ಆಪಲ್‍ಕಾರ್ ಪ್ಲೇ ಫೀಚರ್ ಹೊಂದಲಿವೆ ಟಾಟಾ ಟಿಗೋರ್ ಮತ್ತು ಟಿಯಾಗೋ

ಟಾಪ್ ಎಂಡ್ ಟಾಟಾ ಟಿಗೋರ್ ಮತ್ತು ಟಾಟಾ ಟಿಯಾಗೋ ಕಾರುಗಳಲ್ಲಿ ಇನ್ನು ಮುಂದೆ ಆಪಲ್‍ಕಾರ್ ಪ್ಲೇ ಆಪ್ ಸಿಗಲಿದೆ. ಈ ಮೊದಲು ಎರಡೂ ಮಾದರಿಯ ಕಾರುಗಳಲ್ಲಿ ಆಂಡ್ರಾಯ್ಡ್ ಆಟೋವನ್ನು ಅಳವಡಿಸಲಾಗಿತ್ತು.

ಆಪಲ್‍ಕಾರ್ ಪ್ಲೇ ಫೀಚರ್ ಹೊಂದಲಿವೆ ಟಾಟಾ ಟಿಗೋರ್ ಮತ್ತು ಟಿಯಾಗೋ

2018ರ ಅಕ್ಟೋಬರ್ ನಲ್ಲಿ ಅಪ್‍ಡೇಟೆಡ್ ಆವೃತ್ತಿಯ ಸಬ್ 4 ಮೀಟರ್ ಸೆಡಾನ್ ಟಿಯಾಗೋ ವನ್ನು ಬಿಡುಗಡೆಗೊಳಿಸಲಾಗಿತ್ತು. ಅಪ್‍ಡೇಟೆಡ್ ಅವೃತ್ತಿಯಲ್ಲಿ ಕಾಸ್ಮೆಟಿಕ್ ಬದಲಾವಣೆಗಳ ಜೊತೆಯಲ್ಲಿ ಎಕ್ಸ್ ಝಡ್+ ಟ್ರಿಮ್ ಅನ್ನು ಸಹ ಅಳವಡಿಸಲಾಗಿತ್ತು. ಇದರ ಜೊತೆಯಲ್ಲಿ ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯುಳ್ಳ 7 ಇಂಚಿನ ಟಚ್ ಸ್ಕ್ರೀನ್ ಇನ್ಫೊಟೇನ್ ಸಿಸ್ಟಮ್ ಅಳವಡಿಸಲಾಗಿತ್ತು. ಇದಕ್ಕೆ ಹೊಸ ಜೋಡಣೆ ಎಂದರೆ ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ.

ಟಾಟಾ ಟಿಗೋರ್ ಮತ್ತು ಟಾಟಾ ಟಿಯಾಗೋ ಎರಡೂ ಮಾದರಿಗಳಲ್ಲೂ ಯಾವುದೇ ಮೆಕಾನಿಕಲ್ ಬದಲಾವಣೆಗಳನ್ನು ಮಾಡಲಾಗಿಲ್ಲ. ಎರಡೂ ಮಾದರಿಗಳು 2 ಎಂಜಿನ್ ವಿಧಗಳಲ್ಲಿ ದೊರೆಯುತ್ತವೆ. 1.2 ಲೀಟರಿನ 3 ಸಿಲಿಂಡರ್ ರೆವೊಟ್ರಾನ್ ಪೆಟ್ರೋಲ್ ಎಂಜಿನ್ ಹೊಂದಿದ್ದು 84 ಬಿಹೆಚ್‍ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ಆಪಲ್‍ಕಾರ್ ಪ್ಲೇ ಫೀಚರ್ ಹೊಂದಲಿವೆ ಟಾಟಾ ಟಿಗೋರ್ ಮತ್ತು ಟಿಯಾಗೋ

1.05 ಲೀಟರಿನ ರೆವೊಟಾರ್ಕ್ ಡೀಸೆಲ್ ಎಂಜಿನ್ 69 ಬಿಹೆಚ್‍ಪಿ ಪವರ್ ಮತ್ತು 141 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡೂ ಎಂಜಿನ್ ಗಳು 5 ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಹೊಂದಿವೆ. ಪೆಟ್ರೋಲ್ ಮಾದರಿಯು ಆಯ್ದ ಮಾದರಿಗಳ ಮೇಲೆ 5 ಸ್ಪೀಡಿನ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಹೊಂದಿದೆ.

ಆಪಲ್‍ಕಾರ್ ಪ್ಲೇ ಫೀಚರ್ ಹೊಂದಲಿವೆ ಟಾಟಾ ಟಿಗೋರ್ ಮತ್ತು ಟಿಯಾಗೋ

ಒಳಭಾಗದಲ್ಲಿ 7 ಇಂಚಿನ ಇನ್ಫೊಟೈನ್ಮೆಂಟ್ ಸಿಸ್ಟಮ್ ಜೊತೆಯಲ್ಲಿ ಆಟೋ ಮತ್ತು ಆಪಲ್‍ಕಾರ್ ಪ್ಲೇ, ಎಕ್ಸ್ ಝಡ್+ ಟ್ರಿಮ್ ಫಿಚರ್‍‍ಗಳ ಜೊತೆಯಲ್ಲಿ, ಹೊರಭಾಗದಲ್ಲಿ ಫಾಕ್ಸ್ ಲೆದರ್ ಅಪ್ ಹೊಲ್ ಸ್ಟರಿ, ಪವರ್ ಫೊಲ್ಡಿಂಗ್ ಒಆರ್‍‍ವಿಎಂ ಜೊತೆಗೆ ಸಿಗ್ನಲ್ ಇಂಡಿಕೇಟರ್ಸ್ ಮತ್ತು ಡ್ರೈವರ್ಸ್ ಸೀಟ್ ಹೈಟ್ ಅಡ್ಜಸ್ಟ್ ಮೆಂಟ್ ಗಳನ್ನು ನೀಡಲಾಗಿದೆ.

ಆಪಲ್‍ಕಾರ್ ಪ್ಲೇ ಫೀಚರ್ ಹೊಂದಲಿವೆ ಟಾಟಾ ಟಿಗೋರ್ ಮತ್ತು ಟಿಯಾಗೋ

ಟಾಟಾ ಟಿಯಾಗೋ 12 ಪೆಟ್ರೋಲ್ ಮಾದರಿಗಳಲ್ಲಿ ಮತ್ತು 10 ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತದೆ. ಬೆಲೆಯನ್ನು ಭಾರತದ ಎಕ್ಸ್ ಶೋ ರೂಂ ದರದಂತೆ ರೂ 4.21 ಲಕ್ಷಗಳಿಂದ ರೂ 6.49 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ. ಈ ವೆಹಿಕಲ್‍ಗಳು ಟಿಟಾನಿಯಂ ಗ್ರೇ, ಸನ್ ಬರ್ಸ್ಟ್ ಆರೇಂಜ್, ಪ್ಲಾಟಿನಂ ಸಿಲ್ವರ್, ಪರ್ಲ್ ಸೆಂಟ್ ವೈಟ್, ಎಸ್ ಪ್ರೆಸ್ಸೊ ಬ್ರೌನ್, ಬೆರ್ರಿ ರೆಡ್, ಒಷಿಯನ್ ಬ್ಲೂ, ಕಾನ್ ಯಾನ್ ಆರೇಂಜ್ ಹೀಗೆ ಒಟ್ಟು 8 ಕಲರ್‍‍ಗಳಲ್ಲಿ ದೊರೆಯುತ್ತವೆ.

ಆಪಲ್‍ಕಾರ್ ಪ್ಲೇ ಫೀಚರ್ ಹೊಂದಲಿವೆ ಟಾಟಾ ಟಿಗೋರ್ ಮತ್ತು ಟಿಯಾಗೋ

ಟಾಟಾ ಟಿಗೋರ್ 5 ಪೆಟ್ರೋಲ್ ಮಾದರಿಗಳಲ್ಲಿ ಮತ್ತು 4 ಡೀಸೆಲ್ ಮಾದರಿಗಳಲ್ಲಿ ದೊರೆಯುತ್ತದೆ. ಬೆಲೆಯನ್ನು ಭಾರತದ ಎಕ್ಸ್ ಶೋ ರೂಂ ದರದಂತೆ ರೂ 5.24 ಲಕ್ಷಗಳಿಂದ ರೂ 7.52 ಲಕ್ಷಗಳವರೆಗೆ ನಿಗದಿಪಡಿಸಲಾಗಿದೆ. ಈ ವೆಹಿಕಲ್ ಈಜಿಪ್ಟಿಯನ್ ಬ್ಲೂ, ಎಸ್ ಪ್ರೆಸ್ಸೊ ಬ್ರೌನ್, ರೋಮನ್ ಸಿಲ್ವರ್, ಪರ್ಲ್ ಸೆಂಟ್ ವೈಟ್, ಬೆರ್ರಿ ರೆಡ್ ಮತ್ತು ಟೈಟಾನಿಯಂ ಗ್ರೇ ಹೀಗೆ ಒಟ್ಟು 6 ಕಲರ್ ಗಳಲ್ಲಿ ದೊರೆಯುತ್ತದೆ.

Article Published On: Sunday, April 21, 2019, 13:00 [IST]
English summary
Tata Tigor And Tata Tiago Feature Apple CarPlay — Top End Models Fully Loaded - Read in Kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+