Just In
- 9 hrs ago
ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಭರ್ಜರಿ ಸಿದ್ದತೆ- 100 ಹೊಸ ಮಾರಾಟ ಮಳಿಗೆಗಳನ್ನು ತೆರೆಯಲಿದೆ ಟಾಟಾ
- 24 hrs ago
ನೆಚ್ಚಿನ ವಾಹನದ 50ನೇ ಹುಟ್ಟುಹಬ್ಬವನ್ನು ಆಚರಿಸಿದ ಅಪ್ಪ-ಮಗ
- 24 hrs ago
ಗ್ರಾಹಕರ ಕೈಸೇರಲು ಸಿದ್ದವಾದ ಬಿಎಸ್-6 ಎಂಜಿನ್ ಪ್ರೇರಿತ ಯಮಹಾ ಆರ್15 ವಿ3.0
- 1 day ago
ಆಟೋ ಮಾರುಕಟ್ಟೆ ಕುಸಿತದ ನಡುವೆಯೂ ಭರ್ಜರಿ ಮಾರಾಟವಾದ ಮಹೀಂದ್ರಾ ಸ್ಕಾರ್ಪಿಯೋ
Don't Miss!
- News
ಸಂಚಾರ ನಿಯಮ ಉಲ್ಲಂಘನೆ; 15 ಸಾವಿರ ದಂಡ ಕಟ್ಟಿದ ವ್ಯಾಪಾರಿ
- Finance
ಸಾವಯವ ಬೆಲ್ಲದ ಬಿಜಿನೆಸ್ ಹೇಗಿದೆ, ಎಷ್ಟು ಬೇಕು ಬಂಡವಾಳ?
- Technology
ಆನ್ಲೈನ್ ಜಾಹೀರಾತುಗಳಿಂದ ಬೇಸರವಾಗಿದ್ದೀರಾ..? ಇಲ್ಲಿದೆ ಪರಿಹಾರ..!
- Movies
ಮಸ್ತ್ ಮಜಾ ನೀಡುವ 'ಬಡ್ಡಿ ಮಗನ್ ಲೈಫು' ಟ್ರೇಲರ್
- Sports
ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್ಗೆ ಮರುಳುತ್ತಾರಾ ಎಬಿ ಡಿವಿಲಿಯರ್ಸ್?
- Lifestyle
ವಾರ ಭವಿಷ್ಯ- ಡಿಸೆಂಬರ್ 15ರಿಂದ ಡಿಸೆಂಬರ್ 21ರ ತನಕ
- Education
KSP: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳ ಇಟಿ- ಪಿಎಸ್ಟಿ ಪ್ರವೇಶ ಪತ್ರ ಬಿಡುಗಡೆ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಸ್ಪಾಟ್ ಟೆಸ್ಟ್ನಲ್ಲಿ ಕಾಣಿಸಿಕೊಂಡ 2020ರ ಹ್ಯುಂಡೈ ಐ20
ಜನಪ್ರಿಯ ಹ್ಯುಂಡೈ ಕಂಪನಿಯು ಹೊಸ ತಲೆಮಾರಿನ ಐ 20 ಕಾರನ್ನು ಭಾರತದಲ್ಲಿ ಸ್ಪಾಟ್ ಟೆಸ್ಟ್ ನಡೆಸಿದೆ. ಹೊಸ ಹ್ಯುಂಡೈ ಐ20 ಈ ಸೆಗ್‍ಮೆಂಟ್‍ನಲ್ಲಿ ಮೊದಲ ಬಾರಿಗೆ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸೇರಿದಂತೆ ಹಲವಾರು ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. ದೇಶಿಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಗಳಿವೆ.

2020ರ ಹ್ಯುಂಡೈ ಐ20 ಕಾರಿನಲ್ಲಿ ಆರು ಏರ್‍ಬ್ಯಾಗ್, ಆಟೋಮ್ಯಾಟಿಕ್ ಕ್ಲೈಮೆಂಟ್ ಕಂಟ್ರೋಲ್, ಹಿಂಭಾಗದ ಎಸಿ ವೆಂಟ್ಸ್, ವೈರ್‍ಲೆಸ್ ಜಾರ್ಜಿಂಗ್, ಫ್ರಂಟ್ - ರೇರ್ ಆರ್ಮ್‌ರೆಸ್ಟ್ ಮತ್ತು ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್ ಮುಂತಾದ ವೈಶಿಷ್ಟ್ಯಗಳನ್ನು ಹೊಂದಿರುವ ಸುಸಜ್ಜಿತ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಆಗಿದೆ.

ಹ್ಯುಂಡೈ ಕ್ರೆಟಾದಲ್ಲಿರುವ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಮಾದರಿಯನ್ನು ಮುಂದಿನ ತಲೆಮಾರಿನ ಐ20 ಕಾರಿನಲ್ಲಿ ಅಳವಡಿಸಲಿದೆ. ಹೊಸ ತಲೆಮಾರಿನ ಹ್ಯುಂಡೈ ಕ್ರೆಟಾವನ್ನು ಈಗಾಗಲೇ ಚೀನಾದಲ್ಲಿ ಬಿಡಗಡೆಗೊಳಿಸಲಾಗಿದೆ. ಹೊಸ ತಲೆಮಾರಿನ ಐ20 ಎಲ್ಲಾ ರೂಪಾಂತರಗಳು ಹೊಸ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ನೀಡಲಿದಯೇ ಅಥವಾ ಟಾಪ್ ಸ್ಪೆಕ್ ರೂಪಾಂತರದಲ್ಲಿ ಮಾತ್ರ ನೀಡುತ್ತಾ ಎಂಬುದು ಇನ್ನೂ ಖಚಿತವಾಗಿಲ್ಲ.

ಹೊಸದಾಗಿ ಇಂಟರ್‍ನೆಟ್ ಕನೆಕ್ಟ್ ಆಗಿರುವ ಸ್ಮಾರ್ಟ್ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಇದನ್ನು ಹ್ಯುಂಡೈ ಭಾಷೆಯಲ್ಲಿ ಬ್ಲೂಲಿಂಕ್ ಎಂದು ಕರೆಯಲಾಗುತ್ತದೆ. ಗ್ರಾಹಕರ ಗಮನವನ್ನು ಸೆಳೆಯುವಲ್ಲಿ ಮತ್ತು ಮಾರಾಟವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಬ್ಲೂಲಿಂಕ್ ತಂತ್ರಜ್ಞಾನವನ್ನು ಪಡೆದ ಮೊದಲ ಹ್ಯುಂಡೈ ಕಂಪನಿಯ ಕಾರು ವೆನ್ಯೂ ಆಗಿದೆ.

ಹೊಸ ತಲೆಮಾರಿನ ಐ20 ಕಾರಿನಲ್ಲಿ ದೊಡ್ಡದಾದ 8 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ ಸ್ಪೈ ಚಿತ್ರದಲ್ಲಿ ಕಂಡು ಬರುವಂತೆ ಮುಂದಿನ ತಲೆಮಾರಿನ ಐ20 ಕಾರು ನಾಲ್ಕು ಡಿಸ್ಕ್ ಬ್ರೆಕ್ ಅನ್ನು ಹೊಂದಿರಲಿದೆ.

ಹ್ಯುಂಡೈ ಐ20 ಪ್ರತಿಸ್ಪರ್ಧಿಗಳಾದ ಹೋಂಡಾ ಜಾಝ್ ಬಿಎಸ್-6 ಎಂಜಿನ್ ಹೊಂದಲಿದೆ. ಆದರೆ ಮಾರುತಿ ಬಲೆನೊ ಏಪ್ರಿಲ್ 2020ರಿಂದ ಡೀಸೆಲ್ ಎಂಜಿನ್ ಆಯ್ಕೆಯನ್ನು ನಿಲ್ಲಿಸಲು ನಿರ್ಧರಿಸಿದೆ.

ಹೊಸ ಹ್ಯುಂಡೈನಲ್ಲಿರುವ ಇತರ ಬದಲಾವಣೆಗಳು ಹೊಸ 1.5 ಲೀಟರ್ ಡೀಸೆಲ್ ಎಂಜಿನ್ ಅನ್ನು ಒಳಗೊಂಡಿದೆ. ಅದು ಪ್ರಸ್ತುತದಲ್ಲಿರುವ 1.4 ಲೀಟರ್ ಡೀಸೆಲ್ ಯುನಿಟ್ ಎಂಜಿನ್ ಅನ್ನು ಬದಲಾಯಿಸಲಾಗುತ್ತದೆ. ಹೊಸ ಡೀಸೆಲ್ ಎಂಜಿನ್ ಕಿಯಾ ಸೆಲ್ಟೋಸ್‍ನ ಎಂಜಿನ್ ಮಾದರಿಯಲ್ಲಿ ಇರಲಿದೆ. ಸೆಲ್ಟೋಸ್ ಕಾರಿನ ಎಂಜಿನ್ 115 ಬಿಎಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಆದರೆ ಹೊಸ ಹ್ಯುಂಡೈನಲ್ಲಿ ಅಳವಡಿಸುವ ಎಂಜಿನ್ ದಕ್ಷತೆಯು ಸೆಲ್ಟೋಸ್ ಎಂಜಿನ್‍ಗಿಂತ ಕಡಿಮೆಯಾಗಿರಲಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಹೊಸ ಐ20 ಪೆಟ್ರೋಲ್ ರೂಪಾಂತರವು ವೆನ್ಯೂನಂತೆಯೇ 1.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಅನ್ನು ಹೊಂದಲಿದೆ. ಈ ಎಂಜಿನ್ 120 ಬಿಎಚ್‍ಪಿ ಪವರ್ ಉತ್ಪಾದಿಸುತ್ತದೆ ಮತ್ತು 7 ಸ್ಪೀಡ್ ಡಿಸಿಟಿ ಆಟೋಮ್ಯಾಟಿಕ್‍ನೊಂದಿಗೆ ಜೋಡಿಸಲಾಗಿದೆ. ಬಲೆನೊ ಕಾರು ಬಿಎಸ್-6 ಟರ್ಬೊ-ಪೆಟ್ರೋಲ್ ಆಯ್ಕೆಯನ್ನು ಹೊಂದುವುದು ಅನುಮಾನವಾಗಿದೆ ಆದರೆ ಬಲೆನೊ ಪೆಟ್ರೋಲ್ ಬಿಎಸ್-6 ಸಿವಿಟಿ ಆಟೋಮ್ಯಾಟಿಕ್ ಅನ್ನು ಹೊಂದಲಿದೆ.
MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಭಾರತದಲ್ಲಿ ಹ್ಯುಂಡೈನ ಸಾಲಿನಲ್ಲಿ ಐ20 ಕಾರು ಮಾರಾಟದಲ್ಲಿ ಸ್ಥಿರ ಪ್ರದರ್ಶನ ನೀಡುವುದರಲ್ಲಿ ಯಶಸ್ವಿಯಾಗಿದೆ. ಇದರಿಂದಾಗಿ ಹೊಸ ತಲೆಮಾರಿನ ಐ20 ಮಾರಾಟವು ಇನ್ನಷ್ಟು ಹೆಚ್ಚಲಿದೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಹ್ಯುಂಡೈ ಐ 20ಯ 10,141 ಯುನಿಟ್‍ಗಳು ಮಾರಾಟವಾಗಿವೆ. ಮಾರುತಿ ಸುಜುಕಿ ಬಲೆನೊ ಸೆಪ್ಟೆಂಬರ್ ತಿಂಗಳಲ್ಲಿ 11,420 ಯುನಿಟ್‍ಗಳು ಮಾರಾಟವಾಗಿವೆ. ಬಲೆನೊ ಕಾರಿಗೆ ಹ್ಯುಂಡೈ ಐ20 ಪ್ರಬಲ ಪೈಪೋಟಿಯನ್ನು ನೀಡುತ್ತಿದೆ.
Source: Rushlane