ಮೇಲೆ ರೂ.15,000 ವಿನಿಮಯ ಬೋನಸ್ ಹಾಗೂ ಡೀಸೆಲ್ ಆವೃತ್ತಿಯ ಕಾರುಗಳ ಮೇಲೆ ರೂ.20,000 ವಿನಿಯಮ ಬೋನಸ್ ನೀಡಲಾಗುತ್ತದೆ. ಟಾಟಾ ಹೆಕ್ಸಾ, ಟಾಟಾ ಮೋಟಾರ್ಸ್‍‍ನ ಪ್ರಮುಖ ವಾಹನವಾಗಿದೆ.

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಹೆಕ್ಸಾ ಕಾರುಗಳ ಮೇಲೆಯೂ ಸಹ 3+3+3 ಆಫರ್ ನೀಡಲಾಗುವುದು. ಇದರ ಜೊತೆಗೆ ಮಾರಾಟವನ್ನು ಹೆಚ್ಚಿಸಲು ಡೀಲರ್‍‍ಗಳೂ ಸಹ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದ್ದಾರೆ. ಹೆಕ್ಸಾ ಕಾರುಗಳ ಮೇಲೆ ರೂ.30,000 ವಿನಿಮಯ ಬೋನಸ್ ನೀಡಲಾಗುವುದು.

MOST READ: ಅಚ್ಚರಿಯಾದರೂ ನಿಜ: ಭಾರತದಲ್ಲಿಲ್ಲದ ಈ ಕಾರುಗಳು ಪಾಕಿಸ್ತಾನದಲ್ಲಿವೆ..!

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಹೆಕ್ಸಾ ಕಾರುಗಳ ಮೇಲೆ ನೀಡುತ್ತಿರುವ ಹೆಚ್ಚಿನ ಆಫರ್‍‍ಗಳು ಡೀಲರ್‍‍ಗಳ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಹತ್ತಿರದಲ್ಲಿರುವ ಟಾಟಾ ಮೋಟಾರ್ಸ್ ಡೀಲರ್‍‍ಗಳ ಬಳಿ ಹೆಚ್ಚಿನ ಮಾಹಿತಿ ಪಡೆಯುವುದು ಒಳಿತು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಟಾಟಾ ಸರಣಿಯಲ್ಲಿರುವ ಸಫಾರಿ ಸ್ಟಾರ್ಮ್ ಹಾಗೂ ಜೆಸ್ಟ್ ಕಾರುಗಳ ಮೇಲೆ 3+3+3 ಆಫರ್ ನೀಡುತ್ತಿಲ್ಲ. ಸಫಾರಿ ಸ್ಟಾರ್ಮ್‍‍ನ ಮೇಲೆ ರೂ.55,000ಗಳವರೆಗೆ ರಿಯಾಯಿತಿ ನೀಡಲಾಗುವುದು. ಇದರಲ್ಲಿ ರೂ.30,000 ನಗದು ರಿಯಾಯಿತಿಯಾದರೆ, ರೂ.25,000 ವಿನಿಮಯ ಬೋನಸ್ ಆಗಿರಲಿದೆ.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಜೆಸ್ಟ್ ಹಾಗೂ ಬೋಲ್ಟ್ ಕಾರುಗಳ ಮೇಲೆ ರೂ.75,000ಗಳವರೆಗೆ ರಿಯಾಯಿತಿ ನೀಡಲಾಗುವುದು. ಇದರಲ್ಲಿ ರೂ.65,000 ನಗದು ರಿಯಾಯಿತಿಯಾದರೆ, ರೂ.10,000 ಹಳೆಯ ಕಾರ್ ಅನ್ನು ಡೀಲರ್‍‍ಗೆ ಮಾರಾಟ ಮಾಡಿದಾಗ ನೀಡಲಾಗುವುದು.

ಟಾಟಾ ಮೋಟಾರ್ಸ್ ನೀಡುತ್ತಿದೆ 3+3+3 ಆಫರ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಟಾಟಾ ಮೋಟಾರ್ಸ್ ನೀಡುತ್ತಿರುವ 3+3+3 ಆಫರ್ ಗ್ರಾಹಕರ ಮೆಂಟೆನೆನ್ಸ್ ವೆಚ್ಚವನ್ನು ಕಡಿಮೆಗೊಳಿಸಲಿದೆ. ಇನ್ನುಳಿದ ಆಕರ್ಷಕ ಕೊಡುಗೆಗಳಾದ ಚಿನ್ನದ ನಾಣ್ಯ, ವಿನಿಮಯ ಬೋನಸ್ ಹಾಗೂ ನಗದು ರಿಯಾಯಿತಿಗಳು ಕಂಪನಿಯ ಮಾರಾಟವನ್ನು ಹೆಚ್ಚಿಸಲಿವೆ. ಈ ಆಫರ್‍‍ಗಳು ಗ್ರಾಹಕರು ನೀಡುವ ಹಣಕ್ಕೆ ತಕ್ಕ ಮೌಲ್ಯವನ್ನು ನೀಡಲಿವೆ.

Article Published On: Wednesday, August 28, 2019, 18:30 [IST]
English summary
Tata Hexa, Nexon, Safari Storme, Tiago: Discounts & Offers For August - Read in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+